YouTube

ಮಹೀಂದ್ರಾ ಮರಾಜೊ ಕಾರು ಎಷ್ಟು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಗೊತ್ತಾ..?

ಮಹೀಂದ್ರಾ ಸಂಸ್ಥೆಯು ಕೊನೆಗು ತಮ್ಮ ಬಹುನಿರೀಕ್ಷಿತ ಶಾರ್ಕ್ ಮೀನಿನ ರೂಪದಲ್ಲಿ ನಿರ್ಮಿಸಲಾದ ಮರಾಜೊ ಎಂಪಿವಿ ಕಾರನ್ನು ಸೆಪ್ಟೆಂಬರ್ 3 2018ರಂದು ಬಿಡುಗಡೆಗೊಳಿಸಲು ನಿರ್ಣಯಿಸಿದೆ. ಬಿಡುಗಡೆಗು ಮುನ್ನವೇ ಈ ಕಾರಿನ ವಿಶೇಷತೆಗಳನ್ನು ನಾವೀಗಾಗಲೆ ತಿಳ

By Rahul Ts

ಮಹೀಂದ್ರಾ ಸಂಸ್ಥೆಯು ಕೊನೆಗು ತಮ್ಮ ಬಹುನಿರೀಕ್ಷಿತ ಶಾರ್ಕ್ ಮೀನಿನ ರೂಪದಲ್ಲಿ ನಿರ್ಮಿಸಲಾದ ಮರಾಜೊ ಎಂಪಿವಿ ಕಾರನ್ನು ಸೆಪ್ಟೆಂಬರ್ 3 2018ರಂದು ಬಿಡುಗಡೆಗೊಳಿಸಲು ನಿರ್ಣಯಿಸಿದೆ. ಬಿಡುಗಡೆಗು ಮುನ್ನವೇ ಈ ಕಾರಿನ ವಿಶೇಷತೆಗಳನ್ನು ನಾವೀಗಾಗಲೆ ತಿಳಿದುಕೊಂಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಮರಾಜೊ ಕಾರಿನ ವೇರಿಯಂಟ್‍‍ಗಳ ಕುರಿತಾದ ಮಾಹಿತಿಯು ಬಹಿರಂಗಗೊಂಡಿದೆ.

ಮಹೀಂದ್ರಾ ಮರಾಜೊ ಕಾರು ಎಷ್ಟು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಗೊತ್ತಾ..?

ಮಹೀಂದ್ರಾ ಕಾರಿನಲ್ಲಿಯೆ ಮರಾಜೊ ಎಂಪಿವಿ ಕಾರು ವಿಶೇಷವಾದ ವಿನ್ಯಾಸವನ್ನು ಪಡೆದುಕೊಂಡಿದ್ದು, ಎಂಪಿವಿ ಪ್ರಿಯರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ. ಅಷ್ಟೆ ಅಲ್ಲದೇ ಬಿಡುಗಡೆಯ ನಂತರ ಎಂಪಿವಿ ಪ್ರಿಯರಲ್ಲಿ ಇದರ ವೈಶಿಷ್ಟ್ಯತೆಗಳಿಂದ ಹೊಸ ಅನುಭವವನ್ನು ನೀಡುತ್ತದೆ ಎಂಬ ಭರವಸೆ ಇದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಮಹೀಂದ್ರಾ ಕಾರಿನ ವೇರಿಯಂಟ್‍‍ಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಮಹೀಂದ್ರಾ ಮರಾಜೊ ಕಾರು ಎಷ್ಟು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಗೊತ್ತಾ..?

ಒಟ್ಟು ನಾಲ್ಕು ವೇರಿಯಂಟ್‍‍ನಲ್ಲಿ ಖರೀದಿಗೆ ಲಭ್ಯವಿರಲಿದೆ ಮಹೀಂದ್ರಾ ಮರಾಜೊ ಎಂಪಿವಿ ಕಾರು. ಈಗಾಗಲೆ ಈ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯು ಪ್ರಾರಂಭಗೊಂಡಿದ್ದು, ಆಸಕ್ತ ಗ್ರಾಹಕರು ಈ ಕಾರಿನ ಖರೀದಿಗಾಗಿ ನಿಮ್ಮ ಹತ್ತಿರದ ಮಹೀಂದ್ರಾ ಅಧಿಕೃತ ಡೀಲರ್‍‍ನ ಹತ್ತಿರ ಮುಂಗಡವಾಗಿ ರೂ.10,000 ಸಾವಿರದ ಮೊತ್ತವನ್ನು ನೀಡಿ ಪ್ರೀ-ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಮಹೀಂದ್ರಾ ಕಾರಿನ ವೇರಿಯಂಟ್‍‍ಗಳ ಬಗ್ಗೆ ಹೇಳುವುದರ ಮುನ್ನ ಈ ಎಂಪಿವಿ ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ತಿಳಿಯಿರಿ.

ಮಹೀಂದ್ರಾ ಮರಾಜೊ ಕಾರು ಎಷ್ಟು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಗೊತ್ತಾ..?

ಎಂಜಿನ್ ಸಾಮರ್ಥ್ಯ

ಮಹಿಂದ್ರಾ ಮರಾಜೊ ಕಾರುಗಳು 1.6-ಲೀಟರ್ ಎಂಜಿನ್ ಸಹಾಯದಿಂದ 125-ಬಿಹೆಚ್‍ಪಿ ಮತ್ತು 305-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದ್ದು, 6 ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ. ಆದ್ರೆ ಪೆಟ್ರೋಲ್ ವರ್ಷನ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಮಹೀಂದ್ರಾ ಸಂಸ್ಥೆಯು ಹೊಸ ಕಾರಿನ ಬಿಡುಗಡೆ ನಂತರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಮಹೀಂದ್ರಾ ಮರಾಜೊ ಕಾರು ಎಷ್ಟು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಗೊತ್ತಾ..?

ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿರಲಿರುವ ಮರಾಜೊ ಕಾರುಗಳು 8-ಸೀಟರ್ ಮತ್ತು 7-ಸೀಟರ್‌ನಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದ್ದು, ಸ್ವಂತದ ಬಳಕೆ ಹಾಗೂ ಟೂರಿಸ್ಟ್ ವಿಭಾಗದಲ್ಲೂ ಇದು ಸದ್ದು ಮಾಡುವ ನೀರಿಕ್ಷೆಯಿದೆ.

ಮಹೀಂದ್ರಾ ಮರಾಜೊ ಕಾರು ಎಷ್ಟು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಗೊತ್ತಾ..?

ಮಹೀಂದ್ರಾ ಮರಾಜೊ ಎಂ2

ಮಹೀಂದ್ರಾ ಮರಾಜೊ ಎಂ2 ಈ ಕಾರಿನ ಬೇಸ್ ವೇರಿಯಂಟ್ ಆಗಿದ್ದು, ಈ ಕಾರಿನಲ್ಲಿ

-16 ಇಂಚಿನ ಅಲಾಯ್ ಚಕ್ರಗಳು

-ಪವರ್ ವಿಂಡೋಸ್

-ಫ್ಯಾಬ್ರಿಕ್‍‍ನಿಂದ ಸಜ್ಜುಗೊಳಿಸಲಾದ ಸೀಟ್‍‍ಗಳು

-ರೂಫ್-ಮೌಂಟೆಡ್ ಎಸಿ ವೆಂಟ್ಸ್

-ಸೆಂಟ್ರಲ್ ಲಾಕಿಂಗ್

-ಡಿಜಿಟಲ್ ಕ್ಲಾಕ್

-ಮ್ಯಾನುವಲ್ಲಿ ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಮ್‍‍ಗಳು

-ಎಂಜಿನ್ ಇಮ್ಮೊಬಿಲೈಸರ್ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.

ಮಹೀಂದ್ರಾ ಮರಾಜೊ ಕಾರು ಎಷ್ಟು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಗೊತ್ತಾ..?

ಮಹೀಂದ್ರಾ ಮರಾಜೊ ಎಂ4

ಮಹೀಂದ್ರ ಮರಾಜೊ ಕಾರಿನ ಎರಡನೆಯ ವೇರಿಯಂಟ್ ಆಗಿರುವ ಎಂ4 ನಲ್ಲಿ

-ಶಾರ್ಕ್-ಫಿನ್ ಆಂಟೆನಾ

-ಡ್ರೈವರ್ಸ್ ಸೀಟ್ ಹೈಟ್ ಅಡ್ಜಸ್ಟಿಬಲಿಟಿ

-ಮುಂಭಾಗದ ಸೀಟ್‍‍ಗಳಿಗೆ ಯುಎಸ್‍ಬಿ ಸಾಕೆಟ್

-ರಿಯರ್ ವೈಪರ್ ಮತ್ತು ವಾಷರ್ ಯೂನಿಟ್

-ವಿದ್ಯುತ್‍‍ನಿಂದ ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಮ್

-ವಾಯ್ಸ್ ಮೆಸ್ಸೆಂಜಿಂಗ್ ಸಿಸ್ಟಮ್

-ಹಿಂಭಾಗದ ಪ್ರಯಾಣಿಕರಿಗಾಗಿ ಯುಎಸ್‍‍ಬಿ ಮತ್ತು ಆಕ್ಸ್ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.

ಮಹೀಂದ್ರಾ ಮರಾಜೊ ಕಾರು ಎಷ್ಟು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಗೊತ್ತಾ..?

ಮಹೀಂದ್ರಾ ಮರಾಜೊ ಎಂ6

ಮಹೀಂದ್ರಾ ಮರಾಜೊ ಕಾರಿನ ಎರಡನೆಯ ವೇರಿಯಂಟ್ ಆಗಿರುವ ಎಂ6 ನಲ್ಲಿ

-ಫ್ರಂಟ್ ಆಂಡ್ ರಿಯರ್ ಫಾಗ್ ಲ್ಯಾಂಪ್ಸ್

-ಫಾಲೊ-ಮಿ-ಹೋಮ್ ಫೀಚರ್‍‍ನೊಂದಿಗೆ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್

-ಪ್ರೀಮಿಯಂ ಫ್ಯಾಬ್ರಿಕ್‍‍ನಿಂದ ಸಜ್ಜುಗೊಳಿಸಿದ ಸೀಟ್‍‍ಗಳು

-7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್

-ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್

-ಎಮರ್ಜೆನ್ಸಿ ಕಾಲ್

-ರಿಯರ್ ಪಾರ್ಕಿಂಗ್ ಸೆನ್ಸಾರ್ಸ್

-ಕಾರ್ನರಿಂಗ್ ಲ್ಯಾಂಪ್ಸ್

-ನ್ಯಾವಿಗೇಷನ್

-ರಿಮೋಟ್ ಕೀಲೆಸ್ ಎಂಟ್ರಿ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.

ಮಹೀಂದ್ರಾ ಮರಾಜೊ ಕಾರು ಎಷ್ಟು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಗೊತ್ತಾ..?

ಮಹೀಂದ್ರಾ ಮರಾಜೊ ಎಂ8

ಮಹೀಂದ್ರಾ ಮರಾಜೊ ಕಾರಿನ ಟಾಪ್ ವೇರಿಯಂಟ್ ಆದ ಎಂ8 ನಲ್ಲಿ

-17 ಇಂಚಿನ ಮಶೀನ್ಡ್ ಅಲಾಯ್ ವ್ಹೀಲ್ಸ್

-ಎಲ್ಇಡಿ ಡಿಆರ್‍ಎಲ್

-ಪ್ಯಾಡಲ್ ಲ್ಯಾಂಪ್ಸ್

-ಲೆದರ್‍‍ನಿಂದ ಸಜ್ಜುಗೊಳಿಸಲಾದ ಸೀಟ್‍‍ಗಳು

-ರಿವರ್ಸ್ ಕ್ಯಾಮೆರಾದೊಂದಿಗೆ ಡಿಪ್ಲೇ

-ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್

-ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‍‍ಪ್ಲೇ ಆಯ್ಕೆಯ ಸ್ಮಾರ್ಟ್‍‍ಫೋನ್ ಕನೆಕ್ಟಿವಿಟಿ

-ಕ್ರೂಸ್ ಕಂಟ್ರೋಲ್

-ಪವರ್-ಫೋಲ್ಡಿಂಗ್ ಮತ್ತು ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಂ

-ಮುಂಭಾಗದ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಯುಎಸ್‍‍ಬಿ ಸಾಕೆಟ್ ಎಂಟ್ರಿ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.

ಮಹೀಂದ್ರಾ ಮರಾಜೊ ಕಾರು ಎಷ್ಟು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಗೊತ್ತಾ..?

ಮಹೀಂದ್ರಾ ಮರಾಜೊ ಕಾರಿನ ಎಲ್ಲಾ ಫೀಚರ್‍‍ಗಳಲ್ಲಿ ಇನ್ನಿತರೆ ವೈಶಿಷ್ಟ್ಯತೆಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್, ಸ್ಪೀಡ್-ಸೆಂಸಿಟಿವ್ ಡೋರ್ ಲಾಕ್/ಅನ್‍‍ಲಾಕ್, ಎಬಿಎಸ್‍‍ನೊಂದಿಗೆ ಇಬಿಡಿ, ಬ್ರೇಕ್ ಅಸ್ಸಿಸ್ಟ್ ಮತ್ತು ಐಎಸ್‍ಓಫಿಕ್ಸ್ ಚೈಲ್ಡ್ ಮೌಂಟ್ಸ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಮಹೀಂದ್ರಾ ಮರಾಜೊ ಕಾರು ಎಷ್ಟು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ ಗೊತ್ತಾ..?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಒಟ್ಟಿನಲ್ಲಿ ಮಹೀಂದ್ರಾ ಹೊಸ ಎಂಪಿವಿ ಕಾರು ಬಿಡಗಡೆಗೊಂಡಲ್ಲಿ ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೊವಾ ಕ್ರಿಸ್ಟಾ, ಟಾಟಾ ಹೆಕ್ಸಾ ಕಾರುಗಳಿಗೆ ಪೈಪೋಟಿಯನ್ನು ನೀಡಲಿದ್ದು, ಇನ್ನು ಕಾರಿನ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದ್ರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ಹೊಸ ಕಾರು 11 ರಿಂದ 16 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಸೆಪ್ಟೆಂಬರ್ 3ರಂದು ನಡೆಯಲಿರುವ ಕಾರು ಬಿಡುಗಡೆಯಯ ಸಂಪೂರ್ಣ ಮಾಹಿತಿ ನಿಮ್ಮ ಡ್ರೈವ್‌ಸ್ಪಾರ್ಕ್‌ನಲ್ಲಿ ಲಭ್ಯವಿರಲಿದೆ.

Most Read Articles

Kannada
Read more on mahindra mpv new car
English summary
Mahindra Marazzo MPV Variants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X