ಭಾರತೀಯ ರಸ್ತೆಗಳಲ್ಲಿ ಧೂಳೆಬ್ಬಿಸಲಿವೆ ಹ್ಯುಂಡೈ ಕಾರ್ಲಿನೋ ಮೈಕ್ರೊ ಎಸ್‌ಯುವಿ
ಸದ್ಯದ ಮಾರುಕಟ್ಟೆಯಲ್ಲಿ ಕಾರು ಖರೀದಿದಾರರು ಎಸ್‌ಯುವಿ ಕಾರುಗಳ ಖರೀದಿಯತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ.
ಸದ್ಯದ ಮಾರುಕಟ್ಟೆಯಲ್ಲಿ ಕಾರು ಖರೀದಿದಾರರು ಎಸ್‌ಯುವಿ ಕಾರುಗಳ ಖರೀದಿಯತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ವಿವಿಧ ನಮೂನೆಯ ಅಗ್ಗದ ಬೆಲೆಯ ಎಸ್‌ಯುವಿಗಳನ್ನು ಪರಿಚಯಿಸುತ್ತಿದ್ದು, ಹ್ಯುಂಡೈ ಸಂಸ್ಥೆಯ ಬಹುನೀರಿಕ್ಷಿತ ಕಾರ್ಲಿನೋ ಸ್ಮಾಲ್ ಎಸ್‌ಯುವಿ ಕಾರು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿರುವ ಕಾರ್ಲಿನೋ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ವರದಿಗಳ ಪ್ರಕಾರ ಹ್ಯುಂಡೈ ಹೊಸ ಕಾರು ಮಾದರಿಯು 2019ರ ಮೊದಲ ತ್ರೈಮಾಸಿಕ ವೇಳೆಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡುವ ಬಗ್ಗೆ ಸುಳಿವು ನೀಡಿದೆ.

ಕ್ರೇಟಾ ಮತ್ತು ಕೋನಾ ಎಸ್‍ಯುವಿ ಕಾರುಗಳ ಭರ್ಜರಿ ಯಶಸ್ಸಿನ ನಂತರ ಹ್ಯುಂಡೈ ಸಂಸ್ಥೆಯು ಇದೀಗ ಕಂಪ್ಯಾಕ್ಟ್ ಎಸ್‍ಯುವಿ ಕಾರನ್ನು ಪರಿಚಯಿಸಲು ಮುಂದಾಗಿದ್ದು, ಹೊಸ ಕಾರಿನ ಬಿಡುಗಡೆ ಕುರಿತಂತೆ ಹ್ಯುಂಡೈ ಲ್ಯಾಟಿನ್ ತಂಡದ ಅರ್ಮಾಂಡೊ ಕಾರ್ಡೊಸೊ ಅವರು ಮಹತ್ವದ ಮಾಹಿತಿಯೊಂದನ್ನ ಬಹಿರಂಗ ಪಡಿಸಿದ್ದಾರೆ.

ಸದ್ಯ ಉತ್ಪಾದನೆ ಹಂತದಲ್ಲಿರುವ ಕಾರ್ಲಿನೋ ಕಾರುಗಳು ಭಾರತೀಯ ಮಾರುಕಟ್ಟೆಗಾಗಿ ಉತ್ಪಾದನೆಯಾಗುತ್ತಿದೆ ಎಂಬುವುದಾಗಿ ಹೇಳಿಕೊಂಡಿದ್ದು, ಹ್ಯುಂಡೈ ಇಂಡಿಯಾ ಮೋಟಾರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವೈ.ಕೆ. ಕೂ ಕೂಡಾ ಕಾರ್ಲಿನೋ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ಹೀಗಾಗಿ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹ್ಯುಂಡೈ ಹೊಸ ಕಂಪ್ಯಾಕ್ಟ್ ಎಸ್‍ಯುವಿ ಕಾರುಗಳು ಅರ್ಬನ್ ಕಮ್ಯೂಟರ್ ವಿಭಾಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಿರುವ ಬಗ್ಗೆ ಮಾಹಿತಿಯಿದ್ದು, ಕ್ರಾಸ್‍ಓವರ್ ವಿನ್ಯಾಸದೊಂದಿಗೆ ಕ್ರೇಟಾ ಹಾಗೂ ಟಕ್ಸನ್ ಕಾರುಗಳ ಮಧ್ಯದ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದೆ.

ಹೊಸ ಕಾರಿನ ಕುರಿತಾಗಿ ಈಗಾಗಲೇ ಎಂಜಿನ್ ಕಾರ್ಯಕ್ಷಮತೆ ನಡೆಯುತ್ತಿದ್ದು, ಹ್ಯುಂಡೈ ಸಂಸ್ಥೆಯು ಈ ಹೊಸ ಕಾರಿಗಾಗಿ ಪ್ರತ್ಯೇಕವಾದ ಪ್ಲಾಟ್‍ಫಾರ್ಮ್ ಅನ್ನೇ ಸಿದ್ದಪಡಿಸಿದೆ. ಈ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿರುವ ಈ ಕಾರ್ಲಿನೋ ಕಾರುಗಳು ಮಾರುತಿ ಸುಜುಕಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್ ಕಾರಿಗಳಿಗೆ ನೇರ ಪ್ರತಿಸ್ಪರ್ಧಿಸಲಾಗಲಿವೆ ಎನ್ನಬಹುದು.

ಪ್ರಸ್ತುತ ಮಾಹಿತಿಗಳ ಪ್ರಕಾರ, ಈ ಕಾರು 2019ರ ಆರಂಭದಲ್ಲಿ ಯುಎಸ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದ್ದು, ತದನಂತರವಷ್ಟೇ ಭಾರತ ಸೇರಿದಂತೆ ಪ್ರಮುಖ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಈ ಕಾರು ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

ಕಂಪ್ಯಾಕ್ಟ್ ಎಸ್‍ಯುವಿ ವಿನ್ಯಾಸ ಆಧಾರಿತ ಕಾರ್ಲಿನೊ ಪರಿಕಲ್ಪನೆಯನ್ನು ಮೊದಲು ಹ್ಯುಂಡೈ ಸಂಸ್ಥೆಯು 2016ರ ದೆಹಲಿ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿತ್ತು. ಆದ್ರೆ ಕಾರಣಾಂತರಗಳಿಂದ ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆ ಮುಂದೂಡಿದ್ದ ಹ್ಯುಂಡೈ, ಇದೀಗ ಕಾರ್ಲಿನೋ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಇದಲ್ಲದೇ ಹ್ಯುಂಡೈ ಸಂಸ್ಥೆಯ ಕ್ಯೂಎಕ್ಸ್ಐ ಹೆಸರಿನ ಮತ್ತೊಂದು ಹೊಸ ಕಾರು ಮಾದರಿಯನ್ನು 2019ರ ಅಂತ್ಯದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಅದೇ ಕಾರಿನ ಎಂಜಿನ್ ಮಾದರಿಯನ್ನು ಸಹ ಕಾರ್ಲಿನೋ ಕಾರಗಳಲ್ಲೂ ಬಳಕೆ ಮಾಡಲಾಗಿದೆಯೆಂತೆ.

ಇದರಿಂದಾಗಿ ಕಾರ್ಲಿನೋ ಕಾರುಗಳು 1.0 ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಳ್ಳುವ ಸಾಧ್ಯತೆಗಲಿದ್ದು, ಕ್ರೇಟಾ ಮತ್ತು ಗ್ರ್ಯಾಂಡ್ ಐ10 ನಿಂದಲೂ ಹಲವಾರು ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ಎರವಲು ಪಡೆದುಕೊಳ್ಳಲಾಗಿದೆಯೆಂತೆ.

ಕಾರಿನ ಬೆಲೆಗಳು(ಅಂದಾಜು)
2019ರ ಆರಂಭದಲ್ಲಿ ಯುಎಸ್ಎ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೊಸ ಕಾರ್ಲಿನೋ ಕಾರುಗಳು 2019ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ರೂ.7 ಲಕ್ಷದಿಂದ ರೂ.10 ಲಕ್ಷ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಹತ್ತು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಹ್ಯುಂಡೈ ಕಾರ್ಲಿನೋ ಕಂಪ್ಯಾಕ್ಟ್ ಎಸ್‌ಯುವಿ ಕಾರು ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಕಂಪ್ಯಾಕ್ಟ್ ಎಸ್‌ಯುವಿಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications