ಹ್ಯುಂಡೈ ಹೊಸ ಕಾರ್ಲಿನೋ ಎಸ್‌ಯುವಿ ಕಾರಿನ ಸ್ಪೆಷಾಲಿಟಿ ಏನು ಗೊತ್ತಾ?

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿರುವ ಕಾರ್ಲಿನೋ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

By Praveen Sannamani

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿರುವ ಕಾರ್ಲಿನೋ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ವರದಿಗಳ ಪ್ರಕಾರ ಹ್ಯುಂಡೈ ಹೊಸ ಕಾರು ಮಾದರಿಯು 2019ರ ಮೊದಲ ತ್ರೈಮಾಸಿಕ ವೇಳೆಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡುವ ಬಗ್ಗೆ ಸುಳಿವು ನೀಡಿದೆ.

ಹ್ಯುಂಡೈ ಹೊಸ ಕಾರ್ಲಿನೋ ಎಸ್‌ಯುವಿ ಕಾರಿನ ಸ್ಪೆಷಾಲಿಟಿ ಏನು ಗೊತ್ತಾ?

ಕ್ರೇಟಾ ಮತ್ತು ಕೋನಾ ಎಸ್‍‍ಯುವಿ ಕಾರುಗಳ ಭರ್ಜರಿ ಯಶಸ್ಸಿನ ನಂತರ ಹ್ಯುಂಡೈ ಸಂಸ್ಥೆಯು ಇದೀಗ ಕಂಪ್ಯಾಕ್ಟ್ ಎಸ್‍‍ಯುವಿ ಕಾರನ್ನು ಪರಿಚಯಿಸಲು ಮುಂದಾಗಿದ್ದು, ಹೊಸ ಕಾರಿನ ಬಿಡುಗಡೆ ಕುರಿತಂತೆ ಹ್ಯುಂಡೈ ಲ್ಯಾಟಿನ್ ತಂಡದ ಅರ್ಮಾಂಡೊ ಕಾರ್ಡೊಸೊ ಅವರು ಮಹತ್ವದ ಮಾಹಿತಿಯೊಂದನ್ನ ಬಹಿರಂಗ ಪಡಿಸಿದ್ದಾರೆ. ಸದ್ಯ ಉತ್ಪಾದನೆ ಹಂತದಲ್ಲಿರುವ ಕಾರ್ಲಿನೋ ಕಾರುಗಳು ಭಾರತೀಯ ಮಾರುಕಟ್ಟೆಗಾಗಿ ಉತ್ಪಾದನೆಯಾಗುತ್ತಿದೆ ಎಂಬುವುದಾಗಿ ಹೇಳಿಕೊಂಡಿದ್ದಾರೆ.

ಹ್ಯುಂಡೈ ಹೊಸ ಕಾರ್ಲಿನೋ ಎಸ್‌ಯುವಿ ಕಾರಿನ ಸ್ಪೆಷಾಲಿಟಿ ಏನು ಗೊತ್ತಾ?

ಹೀಗಾಗಿ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹ್ಯುಂಡೈ ಹೊಸ ಕಂಪ್ಯಾಕ್ಟ್ ಎಸ್‍‍ಯುವಿ ಅರ್ಬನ್ ಕಮ್ಯೂಟರ್ ವಿಭಾಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಿರುವ ಬಗ್ಗೆ ಮಾಹಿತಿಯಿದ್ದು, ಕ್ರಾಸ್‍ಓವರ್ ವಿನ್ಯಾಸದೊಂದಿಗೆ ಕ್ರೇಟಾ ಹಾಗೂ ಕೊನಾ ಕಾರುಗಳ ಮಧ್ಯದ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದೆ.

ಹ್ಯುಂಡೈ ಹೊಸ ಕಾರ್ಲಿನೋ ಎಸ್‌ಯುವಿ ಕಾರಿನ ಸ್ಪೆಷಾಲಿಟಿ ಏನು ಗೊತ್ತಾ?

ಹೊಸ ಕಾರಿನ ಕುರಿತಾಗಿ ಈಗಾಗಲೇ ಎಂಜಿನ್ ಕಾರ್ಯಕ್ಷಮತೆ ನಡೆಯುತ್ತಿದ್ದು, ಹ್ಯುಂಡೈ ಸಂಸ್ಥೆಯು ಈ ಹೊಸ ಕಾರಿಗಾಗಿ ಪ್ರತ್ಯೇಕವಾದ ಪ್ಲಾಟ್‍‍ಫಾರ್ಮ್ ಅನ್ನೇ ಸಿದ್ದಪಡಿಸಿದೆ. ಈ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿರುವ ಈ ಕಾರ್ಲಿನೋ ಕಾರುಗಳು ಮಾರುತಿ ಸುಜುಕಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್ ಕಾರಿಗಳಿಗೆ ನೇರ ಪ್ರತಿಸ್ಪರ್ಧಿಸಲಾಗಲಿವೆ ಎನ್ನಬಹುದು.

ಹ್ಯುಂಡೈ ಹೊಸ ಕಾರ್ಲಿನೋ ಎಸ್‌ಯುವಿ ಕಾರಿನ ಸ್ಪೆಷಾಲಿಟಿ ಏನು ಗೊತ್ತಾ?

ಪ್ರಸ್ತುತ ಮಾಹಿತಿಗಳ ಪ್ರಕಾರ ಈ ಕಾರು 2019ರ ಆರಂಭದಲ್ಲಿ ಯುಎಸ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದ್ದು, ತದನಂತರವಷ್ಟೇ ಭಾರತ ಸೇರಿದಂತೆ ಪ್ರಮುಖ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಈ ಕಾರು ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

ಹ್ಯುಂಡೈ ಹೊಸ ಕಾರ್ಲಿನೋ ಎಸ್‌ಯುವಿ ಕಾರಿನ ಸ್ಪೆಷಾಲಿಟಿ ಏನು ಗೊತ್ತಾ?

ಕಂಪ್ಯಾಕ್ಟ್ ಎಸ್‍‍ಯುವಿ ವಿನ್ಯಾಸ ಆಧಾರಿತ ಕಾರ್ಲಿನೊ ಪರಿಕಲ್ಪನೆಯನ್ನು ಮೊದಲು ಹ್ಯುಂಡೈ ಸಂಸ್ಥೆಯು 2016ರ ದೆಹಲಿ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿತ್ತು. ಆದ್ರೆ ಕಾರಣಾಂತರಗಳಿಂದ ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆ ಮುಂದೂಡಿದ್ದ ಹ್ಯುಂಡೈ, ಇದೀಗ ಕಾರ್ಲಿನೋ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಹ್ಯುಂಡೈ ಹೊಸ ಕಾರ್ಲಿನೋ ಎಸ್‌ಯುವಿ ಕಾರಿನ ಸ್ಪೆಷಾಲಿಟಿ ಏನು ಗೊತ್ತಾ?

ಇದಲ್ಲದೇ ಹ್ಯುಂಡೈ ಸಂಸ್ಥೆಯ ಕ್ಯೂಎಕ್ಸ್ಐ ಹೆಸರಿನ ಮತ್ತೊಂದು ಹೊಸ ಕಾರು ಮಾದರಿಯನ್ನು 2019ರ ಅಂತ್ಯದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಅದೇ ಕಾರಿನ ಎಂಜಿನ್ ಮಾದರಿಯನ್ನು ಸಹ ಕಾರ್ಲಿನೋ ಕಾರಗಳಲ್ಲೂ ಬಳಕೆ ಮಾಡಲಾಗಿದೆ ಎನ್ನಲಾಗಿದೆ.

ಹ್ಯುಂಡೈ ಹೊಸ ಕಾರ್ಲಿನೋ ಎಸ್‌ಯುವಿ ಕಾರಿನ ಸ್ಪೆಷಾಲಿಟಿ ಏನು ಗೊತ್ತಾ?

ಇದರಿಂದಾಗಿ ಕಾರ್ಲಿನೋ ಕಾರುಗಳು 1.0 ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಳ್ಳುವ ಸಾಧ್ಯತೆಗಲಿದ್ದು, ಕ್ರೇಟಾ ಮತ್ತು ಗ್ರ್ಯಾಂಡ್ ಐ10 ನಿಂದಲೂ ಹಲವಾರು ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ಎರವಲು ಪಡೆದುಕೊಳ್ಳಲಾಗಿದೆಯೆಂತೆ.

ಹ್ಯುಂಡೈ ಹೊಸ ಕಾರ್ಲಿನೋ ಎಸ್‌ಯುವಿ ಕಾರಿನ ಸ್ಪೆಷಾಲಿಟಿ ಏನು ಗೊತ್ತಾ?

ಬಿಡುಗಡೆಯ ಅವಧಿ ಮತ್ತು ಕಾರಿನ ಬೆಲೆಗಳು(ಅಂದಾಜು)

2019ರ ಆರಂಭದಲ್ಲಿ ಯುಎಸ್ಎ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೊಸ ಕಾರ್ಲಿನೋ ಕಾರುಗಳು 2019ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ರೂ.7 ಲಕ್ಷದಿಂದ ರೂ.10 ಲಕ್ಷ ತನಕ ಇರಬಹುದೆಂದು ಅಂದಾಜಿಸಲಾಗಿದೆ.

Source: Carwale

ಹ್ಯುಂಡೈ ಹೊಸ ಕಾರ್ಲಿನೋ ಎಸ್‌ಯುವಿ ಕಾರಿನ ಸ್ಪೆಷಾಲಿಟಿ ಏನು ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹತ್ತು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಹ್ಯುಂಡೈ ಕಾರ್ಲಿನೋ ಕಂಪ್ಯಾಕ್ಟ್ ಎಸ್‌ಯುವಿ ಕಾರು ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಕಂಪ್ಯಾಕ್ಟ್ ಎಸ್‌ಯುವಿಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಲಿದೆ.

Article Published On: Thursday, July 26, 2018, 13:23 [IST]
English summary
Hyundai’s India-bound new sub-4m SUV spotted for the first time.
Read more on hyundai suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+