ಪ್ರತಿ ಚಾರ್ಜ್‌ಗೆ 350 ಕಿ.ಮಿ ಮೈಲೇಜ್ ನೀಡಬಲ್ಲದು ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಕಾರು
ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಈಗಾಗಲೇ ಮುಂಚೂಣಿ ಸಾಧಿಸಿರುವ ದೇಶದ ಏಕೈಕ ಸಂಸ್ಥೆಯಾದ ಮಹೀಂದ್ರಾ ಸದ್ಯದಲ್ಲೇ ಮತ್ತೊಂದು ವಿನೂತನ ಎಲೆಕ್ಟ್ರಿಕ್ ಕಾರನ್ನು ಹೊರತರುತ್ತಿದ್ದು, ಜನಪ್ರಿಯ ಕೆಯುವಿ100 ಎಸ್‌ಯುವಿ ಆವೃತ್ತಿಯಲ್ಲೇ ಎಲೆಕ್ಟ್ರಿಕ್ ಮಾದರಿಯನ್ನು ಸದ್ಯದಲ್ಲೇ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

2018ರ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಕೆಯುವಿ100 ಎಲೆಕ್ಟ್ರಿಕ್ ಕಾರು ಅತ್ಯುತ್ತಮ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ನಿನ್ನೆಯಷ್ಟೇ ಮುಂಬೈನಲ್ಲಿ ನಡೆದ ಮಹೀಂದ್ರಾ ಹೊಸ ಎಂಪಿವಿ ಕಾರಿನ ಅಧಿಕೃತ ಹೆಸರನ್ನು ಬಹಿರಂಗಗೊಳಿಸುವ ಸಂದರ್ಭದಲ್ಲೇ ಹೊಸ ಎಲೆಕ್ಟ್ರಿಕ್ ಕಾರಿನ ಮಾಹಿತಿಯನ್ನ ಸಹ ಹಂಚಿಕೊಂಡಿದ್ದಾರೆ.

ಸದ್ಯ ಮಹೀಂದ್ರಾ ಸಂಸ್ಥೆಯು ಇ ವೆರಿಟೊ ಸೆಡಾನ್ ಮತ್ತು e2o ಪ್ಲಸ್ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಮುಂಬರುವ 5 ವರ್ಷಗಳಲ್ಲಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯಲ್ಲಿದೆಯೆಂತೆ.

ಇದರಲ್ಲಿ ಮೊದಲ ಬಾರಿಗೆ ಎಸ್‌ಯುವಿ ಆವೃತ್ತಿಯನ್ನು ಎಲೆಕ್ಟ್ರಿಕ್ ಮಾದರಿಯಾಗಿಸಲು ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಕೆಯುವಿ100 ಮಾದರಿಯನ್ನು ಆಯ್ದುಕೊಂಡಿದ್ದು, 6 ಸೀಟರ್ ಮಾದರಿಯಲ್ಲಿ ಹೊಸ ಕಾರಿನ ಕ್ಯಾಬಿನ್ ಅಭಿವೃದ್ಧಿ ಮಾಡಿದೆ.

ಎಲೆಕ್ಟ್ರಿಕ್ ಕೆಯುವಿ100 ಕಾರುಗಳು ಸಾಮಾನ್ಯ ಕೆಯುವಿ100 ಮಾದರಿಯ ಹೋಲಿಕೆ ಇದ್ದು, ಎಂಜಿನ್ ವಿಭಾಗದಲ್ಲಿ ಮಹತ್ವರ ಬದಲವಾಣೆ ಮಾಡುತ್ತಿದೆ. ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಆಯ್ಕೆ ಮಾಡುವ ಗ್ರಾಹಕರಿಗೆ ಉತ್ತಮ ಆಯ್ಕೆಯನ್ನು ನೀಡಲಿದೆ.

ಬ್ಯಾಟರಿ ವೈಶಿಷ್ಟ್ಯತೆ
210ಎಹೆಚ್ ಲಿಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಕೆಯುವಿ100 ಇವಿ ಕಾರುಗಳಲ್ಲಿ 48ಸಿಸಿ ಸಾಮರ್ಥ್ಯದ ಮೋಟಾರ್ ಸಹ ಜೋಡಣೆ ಮಾಡಲಾಗಿದ್ದು, ಪ್ರತಿ ಚಾರ್ಜಿಂಗ್‌ಗೆ 350 ಕಿಮಿ ಮೈಲೇಜ್ ನೀಡಬಲ್ಲ ಗುಣ ಹೊಂದಿದೆ.

ಇದರ ಜೊತೆಗೆ ಕೆಯುವಿ100 ಇವಿ ಕಾರುಗಳಲ್ಲಿ ಒದಗಿಸಲಾಗಿರುವ ಅಂತಾರಾಷ್ಟ್ರೀಯ ದರ್ಜೆಯ ಬ್ಯಾಟರಿಯು ಕೇವಲ 1 ಗಂಟೆಯಲ್ಲಿ ಶೇ.80 ಚಾರ್ಜಿಂಗ್ ಪಡೆದುಕೊಳ್ಳಬಹುದಾದ ಗುಣಹೊಂದಿದ್ದು, ಇ2ಒ ಮತ್ತು ವೆರಿಟೊ ಕಾರುಗಳಿಂತ ಉತ್ತಮ ಮಾದರಿಯಾಗಿದೆ.

ಇದರಿಂದ ಮಹೀಂದ್ರಾ ಬಿಡುಗಡೆಗೊಳಿಸಲಿರುವ ಕೆಯುವಿ100 ಇವಿ ಕಾರುಗಳು ಭಾರತದಲ್ಲಿ ಜನಪ್ರಿಯತೆ ಸಾಧಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಇದೇ ವರ್ಷದ ಕೊನೆಯಲ್ಲಿ ಇಲ್ಲವೇ 2019ರ ಆರಂಭದಲ್ಲಿ ಈ ಹೊಸ ಕಾರುಗಳು ಖರೀದಿಗೆ ಲಭ್ಯವಾಗುವುದು ಖಚಿತವಾಗಿದೆ.

ಕಾರಿನ ಬೆಲೆಗಳು(ಅಂದಾಜು)
ಕೆಯುವಿ100 ಇವಿ ಕಾರುಗಳ ಬೆಲೆ ಮಾಹಿತಿಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದ್ರು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಗಳಿಂತ ತುಸು ದುಬಾರಿಯಾಗಿರಲಿವೆ ಎನ್ನಲಾಗಿದೆ.


Click it and Unblock the Notifications