ಹೊಸ ಮಹೀಂದ್ರಾ ಎಮ್‍‍ಪಿವಿ ಕಾರಿನ ತಾಂತ್ರಿಕ ಅಂಶಗಳು ಸೋರಿಕೆ..

ದೇಶಿಯ ವಾಹನ ತಯಾಕರ ಸಂಸ್ಥೆಯಾದ ಮಹೀಂದ್ರಾ ತಮ್ಮ ಯು321 ಎಂಪಿವಿ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಈಗಾಗಲೆ ಹಲವಾರು ಬಾರಿ ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್‍‍ನ ವೇಳೆ ಕಾಣಿಸಿಕೊಂಡಿದೆ.

By Rahul Ts

ದೇಶಿಯ ವಾಹನ ತಯಾಕರ ಸಂಸ್ಥೆಯಾದ ಮಹೀಂದ್ರಾ ತಮ್ಮ ಯು321 ಎಂಪಿವಿ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಈಗಾಗಲೆ ಹಲವಾರು ಬಾರಿ ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್‍‍ನ ವೇಳೆ ಕಾಣಿಸಿಕೊಂಡಿದೆ. ಆದರೆ ಇದೇ ಮೊದಲ ಬಾರಿಗೆ ಕಾರಿನ ಒಳಭಾಗದ ಚಿತ್ರಗಳು ಸೋರಿಕೆಯಾಗಿವೆ.

ಹೊಸ ಮಹೀಂದ್ರಾ ಎಮ್‍‍ಪಿವಿ ಕಾರಿನ ತಾಂತ್ರಿಕ ಅಂಶಗಳು ಸೋರಿಕೆ..

ಮಹೀಂದ್ರಾ ಯು321 ಎಂಪಿವಿ ಕಾರಿನಲ್ಲಿ ಏಳು ಆಸನಗಳಿದ್ದು, ಮೂರು ಸಾಲಿನ ಸೀಟ್ ಅನ್ನು ಪದೆದುಕೊಂಡಿವೆ. ಚಿತ್ರಗಳಲ್ಲಿ ಗಮನಿಸುವುದಾದರೆ ಕಾರಿನ ಎರಡನೆಯ ಸಾಲಿನ ಸೀಟ್ ಮತ್ತು ವಿಶಾಲವಾದ ಸ್ಥಳವನ್ನು ಪಡೆದಿರಲಿದ್ದು, ಜೊತೆಗೆ ಹಲಲಾರು ಫೀಚರ್ಸ್‍‍ಗಳನ್ನು ಪಡೆದುಕೊಂಡಿರಲಿವೆ ಎನ್ನಬಹುದು.

ಹೊಸ ಮಹೀಂದ್ರಾ ಎಮ್‍‍ಪಿವಿ ಕಾರಿನ ತಾಂತ್ರಿಕ ಅಂಶಗಳು ಸೋರಿಕೆ..

ಇನ್ನು ಈ ಚಿತ್ರದಲ್ಲಿ ಕಾರಿನ ಮೂರನೆಯ ಸಾಲಿನ ಸೀಟ್‍‍‍ಗಳನ್ನು ನೋಡಬಹುದಾಗಿದ್ದು, ಇಬ್ಬರು ಹದಿಹರೆಯರು ಕೂರಬಹುದಾದ ಸ್ಥಾನವನ್ನು ಪಡೆದುಕೊಂಡಿರಲಿದೆ. ಇದಲ್ಲದೆ ಮೂರನೆಯ ಸಾಲಿನ ಸೀಟ್‍‍ಗಳಿಗೆ ಆರ್ಮ್‍‍ರೆಸ್ಟ್ ಇರುವುದಿಲ್ಲ. ಇದಲಾದೆ ಕಾರಿನ ಮಧ್ಯದ ಸಾಲಿನಲ್ಲಿ 60:40 ಸ್ಪ್ಲಿಟ್ ಸೀಟ್ ಅನ್ನು ಪಡೆದುಕೊಂಡಿರಲಿದೆ.

ಹೊಸ ಮಹೀಂದ್ರಾ ಎಮ್‍‍ಪಿವಿ ಕಾರಿನ ತಾಂತ್ರಿಕ ಅಂಶಗಳು ಸೋರಿಕೆ..

ಕಾರಿನ ಒಳಭಾಗದಲ್ಲಿ ಆಂಡ್ರಾಯ್ಡ್ ಆಟೋ ಆಪ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಅನಲಾಗ್ ಡಿಗಿಟಲ್ ಇಂಸ್ಟ್ರೂಮೆಂತ್ ಕ್ಲಸ್ಟರ್ ಅನ್ನು ಪಡೆದಿರಲಿವೆ.

ಹೊಸ ಮಹೀಂದ್ರಾ ಎಮ್‍‍ಪಿವಿ ಕಾರಿನ ತಾಂತ್ರಿಕ ಅಂಶಗಳು ಸೋರಿಕೆ..

ಮಹೀಂದ್ರಾ ಎಂಪಿವಿ ಕಾರುಗಳು 6 ಸ್ಪ್ಲಿಟ್ ಸ್ಪೋಕ್ ಎರಡು ಟೋನ್‍‍ಗಳುಳ್ಳ ಅಲಾಯ್ ಚಕ್ರಗಳು, ಕಪ್ಪು ಹೆಡ್‍‍ಲ್ಯಾಂಪ್ ಬೆಜೆಲ್ಸ್ ಮತ್ತು ಮುಂಭಾಗದ ಗ್ರಿಲ್‍‍ನಲ್ಲಿ ಮಹಿಂದ್ರಾ ಸಂಸ್ಥೆಯ ಸಿಗ್ನೇಚರ್‍‍ನಿಂದ ಸಜ್ಜುಗೊಂಡಿದೆ.

ಹೊಸ ಮಹೀಂದ್ರಾ ಎಮ್‍‍ಪಿವಿ ಕಾರಿನ ತಾಂತ್ರಿಕ ಅಂಶಗಳು ಸೋರಿಕೆ..

ಮಹಿಂದ್ರಾ ಯು321 ಎಂಪಿವಿ ಕಾರು ಏಳು ಲಂಬಾಕಾರದ ಗ್ರಿಲ್, ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಹೊಸ ಬಂಪರ್, ಫಾಗ್ ಲ್ಯಾಂಪ್ಸ್, ಬೂಮರಾಂಗ್ ಆಕಾರದ LED ಡೇಟೈಮ್ ರನ್ನಿಂಗ್ ಲ್ಯಾಂಪ್ಸ್ ವೈಶಿಷ್ಟ್ಯತೆಗಳನ್ನು ಪಡೆದಿದೆ.

ಹೊಸ ಮಹೀಂದ್ರಾ ಎಮ್‍‍ಪಿವಿ ಕಾರಿನ ತಾಂತ್ರಿಕ ಅಂಶಗಳು ಸೋರಿಕೆ..

ಪರಿಕ್ಷಾ ವಾಹನದಲ್ಲಿ ಕಾಣಿಸುವಂತೆ ಯು321 ಎಂಪಿವಿ ಕಾರುಗಳು ಸ್ಟ್ರಾಂಗ್ ಬೆಲ್ಟ್ ಲೈನ್‍, 16 ಇಂಚಿನ ವೀಲ್‍‍ಗಳೊಂದಿಗೆ ಐದು ಸ್ಪೋಕ್ ವೀಲ್ ಆರ್ಚೆಸ್ ಅನ್ನು ಪಡೆದುಕೊಂಡಿದೆ. ಹಿಂಭಾಗದಲ್ಲಿ ಲಂಬಾಕಾರದ ಟೈಲ್‍‍ಲೈಟ್ಸ್ ಅನ್ನು ಅಳವಡಿಸಲಾಗಿದೆ.

ಹೊಸ ಮಹೀಂದ್ರಾ ಎಮ್‍‍ಪಿವಿ ಕಾರಿನ ತಾಂತ್ರಿಕ ಅಂಶಗಳು ಸೋರಿಕೆ..

ಆದರೆ ಮಾಹಿತಿಗಳ ಪ್ರಕಾರ ಮಹಿಂದ್ರಾ ಯು321 ಕಾರುಗಳು 2.0 ಲೀಟರ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಮತ್ತು 320ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದ್ದು, 6 ಸ್ಪೀಡ್ ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ.

ಹೊಸ ಮಹೀಂದ್ರಾ ಎಮ್‍‍ಪಿವಿ ಕಾರಿನ ತಾಂತ್ರಿಕ ಅಂಶಗಳು ಸೋರಿಕೆ..

ಇನ್ನು ಮಹಿಂದ್ರಾ ಯು321 ಎಂಪಿವಿ ಬೇಸ್ ಮಾಡಲ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳಲ್ಲು ಎರದು ಬದಿಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಹೊಸ ಮಹೀಂದ್ರಾ ಎಮ್‍‍ಪಿವಿ ಕಾರಿನ ತಾಂತ್ರಿಕ ಅಂಶಗಳು ಸೋರಿಕೆ..

ಇದಲ್ಲದೆ ಎಬಿಎಸ್‍‍ನೊಂದಿಗೆ ಇಬಿಡಿ ಮತ್ತು ಡ್ಯುಯಲ್ ಏರ್‍‍ಬ್ಯಾಗ್‍‍ಗಳನ್ನು ಕಾರಿನ ಎಲ್ಲಾ ವೇರಿಯಂಟ್‍‍ನಲ್ಲಿ ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳು ಕರ್ಟೈನ್ ಏರ್‍‍ಬ್ಯಾಗ್‍‍ಗಳನ್ನು ಕೂಡ ಪಡೆದುಕೊಂಡಿರಲಿವೆ. ಇವುಗಳಲ್ಲದೆ ಪಾರ್ಕಿಂಗ್ ಅಸ್ಸಿಸ್ಟ್, ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಪಾರ್ಕಿಂಗ್ ಕ್ರಾಮೆರಾವನ್ನು ಕೂಡ ಅಳವಡಿಸಲಾಗಿದೆ.

ಹೊಸ ಮಹೀಂದ್ರಾ ಎಮ್‍‍ಪಿವಿ ಕಾರಿನ ತಾಂತ್ರಿಕ ಅಂಶಗಳು ಸೋರಿಕೆ..

ದೇಶಿಯ ಮಾರುಕಟ್ಟೆಯಲ್ಲಿ ಮಹಿಂದ್ರಾ ಸಂಸ್ಥೆಯ ಎಂಪಿವಿ ಕಾರು ಬಿಡಗಡೆಗೊಂಡಲ್ಲಿ ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೊವಾ ಕ್ರಿಸ್ಟಾ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ. ಇನ್ನು ಕಾರಿನ ಬೆಲೆಯ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲವಾದರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 10 ರಿಂದ 15 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದೆ.

Source : Cartoq

Most Read Articles

Kannada
Read more on mahindra mpv
English summary
mahindra-u321-mpv-interior-revealed.
Story first published: Wednesday, May 16, 2018, 10:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X