ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

By Praveen Sannamani

ಭಾಗ್ಯಗಳ ಸರದಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಅವರ ಐಷಾರಾಮಿ ಜೀವನಕ್ಕೂ ಕೊಂಚ ಬ್ರೇಕ್ ಬಿದ್ದದಂತೆ ಕಾಣುತ್ತಿದೆ. ಹೀಗಾಗಿಯೇ ಈ ಹಿಂದೆ ಫಾರ್ಚೂನರ್, ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ ಬಳಸುತ್ತಿದ್ದ ಸಿದ್ದರಾಮಯ್ಯನವರು ಇದೀಗ ಇನೋವಾ ಕಾರಿನಲ್ಲೇ ಓಡಾಡಿಕೊಂಡಿರುವುದು ಅವರಿಗಷ್ಟೇ ಅಲ್ಲದೇ ಅವರ ಕುಚುಕು ಗೆಳೆಯರಿಗೂ ಒಂದು ರೀತಿ ಬೇಸರ ತರಿಸಿದೆ.

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಹೀಗಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿರುವ ಮಾಜಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಚಾರ್ಜ್ ದುಬಾರಿ ಬೆಲೆಯ ಕಾರೊಂದು ಗಿಫ್ಟ್ ಕೊಟ್ಟು ತಮ್ಮ ನೆಚ್ಚಿನ ನಾಯಕನ ಪ್ರಿತಿಗೆ ಪಾತ್ರರಾಗಿದ್ದಾರೆ. ಅದಷ್ಟೇ ಅಲ್ಲದೇ ಹೊಸ ಕಾರಿನ ಜೊತೆ ಒಂದು ವರ್ಷಕ್ಕೆ ಸಾಕಾಗುವಷ್ಟು ಡೀಸೆಲ್ ಕೂಪನ್ ಕೂಡಾ ಜಾರ್ಜ್ ಗಿಫ್ಟ್ ಆಗಿ ನೀಡಿದ್ದಾರಂತೆ.

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಅಂದಹಾಗೆ, ಮಾಜಿ ಸಚಿವ ಜಾರ್ಜ್ ನೀಡಿರುವ ಆ ಕಾರು ಯಾವುದು ಎನ್ನುವುದಕ್ಕಿಂತ ಆ ಕಾರಿನ ಬೆಲೆ 1 ಕೋಟಿ ಎನ್ನುವುದೇ ಇಂಟ್ರಸ್ಟಿಂಗ್ ವಿಚಾರವಾಗಿದ್ದು, ಅಷ್ಟೊಂದು ದುಬಾರಿ ಬೆಲೆಯ ಕಾರಿನ ಗಿಫ್ಟ್ ಹಿಂದಿನ ಉದ್ದೇಶ ಏನು ಅನ್ನೋದು ಅವರಿಗಷ್ಟೇ ಗೊತ್ತು.

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಕೆ.ಜೆ ಜಾರ್ಜ್ ಜಾರ್ಜ್ ನೀಡಿರುವ ಟೊಯೊಟಾ ನಿರ್ಮಾಣದ ಐಷಾರಾಮಿ ಎಸ್‌ಯುವಿ ಲ್ಯಾಂಡ್ ಕ್ರೂಸರ್ ಪ್ರಾಡೊ ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್‌ಶೋರಂ ಪ್ರಕಾರ ರೂ.92.60 ಲಕ್ಷ ಬೆಲೆ ಹೊಂದಿದ್ದು, ಇದರ ಆನ್‌ರೋಡ್ ಬೆಲೆಗಳು 1 ಕೋಟಿ ಅಧಿಕ ಎಂದ್ರೆ ನೀವು ನಂಬಲೇಬೇಕು.

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಸಿಂಗಲ್ ವಿಎಕ್ಸ್ಎಲ್ ಸ್ಟ್ರಿಮ್ ತಂತ್ರಜ್ಞಾನ ಹೊಂದಿರುವ ಕಾರು ಮಾದರಿ ಇದಾಗಿದ್ದು, ಈ ಹಿಂದಿನಂತೆಯೇ ಪ್ರೋಜೆಕ್ಟರ್ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, ವಿದ್ಯುತ ಪ್ರೇರಿತ ಒಆರ್‌ವಿಎಂ, ಫ್ರಂಟ್ ಆ್ಯಂಡ್ ರಿಯರ್ ಫಾಗ್ ಲ್ಯಾಂಪ್ ಸೇರಿದಂತೆ ಹಲವಾರು ಐಷಾರಾಮಿ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

2018ರ ಆಟೋ ಮೇಳದಲ್ಲಿ ಲ್ಯಾಂಡ್ ಕ್ರೂಸರ್ ಪ್ರಾಡೊ ಪ್ರದರ್ಶನ ಮಾಡಿದ್ದ ಟೊಯೊಟಾ ಸಂಸ್ಥೆಯು ರೂ. 92.60 ಲಕ್ಷಕ್ಕೆ ಸಿಂಗಲ್ ವಿಎಕ್ಸ್ಎಲ್ ಸ್ಟ್ರಿಮ್ ಲ್ಯಾಂಡ್ ಕ್ರೂಸರ್ ಪ್ರಾಡೊ ಬಿಡುಗಡೆ ಮಾಡಿದ್ದು, ಪವರ್ ಸ್ಟ್ರೀರಿಂಗ್ ಸೇರಿದಂತೆ ಕಾರಿನ ಹೊರ ಮತ್ತು ಒಳ ವಿನ್ಯಾಸಗಳಲ್ಲಿ ಗುರುತರ ಬದಲಾವಣೆ ತಂದಿದೆ.

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಕಾರಿನ ಒಳಭಾಗದಲ್ಲಿ ವಿಲಾಸಿ ಮಾದರಿಯ ಸೀಟುಗಳು, ಸುಧಾರಿತ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡೌನ್ ಹಿಲ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟಂಟ್ ಸೌಲಭ್ಯ ಹೊಂದಿದ್ದು, ಸುರಕ್ಷತೆಗಾಗಿ ಎಬಿಎಸ್, ಇಬಿಡಿ ಮತ್ತು 7 ಏರ್‌ಬ್ಯಾಗ್‌ಗಳನ್ನು ಒದಗಿಸಲಾಗಿದೆ.

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಎಂಜಿನ್ ಸಾಮರ್ಥ್ಯ

3 ಲೀಟರ್, 4 ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರುಗಳು, 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170 ಬಿಎಚ್‌ಪಿ ಮತ್ತು 410ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಜೊತೆಗೆ ಎಸ್‌ಯುವಿ ಮಾದರಿಗಳಲ್ಲೇ ಅತಿಹೆಚ್ಚು ಒಳವಿನ್ಯಾಸ ಹೊಂದಿರುವ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರುಗಳು 2990 ಕೆಜಿ ತೂಕ ಹೊಂದಿದ್ದು, 87 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಮತ್ತು 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಲಭ್ಯವಿರುವ ಬಣ್ಣಗಳು

ಹೊಸದಾಗಿ ಬಿಡುಗಡೆಯಾಗಿರುವ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರುಗಳು ಒಟ್ಟು 8 ಬಣ್ಣಗಳಲ್ಲಿ ಲಭ್ಯವಿದ್ದು, ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಸಿಲ್ವರ್ ಮೆಟಾಲಿಕ್, ಗ್ರೇ ಮೆಟಾಲಿಕ್, ಬ್ಲ್ಯಾಕ್‌ಕಿಷ್ ಏಜ್ಹಾ ಗ್ಲಾಸ್ ಫ್ಲೇಕ್, ಆ್ಯಟಿಟ್ಯೂಡ್ ಬ್ಲ್ಯಾಕ್ ಮೈಕಾ, ರೆಡ್ ಮೈಕಾ ಮೆಟಾಲಿಕ್, ಆವಂತ್ ಗಾರ್ಡ್ ಬ್ರೋನ್ಜ್ ಮೆಟಾಲಿಕ್ ಮತ್ತು ವಿಂಟೇಜ್ ಬ್ರೌನ್ ಪರ್ಲ್ ಕ್ರಿಸ್ಟಲ್ ಶೈನ್ ಬಣ್ಣದಲ್ಲಿ ಆಯ್ಕೆ ಮಾಡಬಹುದು.

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಈ ಮೂಲಕ ಐಷಾರಾಮಿ ಎಸ್‌ಯುವಿ ತನ್ನದೇ ಆದ ವಿಶಿಷ್ಟ ವಿನ್ಯಾಸಗಳೊಂದಿಗೆ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರುಗಳು, ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿರುವ ಆಡಿ ಕ್ಯೂ7, ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಮತ್ತು ವೋಲ್ವೋ ಎಕ್ಸ್ ಸಿ 90 ಕಾರುಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗುವ ನೀರಿಕ್ಷೆಯಲ್ಲಿದೆ.

News Source:publictv

More from DriveSpark

Article Published On: Tuesday, June 5, 2018, 19:53 [IST]
English summary
Congress MLA KJ George has gifted a Toyota Land Cruiser Prado to Ex-CM Siddaramaiah.
Read more on toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+