ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

By Praveen Sannamani

ಮಹೀಂದ್ರಾ ಸಂಸ್ಥೆಯು ಕಳೆದ ವಾರವಷ್ಟೇ ತನ್ನ ಹೊಸ ಕಾರು ಮರಾಜೊ ಕಾರಿನ ಕುರಿತು ಮಾಹಿತಿ ಬಿಟ್ಟುಕೊಟ್ಟಿದ್ದಲ್ಲದೇ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿತ್ತು. ಇದರ ಹೊರತಾಗಿ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಇದೀಗ ಹೊಸ ಕಾರಿನ ಇಂಟಿರಿಯರ್ ವಿನ್ಯಾಸಗಳ ಬಗೆಗೆ ಮಾಹಿತಿ ನೀಡಬಲ್ಲ ಕೆಲವು ಚಿತ್ರಗಳನ್ನ ಬಿಡುಗಡೆ ಮಾಡಿದೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ಸದ್ಯ ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ವಿಭಾಗದಲ್ಲಿ ಇನೋವಾ ಕ್ರಿಸ್ಟಾ ಹಿಂದಿಕ್ಕುವ ಮತ್ತೊಂದು ಜನಪ್ರಿಯ ಕಾರು ಯಾವುದು ಅನ್ನೋದು ವಾಸ್ತವ. ಇದೇ ಕಾರಣಕ್ಕೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಕೈಗೆಟುಕುವ ಬೆಲೆಗಳಲ್ಲಿ 7 ಸೀಟರ್ ಎಂಪಿವಿ ಕಾರುಗಳನ್ನ ಪರಿಚಯಿಸುತ್ತಿದ್ದು, ಮಹೀಂದ್ರಾ ಪರಿಚಯಿಸುತ್ತಿರುವ ಮರಾಜೊ ಎಂಪಿವಿ ಕೂಡಾ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ಮಹೀಂದ್ರಾ ಸಂಸ್ಥೆಯು ಈಗಾಗಲೇ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಹಲವು ಸುತ್ತಿನ ಪರೀಕ್ಷಾರ್ಥ ಡ್ರೈವ್‌ಗಳನ್ನು ಕೈಕೊಂಡಿದ್ದು, ಯು321 ಎಂಬ ಕೋಡ್ ನೆಮ್ ಆಧಾರ ಮೇಲೆ ಟೆಸ್ಟಿಂಗ್ ಕಾರ್ಯಗಳನ್ನ ಪೂರ್ಣಗೊಳಿಸಿದೆ. ಜೊತೆಗೆ ಕಾರಿನ ಅಧಿಕೃತ ಹೆಸರನ್ನು ಸಹ ಬಹಿರಂಗ ಮಾಡಿದೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ಶಾರ್ಕ್ ಡಿಸೈನ್ ಹೊಂದಿರುವ ಹೊಸ ಕಾರು ನೇರವಾಗಿ ಟಾಟಾ ಹೆಕ್ಸಾ ಮತ್ತು ಇನೋವಾ ಕ್ರಿಸ್ಟಾಗೆ ಸವಾಲು ಒಡ್ಡಲಿದ್ದು, ತ್ರಿ ಸ್ಪೋಕ್ ಸ್ಟಿರೀಂಗ್ ವೀಲ್ಹ್ ಜೊತೆ ಮಲ್ಟಿ ಕಂಟ್ರೋಲರ್, ದೊಡ್ಡದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ವಿನ್ಯಾಸದ ಸ್ಪೀಡೋ ಮೀಟರ್ ಮತ್ತು ಟಚ್‌ಮೀಟರ್ ಸೌಲಭ್ಯ ಹೊಂದಿದೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ನಾರ್ತ್ ಅಮೆರಿಕದಲ್ಲಿರುವ ಮಹೀಂದ್ರಾ ಡಿಸೈನ್ ಸೇಂಟರ್‌ನಲ್ಲಿ ಈ ಹೊಸ ಕಾರಿನ ವಿನ್ಯಾಸಗಳನ್ನು ಸಿದ್ದಪಡಿಸಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಗುಣಲಕ್ಷಣಗಳನ್ನ ಹೊಂದಿರುವ ಮರಾಜೊ ಕಾರು ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಬಿಡುಗಡೆಯ ಸುಳಿವು ನೀಡಿದೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ಇನ್ನು ಬಿಡುಗಡೆಯಾಗಲಿರುವ ಮರಾಜೊ ಎಂಪಿವಿ ಕಾರುಗಳು ಮಹಿಂದ್ರಾ ಸಂಸ್ಥೆಯ ಮೊದಲ ಮೊನೊಕ್ಯೂ ಬಾಡಿ ಕಿಟ್ ಹೊಂದಿರುವ ಕಾರು ಮಾದರಿಯಾಗಿದ್ದು, ಜೈಲೋ ಕಾರುಗಳಲ್ಲಿ ಬಳಸಲಾಗಿರುವ ಬಾಡಿ ಆನ್ ಫ್ರೇಮ್ ಶೈಲಿಗಿಂತಲೂ ಇದು ವಿಭಿನ್ನವಾಗಿರಲಿದೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ಸ್ಪಾಟ್ ಟೆಸ್ಟಿಂಗ್ ವೇಳೆ ಸಿಕ್ಕಿರುವ ಮಾಹಿತಿ ಪ್ರಕಾರ, ಮರಾಜೊ ಕಾರುಗಳು 6 ಸ್ಪ್ಲಿಟ್ ಸ್ಪೋಕ್ ಎರಡು ಟೋನ್‍‍ಗಳುಳ್ಳ ಅಲಾಯ್ ಚಕ್ರಗಳು, ಕಪ್ಪು ಹೆಡ್‍‍ಲ್ಯಾಂಪ್ ಬೆಜೆಲ್ಸ್ ಮತ್ತು ಮುಂಭಾಗದ ಗ್ರೀಲ್‍‍ನಲ್ಲಿ ಮಹಿಂದ್ರಾ ಸಂಸ್ಥೆಯ ಸಿಗ್ನೇಚರ್‍‍ನಿಂದ ಸಜ್ಜುಗೊಂಡಿದೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ಮಹೀಂದ್ರಾ ಮರಾಜೊ ಎಂಪಿವಿ ಕಾರುಗಳು ಏಳು ಲಂಬಾಕಾರದ ಗ್ರಿಲ್, ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಹೊಸ ಬಂಪರ್, ಫಾಗ್ ಲ್ಯಾಂಪ್ಸ್, ಬೂಮರಾಂಗ್ ಆಕಾರದ ಎಲ್ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್ ವೈಶಿಷ್ಟ್ಯತೆಗಳನ್ನು ಪಡೆದಿದೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ಕಾರಿನ ಒಳವಿನ್ಯಾಸದ ಬಗ್ಗೆ ಹೇಳುವುದಾದರೇ, ಎತ್ತರವಾದ ಏಳು ಲೆದರ್ ಸೀಟ್‍‍ಗಳು, ಆ್ಯಪಲ್ ಕಾರ್ ಪ್ಲೇ, ಎಸಿ ವೆಂಟ್, ಕ್ಲೈಮೆಟ್ ಕಂಟ್ರೋಲರ್, ಆಂಡ್ರಾಯ್ಡ್ ಆಟೋ ಆಪ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಅನಲಾಗ್ ಡಿಜಿಟಲ್ ಇನ್ಸ್ಟ್ರೂಮೆಂಟಲ್ ಕ್ಲಸ್ಟರ್ ಅನ್ನು ಪಡೆದಿರಲಿವೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ಎಂಜಿನ್ ಸಾಮರ್ಥ್ಯ

ಮಹಿಂದ್ರಾ ಮರಾಜೊ ಕಾರುಗಳು 1.6-ಲೀಟರ್ ಎಂಜಿನ್ ಸಹಾಯದಿಂದ 125-ಬಿಹೆಚ್‍ಪಿ ಮತ್ತು 305-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದ್ದು, 6 ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ. ಆದ್ರೆ ಪೆಟ್ರೋಲ್ ವರ್ಷನ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಮಹೀಂದ್ರಾ ಸಂಸ್ಥೆಯು ಹೊಸ ಕಾರಿನ ಬಿಡುಗಡೆ ನಂತರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ಇದರೊಂದಿಗೆ ಎಂಪಿವಿ ಬೇಸ್ ಮಾಡೆಲ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್‍, ಇಬಿಡಿ ಮತ್ತು ಡ್ಯುಯಲ್ ಏರ್‍‍ಬ್ಯಾಗ್‍‍ಗಳನ್ನು ಕಾರಿನ ಎಲ್ಲಾ ವೇರಿಯಂಟ್‍‍ನಲ್ಲೂ ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳು ಕರ್ಟೈನ್ ಏರ್‍‍ಬ್ಯಾಗ್‍‍ಗಳನ್ನು ಕೂಡಾ ಪಡೆದುಕೊಂಡಿರಲಿವೆ. ಇವುಗಳಲ್ಲದೆ ಪಾರ್ಕಿಂಗ್ ಅಸ್ಸಿಸ್ಟ್, ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ಬಿಡುಗಡೆ ಯಾವಾಗ?

ಸದ್ಯ ಹೊಸ ಕಾರಿನ ಅಧಿಕೃತ ಹೆಸರನ್ನು ಮಾತ್ರವೇ ಬಹಿರಂಗ ಪಡಿಸಿರುವ ಮಹೀಂದ್ರಾ ಸಂಸ್ಥೆಯು ದೀಪಾವಳಿ ಹೊತ್ತಿಗೆ ಮರಾಜೊ ಕಾರನ್ನ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಎಂಪಿವಿ ಕಾರು ಪ್ರಿಯರನ್ನು ಆಕರ್ಷಣೆ ಮಾಡುವ ಎಲ್ಲಾ ಗುಣಲಕ್ಷಣಗಳನ್ನು ಈ ಹೊಸ ಕಾರು ಪಡೆದುಕೊಂಡಿದೆ.

ಮರಾಜೊ ಎಂಪಿವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ

ಒಟ್ಟಿನಲ್ಲಿ ಮಹೀಂದ್ರಾ ಹೊಸ ಎಂಪಿವಿ ಕಾರು ಬಿಡಗಡೆಗೊಂಡಲ್ಲಿ ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೊವಾ ಕ್ರಿಸ್ಟಾ, ಟಾಟಾ ಹೆಕ್ಸಾ ಕಾರುಗಳಿಗೆ ಪೈಪೋಟಿಯನ್ನು ನೀಡಲಿದ್ದು, ಇನ್ನು ಕಾರಿನ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದ್ರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ಹೊಸ ಕಾರು 11 ರಿಂದ 16 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

More from DriveSpark

Article Published On: Thursday, August 9, 2018, 17:33 [IST]
English summary
Mahindra Marazzo Interior Revealed Ahead Of Launch.
Read more on mahindra mpv new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+