ಮುಂದಿನ ವಾರ ಬಿಡುಗಡೆಗೊಳ್ಳಲಿರುವ ಮಹೀಂದ್ರಾ ಮರಾಜೊ ಕಾರು ಇದೇ..
ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ತಮ್ಮ ಹೊಸ ಎಂಪಿವಿ ಮರಾಜೊ ಕಾರನ್ನು ಸೆಪ್ಟೆಂಬರ್ 3ರಂದು ಅಧಿಕೃತವಾಗಿ ಬಿಡುಗಡೆಗೊಳಿಸಲಿದೆ. ಬಿಡುಗಡೆಗು ಮುನ್ನವೇ ಇದೀಗ ಕಾರಿನ ಚಿತ್ರಗಳು ಸೋರಿಕೆಯಾಗಿದೆ.
ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ತಮ್ಮ ಹೊಸ ಎಂಪಿವಿ ಮರಾಜೊ ಕಾರನ್ನು ಸೆಪ್ಟೆಂಬರ್ 3ರಂದು ಅಧಿಕೃತವಾಗಿ ಬಿಡುಗಡೆಗೊಳಿಸಲಿದೆ. ಬಿಡುಗಡೆಗು ಮುನ್ನವೇ ಇದೀಗ ಕಾರಿನ ಚಿತ್ರಗಳು ಸೋರಿಕೆಯಾಗಿದ್ದು, ಎಂಪಿವಿ ಕಾರು ಪ್ರಿಯರಲ್ಲಿ ಹೊಸ ಕುತೂಹಲವನ್ನು ಹುಟ್ಟುಹಾಕಿದೆ.

ಈಗಾಗಲೆ ಮರಾಜೊ ಎಂಪಿವಿ ಕಾರು ಮಹೀಂದ್ರಾ ಸಂಸ್ಥೆಯ ಡೀಲರ್‍ಗಳನ್ನು ತಲುಪಿದ್ದು, ಈ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಶುರುಮಾಡಿದೆ. ಶಾರ್ಕ್ ರೂಪದಲ್ಲಿ ನಿರ್ಮಿಸಲಾಗಿರುವ ಈ ಕಾರು ಮುಂಭಾಗದಲ್ಲಿ ಶಾರ್ಕ್‍ನ ಹಲ್ಲಿನಂತೆಯೆ ವರ್ಟಿಕಲ್ ಸ್ಲಾಟ್ಸ್ ನೊಂದಿಗೆ ಟೂತ್ ಗ್ರಿಲ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ ಫಾಗ್ ಲ್ಯಾಂಪ್ಸ್ ಮತ್ತು ಬಲಶಾಲಿಯಾದ ಬಂಪರ್ ಅನ್ನು ಅಳವಡಿಸಲಾಗಿದೆ.

ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯವಿರಲಿರುವ ಮರಾಜೊ ಕಾರುಗಳು 8-ಸೀಟರ್ ಮತ್ತು 7-ಸೀಟರ್‌ನಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದ್ದು, ಸ್ವಂತದ ಬಳಕೆ ಹಾಗೂ ಟೂರಿಸ್ಟ್ ವಿಭಾಗದಲ್ಲೂ ಇದು ಸದ್ದು ಮಾಡುವ ನೀರಿಕ್ಷೆಯಿದೆ.

ಶಾರ್ಕ್ ಡಿಸೈನ್ ಹೊಂದಿರುವ ಹೊಸ ಕಾರು ನೇರವಾಗಿ ಟಾಟಾ ಹೆಕ್ಸಾ ಮತ್ತು ಇನೋವಾ ಕ್ರಿಸ್ಟಾಗೆ ಸವಾಲು ಒಡ್ಡಲಿದ್ದು, ತ್ರಿ ಸ್ಪೋಕ್ ಸ್ಟಿರೀಂಗ್ ವೀಲ್ಹ್ ಜೊತೆ ಮಲ್ಟಿ ಕಂಟ್ರೋಲರ್, ದೊಡ್ಡದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ವಿನ್ಯಾಸದ ಸ್ಪೀಡೋ ಮೀಟರ್ ಮತ್ತು ಟಚ್‌ಮೀಟರ್ ಸೌಲಭ್ಯ ಹೊಂದಿದೆ.

ಇನ್ನು ಬಿಡುಗಡೆಯಾಗಲಿರುವ ಮರಾಜೊ ಎಂಪಿವಿ ಕಾರುಗಳು ಮಹಿಂದ್ರಾ ಸಂಸ್ಥೆಯ ಮೊದಲ ಮೊನೊಕ್ಯೂ ಬಾಡಿ ಕಿಟ್ ಹೊಂದಿರುವ ಕಾರು ಮಾದರಿಯಾಗಿದ್ದು, ಜೈಲೋ ಕಾರುಗಳಲ್ಲಿ ಬಳಸಲಾಗಿರುವ ಬಾಡಿ ಆನ್ ಫ್ರೇಮ್ ಶೈಲಿಗಿಂತಲೂ ಇದು ವಿಭಿನ್ನವಾಗಿರಲಿದೆ.

ಹಾಗೆಯೇ ಕಾರಿನ ಒಳವಿನ್ಯಾಸದ ಬಗ್ಗೆ ಹೇಳುವುದಾದರೇ, ಎತ್ತರವಾದ ಏಳು ಲೆದರ್ ಸೀಟ್‍ಗಳು, ಆ್ಯಪಲ್ ಕಾರ್ ಪ್ಲೇ, ಎಸಿ ವೆಂಟ್, ಕ್ಲೈಮೆಟ್ ಕಂಟ್ರೋಲರ್, ಆಂಡ್ರಾಯ್ಡ್ ಆಟೋ ಆಪ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಅನಲಾಗ್ ಡಿಜಿಟಲ್ ಇನ್ಸ್ಟ್ರೂಮೆಂಟಲ್ ಕ್ಲಸ್ಟರ್ ಅನ್ನು ಪಡೆದಿರಲಿವೆ.

ಎಂಜಿನ್ ಸಾಮರ್ಥ್ಯ
ಮಹಿಂದ್ರಾ ಮರಾಜೊ ಕಾರುಗಳು 1.6-ಲೀಟರ್ ಎಂಜಿನ್ ಸಹಾಯದಿಂದ 125-ಬಿಹೆಚ್‍ಪಿ ಮತ್ತು 305-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದ್ದು, 6 ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ. ಆದ್ರೆ ಪೆಟ್ರೋಲ್ ವರ್ಷನ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಮಹೀಂದ್ರಾ ಸಂಸ್ಥೆಯು ಹೊಸ ಕಾರಿನ ಬಿಡುಗಡೆ ನಂತರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಇದರೊಂದಿಗೆ ಎಂಪಿವಿ ಬೇಸ್ ಮಾಡೆಲ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ ಮತ್ತು ಡ್ಯುಯಲ್ ಏರ್‍ಬ್ಯಾಗ್‍ಗಳನ್ನು ಕಾರಿನ ಎಲ್ಲಾ ವೇರಿಯಂಟ್‍ನಲ್ಲೂ ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳು ಕರ್ಟೈನ್ ಏರ್‍ಬ್ಯಾಗ್‍ಗಳನ್ನು ಕೂಡಾ ಪಡೆದುಕೊಂಡಿರಲಿವೆ. ಇವುಗಳಲ್ಲದೆ ಪಾರ್ಕಿಂಗ್ ಅಸ್ಸಿಸ್ಟ್, ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ಒಟ್ಟಿನಲ್ಲಿ ಮಹೀಂದ್ರಾ ಹೊಸ ಎಂಪಿವಿ ಕಾರು ಬಿಡಗಡೆಗೊಂಡಲ್ಲಿ ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೊವಾ ಕ್ರಿಸ್ಟಾ, ಟಾಟಾ ಹೆಕ್ಸಾ ಕಾರುಗಳಿಗೆ ಪೈಪೋಟಿಯನ್ನು ನೀಡಲಿದ್ದು, ಇನ್ನು ಕಾರಿನ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದ್ರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ಹೊಸ ಕಾರು 11 ರಿಂದ 16 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಸೆಪ್ಟೆಂಬರ್ 3ರಂದು ನಡೆಯಲಿರುವ ಕಾರು ಬಿಡುಗಡೆಯಯ ಸಂಪೂರ್ಣ ಮಾಹಿತಿ ನಿಮ್ಮ ಡ್ರೈವ್‌ಸ್ಪಾರ್ಕ್‌ನಲ್ಲಿ ಲಭ್ಯವಿರಲಿದೆ.


Click it and Unblock the Notifications