ಮಹೀಂದ್ರಾ ಬಹುನೀರಿಕ್ಷಿತ ಕೆಯುವಿ100 ಟ್ರಿಪ್ ಕಾರು ಬಿಡುಗಡೆ

Written By:

ದೇಶೀಯ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ತನ್ನ ಹೊಸ ಕೆಯುವಿ100 ಟ್ರಿಪ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಜನಪ್ರಿಯ ಪ್ಯಾಸೆಂಜರ್ ಕಾರು ಮಾದರಿಗಳಾದ ಮಾರುತಿ ಡಿಜೈರ್ ಟೂರ್, ಹ್ಯುಂಡೈ ಎಕ್ಸ್‌ಸೆಂಟ್ ಮತ್ತು ಟೊಯೊಟಾ ಇಟಿಯಾಸ್ ಸರಣಿಗಳಿಗೆ ಪೈಪೋಟಿ ನೀಡಲು ಕೆಯುವಿ100 ಟ್ರಿಪ್ ಕಾರನ್ನು ಬಿಡುಗಡೆಗೊಳಿಸಿದೆ.

ಮಹೀಂದ್ರಾ ಬಹುನೀರಿಕ್ಷಿತ ಕೆಯುವಿ100 ಟ್ರಿಪ್ ಕಾರು ಬಿಡುಗಡೆ

ಬಯೋ ಫ್ಯೂಲ್ ಎಂಜಿನ್(ಪೆಟ್ರೋಲ್ ಮತ್ತು ಸಿಎನ್‌ಜಿ) ಮತ್ತು ಡೀಸೆಲ್ ಎಂಜಿನ್ ಮಾದರಿಯಲ್ಲಿ ಖರೀದಿ ಲಭ್ಯವಾಗಿರುವ ಕೆಯುವಿ100 ಟ್ರಿಪ್ ಪ್ಯಾಸೆಂಜರ್ ಕಾರುಗಳ ಬೆಲೆಯನ್ನ, ಆರಂಭಿಕವಾಗಿ ರೂ.5.16 ಲಕ್ಷಕ್ಕೆ ಮತ್ತು ಉನ್ನತ ಮಾದರಿಯನ್ನು ರೂ. 5.42 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಮಹೀಂದ್ರಾ ಬಹುನೀರಿಕ್ಷಿತ ಕೆಯುವಿ100 ಟ್ರಿಪ್ ಕಾರು ಬಿಡುಗಡೆ

ಮಹಿಂದ್ರಾ ಸಂಸ್ಥೆಯು ತನ್ನ ಸಣ್ಣ ಗಾತ್ರದ ಎಸ್‍ಯುವಿ ಕಾರು ಕೆಯುವಿ100 ಕಾರನ್ನೇ ಮರುಸೃಷ್ಟಿಗೊಳಿಸಿ ಕೆಯುವಿ100 ಟ್ರಿಪ್ ಹೆಸರಿನೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದ್ದು, ಪ್ರೀ-ಫೇಸ್‍‍ಲಿಫ್ಟ್ ಕೆ2 ವೇರಿಯೆಂಟ್ 6 ಸೀಟರ್ ವ್ಯವಸ್ಥೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಮಹೀಂದ್ರಾ ಬಹುನೀರಿಕ್ಷಿತ ಕೆಯುವಿ100 ಟ್ರಿಪ್ ಕಾರು ಬಿಡುಗಡೆ

ಎಂಜಿನ್ ಸಾಮರ್ಥ್ಯ

ಎಂಜಿನ್ ಸಾಮರ್ಥ್ಯ ಮಹಿಂದ್ರಾ ಕೆಯುವಿ100 ಟ್ರಿಪ್ ಕಾರುಗಳು 1.2 ಲೀಟರ್ ಪೆಟ್ರೋಲ್-ಸಿಎನ್‍ಜಿ ಮತ್ತು ಡೀಸೆಲ್ ಎಂಜಿನ್ ಆವುತ್ತಿಯಲ್ಲಿ ದೊರೆಯಲಿದ್ದು, ರೆಗ್ಯುಲರ್ ಕೆಯುವಿ ಕಾರಿನ ಹಾಗೆಯೇ, ಪೆಟ್ರೋಲ್ ಕಾರುಗಳು 82-ಬಿಹೆಚ್‍ಪಿ ಮತ್ತು ಸಿಎನ್‌ಜಿ ಬಳಕೆ ಮಾಡಿದಲ್ಲಿ 70-ಬಿಎಚ್‌ಪಿ ಉತ್ಪಾದಿಸಬಲ್ಲವು.

ಮಹೀಂದ್ರಾ ಬಹುನೀರಿಕ್ಷಿತ ಕೆಯುವಿ100 ಟ್ರಿಪ್ ಕಾರು ಬಿಡುಗಡೆ

ಇನ್ನು ಡೀಸೆಲ್ ಕಾರುಗಳು 1.2-ಲೀಟರ್ ಎಂಜಿನ್ ಹೊಂದಿರಲಿದ್ದು, 77 ಬಿಹೆಚ್‍‍ಪಿ ಉತ್ಪಾದಿಸುವದರ ಜೊತೆಗೆ ಏರ್ ಕಂಡಿಷನರ್, ಒಳಭಾಗದಿಂದಲೇ ನಿಯಂತ್ರಣ ಮಾಡಬಲ್ಲ ಒಆರ್‌ವಿಎಂ ಮತ್ತು ಆಯ್ಕೆ ರೂಪದಲ್ಲಿ ಎಬಿಎಸ್ ತಂತ್ರಜ್ಞಾನದ ಸೌಲಭ್ಯ ಸಹ ಹೊಂದಿರಲಿವೆ.

ಮಹೀಂದ್ರಾ ಬಹುನೀರಿಕ್ಷಿತ ಕೆಯುವಿ100 ಟ್ರಿಪ್ ಕಾರು ಬಿಡುಗಡೆ

ಕಾರಿನ ವೈಶಿಷ್ಟ್ಯತೆ

ಕೆಯುವಿ 100 ಟ್ರಿಪ್ ಕಾರುಗಳು ಪವರ್ ಸ್ಟೀರಿಂಗ್, ಸ್ಟೀಲ್ ವೀಲ್ಸ್ ಉಪಕರಣಗಳು, ಹೆಚ್ಚಿನ ಮಟ್ಟದ ಬೂಟ್ ಸ್ಪೆಸ್ ಪಡೆದಿರುವುದಲ್ಲದೇ ಮೊದಲಿಗೆ ಈ ಕಾರನ್ನು ಟ್ಯಾಕ್ಸಿ ಆಪರೇಟರ್ಸ್ ಮತ್ತು ಫ್ಲೀಟ್ (ನೌಕಪಡೆ) ಗೆ ನೀಡಲಾಗುತ್ತಿದೆ.

ಮಹೀಂದ್ರಾ ಬಹುನೀರಿಕ್ಷಿತ ಕೆಯುವಿ100 ಟ್ರಿಪ್ ಕಾರು ಬಿಡುಗಡೆ

ಹೊಸ ಕಾರುಗಳ ಬಿಡುಗಡೆ ಬಗ್ಗೆ ಮಾತನಾಡಿರುವ ಮಹೀಂದ್ರಾ ಸೆಲ್ಸ್ ಆ್ಯಂಡ್ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ವಿಜಯ್ ರಾಮ್ ನಕ್ರಾ ಅವರು, ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿರುವ ಕೆಯುವಿ100 ಟ್ರಿಪ್ ಕಾರುಗಳು ಪ್ಯಾಸೆಂಜರ್ ಕಾರು ಮಾದರಿಗಳಲ್ಲಿ ಉತ್ತಮ ಬೇಡಿಕೆ ಹೊಂದುವ ವಿಶ್ವಾಸವಿದ್ದು, ಕಡಿಮೆ ವೆಚ್ಚದಲ್ಲಿ ಓಡಿಸಬಹುದಾದ ಎಸ್‌ಯುವಿ ಇದಾಗಿದೆ ಎಂದಿದ್ದಾರೆ.

ಮಹೀಂದ್ರಾ ಬಹುನೀರಿಕ್ಷಿತ ಕೆಯುವಿ100 ಟ್ರಿಪ್ ಕಾರು ಬಿಡುಗಡೆ

ಲಭ್ಯವಿರುವ ಕಾರಿನ ಬಣ್ಣಗಳು

ಡೈಮಂಡ್ ವೈಟ್ ಮತ್ತು ಡ್ಯಾಜಲಿಂಗ್ ಸಿಲ್ವರ್ ಬಣ್ಣಗಳನ್ನು ಆಯ್ಕೆಮಾಡಬಹುದು.

ಮಹೀಂದ್ರಾ ಬಹುನೀರಿಕ್ಷಿತ ಕೆಯುವಿ100 ಟ್ರಿಪ್ ಕಾರು ಬಿಡುಗಡೆ

ಈ ಮೂಲಕ ಕೆಯುವಿ100 ಟ್ರಿಪ್ ಕಾರುಗಳು ರೆಗ್ಯುಲರ್ ಆವೃತ್ತಿಗಿಂತ ಹೆಚ್ಚು ಆಕರ್ಷಣೆಯನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಆಯ್ಕೆಯಲ್ಲಿ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಕಾಯ್ದು ನೋಡಬೇಕಿದೆ.

Read more on mahindra suv
English summary
Mahindra KUV100 Trip Launched In India; Prices Start At Rs 5.16 Lakh.
Story first published: Tuesday, March 13, 2018, 11:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark