ಬಿಡುಗಡೆಗೆ ಸಜ್ಜುಗೊಂಡ ಮಹಿಂದ್ರಾ ಕೆಯುವಿ100 ಟ್ರಿಪ್

Written By: Rahul TS

ದೇಶೀಯ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ತನ್ನ ಹೊಸ ಕೆಯುವಿ100 ಟ್ರಿಪ್ ಕಾರನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದ್ದು, ಜನಪ್ರಿಯ ಪ್ಯಾಸೆಂಜರ್ ಕಾರು ಮಾದರಿಗಳಾದ ಮಾರುತಿ ಡಿಜೈರ್ ಟೂರ್, ಹ್ಯುಂಡೈ ಎಕ್ಸ್ ಸೆಂಟ್ ಮತ್ತು ಟೊಯೊಟಾ ಇಟಿಯಾಸ್ ಸರಣಿಗಳಿಗೆ ಪೈಪೋಟಿ ನೀಡಲು ಕೆಯುವಿ100 ಟ್ರಿಪ್ ಕಾರನ್ನು ಬಿಡುಗಡೆ ಮಾಡಲಾಗುತ್ತಿದೆ.

ಬಿಡುಗಡೆಗೆ ಸಜ್ಜುಗೊಂಡ ಮಹಿಂದ್ರಾ ಕೆಯುವಿ100 ಟ್ರಿಪ್

ಮಾಹಿತಿಗಳ ಪ್ರಕಾರ ಮಹಿಂದ್ರಾ ಸಂಸ್ಥೆಯು ತನ್ನ ಸಣ್ಣ ಗಾತ್ರದ ಎಸ್‍ಯುವಿ ಕಾರು ಕೆಯುವಿ100 ಕಾರನ್ನೇ ಮರುಸೃಷ್ಟಿಗೊಳಿಸಿ ಕೆಯುವಿ100 ಟ್ರಿಪ್ ಎಂಬ ಹೆಸರನ್ನು ನೀಡಲಾಗಿದೆ ಎನ್ನಲಾಗಿದ್ದು, ಪ್ರೀ-ಫೇಸ್‍‍ಲಿಫ್ಟ್ ಕೆ2 ವೇರಿಯಂಟ್ 6 ಸೀಟರ್ ವ್ಯವಸ್ಥೆಯೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.

Recommended Video - Watch Now!
[Kannada] Maruti Swift 2018 - Full Specifications, Features, Price, Mileage, Colours - DriveSpark
ಬಿಡುಗಡೆಗೆ ಸಜ್ಜುಗೊಂಡ ಮಹಿಂದ್ರಾ ಕೆಯುವಿ100 ಟ್ರಿಪ್

ಇದರ ಜೊತೆಗೆ ಕೆಯುವಿ ಟ್ರಿಪ್ ಕಾರಿನಲ್ಲೇ 5 ಸೀಟರ್ ಮಾದರಿಯ ಕಾರನ್ನು ಮುಂಬೈನಂತಹ ಮಹಾನಗರಗಳಲ್ಲಿ ಪರಿಚಯಿಸಲಿದ್ದು, ಮೊದಲನೆಯ ಬಾರಿಗೆ ಕೆಯುವಿ100 ಟ್ರಿಪ್ ಕಾರುಗಳನ್ನು ಪೆಟ್ರೋಲ್ ಸಿಎನ್‍‍ಜಿ ಕಾನ್ಫಿಗರೇಶನ್‍ ಅನ್ನು ಸಹ ಪರಿಚಯಿಸಲಿದೆ.

ಬಿಡುಗಡೆಗೆ ಸಜ್ಜುಗೊಂಡ ಮಹಿಂದ್ರಾ ಕೆಯುವಿ100 ಟ್ರಿಪ್

ಎಂಜಿನ್ ಸಾಮರ್ಥ್ಯ

ಮಹಿಂದ್ರಾ ಕೆಯುವಿ100 ಟ್ರಿಪ್ ಕಾರುಗಳು 1.2 ಲೀಟರ್ ಪೆಟ್ರೋಲ್-ಸಿಎನ್‍ಜಿ ಮತ್ತು ಡೀಸೆಲ್ ಎಂಜಿನ್ ಆವುತ್ತಿಯಲ್ಲಿ ದೊರೆಯಲಿದ್ದು, ರೆಗ್ಯುಲರ್ ಕೆಯುವಿ ಕಾರಿನ ಹಾಗೆಯೇ, ಪೆಟ್ರೋಲ್ ಕಾರುಗಳು 70 ಬಿಹೆಚ್‍ಪಿ ಮತ್ತು ಡೀಸೆಲ್ ಕಾರುಗಳು 77 ಬಿಹೆಚ್‍‍ಪಿ ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಗೆ ಸಜ್ಜುಗೊಂಡ ಮಹಿಂದ್ರಾ ಕೆಯುವಿ100 ಟ್ರಿಪ್

ಕಾರಿನ ವೈಶಿಷ್ಟ್ಯತೆ

ಕೆಯುವಿ 100 ಟ್ರಿಪ್ ಕಾರುಗಳು ಪವರ್ ಸ್ಟೀರಿಂಗ್, ಎಸಿ, ಎಬಿಎಸ್, ಸ್ಟೀಲ್ ವೀಲ್ಸ್ ಉಪಕರಣಗಳನ್ನು ಪಡೆದಿರುತ್ತದೆ. ಹಾಗೆಯೇ ಬಿಳಿ ಮತ್ತು ಸಿಲ್ವರ್ ಬಣ್ಣಗಳಲ್ಲಿ ಖರೀದಿಗೆ ಲಭಯವಿರಲಿದ್ದು, ಮೊದಲಿಗೆ ಈ ಕಾರನ್ನು ಟ್ಯಾಕ್ಸಿ ಆಪರೇಟರ್ಸ್ ಮತ್ತು ಫ್ಲೀಟ್ (ನೌಕಪಡೆ) ಗೆ ನೀಡಲಾಗುತ್ತಿದೆ.

ಬಿಡುಗಡೆಗೆ ಸಜ್ಜುಗೊಂಡ ಮಹಿಂದ್ರಾ ಕೆಯುವಿ100 ಟ್ರಿಪ್

ಮತ್ತೊಂದು ಮಾಹಿತಿ ಪ್ರಕಾರ ಮಹಿಂದ್ರಾ ಸಂಸ್ಥೆಯು ವೆರಿಟೊ ಕಾರುಗಳ ಮಾರಾಟ ನೆಲಕಚ್ಚಿರುವ ಹಿನ್ನೆಲೆ ಕೆಯುವಿ 100 ಕಾರನ್ನು ಬಿಡುಗಡೆಗೊಳಿಸುತ್ತಿದೆ ಎನ್ನಲಾಗಿದ್ದು, ಪ್ಯಾಸೆಂಜರ್ ಕಾರುಗಳ ವಿಭಾಗದಲ್ಲಿ ಉತ್ತಮ ಕಾರು ಮಾದರಿಯಾಗುವ ನೀರಿಕ್ಷೆ ಹೊಂದಿದೆ.

ಬಿಡುಗಡೆಗೆ ಸಜ್ಜುಗೊಂಡ ಮಹಿಂದ್ರಾ ಕೆಯುವಿ100 ಟ್ರಿಪ್

ಹೀಗಾಗಿ ಕೆಯುವಿ100 ಟ್ರಿಪ್ ರೆಗ್ಯುಲರ್ ಆವೃತ್ತಿಗಿಂತ ದರದಲ್ಲಿ 20 ರಿಂದ 30ಸಾವಿರ ರೂ ಕಡಿಮೆ ಇರಬಹುದೆಂದು ಅಂದಾಜಿಸಲಾಗಿದ್ದು, ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲು ಯಾವೆಲ್ಲಾ ಹೊಸ ಸೌಲಭ್ಯಗಳನ್ನು ನೀಡುತ್ತದೆ ಎಂದು ಕಾದುನೋಡಬೇಕು.

Read more on mahindra cars
English summary
Mahindra KUV100 Trip (Taxi Version) Launch Soon.
Story first published: Tuesday, March 6, 2018, 15:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark