6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

By Praveen Sannamani

ದೇಶಿಯವಾಗಿ ಉತ್ಪಾದನೆಯಾಗುತ್ತಿರುವ ಮಧ್ಯಮ ಗಾತ್ರದ ಪ್ರಮುಖ ಎಸ್‌ಯುವಿ ಕಾರುಗಳಲ್ಲಿ ಎಕ್ಸ್‌ಯುವಿ500 ಕಾರುಗಳ ಸಹ ಒಂದಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಹೊಸ ಕಾರುಗಳು ಖರೀದಿಗೆ ಲಭ್ಯವಿವೆ. ಆದ್ರೆ ಪೆಟ್ರೋಲ್ ವರ್ಷನ್‌ಗಳು ಬಿಡುಗಡೆಯಾದ 6 ತಿಂಗಳ ಅವಧಿಯಲ್ಲಿ ಮಾರಾಟವಾದ ಕಾರುಗಳ ಸಂಖ್ಯೆ ಎಷ್ಟು ಅಂತಾ ಕೇಳಿದ್ರೆ ಅಚ್ಚರಿಯಾಗುತ್ತದೆ.

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಹೌದು.. ಕಳೆದ ವರ್ಷ ಡಿಸೆಂಬರ್ ಕೊನೆಯಲ್ಲಿ ಎಕ್ಸ್‌ಯುವಿ500 ಎಸ್‌ಯುವಿ ಕಾರುಗಳನ್ನು ಡೀಸೆಲ್ ಆವೃತ್ತಿಯಲ್ಲಿ ಅಷ್ಟೇ ಅಲ್ಲದೇ ಪೆಟ್ರೋಲ್ ಆವೃತ್ತಿಯಲ್ಲೂ ಬಿಡುಗಡೆ ಮಾಡಿತ್ತು. ಜೊತೆಗೆ ಪೆಟ್ರೋಲ್ ಆವೃತ್ತಿಗಳ ಮಾರಾಟದಲ್ಲಿ ಭಾರೀ ನೀರಿಕ್ಷೆ ಇಟ್ಟುಕೊಂಡಿದ್ದ ಮಹೀಂದ್ರಾ ಸಂಸ್ಥೆಗೆ ಇದೀಗ ಭಾರೀ ಹಿನ್ನೆಡೆಯಾಗಿದೆ.

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಡೀಸೆಲ್ ಕಾರುಗಳಷ್ಟೇ ಪೆಟ್ರೋಲ್ ಕಾರುಗಳಿಗೂ ಹೆಚ್ಚಿನ ಬೇಡಿಕೆ ಇದ್ದು ಈ ಹಿನ್ನೆಲೆ ಮಹೀಂದ್ರಾ ಸಂಸ್ಥೆಯು ಸಹ ಎಕ್ಸ್‌ಯುವಿ500 ಕಾರುಗಳನ್ನು ಪೆಟ್ರೋಲ್ ಆವೃತ್ತಿಯಲ್ಲಿ ಪರಿಚಯಿಸಿ ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿತ್ತು.

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಪೆಟ್ರೋಲ್ ಮಾದರಿಯ ಎಕ್ಸ್‌ಯುವಿ500 ಕಾರುಗಳು ಬಿಡುಗಡೆಗೊಂಡ ಮೊದಮೊದಲು ಉತ್ತಮ ಬೇಡಿಕೆ ಬಂದಿದ್ದರೂ ತದನಂತರ ಪೆಟ್ರೋಲ್ ಆವೃತ್ತಿಯನ್ನು ಖರೀದಿ ಮಾಡುವುವರೇ ಇಲ್ಲದಂತಾಗಿದೆ. ಇದಕ್ಕೆ ಕಾರಣ, ಎಸ್‌ಯುವಿ ಪ್ರಿಯರು ಹೆಚ್ಚಿನ ಮೈಲೇಜ್ ಮತ್ತು ಪರ್ಫಾಮೆನ್ಸ್ ಉದ್ದೇಶಗಳಿಗಾಗಿ ಡಿಸೇಲ್ ಎಂಜಿನ್ ಮೇಲೆ ಹೆಚ್ಚು ಅಲಂಬಿತವಾಗಿರುವುದು.

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಇದೇ ಕಾರಣಕ್ಕೆ ಕಳೆದ 6 ತಿಂಗಳು ಅವಧಿಯಲ್ಲಿ 10,198 ಡೀಸೆಲ್ ಎಂಜಿನ್ ಎಕ್ಸ್‌ಯುವಿ500 ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿರುವ ಮಹೀಂದ್ರಾ ಸಂಸ್ಥೆಯು ಕೇವಲ 45 ಪೆಟ್ರೋಲ್ ಎಂಜಿನ್ ಎಕ್ಸ್‌ಯುವಿ500 ಕಾರುಗಳನ್ನು ಮಾರಾಟ ಮಾಡಿದೆ.

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಪೆಟ್ರೋಲ್ ಕಾರುಗಳ ಮೇಲೆ ವಿಶೇಷ ರಿಯಾಯ್ತಿ ಘೋಷಣೆ ಮಾಡಿದ್ದರೂ ಸಹ ಗ್ರಾಹಕರು ಮಾತ್ರ ಡಿಸೇಲ್ ಕಾರುಗಳ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದು, ಪೆಟ್ರೋಲ್ ಕಾರುಗಳನ್ನು ಖರೀದಿ ಮಾಡುವಂತೆ ಗ್ರಾಹಕರನ್ನು ದೊಂಬಾಲು ಬೀಳುವಂತಾಗಿದೆ.

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ಎಂಡಿ ಪವನ್ ಗೋಯಾಂಕ್, 'ಪೆಟ್ರೋಲ್ ಕಾರುಗಳ ಮಾರಾಟಕ್ಕಾಗಿ ಮಹೀಂದ್ರಾ ಸಂಸ್ಥೆಯು ಹಲವು ಯೋಜನೆಗಳನ್ನು ರೂಪಿಸಿದೆ. ಆದರೂ ಗ್ರಾಹಕರು ಮಾತ್ರ ಡಿಸೇಲ್ ಎಂಜಿನ್ ಪ್ರೇರಿತ ಕಾರುಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಮಾತ್ರ ಅಚ್ಚರಿ ತಂದಿದೆ' ಎಂದಿದ್ದಾರೆ.

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಹೀಗಿದ್ದರೂ ಪೆಟ್ರೋಲ್ ಎಂಜಿನ್‌ಗಳ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆ ತರದ ಮಹೀಂದ್ರಾ ಸಂಸ್ಥೆಯು ಮಧ್ಯ ಪ್ರಾಚ್ಯ ಮಾರುಕಟ್ಟೆಗಳಿಗಾಗಿ ಡಿಸೇಲ್ ಎಂಜಿನ್‌ಗಿಂತ ಹೆಚ್ಚಾಗಿ ಪೆಟ್ರೋಲ್ ಕಾರುಗಳನ್ನೇ ಹೆಚ್ಚು ರಫ್ತು ಮಾಡುತ್ತಿರುವುದು ಗಮನಾರ್ಹ ಸಂಗತಿ ಎನ್ನಬಹುದು.

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಇನ್ನು ಪೆಟ್ರೋಲ್ ಎಂಜಿನ್ ಎಕ್ಸ್‌ಯುವಿ500 ಕಾರುಗಳು ಕೇವಲ ಆಯ್ದ ನಗರಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರುವುದು ಸಹ ಪೆಟ್ರೋಲ್ ಕಾರುಗಳ ಮಾರಾಟಕ್ಕೆ ಹಿನ್ನೆಡೆಯಾಗಿದ್ದು, ತಾಂತ್ರಿಕವಾಗಿ ಚರ್ಚಿಸುವುದಾದರೇ ಡಿಸೇಲ್‌ಗಿಂತ ಪೆಟ್ರೋಲ್ ಎಂಜಿನ್ ಹೆಚ್ಚಿನ ಗುಣಮಟ್ಟ ಹೊಂದಿರುತ್ತವೆ ಎಂದು ಹೇಳಬಹುದು.

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಕಾರಿನ ಬೆಲೆಗಳು (ಎಕ್ಸ್‌ಶೋರಂ ಪ್ರಕಾರ)

ಉನ್ನತ ಮಾದರಿಯಾದ ಜಿ ಗ್ರೇಡ್‌ನಲ್ಲಿ ಖರೀದಿಗೆ ಲಭ್ಯವಿರುವ ಪೆಟ್ರೋಲ್ ವರ್ಷನ್ ಎಕ್ಸ್‌ಯುವಿ500 ಕಾರುಗಳು ಎಕ್ಸ್‌ಶೋರಂ ಪ್ರಕಾರ ರೂ. 15.50 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, 2.2-ಲೀಟರ್ ಎಂ ಹ್ವಾಕ್ ಫೌರ್ ಸಿಲಿಂಡರ್ ಎಂಜಿನ್ ಹೊಂದಿದೆ.

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಹಾಗೆಯೇ ಡೀಸೆಲ್ ಎಂಜಿನ್‌ನಲ್ಲೂ ಖರೀದಿಗೆ ಲಭ್ಯವಿರುವ ಎಕ್ಸ್‌ಯುವಿ500 ಕಾರುಗಳು 2.2 ಲೀಟರ್ ಎಂ ಹ್ವಾಕ್ ಡೀಸೆಲ್ ಎಂಜಿನ್ ಸಹಾಯದಿಂದ 155ಬಿಹೆಚ್‍‍ಪಿ ಮತ್ತು 360ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವ ಆಟೊಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

6 ತಿಂಗಳ ಅವಧಿಯಲ್ಲಿ ಎಕ್ಸ್‌ಯುವಿ500 ಪೆಟ್ರೋಲ್ ವರ್ಷನ್‌ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ?

ಹೊಸ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕಾರುಗಳು ಕ್ರಿಮ್‍ಸನ್ ರೆಡ್, ಮಿಸ್ಟಿಕ್ ಕಾಪರ್, ಆಪ್ಯುಲೆಂಟ್ ಪರ್ಪಲ್, ವಾಲ್ಕೊನೊ ಬ್ಲಾಕ್, ಲೇಕ್ ಸೈಡ್ ಬ್ರೌನ್, ಪರ್ಲ್ ವೈಟ್ ಮತ್ತು ಮೂನ್‍‍ಡಸ್ಟ್ ಸಿಲ್ವರ್ ಎಂಬ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

Most Read Articles

Kannada
Read more on mahindra suv
English summary
Mahindra XUV500 Petrol Off To A Slow Start In India.
Story first published: Monday, June 4, 2018, 11:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X