ಖರೀದಿಗೆ ಲಭ್ಯವಾದ ಮಹೀಂದ್ರಾ ಥಾರ್ ವಂಡರ್‌ಲಸ್ಟ್ ಬೆಲೆ ಎಷ್ಟು ಗೊತ್ತಾ?
ಕಳೆದ ಫೆಬ್ರುವರಿಯಲ್ಲಿ ನಡೆದ 2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಆಫ್ ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹಾಕಿದ್ದ ಮಹೀಂದ್ರಾ ಥಾರ್ ವಂಡರ್‌ಲಸ್ಟ್ ಕಾರುಗಳನ್ನು ಇದೀಗ ಖರೀದಿಗೆ ಲಭ್ಯವಾಗಿವೆ.
ಕಳೆದ ಫೆಬ್ರುವರಿಯಲ್ಲಿ ನಡೆದ 2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಆಫ್ ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹಾಕಿದ್ದ ಮಹೀಂದ್ರಾ ಥಾರ್ ವಂಡರ್‌ಲಸ್ಟ್ ಕಾರುಗಳು ಇದೀಗ ಖರೀದಿಗೆ ಲಭ್ಯವಾಗಿವೆ.

ನಿಮೆಗೆಲ್ಲಾ ಗೊತ್ತಿರುವ ಹಾಗೆ ಆಪ್ ರೋಡ್ ಎಸ್‌ಯುವಿ ಕಾರುಗಳಲ್ಲಿ ಅತಿಹೆಚ್ಚು ಜನಪ್ರಿಯಗೊಂಡಿರುವ ಮಹೀಂದ್ರಾ ಥಾರ್ ಸರಣಿಯಲ್ಲಿಯೇ ಇದೀಗ ವಿನೂತನ ಮಾದರಿಯ ವಂಡರ್‌ಲಸ್ಟ್ ಎನ್ನುವ ಮತ್ತೊಂದು ಮಾದರಿಯು ಖರೀದಿಗೆ ಲಭ್ಯವಾಗುತ್ತಿದ್ದು, ಮಹೀಂದ್ರಾ ಸಂಸ್ಥೆಯು ಹೊಸ ಕಾರಿನ ಮೇಲೆ ಆಕರ್ಷಕ ದರಗಳನ್ನು ನಿಗದಿ ಮಾಡಿದೆ.

ಸಂಪೂರ್ಣವಾಗಿ ಆಫ್ ರೋಡ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಥಾರ್ ವಂಡರ್‌ಲಸ್ಟ್ ಕಾರುಗಳು ಮೂಲತಃ ಥಾರ್ ಕಾರುಗಳ ಮುಂದುವರಿದ ಮಾದರಿಯಾಗಿದ್ದು, ಚಕ್ರಗಳು ಮತ್ತುಕಾರಿನ ಮುಂಭಾಗದ ವಿನ್ಯಾಸಗಳಲ್ಲಿ ಗುರುತರ ಬದಲಾವಣೆ ಹೊಂದಿರಲಿವೆ.

ಹೊಸ ಥಾರ್‌ನಲ್ಲಿ ಗುರುತರ ಬದಲಾವಣೆಗಳಾದ ಕಸ್ಟಮೈಜ್ಡ್ ಗುಲ್‌ವಿಂಗ್ ಸ್ಟೈಲ್ ಡೋರ್‌ಗಳು, ಸೆವೆನ್ ಸ್ಲಾಟ್ ಫ್ರಂಟ್ ಗ್ರಿಲ್, ಎಲ್ಇಡಿ ಹೆಡ್‌ಲೈಟ್ಸ್, ಎಲ್‌ಇಡಿ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ಅಳವಡಿಕೆ ಹೊಂದಿರಲಿವೆ.

ಜೊತೆಗೆ ಕಸ್ಟಮ್ ಫೆಂಡರ್, ಟ್ವಿನ್ ಎಕ್ಸಾಸ್ಟ್ ಪೈಪ್ಸ್, ವಿಶೇಷ ವಿನ್ಯಾಸದ ಬ್ಯಾನೆಟ್, 33 ಇಂಚಿನ ಟೈರ್‌ಗಳು, ಎಲೆಕ್ಟ್ರಿಕ್ ಬ್ಯೂ ಮ್ಯಾಟೆ ಪೇಂಟ್ ಸ್ಕೀಮ್, ಕಾರಿನ ಮೇಲ್ಭಾಗದಲ್ಲಿ ಮಾರ್ಕರ್ ಲೈಟ್‌ಗಳು ಹೊಸ ಕಾರಿಗೆ ಹೊಸ ಲುಕ್ ನೀಡಿವೆ.

ಎಂಜಿನ್ ಸಾಮರ್ಥ್ಯ
2.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಥಾರ್ ವಂಡರ್‌ಲಸ್ಟ್ ಕಾರುಗಳು 105 ಬಿಎಚ್‌ಪಿ ಮತ್ತು 247ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, ಫೌರ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದುಕೊಂಡಿವೆ.

ಇದರೊಂದಿಗೆ ಆಪ್ ರೋಡಿಂಗ್ ಚಾಲನೆಗೆ ಸಹಕಾರಿಯಾಗಬಲ್ಲ ಎಲ್ಲಾ ಅಂಶಗಳನ್ನು ಥಾರ್ ವಂಡರ್‌ಲಸ್ಟ್‌ನಲ್ಲಿ ಜೋಡಿಸಲಾಗಿದ್ದು, ಕಾರಿನ ಹಿಂಭಾಗದಲ್ಲಿ ನೀಡಲಾಗಿರುವ ರಿರ್ ಬಂಪರ್ ಕಾರಿನ ಖದರ್ ಹೆಚ್ಚಿಸಿದೆ ಎನ್ನಬಹುದು.

ಬೆಲೆಗಳು(ಎಕ್ಸ್‌ಶೋರಂ)
ಸಾಮಾನ್ಯ ಥಾರ್ ಕಾರುಗಳಿಂತಲೂ ದುಬಾರಿಯಾಗಿರುವ ಥಾರ್ ವಂಡರ್‌ಲಸ್ಟ್ ಕಾರುಗಳು ರೂ.13ಲಕ್ಷಕ್ಕೆ ಖರೀದಿಸಬಹುದಾಗಿದ್ದು, ಹೊಸ ಕಾರಿಗಾಗಿ ಬುಕ್ಕಿಂಗ್ ಮಾಡಿದ ಕೆಲ ದಿನಗಳ ಕಾಯಬೇಕಾಗುತ್ತದೆ.

ಇದಕ್ಕೆ ಕಾರಣ, ಥಾರ್ ವಂಡರ್‌ಲಸ್ಟ್ ಖರೀದಿಸುವ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರು ಉತ್ಪಾದನೆ ಮಾಡುವ ಮಹೀಂದ್ರಾ ಸಂಸ್ಥೆಯು ತನ್ನದೇ ಆದ ಮಹೀಂದ್ರಾ ಮಾಡಿಫೀಕೆಶನ್ ಸೆಂಟರ್‌ನಲ್ಲಿ ಮಾಡಿಫೈ ಆವೃತ್ತಿಗಳನ್ನು ಅಭಿವೃದ್ಧಿಗೊಳಿಸಿ ಮಾರಾಟ ಮಾಡುತ್ತೆ.

ಇನ್ನು 2010ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶ ಮಾಡಿದ್ದ ಮಹೀಂದ್ರಾ ಥಾರ್ ಆಪ್ ರೋಡ್ ಎಸ್‌ಯುವಿ ಕಾರುಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತಲೇ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಸುಧಾರಿತ ತಂತ್ರಜ್ಞಾನಗಳ ಪ್ರೇರಣೆಯೊಂದಿಗೆ ಮತ್ತೆ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಮೊದಲ ಬಾರಿಗೆ ಬಿಡುಗಡೆಯಾದ ನಂತರ 2015ರಲ್ಲಿ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದ ಥಾರ್ ಎಸ್‌ಯುವಿಗಳು ಇದೀಗ ಮತ್ತಷ್ಟು ಹೊಸ ಸೌಲಭ್ಯಗಳನ್ನು ಹೊತ್ತು ಬರುತ್ತಿದೆ. ಬರಲಿರುವ ಬಿಎಸ್ 6 ಮತ್ತು ಸುಧಾರಿತ ತಂತ್ರಜ್ಞಾನ, ವಿಸ್ತರಿತ ಕ್ಯಾಬಿನ್ ಸ್ಪೆಸ್, ಹೊರ ಭಾಗದ ವಿನ್ಯಾಸದಲ್ಲಿ ಗುರುತರ ಬದಲಾಣೆಗಳು ಗ್ರಾಹಕರನ್ನು ಸೆಳೆಯುವ ತವಕದಲ್ಲಿವೆ.

ಥಾರ್ ಎಸ್‌ಯುವಿಗಳು ಸದ್ಯಕ್ಕೆ ಜೀಪ್ ಸಿಜೆ ಡಿಸೈನ್ ಆಧಾರದ ಅಭಿವೃದ್ಧಿಯಾಗುತ್ತಿದ್ದು, ನೆಕ್ಸ್ಟ್ ಜನರೇಷನ್ ಥಾರ್‌ಗಳನ್ನು ಇದಕ್ಕಿಂತಲೂ ಭಿನ್ನವಾಗಿರುವ ಹೊಸ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಇಡಿ ಹೆಡ್‌ಲೈಟ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್ ಸೇರಿ ಹಲವಾರು ಸೌಲಭ್ಯ ಪಡೆದುಕೊಂಡಿರಲಿದೆ.


Click it and Unblock the Notifications








