ನಮ್ಮ ಬೆಂಗಳೂರಿನಲ್ಲಿ ಲಂಬೋರ್ಗಿನಿ ಕಾರುಗಳ ಕಲರವ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೂಪರ್ ಕಾರು ಪ್ರಿಯರನ್ನು ರಂಜಿಸಲು ಮೊನ್ನೆಯಷ್ಟೇ ನಡೆದ 'ಗಿರೊ 2018' ಸೂಪರ್ ಕಾರ್ ರ‍್ಯಾಲಿ ಕಾರ್ಯಕ್ರಮವು ಭಾರೀ ಆಕರ್ಷಣೆಗೆ ಕಾರಣವಾಗಿತ್ತು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಇಡೀ ವಿಶ್ವವನ್ನೇ ತನ್ನತ್ತ ಸೆಳೆಯುತ್ತಿರುವ ನಮ್ಮ ಬೆಂಗಳೂರಿನಲ್ಲಿ ಸದ್ಯ ಆಟೋ ಉದ್ಯಮದಲ್ಲೂ ಹೊಸ ಹೊಸ ಅವಕಾಶ ತೆರೆದುಕೊಳ್ಳುತ್ತಿದ್ದು, ಸೂಪರ್ ಕಾರುಗಳ ಅತಿದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಅಂದ್ರೆ ದೇಶದ ಇತರೆ ನಗರಗಳಿಂತ ಹೆಚ್ಚಿನ ಮಟ್ಟದ ಸೂಪರ್ ಕಾರುಗಳು ಇಲ್ಲಿಯೇ ಮಾರಾಟವಾಗುತ್ತಿದ್ದು, ಸೂಪರ್ ಕಾರು ಪ್ರಿಯರನ್ನು ರಂಜಿಸಲು ಮೊನ್ನೆಯಷ್ಟೇ ನಡೆದ 'ಗಿರೊ 2018' ಸೂಪರ್ ಕಾರ್ ರ‍್ಯಾಲಿ ಕಾರ್ಯಕ್ರಮವು ಭಾರೀ ಆಕರ್ಷಣೆಗೆ ಕಾರಣವಾಗಿತ್ತು.

ಲಂಬೋರ್ಗಿನಿ ಸರಣಿ ಕಾರುಗಳು ಸದ್ಯ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದು, 'ಗಿರೊ 2018' ಎನ್ನುವ ಅಕಾ ಬುಲ್ ರನ್ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಲಂಬೋರ್ಗಿನಿ ಕಾರು ಮಾಲೀಕರಿಗೆ ಹಾಗೂ ಸೂಪರ್ ಕಾರು ಪ್ರಿಯರಿಗೆ ಅದ್ಬುತ ಕಾರು ಪ್ರದರ್ಶನ ಏರ್ಪಡಿಸಲಾಗಿತ್ತು. ರೇಸ್‌ನಲ್ಲಿ ಭಾಗಿಯಾಗಿದ್ದ ಸುಮಾರು 15ಕ್ಕೂ ಹೆಚ್ಚು ಲಂಬೋರ್ಗಿನಿ ವಿವಿಧ ಕಾರುಗಳು ನೋಡುಗರಿಗೆ ಸಖತ್ ಮನರಂಜನೆ ನೀಡಿದವು.

ಗಿರೊ 2018ರ ಕಾರು ರೇಸಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 15ಕ್ಕೂ ಕಾರುಗಳು ದಕ್ಷಿಣ ರಾಜ್ಯಗಳ ವಿವಿಧ ಕಡೆಗಳಿಂದ ಬಂದಿದ್ದಲ್ಲದೇ ಬೆಂಗಳೂರಿನ ರಸ್ತೆಗಳಲ್ಲಿ ತಾನು ಮುಂದು ನಾನ್ ಮುಂದು ಎನ್ನತ್ತಾ ಸದ್ದು ಮಾಡಿದ್ದು ಮಾತ್ರ ನೋಡುಗರಿಗೆ ರೋಮಾಂಚನ ಉಂಟು ಮಾಡಿತ್ತು.

ಬೆಂಗಳೂರಿನ ವಿಠಲ್ ಮಲ್ಯಾ ರಸ್ತೆಯಿಂದ ಆರಂಭವಾದ ಗಿರೊ 2018ರ ರೇಸ್ ಕಾರ್ಯಕ್ರಮವು ಬೆಂಗಳೂರು-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ಮೂಲಕ ಸುಮಾರು 100 ಕಿ.ಮಿ ರಾಂಗ್ ರೈಡ್ ಪೂರೈಸಿದ್ದಲ್ಲದೇ ಕೆಂಪೇಗೌಡ ನಿಲ್ದಾಣಕ್ಕೆ ಹತ್ತಿರವಿರುವ ತಾಜ್ ಬೆಂಗಳೂರು ಹೋಟೆಲ್ ಆವರಣದಲ್ಲಿ ಒಂದು ಸ್ಮಾಲ್ ಬ್ರೇಕ್ ತೆಗೆದುಕೊಂಡವು.

ಈ ವೇಳೆ ಸಾಲು ಸಾಲು ಸೂಪರ್ ಕಾರುಗಳನ್ನು ಕಂಡ ಸ್ಥಳೀಯರು ಮತ್ತು ಸೂಪರ್ ಕಾರು ಪ್ರಿಯರು ಲಂಬೋರ್ಗಿನಿ ಕಾರುಗಳ ಪರ್ಫಾಮೆನ್ಸ್ ಬಗೆಗೆ ತಿಳಿದುಕೊಂಡರಲ್ಲದೇ ಹೋಟೆಲ್‌ನಲ್ಲಿದ್ದ ಅತಿಥಿಗಳು ಸಹ ಒಂದೇ ಸ್ಥಳದಲ್ಲಿ ಸೂಪರ್ ಕಾರುಗಳ ಸಂಗ್ರಹವನ್ನು ಕಂಡು ಅವರು ಆಶ್ಚರ್ಯಚಕಿತರಾದರು.

ಗಿರೊ 2018ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಲಂಬೋರ್ಗಿನಿ ಕಾರುಗಳಲ್ಲಿ ಬಹುತೇಕ ಹ್ಯುರಾಕನ್ ಕೂಪೆ ಆವೃತ್ತಿಗಳೇ ಹೆಚ್ಚಿನ ಮಟ್ಟದಲ್ಲಿ ಭಾಗಿದ್ದವು. ಇನ್ನುಳಿದಂತೆ ಕೆಲವು ಹ್ಯುರಾಕನ್ ಸ್ಪೈಡರ್ ಮಾದರಿಗಳು ಮತ್ತು ಮೂರು ಗಲ್ಲಾರ್ಡೋ ವೆರಿಯೆಂಟ್‌ಗಳು ಭಾಗಿಯಾಗಿದ್ದವು.

ವಿಶೇಷ ಅಂದ್ರೆ ಈ ರ‍್ಯಾಲಿಯಲ್ಲಿ ದೇಶದ ಏಕೈಕ ಅವೆಂಟ್‌ಡೊರ್ ಎಸ್‌ವಿ ರೋಡ್‌ಸ್ಟರ್ ವೆರಿಯೆಂಟ್ ಸಹ ಇಲ್ಲಿ ಭಾಗಿಯಾಗಿತ್ತು. ಲಿಮಿಟೆಡ್ ಎಡಿಷನ್ ಮಾದರಿಯಾದ ಅವೆಂಟೆಡೊರ್ ಎಸ್‌ವಿ ರೋಡ್‌ಸ್ಟರ್ ಕಾರುಗಳು ವಿಶ್ವದ್ಯಾಂತ ಒಟ್ಟು 500 ಕಾರುಗಳಿದ್ದು, ಭಾರತದಲ್ಲಿರುವುದು ಇದೊಂದೆ ಕಾರು ಎಂದ್ರೆ ನೀವು ನಂಬಲೇಬೇಕು.

ಬೆಂಗಳೂರಿನ ಕೆ.ವಿ.ಪ್ರಸಾದ್ ಎನ್ನವರೇ ಅವೆಂಟ್‌ಡೊರ್ ಎಸ್‌ವಿ ರೋಡ್‌ಸ್ಟರ್ ಸೂಪರ್ ಕಾರಿನ ಮಾಲೀಕರಾಗಿದ್ದು, ಲಂಬೋರ್ಗಿನಿ ಕಾರುಗಳಲ್ಲೇ ಅತಿ ವಿಶೇಷ ಎನ್ನಿಸಿರುವ ಈ ಕಾರುಗಳು ವಿ12 ಎಂಜಿನ್ ವೈಶಿಷ್ಟ್ಯತೆಗಳೊಂದಿಗೆ ಬ್ಯಾಲ್‌ಬೊನಿ ಟೈಟಾನಿಯಂ ಎಕ್ಸಾಸ್ಟ್‌ಗಳನ್ನು ಹೊಂದಿರುವುದು ಕಾರಿನ ಖದರ್ ಹೆಚ್ಚಿಸಿದೆ.

ಇನ್ನು ಸೂಪರ್ ಕಾರ್ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಅವೆಂಟ್‌ಡೊರ್, ಗಲ್ಲಾರ್ಡೊ ಮತ್ತು ಹ್ಯುರಾಕಾನ್ ವೆರಿಯೆಂಟ್‌ಗಳ ಸಹ ಅತ್ಯುತ್ತಮ ಪರ್ಫಾಮೆನ್ಸ್ ಪ್ರದರ್ಶನ ಮಾಡುವ ಮೂಲಕ ನೆರಿದಿದ್ದ ಸೂಪರ್ ಕಾರು ಪ್ರಿಯರಿಗೆ ರಂಜಿಸಿದ್ದಲ್ಲದೇ ಯಶಸ್ವಿಯಾಗಿ ರ‍್ಯಾಲಿಯನ್ನು ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು.

ಲಂಬೋರ್ಗಿನಿ ಕಾರುಗಳ ಪರ್ಫಾಮೆನ್ಸ್
ಅವೆಂಟ್‌ಡೊರ್ ಎಲ್‌ಪಿ700-4:6.5-ಲೀಟರ್ ವಿ12 ಎಂಜಿನ್ | 690ಬಿಎಚ್‌ಪಿ ಮತ್ತು 690ಎನ್ಎಂ ಟಾರ್ಕ್
ಅವೆಂಟ್‌ಡೊರ್ ಎಸ್‌ವಿ ಎಲ್‌ಪಿ750-4: 6.5-ಲೀಟರ್ ವಿ12 ಎಂಜಿನ್ | 740ಬಿಎಚ್‌ಪಿ ಮತ್ತು 690ಎನ್ಎಂ ಟಾರ್ಕ್
ಹ್ಯುರಾಕಾನ್ ಎಲ್‌ಪಿ610-4: 5.2-ಲೀಟರ್ ವಿ10 ಎಂಜಿನ್ | 602ಬಿಎಚ್‌ಪಿ ಮತ್ತು 560ಎನ್ಎಂ ಟಾರ್ಕ್
ಗುಲ್ಲಾರ್ಡೋ ಎಲ್‌ಪಿ560-4: 5.2-ಲೀಟರ್ ವಿ10 ಎಂಜಿನ್ | 552ಬಿಎಚ್‌ಪಿ ಮತ್ತು 540ಎನ್ಎಂ ಟಾರ್ಕ್

ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಲಂಬೋರ್ಗಿನಿ ಪ್ರತಿ ಕಾರು ಮಾದರಿಗಳು ಸಹ 7-ಸ್ಪೀಡ್ ಸಿಂಗಲ್ ಕ್ಲಚ್ ಸೆಮಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, ಹ್ಯುರಾಕಾನ್ ಮಾದರಿಯು ಮಾತ್ರ ಸುಧಾರಿತ ತಂತ್ರಜ್ಞಾನ ಪ್ರೇರಿತ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್‌ಮಿಷನ್ ಮತ್ತು ಗುಲ್ಲಾರ್ಡೋ ಮಾದರಿಯು 6-ಸ್ಪೀಡ್ ಸೆಮಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದಿದೆ.

ಒಟ್ಟಿನಲ್ಲಿ ಬೆಂಗಳೂರು ಲಂಬೋರ್ಗಿನಿ ಕಾರು ಮಾಲೀಕರು ಆಯೋಜಿಸಿದ್ದ ಗಿರೊ 2018 ಕಾರ್ಯಕ್ರಮ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದಲ್ಲದೇ ಸೂಪರ್ ಕಾರುಗಳ ಮಾರಾಟವನ್ನು ಉತ್ತೇಜಿಸುವುದು ಕೂಡಾ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು. ಆದ್ರೆ ಅದು ಏನೇ ಇರಲಿ ಸೂಪರ್ ಕಾರುಗಳ ಪರ್ಫಾಮೆನ್ಸ್ ಮಾತ್ರ ಬೆಂಗಳೂರು ರಸ್ತೆಗಳಲ್ಲಿ ಧೂಳೆಬ್ಬಿಸಿದ್ದು ಮಾತ್ರ ಸುಳ್ಳಲ್ಲ.

ಬೆಂಗಳೂರಿನಲ್ಲಿ ನಡೆದ 'ಗಿರೊ 2018' ಕಾರ್ ರ‍್ಯಾಲಿಯ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ..


Click it and Unblock the Notifications








