ಅಕ್ಟೋಬರ್ 23ಕ್ಕೆ ಹೊಸ ಸ್ಯಾಂಟ್ರೊ ಬಿಡುಗಡೆಯಾಗುವುದು ಕನ್ಫರ್ಮ್..
ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಜನಪ್ರಿಯ ಸ್ಯಾಂಟ್ರೊ ಹ್ಯಾಚ್‍ಬ್ಯಾಕ್ ಕಾರನ್ನು ಮರು ಬಿಡುಗಡೆಗೊಳಿಸುವ ಯೋಜನೆಯಿದ್ದು, ಮಾಹಿತಿಗಳ ಪ್ರಕಾರ ಅಕ್ಟೋಬರ್ 9ಕ್ಕೆ ಕಾರನ್ನು ಬಹಿರಂಗಗೊಳಿಸಿ ಅದೇ ತಿಂಗಳ 23ರಂದು ಅಧಿಕೃತವಾಗಿ
ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಜನಪ್ರಿಯ ಸ್ಯಾಂಟ್ರೊ ಹ್ಯಾಚ್‍ಬ್ಯಾಕ್ ಕಾರನ್ನು ಮರು ಬಿಡುಗಡೆಗೊಳಿಸುವ ಯೋಜನೆಯಿದ್ದು, ಮಾಹಿತಿಗಳ ಪ್ರಕಾರ ಅಕ್ಟೋಬರ್ 9ಕ್ಕೆ ಕಾರನ್ನು ಬಹಿರಂಗಗೊಳಿಸಿ ಅದೇ ತಿಂಗಳ 23ರಂದು ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಹ್ಯುಂಡೈ ಸಂಸ್ಥೆಗೆ ಜನಪ್ರಿಯತೆ ತಂದು ಕೊಟ್ಟಿದ್ದ ಸ್ಯಾಂಟ್ರೋ ಕಾರುಗಳು ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡುವ ಉದ್ದೇಶದಿಂದ ಭಾರೀ ಬದಲಾವಣೆಯೊಂದಿಗೆ ಮರು ಬಿಡುಗಡೆಗಾಗಿ ಸಿದ್ದವಾಗಿದೆ.

ಇನ್ನು ಸ್ಟಾಟ್ ಟೆಸ್ಟಿಂಗ್ ವೇಳೆ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಉತ್ತಮ ಪ್ರದರ್ಶನ ತೊರುತ್ತಿದ್ದು, ಅಧಿಕ ಮೈಲೇಜ್ ಮತ್ತು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಗಳು ಗ್ರಾಹಕರ ನಂಬಿಕೆಗೆ ವಿಶ್ವಾಸರ್ಹವಾಗಿವೆ ಎಂಬ ಮಾಹಿತಿ ದೊರೆತಿದೆ.

ನೆಕ್ಸ್ಟ್ ಜನರೇಷನ್ ಸ್ಯಾಂಟ್ರೊ ಕಾರು ಆವೃತ್ತಿಯನ್ನು ಎಹೆಚ್2 ಎಂಬ ಕೋಡ್ ವಲ್ಡ್ ಹೆಸರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಹ್ಯುಂಡೈ ಸಂಸ್ಥೆಯು ಎಂಜಿನ್ ಕಾರ್ಯಕ್ಷಮತೆ ಬಗೆಗೆ ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್ ಕೈಗೊಂಡಿದ್ದು, ಈ ನಡುವೆ ಹೊಸ ಕಾರಿನ ಹೊರಭಾಗದ ವಿನ್ಯಾಸದ ಕುರಿತಾಗಿ ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗುತ್ತಿವೆ.

ಮಧ್ಯಮ ವರ್ಗಗಳ ಸ್ನೇಹಿಯಾಗಿರುವ ಉತ್ತಮ ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಶಕ್ತವಾಗಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ, 800 ಸಿಸಿ ಪೆಟ್ರೋಲ್ ಎಂಜಿನ್ ಇಲ್ಲವಾದ್ರೆ 1.0-ಲೀಟರ್ ಎಂಜಿನ್ ಪಡೆದುಕೊಳ್ಳಲಿದೆ. ಆದರೇ ಹೊಸ ಕಾರುಗಳಲ್ಲಿ ಡಿಸೇಲ್ ಆವೃತ್ತಿಯನ್ನು ಪರಿಚಯಿಸದಿರಲು ಹ್ಯುಂಡೈ ನಿರ್ಧರಿಸಿದೆ.

ಇದರ ಜೊತೆಗೆ ಎಎಂಟಿ(ಆಟೋ ಮ್ಯಾಟಿಕ್ ಗೇರ್‌ಬಾಕ್ಸ್) ಕೂಡಾ ಹೊಂದುವ ಸಾಧ್ಯತೆಗಳಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಐ10 ಮಾದರಿಯಲ್ಲೇ ಒಳ ವಿನ್ಯಾಸದ ಸೌಲಭ್ಯಗಳನ್ನು ಪಡೆಯಲಿವೆ ಎನ್ನಲಾಗುತ್ತಿದೆ. ಶಾರ್ಪ್ ಡಿಸೈನ್ ಹೊಂದಿರುವ ಹೊಸ ಸ್ಯಾಂಟ್ರೊ ಕಾರುಗಳು ವಿನೂತನವಾದ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ.

ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಸಹ ಆಯ್ಕೆ ರೂಪದಲ್ಲಿ ನೀಡಲಿದ್ದು, ಪಾರ್ಕಿಂಗ್ ಸೆನ್ಸಾರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ವಿಶೇಷ ವಿನ್ಯಾಸದ ಟಾಲ್ ಬಾಯ್ ಡಿಸೈನ್ ಹೊಂದಿರಲಿವೆ.

ಹೊಸ ಸ್ಯಾಂಟ್ರೋ ಕಾರಿನ ಬಿಡುಗಡೆಯ ಬಗ್ಗೆ ಮಾತ್ರ ಮಾತ್ರ ಲಭ್ಯವಾಗಿದ್ದು, ಕಾರಿನ ಬೆಲೆಯ ಕುರಿತಾಗಿ ಇನ್ಯಾವ ಮಾಹಿತಿಗಳು ಲಭ್ಯವಿಲ್ಲ. ಅದಾಗ್ಯು, ಬಿಡುಗಡೆಗೊಳ್ಳಲಿರುವ ಮುಂದಿನ ತಲೆಮಾರಿನ ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ. 3.90 ಲಕ್ಷದಿಂದ 4.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹೊಸತನಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಆವೃತ್ತಿಯು ಸಣ್ಣ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಮಾರುತಿ ಸುಜುಕಿ ಸೆಲೆರಿಯೊ, ಟಾಟಾ ಟಿಯಾಗೋ ಮತ್ತು ರೆನಾಲ್ಟ್ ಕ್ವಿಡ್‌ಗೆ ತೀವ್ರ ಸ್ಪರ್ಧಿಯಾಗಲಿದೆ.
Source : carwale


Click it and Unblock the Notifications