ಮುಂದಿನ ಮೂರು ವರ್ಷಗಳಲ್ಲಿ 5 ಗೇಮ್ ಚೇಂಜರ್ ಕಾರುಗಳ ಬಿಡುಗಡೆ ಮಾಡಲಿದೆ ಕಿಯಾ
ಮುಂದಿನ ಮೂರು ವರ್ಷಗಳಲ್ಲಿ 5 ಗೇಮ್ ಚೇಂಜರ್ ಕಾರುಗಳ ಬಿಡುಗಡೆ ಮಾಡಲಿದೆ ಕಿಯಾ
ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಬಾರಿಗೆ ತನ್ನ ವಾಣಿಜ್ಯ ವಹಿವಾಟು ಆರಂಭಿಸುತ್ತಿದ್ದು, ದೇಶಿಯ ಮಾರುಕಟ್ಟೆಗೆ ಅನುಗುಣವಾಗಿ ಹಲವು ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಯುರೋಪ್ ಮತ್ತು ಅಮೆರಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಭಾರೀ ಜನಪ್ರಿಯತೆ ಸಾಧಿಸಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಭಾರತದಲ್ಲಿ ತನ್ನ ವಾಣಿಜ್ಯ ಚಟುವಟಿಕೆಗೆ ಚಾಲನೆ ನೀಡಿದ್ದು, ಸುಮಾರು 15 ಸಾವಿರ ಕೋಟಿ ಬಂಡವಾಳದೊಂದಿಗೆ ಹಲವು ಜನಪ್ರಿಯ ಕಾರುಗಳನ್ನು ಪರಿಚಯಿಸುವ ಸುಳಿವು ನೀಡಿರುವ ಕಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎನ್ನಬಹುದು.

ತೆಲಂಗಾಣದಲ್ಲಿ ತನ್ನ ಮೊದಲ ಕಾರು ಉತ್ಪಾದನಾ ಘಟಕವನ್ನು ತೆರೆಯುವ ಮೂಲಕ ಈಗಾಗಲೇ ಕಾರು ಉತ್ಪಾದನೆಯನ್ನು ಆರಂಭಗೊಳಿರುವ ಕಿಯಾ ಸಂಸ್ಥೆಯು ಮುಂಬರುವ 2019ರ ಆರಂಭದಲ್ಲೇ ಹೊಸ ಕಾರುಗಳ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

ಕಿಯಾ ಸಂಸ್ಥೆಯು 2018ರ ದೆಹಲಿ ಆಟೋ ಮೇಳದಲ್ಲೂ ಸಹ ತನ್ನ ಬಹುನೀರಿಕ್ಷಿತ ಹೊಸ ಕಾರುಗಳನ್ನು ಪ್ರದರ್ಶನ ಮಾಡಲಾಗಿದ್ದು, ಕೈಗೆಟುಕುವ ಬೆಲೆಗಳಲ್ಲಿ ಮಧ್ಯಮ ಗಾತ್ರದ ಕಾರು ಮಾದರಿಗಳು ಖರೀದಿಗೆ ಲಭ್ಯವಾಗುವ
ಸಾಧ್ಯತೆಗಳಿವೆ.

ಇವುಗಳಲ್ಲಿ ಎಸ್‌ಪಿ ಕಾನ್ಸೆಪ್ಟ್ ಎಸ್‌ಯುವಿಯು ಮುಂದಿನ ವರ್ಷದ ಆರಂಭದಲ್ಲೇ ಬಿಡುಗಡೆ ಸಜ್ಜಾಗುತ್ತಿದ್ದು, ಈ ನಡುವೆ ಮತ್ತೆರಡು ಹೊಸ ಕಾರುಗಳನ್ನು ಸಹ ಬಿಡುಗಡೆ ಮಾಡುತ್ತಿರುವಾಗಿ ಸುಳಿವು ನೀಡಿದೆ. ಕ್ರಾಸ್ ಓವರ್ ಎಸ್‌ಯುವಿ ಮಾದರಿಯಾದ ಸ್ಟೊನಿಕ್ ಮತ್ತು ಇನೋವಾ ಕ್ರಿಸ್ಟಾ ಮಾದರಿಯ ಗ್ರ್ಯಾಂಡ್ ಕಾರ್ನಿವಾಲ್ ಎಂಪಿವಿ ಕಾರನ್ನು ಪರಿಚಯಿಸುತ್ತಿರುವುದು ಖಚಿತವಾಗಿದೆ.

ಇದರ ಜೊತೆಗೆ ಕಿಯಾ ಸ್ಟಿಂಗರ್ ಜಿಟಿ ಎಸ್ ಕಾರುಗಳು ಲಗ್ಷುರಿ ಸೆಡಾನ್ ಅಂಶಗಳೊಂದಿಗೆ ಕಾರು ಪ್ರಿಯರನ್ನು ಸೆಳೆಯುತ್ತಿದ್ದು, 19-ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳು, ಬ್ರಿಂಬೋ ಬ್ರೇಕಿಂಗ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಡ್ರೈವಿಂಗ್ ಸೌಲಭ್ಯಗಳನ್ನು ಪಡೆದಿರುವುದು ಬಹಿರಂಗವಾಗಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್ ಮತ್ತು ಐಷಾರಾಮಿ ಕಾರುಗಳನ್ನು ಸಿದ್ದಗೊಳಿಸಿದೆ ಎನ್ನಬಹುದು.

ಹೀಗಾಗಿ ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ದೇಶದ ವಿವಿಧಡೆ ಈಗಾಗಲೇ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಇದೀಗ ಹ್ಯುಂಡೈ ವೆರ್ನಾ, ಹೋಂಡಾ ಸಿಟಿ, ಮಾರುತಿ ಸಿಯಾಜ್, ಟೊಯೊಟಾ ಯಾರಿಸ್‌ಗೆ ಪ್ರತಿಸ್ಪರ್ಧಿಯಾಗಬಲ್ಲ ಸೆರಾಟೊ ಸೆಡಾನ್ ಕಾರನ್ನು ಸಹ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಇದರೊಂದಿಗೆ ಕಿಯಾ ಎಸ್‌ಪಿ ಕಾನ್ಸೆಪ್ಟ್, ಸ್ಟೊನಿಕ್, ಗ್ರ್ಯಾಂಡ್ ಕಾರ್ನಿವಾಲ್, ಸ್ಟಿಂಗರ್, ಸೆರಾಟೊ ಕಾರುಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಿದ್ದವಾಗಿದ್ದು, ಹ್ಯುಂಡೈ ಮಾದರಿಯಲ್ಲೇ ಕಿಯಾ ಕಾರುಗಳು ಸಹ ಬೆಲೆ ಪಟ್ಟಿ ಸಿದ್ದವಾಗುವ ಸಾಧ್ಯತೆಗಳಿವೆ.

ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ತರುವ ಉದ್ದೇಶದೊಂದಿದೆ ಬೃಹತ್ ಯೋಜನೆ ಹೊತ್ತು ಬಂದಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಂಸ್ಥೆಗಳಿಗೆ ತ್ರೀವ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ ಅಂದ್ರೆ ತಪ್ಪಾಗುವುದಿಲ್ಲ.


Click it and Unblock the Notifications