ಅವಧಿಗೂ ಮುನ್ನವೇ 2019ರ ಬೊಲೆರೊ ಪಿಕ್ ಅಪ್ ಬಿಡುಗಡೆ ಮಾಡಿದ ಮಹೀಂದ್ರಾ..!

ಪಿಕ್ ಅಪ್ ವಾಹನಗಳ ವಿಭಾಗದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಬೊಲೆರೊ ಪಿಕ್ ಅಪ್ ವಾಹನಗಳು ಬಹುದಿನಗಳಿಂದಲೂ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಇದೀಗ ಮತ್ತೆ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಮಹೀಂದ್ರಾ ಸಂಸ್ಥೆಯು ಅವಧಿಗೂ ಮುನ್ನವೇ 2019ರ ಬೊಲೆರೊ ಪಿಕ್ ಅಪ್ ಮಾಡೆಲ್ ಹೊರತಂದಿದೆ.

ಅವಧಿಗೂ ಮುನ್ನವೇ 2019ರ ಬೊಲೆರೊ ಪಿಕ್ ಅಪ್ ಬಿಡುಗಡೆ ಮಾಡಿದ ಮಹೀಂದ್ರಾ..!

ಬೊಲೆರೊ ಪಿಕ್ ಅಪ್ ವಾಹನಗಳ ವೆರಿಯೆಂಟ್‌ನಲ್ಲಿ ಈ ಬಾರಿ ಕೆಲವು ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಆರಂಭಿಕ ಮಾದರಿ 1.3ಟಿ ಮತ್ತು ಟಾಪ್ ಎಂಡ್ ಮಾದರಿಯಾಗಿ 1.7ಟಿ ಮಾರಾಟ ಮಾಡಲು ನಿರ್ಧರಿಸಿದ್ದು, ಈ ಹಿಂದಿನ 1.5ಟಿ ವೆರಿಯೆಂಟ್ ಆವೃತ್ತಿಯನ್ನು ಸ್ಥಗಿತಗೊಳಿಸಿದೆ.

ಅವಧಿಗೂ ಮುನ್ನವೇ 2019ರ ಬೊಲೆರೊ ಪಿಕ್ ಅಪ್ ಬಿಡುಗಡೆ ಮಾಡಿದ ಮಹೀಂದ್ರಾ..!

ಬಲೊರೊ 1.3ಟಿ ಮಾದರಿಯ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.6.66 ಲಕ್ಷಕ್ಕೆ ಮತ್ತು 1.7ಟಿ ಬೆಲೆಯನ್ನು ರೂ.6.88 ಲಕ್ಷಕ್ಕೆ ನಿಗದಿಗೊಳಿಸಿದ್ದು, 1.3ಟಿ ಆವೃತ್ತಿಗಿಂತಲೂ 1.7ಟಿ ವೆರಿಯೆಂಟ್‌ಗಳು ಗಾತ್ರದಲ್ಲಿ ತುಸು ದೊಡ್ಡದಾಗಿವೆ.

ಅವಧಿಗೂ ಮುನ್ನವೇ 2019ರ ಬೊಲೆರೊ ಪಿಕ್ ಅಪ್ ಬಿಡುಗಡೆ ಮಾಡಿದ ಮಹೀಂದ್ರಾ..!

ಹೀಗಾಗಿ ಸರಕು ಸಾಗಾಟ ಸಾಮರ್ಥ್ಯವು ಕೂಡಾ 1.7ಟಿ ವೆರಿಯೆಂಟ್‌ಗಳಲ್ಲಿ ಹೆಚ್ಚಿದ್ದು, 1.3ಟಿ ಮಾಡೆಲ್‌ಗಳು 1.5 ಟನ್ ಸರಕು ಸಾಗಾಟ ಮತ್ತು 1.7ಟಿ ಮಾಡೆಲ್‌ಗಳು 1.7 ಟನ್‌ನಷ್ಟು ಸರಕು ಸಾಗಾಟದ ಗುಣಹೊಂದಿವೆ.

ಅವಧಿಗೂ ಮುನ್ನವೇ 2019ರ ಬೊಲೆರೊ ಪಿಕ್ ಅಪ್ ಬಿಡುಗಡೆ ಮಾಡಿದ ಮಹೀಂದ್ರಾ..!

ಎಂಜಿನ್ ಸಾಮರ್ಥ್ಯ

1.7ಟಿ ಮಾಡೆಲ್‌ಗಳಲ್ಲಿ ಈ ಹಿಂದಿನ 2.5-ಲೀಟರ್ ಎಂ2ಡಿಐ ಸಿಆರ್ ಡೀಸೆಲ್ ಎಂಜಿನ್ ಮಾದರಿಯನ್ನೇ ಮುಂದುವರಿಸಲಾಗಿದ್ದು, ವಿಶೇಷ ಅಂದ್ರೆ ಈ ಹಿಂದಿಗಿಂತಲೂ ಹೊಸ ಮಾದರಿಯಲ್ಲಿ ಸರಕು ಸಾಗಾಟದ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ.

ಅವಧಿಗೂ ಮುನ್ನವೇ 2019ರ ಬೊಲೆರೊ ಪಿಕ್ ಅಪ್ ಬಿಡುಗಡೆ ಮಾಡಿದ ಮಹೀಂದ್ರಾ..!

ಇದೇ ಮೊದಲ ಪರಿಚಯಿಸಲಾಗಿರುವ 1.7ಟಿ ಮಾಡೆಲ್‌ಗಳಲ್ಲಿ ಗ್ರಾಹಕರ ಬೇಡಿಕೆಯ ಮೇರೆಗೆ 2765ಎಂಎಂ ಉದ್ದದ ಕಾರ್ಗೋ ಡೆಕ್ ನೀಡಲಾಗಿದ್ದು, ಇದು ದೂರದ ಸರಕು ಸಾಗಾಟದ ವೆಚ್ಚಗಳನ್ನು ತಗ್ಗಿಸಲು ಸಹಕಾರಿಯಾಗಿದೆ ಎನ್ನಬಹುದು.

ಅವಧಿಗೂ ಮುನ್ನವೇ 2019ರ ಬೊಲೆರೊ ಪಿಕ್ ಅಪ್ ಬಿಡುಗಡೆ ಮಾಡಿದ ಮಹೀಂದ್ರಾ..!

ಇದರೊಂದಿಗೆ ಹೊಸ ಬೊಲೆರೊ 1.7ಟಿ ಪಿಕ್ ಅಪ್ ವಾಹನಗಳಲ್ಲಿ ಡಬಲ್ ಬಿರಿಂಗ್ ಆಕ್ಸೆಲ್, ಪವರ್‌ಫುಲ್ 9-ಲೀಫ್ ಸ್ಪಿಂಗ್ ಸಸ್ಷೆಷನ್, 15-ಇಂಚಿನ ಟೈರ್ ಮತ್ತು 1 ಲಕ್ಷ ಕಿ.ಮಿ ವರೆಗಿನ ಸರ್ವೀಸ್ ಸೌಲಭ್ಯವನ್ನು ಒದಗಿಸುವ ಬಗ್ಗೆ ಮಹೀಂದ್ರಾ ಹೇಳಿಕೊಂಡಿದೆ.

ಅವಧಿಗೂ ಮುನ್ನವೇ 2019ರ ಬೊಲೆರೊ ಪಿಕ್ ಅಪ್ ಬಿಡುಗಡೆ ಮಾಡಿದ ಮಹೀಂದ್ರಾ..!

ಹಾಗೆಯೇ 1.3ಟಿ ಪಿಕ್ ಅಪ್ ವಾಹನಗಳಲ್ಲಿ 7-ಲೀಫ್ ಸ್ಪಿಂಗ್ ಸಸ್ಷೆಷನ್ ನೀಡಿರುವ ಮಹೀಂದ್ರಾ ಸಂಸ್ಥೆಯು ಇನ್ನುಳಿದ ಸೌಲಭ್ಯಗಳನ್ನು ಎಲ್ಲಾ ಮಾದಿರಯಲ್ಲೂ ಒಂದೇ ರೀತಿಯಾಗಿ ಮುಂದುವರಿಸಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಅವಧಿಗೂ ಮುನ್ನವೇ 2019ರ ಬೊಲೆರೊ ಪಿಕ್ ಅಪ್ ಬಿಡುಗಡೆ ಮಾಡಿದ ಮಹೀಂದ್ರಾ..!

ಮೈಲೇಜ್

ಮಹೀಂದ್ರಾ ಸಂಸ್ಥೆಯ ಪ್ರಕಾರ 1.3ಟಿ ಮಾದರಿಗಳು ಪ್ರತಿ ಲೀಟರ್ ಡೀಸೆಲ್‌ಗೆ 14ಕಿ.ಮಿ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಇದು ಸರಕು ಸಾಗಾಟದಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ 1.7ಟಿ ವೆರಿಯೆಂಟ್‌ಗಳು ತುಸು ಏರಿಳಿತವಾಗಲಿದೆ ಎನ್ನಲಾಗಿದೆ.

ಅವಧಿಗೂ ಮುನ್ನವೇ 2019ರ ಬೊಲೆರೊ ಪಿಕ್ ಅಪ್ ಬಿಡುಗಡೆ ಮಾಡಿದ ಮಹೀಂದ್ರಾ..!

ಒಟ್ಟಿನಲ್ಲಿ ಪಿಕ್ ಅಪ್ ವಾಹನಗಳಲ್ಲೇ ವಿಶೇಷ ಎನ್ನಿಸುವ ಬೊಲೆರೊ ಪಿಕ್ ಅಪ್ ವಾಹನಗಳು ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಗ್ರಾಹಕರು ಖುಷಿಗೆ ಕಾರಣವಾಗಿದ್ದು, ಟಾಟಾ ಏಸ್ ವಾಹನದೊಂದಿಗೆ ಮಾರುಕಟ್ಟೆಯಲ್ಲಿ ತ್ರೀವ ಪೈಪೋಟಿ ಹೊಂದಿದೆ.

Article Published On: Tuesday, October 16, 2018, 11:28 [IST]
English summary
2019 Mahindra Bolero Pik-Up Launched In India At 6.66 Lakh — Offers The Best Load-Carrying Capacity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+