ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಸ್ಪೆಷಲ್ ಏನು?

ಹತ್ತು ಹಲವು ಹೊಸ ವೈಶಿಷ್ಟ್ಯತೆಗಳನ್ನು ಹೊತ್ತುಬಂದಿರುವ ಟಿಯುವಿ300 ಪ್ಲಸ್ ಬಗೆಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಮಹತ್ವದ ತಾಂತ್ರಿಕ ಅಂಶಗಳ ಬಗೆಗೆ ಇಲ್ಲಿ ಚರ್ಚಿಸಲಾಗಿದೆ.

By Praveen Sannamani

ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದ ಮಹೀಂದ್ರಾ ವಿನೂತನ ಟಿಯುವಿ300 ಪ್ಲಸ್ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹತ್ತು ಹಲವು ಹೊಸ ವೈಶಿಷ್ಟ್ಯತೆಗಳನ್ನು ಹೊತ್ತುಬಂದಿರುವ ಈ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಮಹತ್ವದ ತಾಂತ್ರಿಕ ಅಂಶಗಳ ಬಗೆಗೆ ಇಲ್ಲಿ ಚರ್ಚಿಸಲಾಗಿದೆ.

ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಸ್ಪೆಷಲ್ ಏನು?

ಎಸ್‌ಯುವಿ ಕಾರು ವಿಭಾಗದಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಟಿಯುವಿ300 ಪ್ಲಸ್ ಕಾರುಗಳು ಹಲವು ಹೊಸತನಗಳೊಂದಿಗೆ ಬಿಡುಗಡೆಗೊಳಿಸಿದ್ದು, ಕಾರಿನ ಬೆಲೆ ಹಾಗೂ ತಾಂತ್ರಿಕ ಅಂಶಗಳು ಎಸ್‌ಯುವಿ ಪ್ರಿಯರ ಆಕರ್ಷಣೆ ಕಾರಣವಾಗಿವೆ. ಸಾಮಾನ್ಯ ಟಿಯುವಿ300 ಕಾರಿಗಿಂತ ಟಿಯುವಿ300 ಪ್ಲಸ್ ಕಾರುಗಳು ಸಾಕಷ್ಟು ವಿಭಿನ್ನತೆಯನ್ನು ಪಡೆದಿದ್ದು, ವ್ಯಯಕ್ತಿಕ ಹಾಗೂ ವಾಣಿಜ್ಯ ಬಳಕೆಗೂ ಇದು ಅತ್ಯುತ್ತಮ ಮಾದರಿಯಾಗಿದೆ

ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಸ್ಪೆಷಲ್ ಏನು?

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಟಿಯುವಿ300 ಮಾದರಿಗಿಂತ ಪ್ಲಸ್ ಆವೃತ್ತಿಯು ಅತಿ ಹೆಚ್ಚು ಆಕರ್ಷಣೆ ಪಡೆದುಕೊಂಡಿದ್ದು, ಕ್ಯಾಬಿನ್ ಭಾಗ ಮತ್ತು ಕಾರಿನ ಎಡ್ಜ್‌ಗಳಲ್ಲಿ ವಿಶೇಷ ವಿನ್ಯಾಸವನ್ನು ಕೈಗೊಂಡಿರುವುದು ಹೊಸ ಕಾರಿನ ಹೊರ ನೋಟಕ್ಕೆ ಮೆರಗು ತಂದಿದೆ.

ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಸ್ಪೆಷಲ್ ಏನು?

ಟಿಯುವಿ300 v/s ಟಿಯುವಿ300 ಪ್ಲಸ್

ಸ್ಟೈಲಿಷ್, ಕಂಫರ್ಟ್, ಯುಟಿಲಿಟಿ ಮತ್ತು ಎಂಟೈನ್‌ಮೆಂಟ್ ವಿಭಾಗದಲ್ಲಿ ಸಾಮಾನ್ಯ ಟಿಯುವಿ300 ಕಾರಿಗಿಂತ ಟಿಯುವಿ300 ಪ್ಲಸ್ ಕಾರುಗಳು ಸಾಕಷ್ಟು ಭಿನ್ನತೆಯನ್ನು ಪಡೆದಿದ್ದು, ಹೊಸ ಕಾರಿನಲ್ಲಿ ಒದಗಿಸಲಾಗಿರುವ ಡಿಆರ್‌ಎಲ್ಎಸ್, ಫಾಗ್ ಲ್ಯಾಂಪ್‌ ಮತ್ತು ಒಆರ್‌ವಿಎಂಎಸ್‌ಗಳ ಮೇಲಿನ ಕ್ರೋಮ್ ಗಾರ್ನಿಷ್, ಟರ್ನ್ ಇಂಡಿಕೇಟರ್, ಕ್ರೋಮ್ ಹ್ಯಾಂಡಲ್ ಡೋರ್, ಸ್ಟೈನ್‌ಲೆನ್ ಸ್ಟೀಲ್ ಡೋರ್ ಗಾರ್ನಿಷ್ ಬಳಕೆ ಮಾಡಲಾಗಿದೆ.

ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಸ್ಪೆಷಲ್ ಏನು?

ಇನ್ನು ಕಾರಿನ ಪ್ರಿಮಿಯಂ ಲುಕ್ ಹೆಚ್ಚಿಸುವ ಉದ್ದೇಶದಿಂದ ಸ್ಟೈನ್‌ಲೆಸ್ ಲೇಪಿತ 16-ಇಂಚಿನ ಅಲಾಯ್ ವೀಲ್ಹ್‌ಗಳು, ಸ್ಪೋಟಿ ಪೆಡಲ್, ಲೊಗೊ ಪ್ರೋಜೆಕ್ಟರ್ ಬಳಕೆ ಮಾಡಲಾಗಿದೆ. ಇದರ ಜೊತೆಗೆ ಕಾರಿನ ಮೇಲೆ ಯಾವುದೇ ರೀತಿಯ ಗೀರುಗಳು(scratches) ಬೀಳದಂತೆ ತಡೆಯಲು ವಿಶೇಷ ಕೋಟಿಂಗ್ ಬಳಕೆ ಮಾಡಿರುವುದು ಈ ಕಾರಿನ ಮತ್ತೊಂದು ವಿಶೇಷ.

ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಸ್ಪೆಷಲ್ ಏನು?

ಇನ್ನು ಹೆಚ್ಚುವರಿಯಾಗಿ ಟಿಯುವಿ300 ಪ್ಲಸ್ ಮಾದರಿಯಲ್ಲಿ ಆಟೋಮೆಟಿಕ್ ಕ್ಲೈಮೆಟ್ ಕಂಟ್ರೊಲರ್, ಹಿಂಭಾಗದ ಕ್ಯಾಬಿನ್‌ನಲ್ಲೂ ಎಸಿ ವ್ಯವಸ್ಥೆ ಸೇರಿದಂತೆ ಸುಧಾರಿತ ಸುರಕ್ಷಾ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದ್ದು, ಚಾಲಕ ಸೇರಿ ಒಟ್ಟು 9 ಜನ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ.

ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಸ್ಪೆಷಲ್ ಏನು?

ಮಹೀಂದ್ರಾ ಬಿಡುಗಡೆ ಮಾಡಿರುವ ಟಿಯುವಿ300 ಪ್ಲಸ್ ಕಾರುಗಳು ಒಟ್ಟು 3 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಬಜೆಟ್‌ ಮತ್ತು ಅಗತ್ಯಕ್ಕೆ ಅನುಗುಣವಾಗಿ ಪಿ4, ಪಿ6 ಮತ್ತು ಪಿ8 ಎನ್ನುವ ಮೂರು ವೆರಿಯೆಂಟ್ ಆಯ್ಕೆಯಿದೆ.

ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಸ್ಪೆಷಲ್ ಏನು?

ಕಾರಿನ ಬೆಲೆಗಳು (ದೆಹಲಿ ಎಕ್ಸ್‌ಶೋರಂ ಪ್ರಕಾರ)

ಟಿಯುವಿ300 ಪ್ಲಸ್ ಪಿ4 ಬೆಲೆಯನ್ನು ರೂ.9.47 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಪಿ6 ವೆರಿಯೆಂಟ್ ಬೆಲೆಯನ್ನು ರೂ.9.83 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಪಿ8 ವೆರಿಯೆಂಟ್‌ಗಳನ್ನು ರೂ.10.86 ಲಕ್ಷಕ್ಕೆ ಬಿಡುಗಡೆಯಾಗಿವೆ.

ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಸ್ಪೆಷಲ್ ಏನು?

ಎಂಜಿನ್ ಸಾಮರ್ಥ್ಯ

ಈ ಹಿಂದಿನ ಮಾದರಿಯಂತೆ ಟಿಯುವಿ300 ಪ್ಲಸ್ ಮಾದರಿಯು ಮೈಕ್ರೋ ಹೈಬ್ರಿಡ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್‌ ಹೊಂದಿದ್ದು, ಇಕೋ ಮೂಡ್ ಚಾಲನಾ ಸೌಲಭ್ಯದೊಂದಿಗೆ ಗರಿಷ್ಠ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಪಡೆದುಕೊಳ್ಳಬಹುದಾಗಿದೆ.

ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಸ್ಪೆಷಲ್ ಏನು?

ಹೊಸ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯವನ್ನು ಆಫರ್ ಮಾಡಲಾಗುತ್ತಿದ್ದು, ಟಾಪ್ ಎಂಡ್ ಮಾದರಿಯಾದ ಪಿ8 ವೆರಿಯೆಂಟ್‌ಗಳಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹೆಡ್ ಅಪ್ ಡಿಸ್‌ಫೈ, ಕಾರ್ ಇನ್‌ವರ್ಟರ್, ಯುಎಸ್‌ಬಿ ಚಾರ್ಜರ್ ಮತ್ತು ರಿಯರ್ ಸೀಟ್ ಎಂಟೈನ್‌ಮೆಂಟ್ ಕಿಟ್ ಒದಗಿಸಲಾಗಿದೆ.

ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಸ್ಪೆಷಲ್ ಏನು?

ಇದರಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರಮುಖ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿರುವ ಟಿಯುವಿ300 ಪ್ಲಸ್ ಕಾರು ಆವೃತ್ತಿಗಳು ಲುಕ್, ಸೆಫ್ಟಿ, ಕಂಫರ್ಟ್ ವಿಚಾರವಾಗಿ ಸದ್ದು ಮಾಡಲಿದ್ದು, ವ್ಯಯಕ್ತಿಕ ಮತ್ತು ವಾಣಿಜ್ಯ ಬಳಕೆಯ ದೃಷ್ಠಿಯಿಂದ ಇದೊಂದು ಉತ್ತಮ ಎಸ್‌ಯುವಿ ಮಾದರಿ ಎನ್ನಬಹುದು.

Most Read Articles

Kannada
Read more on mahindra suv
English summary
Mahindra TUV300 Plus Accessories Revealed.
Story first published: Tuesday, June 26, 2018, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X