ತೈಲ ಬೆಲೆ ಏರಿಕೆ ಚಿಂತೆ ಬೇಡವೇ ಬೇಡ- ಇಲ್ಲಿದೆ ನೋಡಿ ಮಹೀಂದ್ರಾ ಎಲೆಕ್ಟ್ರಿಕ್ ಟ್ರಿಯೋ..!
ದೇಶಾದ್ಯಂತ ಹೆಚ್ಚುತ್ತಿರುವ ತೈಲ ಬೆಲೆಗಳಿಂದಾಗಿ ವಾಹನ ಸವಾರರು ಮಾತ್ರವಲ್ಲದೇ ವಾಹನ ಮಾಲೀಕರು ಕೂಡಾ ಬಸವಳಿದು ಹೋಗಿದ್ದಾರೆ. ಕಾರಣ, ಹೆಚ್ಚುತ್ತಿರುವ ವಾಹನಗಳ ನಿರ್ವಹಣಾ ವೆಚ್ಚದಿಂದಾಗಿ ಲಾಭಾಂಶಗಳು ನೆಲಕಚ್ಚಿದ್ದು, ಇದಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳು ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಲಿದೆ.

ದೇಶದಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ವಾಹನಗಳನ್ನು ಕಡಿಮೆಗೊಳಿಸಿ ಪರ್ಯಾಯ ಇಂಧನ ಬಳಕೆಯನ್ನು ಉತ್ತೇಜಿಸುವ ಸಂಬಂಧ ವಾಹನ ಉತ್ಪಾದನಾ ಸಂಸ್ಥೆಗಳು ಮಹತ್ವದ ಹೆಜ್ಜೆಯಿಸಿದ್ದು, ಮಹೀಂದ್ರಾ ಎಲೆಕ್ಟ್ರಿಕ್ ವಿಭಾಗವು ಸಹ ನಗರದಲ್ಲಿ ಹೆಚ್ಚುತ್ತಿರುವ ಇಂಧನ ಬಳಕೆಗೆ ಕಡಿವಾಣ ಹಾಕಲು ವಿನೂತನ ಮಾದರಿಯ ಟ್ರಿಯೊ ಎನ್ನುವ ಮೂರು ಚಕ್ರದ ವಾಹನಗಳನ್ನು ಹೊರ ತರಲು ಸಜ್ಜುಗೊಳ್ಳುತ್ತಿದೆ.

ಮಹೀಂದ್ರಾ ಸಂಸ್ಥೆಯು ಹೊಸ ಟ್ರಿಯೊ ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಕ್ಕೂ ಮುನ್ನ ದೆಹಲಿಯಲ್ಲಿ ನಡೆದಿರುವ ಗ್ಲೋಬಲ್ ಮೊಬಿಲಿಟಿ ಸಮಾವೇಶದಲ್ಲಿ ಪ್ರದರ್ಶನ ಮಾಡಿದ್ದು, ವಿಶೇಷ ವಿನ್ಯಾಸ ಮತ್ತು ಅತ್ಯುತ್ತಮ ಮೈಲೇಜ್ ಸಾಮರ್ಥ್ಯ ಹೊಂದಿರುವ ಹೊಸ ಎಲೆಕ್ಟ್ರಿಕ್ ವಾಹನವು ಇತರೆ ವಾಹನ ಉತ್ಪಾದಕರ ಗಮನ ಸೆಳೆಯಿತು.

ಸಾಮಾನ್ಯ ಆಟೋ ರಿಕ್ಷಾಗಳಂತೆಯೇ ವಿನ್ಯಾಸ ಹೊಂದಿರುವ ಮಹೀಂದ್ರಾ ಹೊಸ ಮೂರು ಚಕ್ರದ ಎಲೆಕ್ಟಿಕ್ ವಾಹನವು ವಿಶ್ವದರ್ಜೆ ಲಿಥೀಯಂ ಅಯಾನ್ ಬ್ಯಾಟರಿ ಪ್ರೇರಣೆ ಹೊಂದಿದ್ದು, ಟ್ರಿಯೊ ಮತ್ತು ಟ್ರಿಯೊ ಯಾರಿ ಎನ್ನುವ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಟ್ರಿಯೊ ಮತ್ತು ಟ್ರಿಯೊ ಯಾರಿ ವೆರಿಯೆಂಟ್‌ಗಳು ಕ್ರಮವಾಗಿ 3 ಆಸನ, 4 ಆಸನದ ಸೌಲಭ್ಯ ಪಡೆದುಕೊಂಡಿದ್ದು, ಸಾಮಾನ್ಯ ಆಟೋ ರಿಕ್ಷಾಗಳ ನಿರ್ವಹಣೆಗಾಗಿ ಮಾಡಲಾಗುವ ಖರ್ಚುಗಳು ಟ್ರಿಯೊ ವಾಹನಗಳಲ್ಲಿ ಶೇ.50ರಷ್ಟು ಕಡಿತಗೊಳ್ಳಲಿವೆ ಎನ್ನಬಹುದು. ಈ ಮೂಲಕ ಇಂಧನಗಳ ಖರ್ಚು ತಗ್ಗುವುದಲ್ಲದೇ ಲಾಭಾಂಶ ಕೂಡಾ ಹೆಚ್ಚಲಿದೆ.
MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಇದಲ್ಲದೇ ತಂತ್ರಜ್ಞಾನ ಬಳಕೆಯೊಂದಿಗೆ ಸಮಯದ ಅಭಾವವನ್ನು ಕಡಿತಗೊಳಿಸಲು ಶ್ರಮಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಟೆಲಿಮ್ಯಾಟ್ರಿಕ್ಸ್ ಸೌಲಭ್ಯವನ್ನು ಬಳಕೆ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಟ್ರಿಯೊ ವಾಹನಗಳನ್ನು ಸಾಫ್ಟ್ ಟಾಪ್ ಮತ್ತು ಹಾರ್ಡ್ ಟಾಪ್ ವರ್ಷನ್‌ಗಳಲ್ಲಿ ಬಿಡುಗಡೆ ಮಾಡಲಿದೆ.

ಇದರೊಂದಿಗೆ ಸುರಕ್ಷತೆಗೆ ಮತ್ತು ಮೈಲೇಜ್‌ಗೆ ಹೆಚ್ಚಿನ ಒತ್ತು ನೀಡಿರುವ ಮಹೀಂದ್ರಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹೊಸ ಬದಲಾವಣೆಗೆ ಕಾರಣವಾಗಲಿದ್ದು, ಮಾಲಿನ್ಯ ತಡೆ, ತೈಲ ಬಳಕೆಗೆ ಕಡಿವಾಣ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿಗೆ ಹೊಸ ಪರಿಹಾರ ಮಾರ್ಗವಾಗಲಿದೆ.

ಈ ಕುರಿತು ಮಾತನಾಡಿರುವ ಮಹೀಂದ್ರಾ ಎಂಡಿ ಪವನ್ ಗೋಯಾಂಕ್ ಅವರು, ಮುಂಬರುವ ದಿನಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಹೊಸ ಬದಲಾವಣೆಯತ್ತ ತೆಗೆದುಕೊಂಡು ಹೋಗುವ ಅವಶ್ಯಕತೆಯಿದ್ದು, ಅದು ತಳಮಟ್ಟದಿಂದಲೇ ಬದಲಾವಣೆಯಾಗಬೇಕಿರುವುದರಿಂದ ಮಹೀಂದ್ರಾ ಹೊಸ ಎಲೆಕ್ಟ್ರಿಕ್ ವಾಹನಗಳು ಭಾರೀ ಸಂಚಲನ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ಜೊತೆಗೆ ಇದೇ ಸಮಾವೇಶದಲ್ಲಿ ಭಾಗಿಯಾಗಿದ್ದ ಮಹೀಂದ್ರಾ ಎಲೆಕ್ಟ್ರಿಕ್ ವಾಹನಗಳ ವಿಭಾಗದ ಮುಖ್ಯಸ್ಥರಾಗಿರುವ ಮಹೇಶ್ ಬಾಬು ಕೂಡಾ ಹೊಸ ವಾಹನಗಳು ಸಾರಿಗೆ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿವೆ ಎನ್ನುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸಾರಿಗೆ ವಿಭಾಗದಲ್ಲಿ ಸದ್ದು ಮಾಡಲಿರುವ ಟ್ರಿಯೊ ವಾಹನಗಳು ಗ್ರಾಹಕರು ಮತ್ತು ಮಾಲೀಕರ ಪರವಾಗಲಿವೆ ಎಂದಿದ್ದಾರೆ.
MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಈ ಮೂಲಕ ಹೆಚ್ಚುತ್ತಿರುವ ಸಾರಿಗೆ ವೆಚ್ಚಗಳನ್ನು ತಗ್ಗಿಸಲಿರುವ ಹೊಸ ಎಲೆಕ್ಟ್ರಿಕ್ ವಾಹನಗಳು ಹೊಸ ಸುರಕ್ಷತೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿದ್ದು, 2019ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಮೂರು ಚಕ್ರದ ವಾಹನಗಳು ಲೈಫ್ ಟೈಮ್ ವಾರಂಟಿಯೊಂದಿಗೆ ಮಾರಾಟಗೊಳ್ಳುವ ಮಾಹಿತಿ ಲಭ್ಯವಾಗಿದೆ.
More from DriveSpark
ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಚಿಂತೆ ಯಾಕೆ? ಇಲ್ಲಿದೆ ನೋಡಿ ಒಂದು ಬಾರಿ ಫುಲ್ ಚಾರ್ಜ್ ಮಾಡಿದ್ದಲ್ಲಿ ಬರೋಬ್ಬರಿ 350ಕಿ.ಮಿ ಮೈಲೇಜ್ ನೀಡಬಲ್ಲ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು..!


Click it and Unblock the Notifications








