ಹಾಟ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಹ್ಯುಂಡೈ ಐ30
ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಹ್ಯುಂಡೈ ಐ30 ಕಾರು ಮಾದರಿಗಳು ಹಾಟ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜುಗೊಳ್ಳುತ್ತಿದೆ.
ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಹ್ಯುಂಡೈ ಐ30 ಕಾರು ಮಾದರಿಗಳು ಹಾಟ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜುಗೊಳ್ಳುತ್ತಿದ್ದು, ಹೊಸ ವಿನ್ಯಾಸಗಳೊಂದಿಗೆ ಬೃಹತ್ ಬೇಡಿಕೆ ಸೃಷ್ಠಿಸುವ ತವಕದಲ್ಲಿದೆ.

ಹ್ಯುಂಡೈ ಇಂಡಿಯಾ ಸಂಸ್ಥೆಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ತನ್ನ ವಿವಿಧ ಕಾರು ಮಾದರಿಗಳಿಂದಾಗಿ ಭಾರೀ ಜನಪ್ರಿಯತೆಯನ್ನು ಕಂಡಿದ್ದು, ಸ್ಯಾಂಟ್ರೋ, ಐ10 ಐ20 ಎಂಬ ಹ್ಯಾಚ್‍ಬ್ಯಾಕ್ ಕಾರುಗಳನ್ನು ಮಧ್ಯಮ ವರ್ಗದ ಜನರು ಕೂಡಾ ಕಾರು ಕೊಳ್ಳುವ ಅವಕಾಶವನ್ನು ಒದಗಿಸುತ್ತಿದೆ.

ಇದೇ ನಿಟ್ಟಿನಲ್ಲಿ ಹ್ಯುಂಡೈ ಸಂಸ್ಥೆಯು ಐ30 ಕಾರನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಹ್ಯುಂಡೈ ಎಲಾಂಟ್ರಾ ಕಾರಿನ ವಿನ್ಯಾಸವನ್ನು ಆಧರಿಸಲಿದೆ ಎನ್ನಲಾಗಿದೆ. ಐ30 ಕಾರು ಹ್ಯುಂಡೈ ಐ20 ಕಾರಿನ ಮುಂದಿನ ಬದಲಾವಣೆಯ ಕಾರಾಗಿದ್ದು ಫೋಕ್ಸ್‌ವ್ಯಾಗನ್ ಗೊಲ್ಫ್ ಹಾಗು ಹೋಂಡಾ ಸಿವಿಕ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ತಮಿಳುನಾಡಿನ ಪ್ರಮುಖ ಕಡೆಗಳಲ್ಲಿ ಹ್ಯುಂಡೈ ಐ30 ಕಾರಿನ ತಾಂತ್ರಿಕ ಅಂಶಗಳ ಕುರಿತಾ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹೊಸ ಕಾರಿನ ಸ್ಪೈ ಚಿತ್ರಗಳು ಸೋರಿಕೆಯಾಗಿವೆ. ಹ್ಯುಂಡೈ ಎಲಾಂಟ್ರಾ ಕಾರು ಮಾದರಿಯಲ್ಲೇ 2.0 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.6 ಲೀಟರ್ ಡೀಸೆಲ್ ಎಂಜಿನ್ ಪಡೆದಿದ್ದು 152ಬಿಹೆಚ್‍ಪಿ ಹಾಗೂ 128ಬಿಹೆಚ್‍ಪಿ ಸಾಮರ್ಥ್ಯವನ್ನು ಪಡೆದಿದೆ.

ಇನ್ನು ಹೊಸ ಐ30 ಕಾರು 1.6 ಲೀಟರ್ ಡೀಸೆಲ್ ಎಂಜಿನ್ ಪಡೆದಿರಲಿದೆ ಎಂದು ಹೇಳಲಾಗಿದ್ದು, ಅಂತರರಾಷ್ಟ್ರೀಯ ಮಾದರಿಯಾದ ಐ 30 ಕಾರು ರಾಡರ್ ಗೈಡೆಡ್ ಕ್ರೂಸರ್ ಕಂಟ್ರೋಲ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಹಾಗು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಗಳನ್ನು ಒಳಗೊಂಡತಹ 8.0 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದಿರಲಿದೆ.

ಇದರ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆ ಕೂಡಾ ಇದ್ದು, 8-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕೂಡಾ ಲಭ್ಯವಿರುವ ಸಾಧ್ಯತೆಗಳವೆ ಎನ್ನಲಾಗಿದೆ.

ಹೊಸ ಮಾದರಿಯ ಹ್ಯುಂಡೈ ಐ30 ಆವೃತ್ತಿಗೆ ಸ್ಪೋರ್ಟ್ಸ್ ಆವೃತ್ತಿಯ ಟಚ್ ನೀಡಲಾಗಿದ್ದು, ಎಕ್ಸಾಸ್ಟ್ ಕೊಳಗೆ ವಿಶೇಷ ವಿನ್ಯಾಸ ಹೊಂದಿದೆ. ಆದರೆ ಐ30 ಹ್ಯಾಚ್‍ಬ್ಯಾಕ್ ಕಾರು 4 ಮೀಟರ್ ಉದಾವನ್ನು ಹೊಂದಿದ್ದು, ಮಧ್ಯಮ ಗಾತ್ರದ ಎಸ್‍ಯುವಿ ಕಾರಿನ ಬೆಲೆಯನ್ನು ಪಡೆಯಲಿದೆ ಎನ್ನಲಾಗಿದೆ.

ಪ್ರಸ್ತುತ ಐ30 ಕಾರಿನ ಬಿಡುಗಡೆಯ ಬಗ್ಗೆ ಯಾವುದೇ ರೀತಿಯ ಮಾಹಿಗಳು ದೊರೆತಿಲ್ಲವಾದರೂ, ಸಂಸ್ಥೆಯ ಕಡೆಯಿಂದ ಅಧಿಕೃತ ಮಾಹಿತಿಗಾಗಿ ಕಾಯ್ದು ನೋಡಬೇಕಿದೆ.


Click it and Unblock the Notifications