ಬಿಡುಗಡೆಗೂ ಮುನ್ನವೇ 9 ಸೀಟರ್ ಟಿಯುವಿ300 ಪ್ಲಸ್ ಕಾರುಗಳ ಬೆಲೆ ಮಾಹಿತಿ ಬಹಿರಂಗ

By Praveen Sannamani

ಎಸ್‌ಯುವಿ ಕಾರು ವಿಭಾಗದಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಟಿಯುವಿ300 ಪ್ಲಸ್ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ಮಧ್ಯೆ ಹೊಸ ಕಾರಿನ ಬೆಲೆ ಹಾಗೂ ತಾಂತ್ರಿಕ ಅಂಶಗಳ ಬಗೆಗೆ ಅಧಿಕೃತ ಮಾಹಿತಿಯನ್ನು ಬಹಿರಂಗಗೊಳಿಸಿದೆ.

ಬಿಡುಗಡೆಗೂ ಮುನ್ನವೇ 9 ಸೀಟರ್ ಟಿಯುವಿ300 ಪ್ಲಸ್ ಕಾರುಗಳ ಬೆಲೆ ಮಾಹಿತಿ ಬಹಿರಂಗ

ಎಸ್‍‌ಯುವಿ ಪ್ರಿಯರಿಗಾಗಿ ಐದು ಹೊಸ ಕಾರು ಮಾದರಿಗಳನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿರುವ ಮಹೀಂದ್ರಾ ಸಂಸ್ಥೆಯು ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಬಿಡುಗಡೆಯ ನಂತರ ಟಿಯುವಿ300 ಸರಣಿಯ ಮುಂದುವರಿದ ಭಾಗವನ್ನು ಬಿಡುಗಡೆ ಮಾಡುತ್ತಿದ್ದು, ಮುಂದಿನ ತಿಂಗಳು ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ.

ಬಿಡುಗಡೆಗೂ ಮುನ್ನವೇ 9 ಸೀಟರ್ ಟಿಯುವಿ300 ಪ್ಲಸ್ ಕಾರುಗಳ ಬೆಲೆ ಮಾಹಿತಿ ಬಹಿರಂಗ

ಹೀಗಾಗಿ ಹೊಸ ಕಾರುಗಳನ್ನು ಅಧಿಕೃತ ಡೀಲರ್ಸ್ ಯಾರ್ಡ್‌ಗಳಲ್ಲಿ ಸ್ಟಾಕ್ ಕೂಡಾ ಮಾಡಲಾಗುತ್ತಿದ್ದು, ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಹೊಸ ಕಾರುಗಳ ವಿನ್ಯಾಸದಲ್ಲಿ ಈ ಹಿಂದಿನ ಟಿಯುವಿ300 ವೈಶಿಷ್ಟ್ಯತೆಗಳನ್ನೇ ಮುಂದುವರಿಸಲಾಗಿದೆ.

ಬಿಡುಗಡೆಗೂ ಮುನ್ನವೇ 9 ಸೀಟರ್ ಟಿಯುವಿ300 ಪ್ಲಸ್ ಕಾರುಗಳ ಬೆಲೆ ಮಾಹಿತಿ ಬಹಿರಂಗ

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಟಿಯುವಿ300 ಮಾದರಿಗಿಂತ ಪ್ಲಸ್ ಆವೃತ್ತಿಯು ಅತಿ ಹೆಚ್ಚು ಆಕರ್ಷಣೆ ಪಡೆದುಕೊಂಡಿದ್ದು, ಕ್ಯಾಬಿನ್ ಭಾಗ ಮತ್ತು ಕಾರಿನ ಎಡ್ಜ್‌ಗಳಲ್ಲಿ ವಿಶೇಷ ವಿನ್ಯಾಸವನ್ನು ಕೈಗೊಂಡಿರುವುದು ಹೊಸ ಕಾರಿನ ಹೊರ ನೋಟಕ್ಕೆ ಮೆರಗು ತಂದಿದೆ.

ಬಿಡುಗಡೆಗೂ ಮುನ್ನವೇ 9 ಸೀಟರ್ ಟಿಯುವಿ300 ಪ್ಲಸ್ ಕಾರುಗಳ ಬೆಲೆ ಮಾಹಿತಿ ಬಹಿರಂಗ

ಇನ್ನು ಹೆಚ್ಚುವರಿಯಾಗಿ ಟಿಯುವಿ300 ಪ್ಲಸ್ ಮಾದರಿಯಲ್ಲಿ ಆಟೋಮೆಟಿಕ್ ಕ್ಲೈಮೆಟ್ ಕಂಟ್ರೊಲರ್, ಹಿಂಭಾಗದ ಕ್ಯಾಬಿನ್‌ನಲ್ಲೂ ಎಸಿ ವ್ಯವಸ್ಥೆ ಸೇರಿದಂತೆ ಸುಧಾರಿತ ಸುರಕ್ಷಾ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದ್ದು, ಚಾಲಕ ಸೇರಿ ಒಟ್ಟು 9 ಜನ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ.

ಬಿಡುಗಡೆಗೂ ಮುನ್ನವೇ 9 ಸೀಟರ್ ಟಿಯುವಿ300 ಪ್ಲಸ್ ಕಾರುಗಳ ಬೆಲೆ ಮಾಹಿತಿ ಬಹಿರಂಗ

ಎಂಜಿನ್ ಸಾಮರ್ಥ್ಯ

ಈ ಹಿಂದಿನ ಮಾದರಿಯಂತೆ ಟಿಯುವಿ300 ಪ್ಲಸ್ ಮಾದರಿಯು ಮೈಕ್ರೋ ಹೈಬ್ರಿಡ್ 2.2-ಲೀಟರ್ ಡೀಸೆಲ್ ಎಂಜಿನ್‌ ಹೊಂದಿದ್ದು, ಇಕೋ ಮೂಡ್ ಚಾಲನಾ ಸೌಲಭ್ಯದೊಂದಿಗೆ ಅಧಿಕ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಪಡೆದುಕೊಳ್ಳಬಹುದಾಗಿದೆ.

ಬಿಡುಗಡೆಗೂ ಮುನ್ನವೇ 9 ಸೀಟರ್ ಟಿಯುವಿ300 ಪ್ಲಸ್ ಕಾರುಗಳ ಬೆಲೆ ಮಾಹಿತಿ ಬಹಿರಂಗ

ಟಿಯುವಿ300 ಪ್ಲಸ್ ವೆರಿಯೆಂಟ್‌ಗಳು

ಪಿ4, ಪಿ6 ಮತ್ತು ಪಿ8 ಎನ್ನುವ ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಲಭ್ಯವಾಗಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಬಿಡುಗಡೆಗೂ ಮುನ್ನವೇ 9 ಸೀಟರ್ ಟಿಯುವಿ300 ಪ್ಲಸ್ ಕಾರುಗಳ ಬೆಲೆ ಮಾಹಿತಿ ಬಹಿರಂಗ

ಕಾರಿನ ಬೆಲೆಗಳು (ದೆಹಲಿ ಎಕ್ಸ್‌ಶೋರಂ ಪ್ರಕಾರ)

ಟಿಯುವಿ300 ಪ್ಲಸ್ ಪಿ4 ಬೆಲೆಯನ್ನು ರೂ.9.47 ಲಕ್ಷಕ್ಕೆ ನಿಗದಿಪಡಿಸಲಾಗಿದ್ದರೆ ಪಿ6 ವೆರಿಯೆಂಟ್ ಬೆಲೆಯನ್ನು ರೂ.9.83 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಪಿ8 ವೆರಿಯೆಂಟ್‌ಗಳನ್ನು ರೂ.10.86 ಲಕ್ಷಕ್ಕೆ ಬಿಡುಗಡೆಯಾಗಲಿವೆ.

ಬಿಡುಗಡೆಗೂ ಮುನ್ನವೇ 9 ಸೀಟರ್ ಟಿಯುವಿ300 ಪ್ಲಸ್ ಕಾರುಗಳ ಬೆಲೆ ಮಾಹಿತಿ ಬಹಿರಂಗ

ಇದರಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರಮುಖ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿರುವ ಟಿಯುವಿ300 ಪ್ಲಸ್ ಆವೃತ್ತಿಯು 2018ರ 2ನೇ ತ್ರೈಮಾಸಿಕ ಅಂತ್ಯಕ್ಕೆ ಖರೀದಿಗೆ ಲಭ್ಯವಾಗುವ ನೀರಿಕ್ಷೆಯಿದೆ.

ಬಿಡುಗಡೆಗೂ ಮುನ್ನವೇ 9 ಸೀಟರ್ ಟಿಯುವಿ300 ಪ್ಲಸ್ ಕಾರುಗಳ ಬೆಲೆ ಮಾಹಿತಿ ಬಹಿರಂಗ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಬಿಡುಗಡೆ ನಂತರ ಹೊಸ ಎಂಪಿವಿ ಒಂದನ್ನು ಬಿಡುಗಡೆ ಮಾಡುವ ತವಕದಲ್ಲಿರುವ ಮಹೀಂದ್ರಾ ಸಂಸ್ಥೆಯು ಟಿಯುವಿ300 ಪ್ಲಸ್ ಪರಿಚಯಿಸುತ್ತಿದ್ದು, ಹೊಸ ಕಾರಿನ ಬಿಡುಗಡೆಯ ದಿನದಂದು ಮತ್ತಷ್ಟು ಮಾಹಿತಿಯು ನಿಮ್ಮ ನೆಚ್ಚಿನ ಡ್ರೈವ್ ಸ್ಪಾರ್ಕ್‌ ಜಾಲತಾಣದಲ್ಲಿ ಲಭ್ಯವಿರಲಿದೆ.

Article Published On: Wednesday, June 20, 2018, 18:55 [IST]
English summary
Mahindra TUV300 Plus gets three variants.
Read more on mahindra suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+