ಹ್ಯಾಚ್‍ಬ್ಯಾಕ್ ಕಾರು ಸರಣಿಯಲ್ಲಿ ಮತ್ತೆ ಸದ್ದು ಮಾಡುತ್ತಿರುವ ಹ್ಯುಂಡೈ ಸ್ಯಾಂಟ್ರೋ
ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಸಂಸ್ಥೆಯು ಕಳೆದ ತಿಂಗಳು 23ರಂದು ತಮ್ಮ ಜನಪ್ರಿಯ ಸ್ಯಾಂಟ್ರೊ ಕಾರನ್ನು ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳನ್ನು ಅಳವಡಿಸಿ ಕಡಿಮೆ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಸುಮಾರು 20 ವರ್ಷಗಳ ಬಳಿಕ ಮತ್ತೆ ಹ್ಯಾಚ್‍ಬ್ಯಾಕ್ ಕಾರು ಮಾರಾಟದಲ್ಲಿ ದೂಳೆಬ್ಬಿಸಲು ಬಂದ ಹ್ಯುಂಡೈ ಸ್ಯಾಂಟ್ರೋ ಮಾರುಕಟ್ಟೆಯಲ್ಲಿ ಈಗಾಗಲೆ ತನ್ನ ಕೈಚಳಕ ನಿರೂಪಿಸಿದೆ. ಇಟಿ ಆಟೋ ಪ್ರಕಾರ ಅಕ್ಟೋಬರ್ 23ರಂದು ಬಿಡುಗಡೆಗೊಂಡ ಹ್ಯುಂಡೈ ಸ್ಯಾಂಟ್ರೋ ಕಾರು ಈ ವರೆಗು 38.500 ಯೂನಿಟ್ ಬುಕ್ಕಿಂಗ್ ಅನ್ನು ಪದೆದುಕೊಂಡಿದ್ದು, ಹ್ಯುಂಡೈ ಸಂಸ್ಥೆ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ವಿಚಾರವನ್ನ ನೀಡಿದೆ.

ಹೊಸ ಸ್ಯಾಂಟ್ರೋ ಕಾರಿನ ಬುಕ್ಕಿಂಗ್ ವಿಚಾರದಲ್ಲಿ ಗ್ರಾಹಕರಿಗೆ ಶಾಕಿಂಗ್ ವಿಚಾರವನ್ನ ನೀಡಿರುವ ಹ್ಯುಂಡೈ ಸಂಸ್ಥೆಯು ಉತ್ಪಾದನೆಯ ಸಂಖ್ಯೆಗಿಂತ ಹೆಚ್ಚಾಗಿರುವ ಬುಕ್ಕಿಂಗ್ ಪ್ರಕ್ರಿಯೆಗೆ ತಡೆಹಿಡಿದಿದ್ದು, ಸ್ಯಾಂಟೋ ಖರೀದಿಯ ಯೋಜನೆಯಲ್ಲಿದ್ದ ಗ್ರಾಹಕರಿಗೆ ನಿರಾಶೆ ಮೂಡಿಸಿದೆ.

ಅನಿರೀಕ್ಷಿತ ಮಟ್ಟದಲ್ಲಿ ಬರುತ್ತಿರುವ ಬುಕ್ಕಿಂಗ್ ಬೇಡಿಕೆಯ ಸಲುವಾಗಿ ಹ್ಯುಂಡೈ ಸಂಸ್ಥೆಯು ಸಧ್ಯಕ್ಕೆ ಹೊಸ ಸ್ಯಾಂಟ್ರೋ ಕಾರಿನ ಬುಕ್ಕಿಂಗ್ ಅನ್ನು ಕೆಲ ದಿನಗಳ ವರೆಗು ತಡೆಹಿಡಿಯಲಾಗಿದ್ದು, ಈಗಾಗಲೆ ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರು ತಮ್ಮ ಕೈಗೆ ವಾಹನ ಸೇರಲು ಸುಮಾರು 4 ತಿಂಗಳು ಕಾಯಲೇಬೇಕಿದೆ.

ಒಮ್ಮೆ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿ ಮರೆಯಾಗಿ, ಮತ್ತೊಮೆ ಬಿಡುಗಡೆಗೊಂಡು ಅದೇ ಟ್ರೆಂಡ್ ಅನ್ನು ಮುಂದುಗಿಸುವುದು ಸುಲಭದ ಕೆಲಸವಲ್ಲ. ಹಾಗಾದರೆ ಹೊಸ ತಲೆಮಾರಿನ ಹ್ಯುಂಡಿ ಕಾರಿನಲ್ಲಿ ಈ ಬಾರಿ ಏನೆಲಾ ಬದಲಾವಣೆ ಮತ್ತು ಇಷ್ಟು ಬೇಡಿಕೆ ಏಕೆ ಎಂದು ತಿಳಿಯಲು ಮುಂದಕ್ಕೆ ಓದಿರಿ..

ಇನ್ನು ಹೊಸ ಸ್ಯಾಂಟ್ರೋ ಕಾರು ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಇಂಧನ ಆಯ್ಕೆಯನ್ನು ಹೊಂದಿದ್ದು, ಟಾಲ್-ಬಾಯ್ ಡಿಸೈನ್ ಹೊಂದಿರುವ ಹೊಸ ಕಾರು ವ್ಯಯಕ್ತಿಕ ಬಳಕೆಯ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳುತ್ತಿದೆ.

ಬಿಡುಗಡೆಯಾಗಿರುವ ಹೊಸ ಸ್ಯಾಂಟ್ರೋ ಕಾರು ಐದು ಪ್ರಮುಖ ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಸೌಲಭ್ಯಗಳಿಗೆ ಅನುಗುಣವಾಗಿ ಡಿ-ಲೈಟ್, ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟ್ರಾ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಿದೆ.

ಹಳೆಯ ಮಾದರಿಯ ಸ್ಯಾಂಟ್ರೋ ಕಾರಿಗೂ ಮತ್ತು ಹೊಸ ಸ್ಯಾಂಟ್ರೋ ಕಾರಿಗೂ ಸಾಕಷ್ಟು ಭಿನ್ನತೆಯಿದ್ದು, ಹೊಸ ಕಾರಿನ ಹೊರ ಮತ್ತು ಒಳ ಭಾಗದ ಡಿಸೈನ್‌ನಲ್ಲಿ ಮಹತ್ವದ ಬದಲಾವಣೆ ಕಂಡಿರುವ ಹೊಸ ಸ್ಯಾಂಟ್ರೋ ಕಾರು ಹೊಚ್ಚ ಹೊಸ ಡಿಸೈನ್ ಪ್ರೇರಿತ ಕಾಸ್‌ಕ್ಯಾಡಿಂಗ್ ಬ್ಲ್ಯಾಕ್ ಗ್ರಿಲ್, ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಬ್ಲ್ಯಾಕ್ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್, ಸ್ಪೋರ್ಟಿ ಬಂಪರ್ ಪಡೆದುಕೊಂಡಿದೆ.

ಕಾರಿನ ಹಿಂಭಾಗ ಡಿಸೈನ್ ಕೂಡಾ ಗುರತರ ಬದಲಾವಣೆ ಪಡೆದುಕೊಂಡಿದ್ದು, ದೊಡ್ಡ ಗಾತ್ರದ ವಿಂಡ್ ಶಿಲ್ಡ್, ನವೀಕೃತ ಟೈಲ್ ಲೈಟ್ ಕ್ಲಸ್ಟರ್, ಹೈ ಸ್ಟಾಪ್ ಲ್ಯಾಂಪ್, ಹೊಸ ರಿಯರ್ ಬಂಪರ್ ಸೌಲಭ್ಯದಿಂದಾಗಿ ನೋಡಲು ಗ್ರಾಂಡ್ ಐ10 ನಂತೆಯೇ ಲುಕ್ ಪಡೆದುಕೊಂಡಿದೆ.

ಹಾಗೆಯೇ ಪ್ರೀಮಿಯಂ ಇಂಟಿರಿಯರ್ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಹೊಸ ಸ್ಯಾಂಟ್ರೋ ಕಾರು ಒಳಭಾಗದ ವಿನ್ಯಾಸಗಳು ಸಹ ಎಂಟ್ರಿ ಲೆವಲ್ ಕಾರುಗಳಲ್ಲೇ ವಿಶೇಷವಾಗಿದ್ದು, ವೀಲ್ಹ್ ಆರ್ಚ್ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾರಿನ ಕ್ಯಾಬಿನ್ ಸ್ಥಳಾವಕಾಶ ಕೂಡಾ ಹೆಚ್ಚಿದೆ.

ಇದರಿಂದ ಕಾರು ಚಾಲನೆಗೆ ಮತ್ತಷ್ಟು ಅನುಕೂಲಕರವಾಗಿದ್ದು, ದೂರದ ಪ್ರಯಾಣದ ವೇಳೆ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುವವರಿಗೆ ಕ್ಯಾಬಿನ್ ವಿಸ್ತರಣೆ ಮಾಡಿರುವುದು ಸಾಕಷ್ಟು ಸಹಕಾರಿಯಾಗಲಿದೆ ಎನ್ನಬಹುದು.

ಕಾರಿನ ಒಳಭಾಗದಲ್ಲಿ ಅಳವಡಿಸಲಾಗಿರುವ ಡ್ಯುಯಲ್ ಥೀಮ್ ಡ್ಯಾಶ್ ಬೋರ್ಡ್, ಡೋರ್ ಟ್ರಿಮ್, ಗ್ರಾಂಡ್ ಐ10 ಮಾದರಿಯಲ್ಲಿ ಎಸಿ ವೆಂಟ್ಸ್ ಮತ್ತು ಸ್ಟೀರಿಂಗ್ ವೀಲ್ಹ್, ಸಿಲ್ವರ್ ಅಕ್ಸೆಂಟ್ ಮತ್ತು ಹಿಂಬದಿಯ ಪ್ರಯಾಣಿಕರಿಗೂ ಪ್ರತ್ಯೇಕ ಎಸಿ ವೆಂಟ್ಸ್ ನೀಡಲಾಗಿದೆ.

ಪ್ರೀಮಿಯಂ ವೈಶಿಷ್ಟ್ಯತೆಗಳಾದ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಮಿರರ್ ಲಿಂಕ್, ಎಲೆಕ್ಟ್ರಿಕ್ ಅಡ್ಜೆಸ್ಟ್‌ಮೆಂಟ್ ರಿಯರ್ ವ್ಯೂವ್ ಮಿರರ್, ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ರಿಯರ್ ವೈಪರ್ ಮತ್ತು ರಿಯರ್ ಡಿಫಾಗರ್ ಸೌಲಭ್ಯವಿದೆ.

ಎಂಜಿನ್ ಸಾಮರ್ಥ್ಯ
ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರು 1.1-ಲೀಟರ್ (1,100 ಸಿಸಿ) ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ 68-ಬಿಎಚ್‌ಪಿ ಮತ್ತು 99-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಇದಲ್ಲದೇ ಹೊಸ ಸ್ಯಾಂಟ್ರೋ ಕಾರಿನ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಲಭ್ಯವಿರಲಿದ್ದು, ಇದು ಅತ್ಯುತ್ತಮ ಮೈಲೇಜ್ ನೀಡಬಲ್ಲ ಕಾರು ಮಾದರಿಯಾಗಿ ಮತ್ತಷ್ಟು ಜನಪ್ರಿಯತೆ ಹೊಂದಲಿದೆ.

ಮೈಲೇಜ್
ಹ್ಯುಂಡೈ ಸಂಸ್ಥೆಯ ಅಧಿಕೃತ ಮಾಹಿತಿ ಪ್ರಕಾರ ಪೆಟ್ರೋಲ್ ಎಂಜಿನ್ ಸ್ಯಾಂಟ್ರೋ ಕಾರುಗಳು ಪ್ರತಿ ಲೀಟರ್‌ಗೆ 20.3 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಸ್ಯಾಂಟ್ರೋ ಕಾರು ಪ್ರತಿ ಕೆಜಿ ಸಿಎನ್‌ಜಿಗೆ 30.5 ಕಿ.ಮಿ ಗರಿಷ್ಠ ಮೈಲೇಜ್ ನೀಡಲಿವೆ.

ಲಭ್ಯವಿರುವ ಬಣ್ಣಗಳು
ಗ್ರೀನ್, ಫೈರ್ಲಿ ರೆಡ್, ಇಂಪಿರಿಯರ್ ಬ್ಲಿಜ್, ಮರಿಯನ್ ಬ್ಲ್ಯೂ, ಸ್ಟಾರ್ ಡಸ್ಟ್, ಟೈಫೂನ್ ಸಿಲ್ವರ್ ಮತ್ತು ಪೊಲಾರ್ ವೈಟ್ ಬಣ್ಣಗಳಲ್ಲಿ ಹೊಸ ಸ್ಯಾಂಟ್ರೋ ಲಭ್ಯವಾಗಲಿದೆ.

ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಡ್ರೈವರ್ ಸೈಡ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಪ್ಯಾಸೆಂಜರ್ ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಕ್ಯಾಮೆರಾ, ಸ್ಪೀಡ್ ಸೆಸ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯಗಳನ್ನು ನೀಡಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿದೆ.

ಈ ಮೂಲಕ ಎಂಟ್ರಿ ಲೆವಲ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಂಸ್ಥೆಗೆ ತ್ರೀವ ಪೈಪೋಟಿ ನೀಡಲಿರುವ ಹ್ಯುಂಡೈ ಸಂಸ್ಥೆಯು ಮಾರುತಿ ಆಲ್ಟೊ 800, ಸೆಲೆರಿಯೊ ಮತ್ತು ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೊ, ರೆನಾಲ್ಟ್ ಕ್ವಿಡ್ ಕಾರುಗಳ ಮಾರಾಟಕ್ಕೆ ಟಕ್ಕರ್ ನೀಡತ್ತಿದೆ.

ಹೊಸ ಸ್ಯಾಂಟ್ರೋ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಗಳ ಮಾಹಿತಿ ಇಲ್ಲಿದೆ ನೋಡಿ..
| Variants | Price |
| D-Lite | Rs 3,89,900 |
| Era | Rs 4,24,900 |
| Magna | Rs 4,57,900 |
| Magna AMT | Rs 5,18,900 |
| Sportz | Rs 4,99,900 |
| Sportz AMT | Rs 5,64,900 |
| Asta | Rs 5,45,900 |
| Magna CNG | Rs 5,23,900 |
| Sportz CNG | Rs 5,64,900 |


Click it and Unblock the Notifications








