ಇನ್ನಷ್ಟು ಸುರಕ್ಷಾ ವೈಶಿಷ್ಟ್ಯತೆಯನ್ನು ಪಡೆದ ಹ್ಯುಂಡೈ ಎಕ್ಸ್‌ಸೆಂಟ್..
ಪ್ಯಾಸ್ಸೆಂಜರ್ ಕಾರುಗಳ ಸರಣಿಯಲ್ಲಿ ಮಿಂಚುತ್ತಿರುವ ಹ್ಯುಂಡೈ ಸಂಸ್ಥೆಯು ತಮ್ಮ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ವೈಶಿಷ್ಟ್ಯತೆಗಳನ್ನು ಅಳವಡಿಸಲಿದೆ. ಹೌದು, ಸೌತ್ ಕೊರಿಯನ್ ಮೂಲದ ವಾಹನ ತಯಾರ
ಪ್ಯಾಸ್ಸೆಂಜರ್ ಕಾರುಗಳ ಸರಣಿಯಲ್ಲಿ ಮಿಂಚುತ್ತಿರುವ ಹ್ಯುಂಡೈ ಸಂಸ್ಥೆಯು ತಮ್ಮ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ವೈಶಿಷ್ಟ್ಯತೆಗಳನ್ನು ಅಳವಡಿಸಲಿದೆ. ಹೌದು, ಸೌತ್ ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಎಕ್ಸ್‌ಸೆಂಟ್ ಕಾರಿನಲ್ಲಿ ಹೊಸದಾಗಿ ಎಬಿಎಸ್ ಮತ್ತು ಇಬಿಡಿ ಸಿಸ್ಟಮ್ ಅನ್ನು ಅಳವಡಿಸಿದೆ.

ಈ ಹಿಂದೆ ಹ್ಯುಂಡೈ ತಮ್ಮ ಎಕ್ಸ್‌ಸೆಂಟ್ ಸೆಡಾನ್ ಕಾರಿನಲ್ಲಿ ಸುರಕ್ಷೆತೆಯ ಸಲುವಾಗಿ ಎರಡು ಏರ್‍ಬ್ಯಾಗ್‍ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿತ್ತು, ಆದರೆ ಇದೀಗ ಸಂಸ್ಥೆಯು ಎಕ್ಸ್‌ಸೆಂಟ್ ಕಾರಿನಲ್ಲಿಯ ಎಲ್ಲಾ ಮಾದರಿಗಳಲ್ಲಿ ಎಬಿಎಸ್ ಮತ್ತು ಇಬಿಡಿ ಸಿಸ್ಟಮ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ.

ಇವುಗಳನ್ನು ಹೊರತು ಪಡಿಸಿ ಹ್ಯುಂಡೈ ಸಂಸ್ಥೆಯು ಎಕ್ಸ್‌ಸೆಂಟ್ ಕಾರಿನಲ್ಲಿರುವ ಮಿಡ್ ಸ್ಪೆಕ್ ಇ+ ವೇರಿಯಂಟ್ ಅನ್ನು ತೆಗೆದುಹಾಕಿದ್ದು, ಪ್ರಸ್ಥುತ ಈ ಕಾರು ಇ,ಎಸ್,ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒ) ಎಂಬ ನಾಲ್ಕು ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಹೊಸ ಸುರಕ್ಷಾ ವೈಶಿಷ್ಟ್ಯತೆಯನ್ನು ಅಳವಡಿಸಿದ ನಂತರ ಹ್ಯುಂಡೈ ಎಕ್ಸ್‌ಸೆಂಟ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ಬೇಸ್ ವೇರಿಯಂಟ್ ಪೆಟ್ರೋಲ್ ಕಾರು ರೂ. 5.5 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಟಾಪ್ ಸ್ಪೆಕ್ ಡೀಸೆಲ್ ವೇರಿಯಂಟ್ ಕಾರಿನ ಬೆಲೆಯನ್ನು ರೂ. 8.61 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಹ್ಯುಂಡೈ ಎಕ್ಸ್‌ಸೆಂಟ್ ಕಾರು 1.2 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಎಂಜಿನ್ 82ಬಿಹೆಚ್‍ಪಿ ಮತ್ತು 114ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಡೀಸೆಲ್ ಎಂಜಿನ್ 70ಬಿಹೆಚ್‍ಪಿ ಮತ್ತು 170ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಕಾರಿನ ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು ಇನ್ನು ಕಾರಿನ ಡೀಸೆಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹ್ಯುಂಡೈ ಎಕ್ಸ್‌ಸೆಂಟ್ ಕಾರಿನ ಎದುರಾಳಿಗಳಾದ ಮಾರುತಿ ಡಿಜೈರ್ ಮತ್ತು ಹೊಸ ಹೋಂಡಾ ಅಮೇಜ್ ಕಾರುಗಳಲ್ಲಿ ಕೂಡಾ ಡ್ಯುಯಲ್ ಏರ್‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ. ಆದರೆ ಈ ಎರಡು ಕಾರುಗಳು ಇಬಿಡಿಯನ್ನು ಪಡೆದಿಲ್ಲದಿರುವುದನ್ನು ಗಮನಿಸಬೇಕು. ಆದ್ದರಿಂದ ಈ ಕಾಂಪ್ಯಾಕ್ಟ್ ಸೆಡಾನ್ ಶ್ರೇಣಿಯಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಉತ್ತಮವೆಂದೆ ಹೇಳಬಹುದು.

ಕಾಂಪ್ಯಾಕ್ಟ್ ಸೆಡಾನ್ ಶ್ರೇಣಿಯಲ್ಲಿನ ಕಾರುಗಳ ಮಾರಾಟದ ಅಂಕಿಅಂಶಗಳ ಪ್ರಕಾರ ಹ್ಯುಂಡೈ ಎಕ್ಸ್‌ಸೆಂಟ್ ಮೂರನೆಯ ಸ್ಥಾನವನ್ನು ಪಡೆದುಕೊಂಡಿದ್ದು, ಹೊಸದಾಗಿ ಬಿಡುಗಡೆಗೊಂಡ ಹೋಂಡಾ ಅಮೇಜ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ತಮ್ಮ ಅಧಿಕ ಸಾಮರ್ಥ್ಯದ ಎಂಜಿನ್‍ನಿಂದ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಅಧಿಕವಾದ ಮೈಲೇಜ್ ನೀಡುತ್ತಿದೆ. ಕಾರಿನ ಒಳವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಆಧಿನಿಕ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.


Click it and Unblock the Notifications








