ವಿಟಾರಾ ಬ್ರೇಝಾ ಹಿಂದಿಕ್ಕಲು ಬರಲಿದೆ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಮಹೀಂದ್ರಾ ಸಂಸ್ಥೆಯು ಸದ್ಯ ವಿವಿಧ ಮಾದರಿಯ ಪ್ರಮುಖ ಮೂರು ಹೊಸ ಕಾರು ಮಾದರಿಗಳನ್ನು ಪರಿಚಯಿಸುತ್ತಿದ್ದು, ಈ ಹಿನ್ನೆಲೆ ಹೊಸ ಕಾರು ಮಾದರಿಗಳ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

By Praveen Sannamani

ಮಹೀಂದ್ರಾ ಸಂಸ್ಥೆಯು ಬಿಡುಗಡೆ ಮಾಡುವ ಪ್ರಮುಖ ಕಾರು ಮಾದರಿಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯೊಂದು ಸಹ ಸೇರಿದ್ದು, ವಿಟಾರಾ ಬ್ರೇಝಾ ಡಿಸೈನ್ ಆಧರಿಸಿರುವುದು ಸ್ಪಾಟ್ ಟೆಸ್ಟಿಂಗ್ ವೇಳೆ ಸಾಬೀತಾಗಿದೆ. ಎಸ್201 ಕೋಡ್ ಆಧಾರದ ಮೇಲೆ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲಾಗುತ್ತಿದ್ದು, ತಮಿಳುನಾಡಿನ ಹೊಸರು ಬಳಿ ಹೊಸ ಕಾರು ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.

ವಿಟಾರಾ ಬ್ರೇಝಾ ಹಿಂದಿಕ್ಕಲು ಬರಲಿದೆ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಸದ್ಯ ಸ್ಯಾಂಗ್‌ಯಾಂಗ್‌ ಸಂಸ್ಥೆಯ ಜೊತೆಗೂಡಿ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಮಹೀಂದ್ರಾ ಸಂಸ್ಥೆಯು ಸ್ಯಾಂಗ್‌ಯಾಂಗ್‌ ಸಂಸ್ಥೆಯ ಕಂಪ್ಯಾಕ್ಟ್ ಎಸ್‌ಯುವಿ ಟಿವೊಲಿ ಮಾದರಿಯಲ್ಲೇ ಹೊಸ ಕಾರನ್ನು ಅಭಿವೃದ್ಧಿ ಮಾಡಿರುವುದು ಮೇಲ್ನೊಟದಲ್ಲೇ ಕಂಡುಬರುತ್ತದೆ.

ವಿಟಾರಾ ಬ್ರೇಝಾ ಹಿಂದಿಕ್ಕಲು ಬರಲಿದೆ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಸ್ಟಾಟ್ ಟಸ್ಟಿಂಗ್ ವೇಳೆ ಸೆರೆ ಸಿಕ್ಕಿರುವ ಚಿತ್ರಗಳ ಪ್ರಕಾರ, ಹೊಸ ಕಾರುಗಳು ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಫ್ಲಕ್ಸ್ ಅಲ್ಯುಮಿನಿಯಂ ಪ್ಯಾನೆಲ್, ಸುಧಾರಿತ ಆಡಿಯೋ ಸಿಸ್ಟಂ, ಬ್ಯೂಟೂಥ್ ಕನೆಕ್ಟಿವಿಟಿ, ಸ್ಟಿರಿಂಗ್ ಮೇಲೆ ಎಸ್201 ಕೋಡ್ ನೇಮ್ ಪ್ಲೇಟ್ ಬಳಕೆ ಮಾಡಲಾಗಿದೆ.

ವಿಟಾರಾ ಬ್ರೇಝಾ ಹಿಂದಿಕ್ಕಲು ಬರಲಿದೆ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಕಾರು ಪ್ರಯಾಣಕ್ಕೆ ಅನುಕೂಲಕರವಾಗುವ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ಮಲ್ಟಿ ಫಂಕ್ಷನಲ್ ಸೇಂಟರ್ ಡಿಸ್‌ಫ್ಲೇ, ಸ್ಯಾಂಗ್‌ಯಾಂಗ್‌ ಟಿವೊಲಿ ಮಾದರಿಯಲ್ಲೇ ಬಹುತೇಕ ಇಂಟಿರಿಯರ್ ಡಿಸೈನ್‌ಗಳನ್ನು ಹೊಸ ಮಹೀಂದ್ರಾ ಕಂಪ್ಯಾಕ್ಟ್ ಎಸ್‌ಯುವಿಯಲ್ಲೂ ಬಳಕೆ ಮಾಡಿರುವುದನ್ನು ಸೆರೆಚಿತ್ರಗಳಲ್ಲಿ ನೋಡಬಹುದಾಗಿದೆ.

ವಿಟಾರಾ ಬ್ರೇಝಾ ಹಿಂದಿಕ್ಕಲು ಬರಲಿದೆ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ

7-ಇಂಚಿನ ಟಚ್‌ಸ್ಕ್ರೀನ್ ಇನ್ಪೋ‌ಟೈನ್‌ಮೆಂಟ್ ಬಳಕೆ ಮಾಡಲಾಗಿದ್ದು, ಸ್ಮಾರ್ಟ್ ಫೋನ್ ಕನೆಕ್ಟ್ ಮಾಡಿಕೊಳ್ಳುವ ಮೂಲಕ ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ನಿಯಂತ್ರಣ ಮಾಡಬಹುದಾಗಿದೆ. ಜೊತೆಗೆ ನ್ಯಾವಿಗೇಷನ್ ಮತ್ತು ರಿವರ್ಸ್ ಕ್ಯಾಮೆರಾ ಡಿಸ್‌ಫ್ಲೇ ಸಹ ಇದರಲ್ಲಿದೆ.

ವಿಟಾರಾ ಬ್ರೇಝಾ ಹಿಂದಿಕ್ಕಲು ಬರಲಿದೆ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಇನ್ನು ಹೆಚ್ಚುವರಿಯಾಗಿ ಕಾರಿನ ಒಳಭಾಗದ ಮಧ್ಯದಲ್ಲಿ ವಿಸ್ತರಿತ ಕನ್ಸೋಲ್ ಬಳಕೆ ಮಾಡಲಾಗಿದ್ದು, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಡ್ಯುಯಲ್ ಯುಎಸ್‌ಬಿ ಫೋರ್ಟ್ಸ್, ಆಕ್ಸ್ ಇನ್‌ಫುಟ್ ಜಾಕ್ಸ್, ವರ್ಟಿಕಲ್ ಎಸಿ ವೆಂಟ್, ಮಧ್ಯದಲ್ಲಿ ಟಚ್ ಸ್ಕ್ರಿನ್ ಸಿಸ್ಟಂ ಸೇರಿಸಲಾಗಿದೆ.

ವಿಟಾರಾ ಬ್ರೇಝಾ ಹಿಂದಿಕ್ಕಲು ಬರಲಿದೆ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಹಾಗೆಯೇ ಕಾರಿನ ಹೊರ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಡಿಆರ್‌ಎಲ್ಎಸ್, ಎಲ್ಇಡಿ ಟೈಲ್ ಗೇಟ್, ORVMs,ಟರ್ನ್ ಇಂಡಿಕೇಟರ್ಸ್, ರೂಫ್ ರೈಲ್ಸ್, ರಿಯರ್ ಸ್ಪಾಯ್ಲರ್, ರಿಯರ್ ವೈಪರ್, 17-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಹೊಂದಿರಲಿದೆ.

ವಿಟಾರಾ ಬ್ರೇಝಾ ಹಿಂದಿಕ್ಕಲು ಬರಲಿದೆ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಎಂಜಿನ್ ಸಾಮರ್ಥ್ಯ

ಮಾಹಿತಿಗಳ ಪ್ರಕಾರ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು 1.5-ಲೀಟರ್ ಡಿಸೇಲ್ ಎಂಜಿನ್ ಮತ್ತು 1.2-ಲೀಟರ್ ತ್ರಿ ಸಿಲಿಂರ್ ಪೆಟ್ರೋಲ್ ಎಂಜಿನ್ ಪೆಡೆದುಕೊಳ್ಳುವ ಸಾಧ್ಯತೆಗಳಿದ್ದು, ಎರಡು ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಣೆ ಹೊಂದಿರಲಿವೆ.

ವಿಟಾರಾ ಬ್ರೇಝಾ ಹಿಂದಿಕ್ಕಲು ಬರಲಿದೆ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಒಟ್ಟಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಎಕ್ಸ್‌ಯುವಿ500ಗಿಂತ ಕೆಳ ಹಂತದ ಕಾರು ಆವೃತ್ತಿಯಾಗಿ ಅಭಿವೃದ್ಧಿ ಹೊಂದಲಿದ್ದು, ಬಿಡುಗಡೆಯ ನಂತರ ಮಾರುತಿ ಸುಜುಕಿ ವಿಟಾರಾ ಬ್ರೇಝಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣ ಪಡೆದಿದೆ. ಆದ್ರೆ ಹೊಸ ಕಾರಿನ ಬಿಡುಗಡೆ ಮಾಹಿತಿ ನಿಖರವಾಗಿ ಲಭ್ಯವಾಗಲಿದ್ದರೂ ಮುಂಬರುವ ದೀಪಾವಳಿ ವೇಳೆ ಹೊಸ ಕಾರು ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಗಳಿವೆ.

Image Courtesy: Vikatan.com

Most Read Articles

Kannada
Read more on mahindra suv
English summary
The Mahindra S201 Compact SUV Interiors Spied — To Rival The Maruti Vitara Brezza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X