ಫೋರ್ಡ್ ಕಾರುಗಳಿಗಾಗಿ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಪಡಿಸಲಿದೆ ಮಹೀಂದ್ರಾ.!

ಭಾರತೀಯ ಆಟೋ ಉದ್ಯಮದಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ತಮ್ಮದೆ ಆದ ಜನಪ್ರಿಯತೆ ಹೊಂದಿದ್ದು, ಇದೀಗ ಭವಿಷ್ಯ ಯೋಜನೆಗಳಿಗಾಗಿ ಪರಸ್ಪರ ಕೈ ಜೋಡಿಸುತ್ತಿವೆ. ದೇಶಿಯ ಗ್ರಾಹಕರ ಬೇಡಿಕೆ ಅನುಗುಣವಾಗಿ ಪೆಟ್ರೋಲ್ ಎಂಜಿನ್‌ಗಳನ್ನು ಅಭಿವೃದ್ದಿಪಡಿಸಲಿರುವ ಮಹೀಂದ್ರಾ ಸಂಸ್ಥೆಯು ಫೋರ್ಡ್ ಸಂಸ್ಥೆಯ ಕಾರುಗಳ ಮಾರಾಟಕ್ಕೆ ಬೆನ್ನೆಲುಬಾಗಿ ನಿಲ್ಲಲಿದೆ.

ಫೋರ್ಡ್ ಕಾರುಗಳಿಗಾಗಿ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಪಡಿಸಲಿದೆ ಮಹೀಂದ್ರಾ.!

ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಮಾದರಿಯ ಕಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಫೋರ್ಡ್ ಸಂಸ್ಥೆಯು ಭಾರತದಲ್ಲಿ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಬೃಹತ್ ಬಂಡವಾಳದೊಂದಿಗೆ ಸದ್ಯದಲ್ಲೇ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುವ ಇರಾದೆಯಲ್ಲಿದೆ. ಹೀಗಾಗಿ ಅಗ್ಗದ ಬೆಲೆಯಲ್ಲಿ ಪೆಟ್ರೋಲ್ ಎಂಜಿನ್ ಸಿದ್ದಗೊಳಿಸುವಲ್ಲಿ ಜನಪ್ರಿಯತೆ ಹೊಂದಿರುವ ಮಹೀಂದ್ರಾ ಜೊತೆ ಹೊಸ ಒಪ್ಪಂದ ಮಾಡಿಕೊಂಡಿದೆ.

ಫೋರ್ಡ್ ಕಾರುಗಳಿಗಾಗಿ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಪಡಿಸಲಿದೆ ಮಹೀಂದ್ರಾ.!

2017ರಲ್ಲೇ ಮಹೀಂದ್ರಾ ಜೊತೆಗೆ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿಪಡಿಸುವ ಒಪ್ಪಂದ ಮಾಡಿಕೊಂಡಿದ್ದ ಫೋರ್ಡ್ ಸಂಸ್ಥೆಯು ಆ ಯೋಜನೆಯನ್ನು ಸದ್ಯಕ್ಕೆ ತಟಸ್ಥವಾಗಿಟ್ಟು, ಇದೀಗ ಪೆಟ್ರೋಲ್ ಎಂಜಿನ್ ಒದಗಿಸುವಂತೆ ಮಹೀಂದ್ರಾ ಸಂಸ್ಥೆಯ ಒಪ್ಪಂದ ಮಾಡಿಕೊಂಡಿದೆ.

ಫೋರ್ಡ್ ಕಾರುಗಳಿಗಾಗಿ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಪಡಿಸಲಿದೆ ಮಹೀಂದ್ರಾ.!

ಹೊಸ ಒಪ್ಪಂದ ಪ್ರಕಾರ, 2020ರ ಆರಂಭದಲ್ಲಿ ಕಡ್ಡಾಯವಾಗಿ ಜಾರಿಗೆಯಾಗಲಿರುವ ಬಿಎಸ್-6 ವೈಶಿಷ್ಟ್ಯತೆಯುಳ್ಳ ಪೆಟ್ರೋಲ್ ಎಂಜಿನ್ ಅನ್ನು ಅಭಿವೃದ್ಧಿ ಪಡಿಸಲಿರುವ ಮಹೀಂದ್ರಾ ಸಂಸ್ಥೆಯು, ಮಹೀಂದ್ರಾ ಸಂಸ್ಥೆಯು ಹೊಸ ಕಾರುಗಳಲ್ಲಿ ಜೋಡಣೆ ಮಾಡಲಿದೆ.

ಫೋರ್ಡ್ ಕಾರುಗಳಿಗಾಗಿ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಪಡಿಸಲಿದೆ ಮಹೀಂದ್ರಾ.!

1.0-ಲೀಟರ್(1 ಸಾವಿರ ಸಿಸಿ) ಇಕೋ ಬೂಸ್ಟ್ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಮಾಡಲಿರುವ ಮಹೀಂದ್ರಾ ಸಂಸ್ಥೆಯು ಫೋರ್ಡ್ ಎಂಟ್ರಿ ಲೆವಲ್ ಕಾರುಗಳಿಗೆ ಜೋಡಿಸಲಿದ್ದು, ಉತ್ತಮ ಎಂಜಿನ್ ಕಾರ್ಯಕ್ಷಮತೆಯೊಂದಿಗೆ ಪರ್ಫಾಮೆನ್ಸ್‌ನಲ್ಲೂ ಆಕರ್ಷಣೆಯಾಗಲಿರಲಿದೆ.

ಫೋರ್ಡ್ ಕಾರುಗಳಿಗಾಗಿ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಪಡಿಸಲಿದೆ ಮಹೀಂದ್ರಾ.!

ಇನ್ನು ಫೋರ್ಡ್ ಸಂಸ್ಥೆಯು 100-ಬಿಎಚ್‌ಪಿ ಪ್ರೇರಣೆಯ ಡೀಸೆಲ್ ಎಂಜಿನ್ ಉತ್ಪಾದನೆಯಲ್ಲಿ ಈಗಾಗಲೇ ಯಶಸ್ಸು ಸಾಧಿಸಿದ್ದು, ಇದೇ ಕಾರಣಕ್ಕೆ ಪೆಟ್ರೋಲ್ ಎಂಜಿನ್ ವಿಭಾಗದಲ್ಲಿ ಬದಲಾವಣೆ ತರುವು ಉದ್ದೇಶದಿಂದಲೇ ಮಹೀಂದ್ರಾ ಜೊತೆ ಕೈಜೋಡಿಸಿದೆ.

ಫೋರ್ಡ್ ಕಾರುಗಳಿಗಾಗಿ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಪಡಿಸಲಿದೆ ಮಹೀಂದ್ರಾ.!

ಇದಕ್ಕೆ ಪ್ರತಿಯಾಗಿ ಫೋರ್ಡ್ ಸಂಸ್ಥೆಯು ಸಹ ಮಹೀಂದ್ರಾ ಕಾರುಗಳ ಮಾರಾಟಕ್ಕೆ ಸಹಕಾರಿಯಾಗಲಿದ್ದು, ದೇಶಾದ್ಯಂತ ಅಧಿಕ ಸಂಖ್ಯೆಯಲ್ಲಿರುವ ಫೋರ್ಡ್ ಡೀಲರ್ಸ್‌ಗಳಲ್ಲಿ ಇನ್ಮುಂದೆ ಮಹೀಂದ್ರಾ ಗ್ರಾಹಕರ ಸೇವೆಗಳು ಲಭ್ಯವಾಗಲಿವೆ ಎನ್ನಲಾಗಿದೆ.

ಫೋರ್ಡ್ ಕಾರುಗಳಿಗಾಗಿ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಪಡಿಸಲಿದೆ ಮಹೀಂದ್ರಾ.!

ಈ ಬಗ್ಗೆ ಮಾತನಾಡಿರುವ ಫೋರ್ಡ್ ಜಾಗತಿಕ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಜೀಮ್ ಫೆರ್ಲಿ ಅವರು, ಭಾರತೀಯ ಗ್ರಾಹಕ ಬೇಡಿಕೆಯನ್ನು ಸಮರ್ಥ್ಯವಾಗಿ ಪೂರೈಸಲು ಹೊಸ ಬದಲಾವಣೆ ಅಗತ್ಯವಿದ್ದು, ಇದಕ್ಕಾಗಿ ಮಹೀಂದ್ರಾ ಜೊಡಿಗೂಡಿ ಪೆಟ್ರೋಲ್ ಎಂಜಿನ್ ವಿಭಾಗದಲ್ಲಿ ಹೊಸ ಬದಲಾಣೆ ತರುವ ಯೋಜನೆಯಲ್ಲಿದ್ದೇವೆ ಎಂದಿದ್ದಾರೆ.

MOST READ: ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಫೋರ್ಡ್ ಕಾರುಗಳಿಗಾಗಿ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಪಡಿಸಲಿದೆ ಮಹೀಂದ್ರಾ.!

ಜೊತೆಗೆ ಹೊಸ ಯೋಜನೆಗಾಗಿ ಮಹೀಂದ್ರಾ ಜೊತೆ ಕೈಜೋಡಿಸುತ್ತಿರುವುದು ನಮಗೆ ಸಾಕಷ್ಟು ಸಹಕಾರಿಯಾಗಲಿದೆ ಎಂದಿರುವ ಫೋರ್ಡ್ ಹಿರಿಯ ಅಧಿಕಾರಿಗಳು, ಭಾರತೀಯ ಗ್ರಾಹಕರ ಬೇಡಿಕೆಗಳನ್ನು ಅರಿತಿರುವ ಮಹೀಂದ್ರಾ ಉತ್ತಮ ಪೆಟ್ರೋಲ್ ಎಂಜಿನ್ ಸಿದ್ದಗೊಳಿಸುವ ವಿಶ್ವಾಸ ಇದೆ ಎಂದಿದ್ದಾರೆ.

ಫೋರ್ಡ್ ಕಾರುಗಳಿಗಾಗಿ ಪೆಟ್ರೋಲ್ ಎಂಜಿನ್ ಅಭಿವೃದ್ಧಿ ಪಡಿಸಲಿದೆ ಮಹೀಂದ್ರಾ.!

ಒಟ್ಟಿನಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ಪೆಟ್ರೋಲ್ ಕಾರುಗಳ ವಿಭಾಗದಲ್ಲಿ ಬಹುದೊಡ್ಡ ಬದಲಾವಣೆ ತರುವ ನೀರಿಕ್ಷೆಯಲ್ಲಿದ್ದು, ಇದು ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗುತ್ತಾ ಎನ್ನುವುದನ್ನು ಕಾಯ್ದುನೋಡಬೇಕಿದೆ.

Most Read Articles

Kannada
Read more on auto news ford mahindra
English summary
Mahindra & Ford Collaboration — Mahindra To Develop Petrol Engine For Ford.
Story first published: Thursday, October 18, 2018, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X