ಬಿಡುಗಡೆಗೆ ಸಜ್ಜಾದ ಕಿಯಾ ಮೋಟಾರ್ಸ್ ಮೊದಲ ಸೆಡಾನ್ ಕಾರು ಸ್ಟಿಂಗರ್ ಜಿಟಿ ಎಸ್...
ವಿನೂತನ ಸೆಡಾನ್ ಮಾದರಿಯಾದ ಸ್ಪಿಂಗರ್ ಜಿಟಿ ಎಸ್ ಕಾರುಗಳು ಚೆನ್ನೈನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.
ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಬಾರಿಗೆ ತನ್ನ ಕಾರು ಉತ್ಪನ್ನಗಳನ್ನು ಮಾರಾಟ ಮಾಡಲು ಬೃಹತ್ ಯೋಜನೆ ರೂಪಿಸುತ್ತಿದ್ದು, ಇದೀಗ ವಿನೂತನ ಸೆಡಾನ್ ಮಾದರಿಯಾದ ಸ್ಪಿಂಗರ್ ಜಿಟಿ ಎಸ್ ಕಾರುಗಳು ಚೆನ್ನೈನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

ಈ ಹಿಂದೆ ಫೆಬ್ರುವರಿನಲ್ಲಿ ನಡೆದಿದ್ದ 2018ರ ಆಟೋ ಎಕ್ಸ್ ಪೋ ದಲ್ಲಿ ತನ್ನ ಸ್ಟಿಂಗರ್ ಜಿಟಿ ಎಸ್ ಕಾರನ್ನು ಪ್ರದರ್ಶನಗೊಳಿಸಿದ್ದ ಕಿಯಾ ಸಂಸ್ಥೆಯು, ಇದೇ ಮಾದರಿಯನ್ನು 2017ರಲ್ಲಿ ನಡೆದಿದ್ದ ಡೆಟ್ರಾಯ್ಟ್ ಆಟೋ ಮೇಳದಲ್ಲೂ ಸ್ಟಿಂಗರ್ ಜಟಿ ಎಸ್ ಕಾರುಗಳನ್ನು ಅನಾವರಣಗೊಳಿಸುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸುಳಿವು ನೀಡಿತ್ತು.

ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಸಿದ್ದವಾಗಿರುವ ಕಿಯಾ ಸ್ಟಿಂಗರ್ ಜಿಟಿ ಎಸ್ ಕಾರುಗಳು ಲಗ್ಷುರಿ ಸೆಡಾನ್ ಅಂಶಗಳೊಂದಿಗೆ ಕಾರು ಪ್ರಿಯರನ್ನು ಸೆಳೆಯುತ್ತಿದ್ದು, 19-ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳು, ಬ್ರಿಂಬೋ ಬ್ರೇಕಿಂಗ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಡ್ರೈವಿಂಗ್ ಸೌಲಭ್ಯಗಳನ್ನು ಪಡೆದಿರುವುದು ಬಹಿರಂಗವಾಗಿದೆ.

ಇದರ ಹೊರತಾಗಿ ಹೊಸ ಕಾರಿನ ಯಾವುದೇ ತಾಂತ್ರಿಕ ಮಾಹಿತಿ ದೊರೆತಿಲ್ಲವಾದರೂ ಆಟೋ ಮೇಳದಲ್ಲಿ ಪ್ರಥಮ ಬಾರಿಗೆ ಅನಾವರಣಗೊಂಡಾಗ ಕಾರಿನ ಕೆಲವೇ ಕೆಲವು ತಾಂತ್ರಿಕ ಅಂಶಗಳ ಬಗ್ಗೆ ಕಿಯಾ ಮೋಟಾರ್ಸ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿತ್ತು. ಕಿಯಾ ಮೋಟಾರ್ಸ್ ನೀಡಿದ ಮಾಹಿತಿ ಪ್ರಕಾರ ಕಾರಿನ ವಿನ್ಯಾಸಗಳು ಹೀಗಿವೆ...

ಕಿಯಾ ಸ್ಟಿಂಗರ್ ಜಿಟಿ ಎಸ್ ವಿಶೇಷತೆಗಳು
2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 2.2-ಲೀಟರ್ ಟರ್ಬೋ ಚಾರ್ಜ್ಡ್ ಡಿಸೆಲ್ ಎಂಜಿನ್ ಮತ್ತು 3.3-ಲೀಟರ್ ಟ್ವಿನ್ ಟರ್ಬೋ ವಿ6 ಪೆಟ್ರೋಲ್ ಎಂಜಿನ್ ಮಾದರಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.

ಹಾಗೆಯೇ ಸ್ಟಿಂಗರ್ ಜಿಟಿ ಎಸ್ ಕಾರುಗಳು 3.3-ಲೀಟರ್ ಟ್ವಿನ್ ಟರ್ಬೋಚಾರ್ಜ್ ಮಾದರಿಯು 365-ಬಿಹೆಚ್‌ಪಿ ಮತ್ತು 510-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 4.7 ಸೆಕೆಂಡುಗಳಲ್ಲಿ 100ಕಿಮಿ ವೇಗ ಪಡೆದುಕೊಳ್ಳುತ್ತವೆ.

ಕಿಯಾ ಸ್ಟಿಂಗರ್ ಜಿಟಿ ಎಸ್ ಕಾರುಗಳು ಹ್ಯುಂಡೈನ ಗೆನೆಸಿಸ್ ಕಾರ್ ಮಾದರಿಯ ಹಾಗೆಯೇ 4,831ಎಂಎಂ ಉದ್ದ, 1,869ಎಂಎಂ ಅಗಲ ಮತ್ತು 1,400ಎಂಎ ಎತ್ತರವನ್ನು ಪಡೆದಿದ್ದು ಕಾರಿನ ವೀಲ್-ಬೇಸ್ 2,906ಎಂಎಂ ಉದ್ದವಿದೆ.

ಕಿಯಾ ಸ್ಟ್ರಿಂಗರ್ ಜಿಟಿ ಎಸ್ ವಿನ್ಯಾಸ
ಕಿಯಾ ಸ್ಟ್ರಿಂಗರ್ ಜಿಟಿ ಎಸ್ ಎಲ್ಇಡಿ ಹೆಡ್ ಲೈಟ್ ಹಾಗೂ ಬಂಪರ್ ಕೇಂದ್ರಗಳಲ್ಲಿ ವಿಶಾಲವಾದ ಏರ್ ಡ್ಯಾಮ್ ಸೆಂಟರ್ ಅನ್ನು ಒಳಗೊಂಡಿದೆ. ಉಬ್ಬಿದ ಬಾನೆಟ್ ಎರಡೂ ಬದಿಯಲ್ಲಿಯೂ ಏರ್ ವೆಂಟ್ಸ್ ಅನ್ನು ಹೊಂದಿದೆ.

ಕಾರಿನ ನೋಟವನ್ನು ಮತ್ತು ಟರ್ಷಿಮೋ ಸೆಡಾನ್ ಮಿಚಿಲಿನ್ ಬದಿಗಳಲ್ಲಿ 19 ಇಂಚಿನ ಅಲಾಯ್ ಚಕ್ರಗಳ ಶಾಡ್ ಒಂದಿಗೆ 225/40(ಮುಂಬಾಗ) ಮತ್ತು 255/35(ಹಿಂಬಾಗ)ವನ್ನು ಅಳವಡಿಸಲಾಗಿದೆ. ಕಾರಿನ ಹೊಂಬದಿಯ ಕೊನೆಯಲ್ಲಿ ಟೈಲ್ ಪೈಪ್ ಗಳನ್ನು ಮತ್ತು ವಿಶಿಷ್ಟವಾದ ಎಲ್ಇಡಿ ಲೈಟ್ ಅನ್ನು ಪಡೆದುಕೊಂಡಿದೆ.

ಮುಂಭಾಗದಲ್ಲಿ ಬಾಗಿದ ಮತ್ತು ಸುತ್ತುವರಿಯಲ್ಪಟ್ಟ ಬಕೆಟ್ ಸೀಟುಗಳನ್ನು ಪಡೆದಿದ್ದು, ಹಿಂಭಾಗದಲ್ಲಿ ಮೂವರು ವಯಸ್ಕರು ಅರಾಮವಾಗಿ ಕೂರಬಹುದಾದ ಸೀಟನ್ನು ಅಳವಡಿಸಲಾಗಿದೆ. ಸೀಟುಗಳ ಮೇಲ್ಬಾಗವನ್ನು ಸುಧಾರಿತ ಲೆದರ್ ಕವರ್ ಹೊದಿಸಲಾಗಿದೆ.

ಇನ್ನು ಸ್ಟ್ರಿಂಗರ್ ಜಿಟಿ ಎಸ್ ಕಾರುಗಳಲ್ಲಿ ಸ್ಯಾಟ್‌ಲೈಟ್ ನಾವಿಗೇಷನ್ ನೊಂದಿಗೆ ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್ ಪ್ಲೆ ಒದಗಿಸಲಾಗಿದ್ದು, ಹರ್ಮಾನ್/ಕರ್ಡಾನ್ 15-ಸ್ಪೀಕರ್ ಆಡಿಯೊ ಸೆಟಪ್ ಈ ಕಾರು ಹೊಂದಿರಲಿದೆ. ಜೊತೆಗೆ ಸುರಕ್ಷತೆಗಾಗಿ 7 ಏರ್ ಬ್ಯಾಗ್, ಎಬಿಸಿ, ಇಎಸ್ ಸಿ, ಹಿಲ್ ಸ್ಟಾರ್ಟ್ ಅಸ್ಸಿಸ್ಟ್ ಮತ್ತು ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್ ಜೋಡಣೆಯಿದೆ.


Click it and Unblock the Notifications