ಬಿಡುಗಡೆಯಾಗಲಿರುವ ಹ್ಯುಂಡೈ ಟಕ್ಸನ್ ಫೆಸ್‍ಲಿಫ್ಟ್ ಕಾರು ಹೇಗಿರಲಿದೆ ಗೊತ್ತಾ.?
ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ 2018ರ ನ್ಯೂ ಯಾರ್ಕ್ ಮೋಟಾರ್ ಶೋನಲ್ಲಿ ತಮ್ಮ ಹೊಸ ಟಕ್ಸನ್ ಫೇಸ್‍ಲಿಫ್ಟ್ ಕಾರನ್ನು ಬಹಿರಂಗಗೊಳಿಸಿದ್ದು, 2019ರಲ್ಲಿ ಬಿಡುಗಡೆಗೊಳಿಸುವುದಾಗಿ ಸುಳಿವನ್ನು ನೀಡಿತ್ತು. ಆದರೆ ಇದೀಗ ಮಾಹಿತಿಗಳ ಪ್ರಕಾರ ಈ ಕಾರು 2019ರ ಮೇ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಹೊಸದಾಗಿ ಬಿಡುಗಡೆಯಾಗಲಿರುವ ಹ್ಯುಂಡೈ ಟಕ್ಸನ್ ಫೇಸ್‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಕೇಸ್‍ಕೇಡಿಂಗ್ ಗ್ರಿಲ್, ಎಲ್ಇಡಿ ಹೆಡ್‍ಲೈಟ್ಸ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಹೊಸ ಫಾಗ್ ಲ್ಯಾಂಪ್ ಮತ್ತು ಮರುವಿನ್ಯಾಸಗೊಳಿಸಲಾದ ಬಂಪರ್ ಅನ್ನು ಅಳವಡಿಸಲಾಗಿದೆ.

ಇನ್ನು ಹ್ಯುಂಡೈ ಟಕ್ಸನ್ ಎಸ್‍ಯುವಿ ಫೇಸ್‍ಲಿಫ್ಟ್ ಕಾರಿನ ಹಿಂಭಾಗದಲ್ಲಿ ಕೂಡಾ ಹೊಸ ಬಂಪರ್ ಮತ್ತು ಮರಿವಿನ್ಯಾಸಗೊಳಿಸಲಾದ ಟೈಲ್ ಲೈಟ್ ಕ್ಲಸ್ಟರ್ ಅನ್ನು ನೀಡಲಾಗಿದ್ದು, ಈ ಕಾರು ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್‍ಗಳನ್ನು ಪಡೆದುಕೊಂಡಿದೆ.

ಹ್ಯುಂಡೈ ಟಕ್ಸನ್ ಎಸ್‍ಯುವಿ ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್‍ಪ್ಲೇ ಮತ್ತು 3ಡಿ ಮ್ಯಾಪ್‍ನೊಂದಿಗೆ ನ್ಯಾವಿಗೇಷನ್ ಸಪೋರ್ಟ್ ಮಾದುವ 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒದಗಿಸಲಾಗಿದೆ. ಇದಲ್ಲದೆ ಈ ಕಾರಿನಲ್ಲಿ ಡ್ಯಾಶ್‍ಬೋರ್ಡ್ ಡ್ಯುಯಲ್ ಟೋನ್ ಬಣ್ಣದಿಂದ ಮತ್ತು ಎಸಿ ವೆಂಟ್‍ಗಳ ಸುತ್ತಾ ಸಿಲ್ವರ್ ಆಕ್ಸೆಂಟ್ ಅನ್ನು ಸಜ್ಜುಗೊಳಿಸಲಾಗಿದೆ. ಇಷ್ಟೆ ಅಲ್ಲದೆ 360 ಡಿಗ್ರಿ ಕ್ಯಾಮೆರಾ ಹಾಗು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಅಳವಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಹ್ಯುಂಡೈ ಟಕ್ಸನ್ ಫೆಸ್‍ಲಿಫ್ಟ್ ಕಾರು ಹೊಸ 2 ಲೀಟರ್ ಡೀಸೆಲ್ ಹಾಗು ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದೆ ಎಂದು ಊಹಿಸಲಾಗಿದೆ. ಇನ್ನು ಪೆಟ್ರೋಲ್ ಎಂಜಿನ್ ಕಾರು 153ಬಿಹೆಚ್‍ಪಿ ಮತ್ತು 192ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಇನ್ನು ಡೀಸೆಲ್ ಎಂಜಿನ್ ಹ್ಯುಂಡೈ ಟಕ್ಸನ್ ಫೆಸ್‍ಲಿಫ್ಟ್ ಕಾರು 182ಬಿಹೆಚ್‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎರಡೂ ಎಂಜಿನ್‍ಗಳನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ 6 ಏರ್‍ಬ್ಯಾಗ್‍ಗಳು, ಎಬಿಎಸ್, ಇಬಿಡಿ, ಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ಲ್ ಅಸ್ಸಿಸ್ಟ್ ಎಂಬ ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದ್ದು, ಜೊತೆಗೆ ಅವಾಯ್ಡನ್ಸ್ ಅಸಿಸ್ಟ್, ಲೇನ್ ಕೀಪಿಂಗ್ ಅಸ್ಸಿಸ್ಟ್, ಡ್ರೈವರ್ ಅಟೆಂಷನ್ ವಾರ್ನಿಂಗ್ ಮತ್ತು ಇಂಟೆಲಿಜೆಂಟ್ ಸ್ಪೀಟ್ ಲಿಮಿಟ್ ವಾರ್ನಿಂಗ್ ಅನ್ನು ಒದಗಿಸಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ದೇಶಿಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಕಾರುಗಳ ಬೇಡಿಕೆಯು ಹೆಚ್ಚುತ್ತಿದ್ದು, ಹ್ಯುಂಡೈ ಸಂಸ್ಥೆಯು ಟಕ್ಸನ್ ಫೇಸ್‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲಿದ್ದು, ಬಿಡುಗಡೆಯ ನಂತರ ಮಾರುಕಟ್ಟೆಯಲ್ಲಿರುವ ಜೀಪ್ ಕಂಪಾಸ್, ಸ್ಕೋಡಾ ಕಾಡಿಯಾಕ್ ಮತ್ತು ವೋಲ್ಕ್ಸ್ ವ್ಯಾಗನ್ ಟೈಗನ್ ಎಸ್‍ಉವಿ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








