ಕಣ್ಮರೆಯಾಗಲಿದೆಯೆ ಮಹೀಂದ್ರಾ ನುವೊಸ್ಪೋರ್ಟ್ ಎಸ್‍ಯುವಿ ಕಾರು..!?
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ 2016ರಲ್ಲಿ ತಮ್ಮ ಕ್ವಾಂಟೊ ಕಾರಿನ ಸ್ಥಾನವನ್ನು ಭರ್ತಿ ಮಾಡಲು ನುವೊಸ್ಪೋರ್ಟ್ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸಿತ್ತು.
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ 2016ರಲ್ಲಿ ತಮ್ಮ ಕ್ವಾಂಟೊ ಕಾರಿನ ಸ್ಥಾನವನ್ನು ಭರ್ತಿ ಮಾಡಲು ನುವೊಸ್ಪೋರ್ಟ್ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸಿತ್ತು. ನುವೊಸ್ಪೋರ್ಟ್ ಜೈಲೋ ಕಾರಿನ ಮಾಡಲ್ ಅನ್ನು ಆಧರಿಸಿದ್ದು, ಜೈಲೋ ಕಾರಿಗಿಂತ ಹೆಚ್ಚಿನ ವಿನ್ಯಾಸವನ್ನು ನೀಡಲು ಸಂಸ್ಥೆಯು ಪ್ರಯತ್ನಿಸಿದ್ದೂ ಕೊನೆಗೆ ಅದು ಗ್ರಾಹಕರ ನಿರೀಕ್ಷೆಯಂತೆ ತಯಾರಾಗಲಿಲ್ಲ.

ಈ ವರ್ಷದ ಮೊದಲಿನಿಂದಲೂ ನುವೊಸ್ಪೋರ್ಟ್ ಕಾರು ಕಳಪೆ ಮಾರಾಟವನ್ನು ಕಾಣುತ್ತಿದ್ದು, ಕೇವಲ ಏಕ ಮಾತ್ರ ಸಂಖ್ಯೆಗಳಲ್ಲಿ ಮಾರಾಟಗೊಂಡಿವೆ ಮತ್ತು ಕಳೆದ ತಿಂಗಳು ಕೇವಲ ಒಂದೇ ಒಂದು ನುವೊಸ್ಪೋರ್ಟ್ ಕಾರು ಮಾರಾಟಗೊಂಡಿದೆ. ಈ ನಿಟ್ಟಿನಲ್ಲಿ ಮಹೀಂದ್ರಾ ಸಂಸ್ಥೆಯು ತಮ್ಮ ನುವೊಸ್ಪೋರ್ಟ್ ಕಾರನ್ನು ಅಧಿಕೃತವಾಗಿ ಸ್ಥಗಿತಗೊಳಿಸಲು ಚಿಂತಿಸುತ್ತಿದೆ.

ನುವೊಸ್ಪೋರ್ಟ್ ಮಹೀಂದ್ರಾ ಸಂಸ್ಥೆಯಲ್ಲಿನ 7 ಆಸನವುಳ್ಳ ಕಾರುಗಳಲ್ಲಿ ಒಂದಾಗಿde. ಇದೀಗ ಮಾರುಕಟ್ಟೆಯಲ್ಲಿ ನುವೊಸ್ಪೋರ್ಟ್ ಕಾರಿಗಿಂತಲೂ ಟಿಯುವಿ 300 ಕಾರು ಹೆಚ್ಚು ಮಾರಾಟಗೊಳ್ಳುತ್ತಿದ್ದು ಹಳೆಯ ಮಾದರಿಗಿಂತ ಹೊಸ ವಿನ್ಯಾಸ ಹಾಗು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ನುವೊಸ್ಪೋರ್ಟ್ ಕಾರು 6.2 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಪವರ್ ವಿಂಡೋಸ್, ಡ್ರೈವರ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಪ್ರಾಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‍ಬ್ಯಾಗ್ಸ್, ಎಬಿಸ್, ಇಬಿಡಿ, ಡಿಜಿಟಲ್ ಇಮ್ಮೊಬಿಲೈಜರ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಪಡೆದಿದೆ.

ನುವೊಸ್ಪೋರ್ಟ್ ಕಾರು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 100 ಬಿಹೆಚ್‍ಫಿ ಮತ್ತು 240ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದ್ದು, 5ಸ್ಪೀಡ್ ಮ್ಯಾನುವಲ್ ಮತ್ತು ಎಎಮ್‍ಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇದಲ್ಲದೆ ಸಂಸ್ಥೆಯು ಈ ಕಾರಿನಲ್ಲಿ ಸಾಧಾರಣ ಮತ್ತು ಇಕೊ ಎಂಬ ಮೋಡ್‍ಗಳನ್ನು ಅಳವಡಿಸಲಾಗಿದ್ದು, 72ಬಿಹೆಚ್‍ಪಿ ಮತ್ತು 180ಎನ್ಎಮ್ ಟಾರ್ಕ್ ಅನ್ನು ಕಡಿಮೆ ಮಾದುತ್ತದೆ. ಇಕೊ ಮೋಡ್ ಕಾರಿನ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರತೀ ಲೀಟರ್‍ಗೆ 17.45 ಕಿಲೋಮೀಟರ್ ಮೈಲೇಜ್ ನೀಡುತ್ತವೆ.

ನುವೊಸ್ಪೋರ್ಟ್ ಕಾರನ್ನು ಸ್ಥಗಿತಗೊಳಿಸುವ ನಂತರ ಮಹೀಂದ್ರಾ ಸಂಸ್ಥೆಯು ಸಂಪೂರ್ಣವಾಗಿ ಟಿಯುವಿ 300 ಕಾರಿನ ಅಭಿವೃದ್ದಿಯ ಕಡೆ ಗಮನ ಇಡಬಹುದಾಗಿದ್ದು, ಹೊಸದಾಗಿ ಈ ಕಾರಿನ ಲಸ್ ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಹೊಸ ಟಿಯುವಿ 300 ಪ್ಲಸ್ ಕಾರು ಹಿಂದಿನ ಮಾದರಿಗಿಂತ ಹೆಚ್ಚು ಎದ್ದ ಮತ್ತು ತನ್ನ ಮೂರನೆಯ ಸರಣಿಯ ಜಾಗಾವನ್ನು ವಿಶಾಲಗೊಳಿಸಿದ್ದು, ಈ ಕಾರು 2.2 ಎಲ್ ಹಾವ್ಕ್ ಎಂಜಿನ್ ಸಹಾಯದಿಂದ 120 ಬಿಹೆಚ್‍ಪಿ ಮತ್ತು 280ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸದಾಗಿ ಬಿಡುಗಡೆಗೊಳ್ಳಲಿರುವ ಮಹೀಂದ್ರಾ ಟಿಯುವಿ 300 ಪ್ಲಸ್ ಮಾರುಕಟ್ಟೆಯಲ್ಲಿ ಫೋರ್ಡ್ ಇಕೊಸ್ಪೋರ್ಟ್, ರೆನಾಲ್ಟ್ ಡಸ್ಟರ್ ಮತ್ತು ಮಾರುತಿ ಸುಜುಕಿ ವಿಟಾರ ಬ್ರೆಝಾ ಕಾರುಗಳಿಗೆ ಪೈಪೋಟಿ ನೀಡಲಿವೆ.


Click it and Unblock the Notifications








