ಅನಾವರಣಗೊಂಡ ಮಹಿಂದ್ರಾ ರೊಕ್ಸಾರ್ ಆಫ್-ರೋಡ್ ಎಸ್‍ಯುವಿ
ದೇಶಿಯ ಆಟೋಮೇಕರ್ ಮಹಿಂದ್ರಾ ಸಂಸ್ಥೆಯು ಅಮೆರಿಕಾದಲ್ಲಿ ತನ್ನ ಹೊಸ ರೊಕ್ಸಾರ್ ಆಫ್-ರೋಡ್ ಎಸ್‍ಯುವಿ ಕಾರನ್ನು ಅನಾವರಣಗೊಳಿಸಿದೆ.
ದೇಶಿಯ ಆಟೋಮೇಕರ್ ಮಹಿಂದ್ರಾ ಸಂಸ್ಥೆಯು ಅಮೆರಿಕಾದಲ್ಲಿ ತನ್ನ ಹೊಸ ರೊಕ್ಸಾರ್ ಆಫ್-ರೋಡ್ ಎಸ್‍ಯುವಿ ಕಾರನ್ನು ಅನಾವರಣಗೊಳಿಸಿದ್ದು, ಕೆಲದಿನಗಳಲ್ಲಿಯೇ ಅಮೆರಿಕಾದ ರಿಟೈಲ್ ಮಾರುಕಟ್ಟೆಯಲ್ಲಿ 15,000 ಅಮೆರಿಕನ್ ಡಾಲರ್ ಬೆಲೆಗೆ ಮಾರಾಟಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಥಾರ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಎಸ್‌ಯುವಿ ಕೊಂಚ ಬದಲಾವಣೆಗಳನ್ನು ಹೊಂದಿದ್ದು, ಡೆಟ್ರಾಯ್ಟ್ ನಗರದ ಸಮೀಪದಲ್ಲಿರುವ ಮಹಿಂದ್ರಾ ಔಬರ್ನ್ ಹಿಲ್ಸ್ ಘಟಕದಲ್ಲಿ ಉತ್ಪಾದನೆಗೊಳ್ಳುತ್ತಿದೆ. ಮೊದಲಿಗೆ ಉತ್ತರ ಅಮರಿಕ ಅಥವಾ ಯುಎಸ್ಎ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಭಾರತದಲ್ಲಿ ಇದರ ಬೆಲೆ ರೂ.10 ಲಕ್ಷ ಆಗಿರಲಿದೆ.
Recommended Video


ವೈಶಿಷ್ಟ್ಯತೆಗಳು
ಥಾರ್‌ಗಿಂತ ವಿಭಿನ್ನವಾದ ಮುಂಭಾಗದ ವಿನ್ಯಾಸವನ್ನು ಪಡೆದಿರುವ ರೊಕ್ಸಾರ್, ಕನಿಷ್ಠ ಬಾಡಿ ಪ್ಯಾನೆಲ್‍ಗಳನ್ನು ಪಡೆದಿದೆ. ಜೊತೆಗೆ ಹಾರ್ಡ್ ಟಾಪ್‍ನಲ್ಲಿ ಬಾಗಿಲುಗಳನ್ನು ಪಡೆದಿರುವುದಿಲ್ಲ. ಇನ್ನು ಮಹಿಂದ್ರಾ ರೊಕ್ಸಾನ್ ಎಸ್‍ಯುವಿ ಆಫ್-ರೋಡ್ ಕಾರನ್ನು ಅಮೆರಿಕಾದ ಮಾರುಕಟ್ಟೆಯಲ್ಲಿ ಈಗಾಗಲೇ ದೊರೆಯುತ್ತಿರುವ ಆಫ್ ರೋಡ್ ಸರಣಿ ಕಾರುಗಳನ್ನು ಗುರಿಯಾಗಿಟ್ಟುಕೊಂಡು ಅಭಿವೃದ್ದಿ ಮಾಡಲಾಗಿದೆ.

ಕಾರಿನ ಒಳಭಾಗದಲ್ಲಿ ಕನಿಷ್ಠ ಬದಲಾವಣೆಗಳನ್ನು ಮಾಡಲಾಗಿದ್ದು, ಸ್ಟೀಲ್ ಡ್ಯಾಷ್ ಬೋರ್ಡ್, ಗೌಜ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಮಧ್ಯದ ಕಂಸೋಲ್‍ಗಳು ಕಪ್ ಹೋಲ್ಡರ್, ಮುಂಭಾಗದಲ್ಲಿ ಎರಡು ಸೀಟ್ ಮತ್ತು ಪ್ರಯಾಣಿಕರಿಗೆ ಗ್ರಾಬ್ ಹ್ಯಾಂಡಲ್‍ಗಳನ್ನು ನೀಡಲಾಗಿದೆ.

ಎಂಜಿನ್ ಸಾಮರ್ಥ್ಯ
ಮಹಿಂದ್ರಾ ರೊಕ್ಸಾರ್ 2.5 ಲೀಟರ್ ನಾಲ್ಕು ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 62 ಬಿಹೆಚ್‍ಪಿ ಉತ್ಪಾದಿಸಬಲ್ಲ ಶಕ್ತಿಯನ್ನು ಪಡೆದಿದೆ. ಇದಲ್ಲದೆ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಮ್ಯಾನುವಲ್ ಫೋರ್-ವೀಲ್-ಡ್ರೈವ್ ಶಿಫ್ಟರ್ ಅನ್ನು ಪಡೆದಿದೆ.

ರೊಕ್ಸಾರ್ ಆಫ್-ರೋಡ್ ವೀಲ್ಸ್, ಹೆವಿ ಡ್ಯುಟಿ ವಿಂಚೆಸ್, ಲೈಟ್ ಬಾರ್ಸ್ ಮತ್ತು ಇನ್ನಿತರ ಉಪಕರಣಗಳನ್ನು ಪಡೆದಿದ್ದು, ಖರೀದಿದಾರರನ್ನು ಆಕರ್ಷಿಸಲು ರೊಕ್ಸರ್ ಕಸ್ಟಮೈಸ್ಡ್ ಮಾಡಲಾದ ಸೀಟ್‍ಗಳನ್ನು ಪಡೆದಿದೆ.

ಆಫ್ ರೋಡ್ ರೆೊಕ್ಸಾರ್ ಕಾರಿನ ಉತ್ಪಾದನೆಯನ್ನು ಪೂರ್ಣವಾಗಿ ಅಮೆರಿಕಾದಲ್ಲಿ ತಯಾರು ಮಾಡಲಿದ್ದು, ಕಾರಿನ ಉಪಕರಣಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಿದೆ ಎನ್ನಲಾಗಿದೆ. ಮಹಿಂದ್ರಾ ಸಂಸ್ಥೆಯ ಪವರ್‍ಸ್ಪಾರ್ಟ್ ಡೀಲರ್‍ಗಳ ಮೂಲಕ ಮಾರಾಟಗೊಳಿಸಲಿದೆಯಂತೆ.

ಮಹಿಂದ್ರಾ ರೊಕ್ಸಾರ್ ಆಫ್-ರೋಡ್ ಎಸ್‍ಯುವಿ ಕಾರು ಅಮೆರಿಕಾದ ಮಾರುಕಟ್ಟೆಗಾಗಿಯೇ ತಯಾರಿಸಲ್ಪಟ್ಟಿದ್ದು, ಥಾರ್ ಕಾರನ್ನು ಆಧರಿಸಿ ಸಿದ್ದಗೊಳಿಸಲಾಗಿದೆ. ಆದರೇ ಈ ಆಫ್ ರೋಡ್ ಕಾರು ಭಾರತದ ಮಾರುಕಟ್ಟೆಗೆ ಬರುವುದಿಲ್ಲವೆಂದು ಹೇಳಲಾಗಿದ್ದು, ಮತ್ತೊಂದು ಹೊಸ ಮಾದರಿಯಾದ ಥಾರ್ ವಂಡರ್‌ಲಸ್ಟ್ ಮಾದರಿಯನ್ನು ಬಿಡುಗಡೆಗೊಳಿಸಲಿದೆ.


Click it and Unblock the Notifications