ಟ್ರಜೊರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ ಕಾನ್ಸೆಪ್ಟ್..

ಜಗತ್ತಿನ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದೆ.

By Praveen Sannamani

ಜಗತ್ತಿನ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಕಳೆದ ಫೆಬ್ರುವರಿಯಲ್ಲಿ ನಡೆದ ದೆಹಲಿ ಆಟೋ ಮೇಳದಲ್ಲಿ ತನ್ನ ಹೊಸ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಿದ್ದಲ್ಲದೇ ಇದೀಗ ಬಿಡುಗಡೆಯ ತವಕದಲ್ಲಿದೆ.

ಟ್ರಜೊರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ ಕಾನ್ಸೆಪ್ಟ್..

ದೇಶಿಯ ಮಾರುಕಟ್ಟೆಯಲ್ಲಿ ಭವಿಷ್ಯದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಅಧಿಪತ್ಯ ಸಾಧಿಸುವ ಎಲ್ಲಾ ಭರವಸೆಗಳನ್ನು ಹುಟ್ಟುಹಾಕಿರುವ ಕಿಯಾ ಮೋಟಾರ್ಸ್ ಸಂಸ್ಥೆಯು 2018ರ ಅಂತ್ಯಕ್ಕೆ ಇಲ್ಲವೇ 2019ರ ಆರಂಭದಲ್ಲಿ ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಇದರಲ್ಲಿ ಎಸ್‌ಪಿ ಕಾನ್ಸೆಪ್ಟ್ ಕೂಡಾ ಒಂದು.

ಟ್ರಜೊರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ ಕಾನ್ಸೆಪ್ಟ್..

ಭಾರತೀಯ ವಾಹನ ಪ್ರೇಮಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿರುವ ನೂತನ ಕಿಯಾ ಮೋಟಾರ್ಸ್ ಎಸ್‌ಯುವಿ ಎಸ್‌ಪಿ ಕಾನ್ಸೆಪ್ಟ್ ಆವೃತ್ತಿಯು ಹೊಸ ಭರವಸೆ ಹುಟ್ಟುಹಾಕಿದ್ದು, ಟ್ರಜೊರ್ ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ.

ಟ್ರಜೊರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ ಕಾನ್ಸೆಪ್ಟ್..

ಮೊದಲ ಹಂತದಲ್ಲೇ ಟ್ರಜೊರ್ ಎಸ್‌ಯುವಿ ಕಾರನ್ನು ಬಿಡುಗಡೆಯ ಯೋಜನೆಯಲ್ಲಿರುವ ಕಿಯಾ ಮೋಟಾರ್ಸ್, ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಹ್ಯುಂಡೈ ಕ್ರೇಟಾ, ಮಾರುತಿ ಸುಜುಕಿ ವಿಟಾರಾ ಬ್ರೇಝಾ ಮತ್ತು ರೆನಾಲ್ಟ್ ಡಸ್ಟರ್ ಮಾದರಿಗಳಿಗೆ ಸಮನಾಗಿ ಹೊಸ ಕಾರು ಅಭಿವೃದ್ಧಿ ಮಾಡಿದೆ.

ಟ್ರಜೊರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ ಕಾನ್ಸೆಪ್ಟ್..

ಕಿಯಾ ಹೊಸ ಎಸ್‌ಯುವಿ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಡೀಸೆಲ್ ಆವೃತ್ತಿಯು 1.6-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೊಸ ಕಾರುಗಳು ಮಾರುಕಟ್ಟೆಗೆ ಪ್ರವೇಶ ಪಡೆಯಲಿವೆ.

ಟ್ರಜೊರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ ಕಾನ್ಸೆಪ್ಟ್..

ಹ್ಯುಂಡೈ ಕಾರುಗಳ ತಳಹದಿಯಲ್ಲಿ ಚಾಸೀ, ಎಂಜಿನ್ ಮತ್ತು ಗೇರ್ ಬಾಕ್ಸ್ ಗಳನ್ನು ಹಂಚಿಕೊಂಡರೂ ಕಿಯಾ ಕಾರುಗಳು ವಿಭಿನ್ನವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ರೇಂಜ್ ರೋವರ್ ಇವೋಕ್ ಮಾದರಿಯಲ್ಲೇ ಬಾಡಿ ವಿನ್ಯಾಸ ಹೊಂದಿರುವ ಎಸ್‌ಪಿ ಕಾನ್ಸೆಪ್ಟ್ ಮಾದರಿಗಳು ಅಲಾಯ್ ಚಕ್ರ, ಎಲ್‌ಇಡಿ ಟೈಲ್ ಲೈಟ್ ಹೊಂದಿರುವುದನ್ನು ಹೊರತುಪಡಿಸಿ ಯಾವುದೇ ರೀತಿಯ ಹೆಚ್ಚುವರಿ ತಾಂತ್ರಿಕ ಮಾಹಿತಿಗಳು ಲಭ್ಯವಾಗಿಲ್ಲ.

ಟ್ರಜೊರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ ಕಾನ್ಸೆಪ್ಟ್..

ಆದ್ರೆ ಕಿಯಾ ಮೋಟಾರ್ಸ್ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಎಸ್‌ಪಿ ಕಾನ್ಸೆಪ್ಟ್ ಕಾರು ಮಾದರಿಗಳ ಮೇಲೆ ಸಾಕಷ್ಟು ನೀರಿಕ್ಷೆಗಳಿದ್ದು, ಹೊಸ ನಮೂನೆಯ ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಲೆಕ್ಟ್ರಿಕ್ ಕಾರುಗಳು ಸಹ ಮುಂಬರುವ ದಿನಗಳಲ್ಲಿ ಬಿಡುಗಡೆಗಾಗಿ ಸಿದ್ಧಗೊಂಡಿವೆ.

ಟ್ರಜೊರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ ಕಾನ್ಸೆಪ್ಟ್..

ಹೊಸ ಕಾರಿನ ಬೆಲೆಗಳು(ಅಂದಾಜು)

ಕಿಯಾ ಸಂಸ್ಥೆಯು ತನ್ನ ಮೊದಲ ಕಾರಿನ ಮೂಲಕ ಜನಪ್ರಿಯತೆ ಸಾಧಿಸುವ ನೀರಿಕ್ಷೆಯಲ್ಲಿದ್ದು, ಹೀಗಾಗಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಹೊಸ ಕಾರಿನ ಬೆಲೆಯನ್ನು ರೂ.11ಲಕ್ಷದಿಂದ ರೂ.15 ಲಕ್ಷದ ತನಕ ದರ ನಿಗದಿಗೊಳಿಸುವ ಸಾಧ್ಯತೆಗಳಿವೆ.

ಟ್ರಜೊರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ ಕಾನ್ಸೆಪ್ಟ್..

ಈ ಮೂಲಕ ಭಾರತದಲ್ಲಿ ಕ್ರೇಟಾ, ವಿಟಾರಾ ಬ್ರೇಝಾ ಮತ್ತು ಡಸ್ಟರ್ ಎಸ್‌ಯುವಿ ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ಒಡ್ದಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು, ದೇಶಿಯ ಗ್ರಾಹಕರಿಗಾಗಿ ವಿವಿಧ ಕಾರುಗಳನ್ನು ಉತ್ಪಾದನೆ ಮಾಡಲು ಬರೋಬ್ಬರಿ 10 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

Article Published On: Thursday, May 24, 2018, 20:12 [IST]
English summary
Kia Trazor Name For Production-Spec SP-Concept SUV.
Read more on kia motors suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+