ಬರಲಿರುವ ಹ್ಯುಂಡೈ ಸ್ಯಾಂಟ್ರೊ ವಿನೂತನ ಕಾರಿನ ವಿಶೇಷತೆ ಏನು?

Written By:
Recommended Video - Watch Now!
Ducati 959 Panigale Crashes Into Buffalo - DriveSpark

ದೇಶಿಯ ಮಾರುಕಟ್ಟೆಯಲ್ಲಿ 2ನೇ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ಸದ್ಯ ಹೊಸ ನಮೂನೆಯ 4 ಕಾರು ಮಾದರಿಗಳ ಬಿಡುಗಡೆ ಎದುರು ನೋಡುತ್ತಿದ್ದು, ಇವುಗಳಲ್ಲಿ ಸ್ಯಾಂಟ್ರೊ ಫೇಸ್‌ಲಿಫ್ಟ್ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಬರಲಿರುವ ಹ್ಯುಂಡೈ ಸ್ಯಾಂಟ್ರೊ ವಿನೂತನ ಕಾರಿನ ವಿಶೇಷತೆ ಏನು?

ಮಾರುತಿ ಸುಜುಕಿ ನಂತರ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಯಶಸ್ಸು ಸಾಧಿಸಿರುವ ಹ್ಯುಂಡೈ ಮುಂಬರುವ ದಿನಗಳಲ್ಲಿ ಹೊಸ ನಮೂನೆಯ ಕಾರು ಮಾದರಿಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಇದೇ ತಿಂಗಳು 7ರಿಂದ ನಡೆಯಲಿರುವ 2018ರ ಆಟೋ ಎಕ್ಸ್ ಪೋದಲ್ಲಿ ತನ್ನ ಭವಿಷ್ಯ ವಾಹನಗಳ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಿದೆ.

ಬರಲಿರುವ ಹ್ಯುಂಡೈ ಸ್ಯಾಂಟ್ರೊ ವಿನೂತನ ಕಾರಿನ ವಿಶೇಷತೆ ಏನು?

ಹೀಗಾಗಿ ಹ್ಯುಂಡೈ ಬಿಡುಗಡೆ ಮಾಡಲಿರುವ ಐ20 ಫೇಸ್‌ಲಿಫ್ಟ್, ಕ್ರೇಟಾ ಫೇಸ್‌ಲಿಫ್ಟ್ ಹಾಗೂ ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿರುವ ಸ್ಯಾಂಟ್ರೊ ಫೇಸ್‌ಲಿಫ್ಟ್ ಕಾರುಗಳು ಚರ್ಚೆಗೆ ಕಾರಣವಾಗಿದ್ದು, ಸಣ್ಣ ಕಾರು ಮಾದರಿಗಳಲ್ಲಿ ಸ್ಯಾಂಟ್ರೊ ಫೇಸ್‌ಲಿಫ್ಟ್ ಗಮನಸೆಳೆಯಲಿದೆ.

ಬರಲಿರುವ ಹ್ಯುಂಡೈ ಸ್ಯಾಂಟ್ರೊ ವಿನೂತನ ಕಾರಿನ ವಿಶೇಷತೆ ಏನು?

ಎಂಜಿನ್ ಸಾಮರ್ಥ್ಯ

ಸಿಎನ್‌ಜಿ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಯಾಂಟ್ರೊ ಫೇಸ್‌ಲಿಫ್ಟ್ ಕಾರುಗಳು ಮ್ಯಾನುವಲ್ ಇಲ್ಲವೇ ಆಟೋ ಮ್ಯಾಟಿಕ್ ಗೇರ್ ಬಾಕ್ಸ್ ವ್ಯವಸ್ಥೆಯನ್ನು ಹೊಂದಿರಲಿವೆ.

ಬರಲಿರುವ ಹ್ಯುಂಡೈ ಸ್ಯಾಂಟ್ರೊ ವಿನೂತನ ಕಾರಿನ ವಿಶೇಷತೆ ಏನು?

ಕಾರಿನ ವಿನ್ಯಾಸದಲ್ಲಿ ಐ10 ಮಾದರಿಯನ್ನೇ ಹೊಲಲಿರುವ ಸ್ಯಾಂಟ್ರೊ ಫೇಸ್‌ಲಿಫ್ಟ್ ಕಾರುಗಳು ಭಾರತೀಯ ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ಒಳವಿನ್ಯಾಸಗಳು ಮತ್ತು ಸೌಲಭ್ಯಗಳನ್ನು ಹೊಂದಲಿದ್ದು, ಟಾಟಾ ನ್ಯಾನೋ ಗಿಂತಲೂ ಉತ್ತಮ ಎಂಜಿನ್ ಕಾರ್ಯಕ್ಷಮತೆ ಹೊಂದಲಿವೆ.

ಬರಲಿರುವ ಹ್ಯುಂಡೈ ಸ್ಯಾಂಟ್ರೊ ವಿನೂತನ ಕಾರಿನ ವಿಶೇಷತೆ ಏನು?

ಬೆಲೆ ಮತ್ತು ಬಿಡುಗಡೆ

ಇದೇ ವರ್ಷ ದೀಪಾವಳಿ ಮುಂಚಿತ ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ಯಾಂಟ್ರೊ ಫೇಸ್‌ಲಿಫ್ಟ್ ಕಾರುಗಳು 4 ಲಕ್ಷದಿಂದ 5 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

ಬರಲಿರುವ ಹ್ಯುಂಡೈ ಸ್ಯಾಂಟ್ರೊ ವಿನೂತನ ಕಾರಿನ ವಿಶೇಷತೆ ಏನು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಸ್ಯಾಂಟ್ರೊ ಫೇಸ್‌ಲಿಫ್ಟ್ ಜನಪ್ರಿಯಗೊಳಿಸಲು ಉದ್ದೇಶದಿಂದ ಹೊಸ ಕಾರುಗಳ ಉತ್ಪಾದನೆಗಾಗಿ ಬರೋಬ್ಬರಿ 6,500 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿರುವ ಹ್ಯುಂಡೈ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹೊಸ ಹೊಸ ಕಾರುಗಳನ್ನು ಪರಿಚಯಿಸುತ್ತಿದ್ದು, ಫೆ.7ರಿಂದ ನಡೆಯಲಿರುವ ಆಟೋ ಎಕ್ಸ್ ಪೋ ಹೊಸ ಕಾರುಗಳ ಬಗೆಗೆ ಮತ್ತಷ್ಟು ಮಾಹಿತಿ ದೊರೆಯಲಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

English summary
All-New Hyundai Santro Launch Details Revealed.
Story first published: Thursday, February 1, 2018, 16:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark