ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಹೀಗಿದೆ ನೋಡಿ..

ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕಾರುಗಳು ಈಗಾಗಲೇ ಅಧಿಕೃತ ಕಾರು ಡೀಲರ್ಸ್ ಯಾರ್ಡ್‌ಗಳಿಗೆ ತಲುಪುತ್ತಿದ್ದು,ಹಳೆಯ ಮಾದರಿಗಿಂತ ಹೊಸ ಕಾರುಗಳು ಭಾರೀ ಬದಲಾವಣೆ ಪಡೆದಿರುವುದು ಕಂಡುಬಂದಿದೆ.

By Praveen Sannamani

ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕಾರುಗಳು ಈಗಾಗಲೇ ಅಧಿಕೃತ ಕಾರು ಡೀಲರ್ಸ್ ಯಾರ್ಡ್‌ಗಳಿಗೆ ತಲುಪುತ್ತಿದ್ದು, ಹಳೆಯ ಮಾದರಿಗಿಂತ ಹೊಸ ಕಾರುಗಳು ಭಾರೀ ಬದಲಾವಣೆ ಪಡೆದಿರುವುದು ಕಂಡುಬಂದಿದೆ.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಹೀಗಿದೆ ನೋಡಿ..

ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರುಗಳ ವಿನ್ಯಾಸದಲ್ಲಿ ಗುರುತರ ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಫ್ರಂಟ್ ಗ್ರಿಲ್‌ಗಳನ್ನು ಸ್ಪೋರ್ಟಿ ಮಾದರಿಯ ರೇಡಿಯೇಟರ್ ಗ್ರಿಲ್‌‌ನೊಂದಿಗೆ ಮರುವಿನ್ಯಾಸಗೊಳಿಸಿದ್ದು, ಹೆಡ್‌ಲ್ಯಾಂಪ್ ಕ್ಲಸ್ಟರ್ ಮತ್ತು ಫಾಗ್ ದೀಪಗಳು ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲುತ್ತವೆ.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಹೀಗಿದೆ ನೋಡಿ..

ಇನ್ನು ಹೊಸ ಕಾರಿನ ಹಿಂಭಾಗವು ಸಹ ಸೂಕ್ಷ್ಮ ಬದಲಾವಣೆಗಳನ್ನು ಹೊಂದುವ ಲಕ್ಷಣಗಳನ್ನು ಹೊಂದಿದ್ದು, ವಿಂಡ್‌ಸ್ಕ್ರೀನ್ ಡಿಸೈನ್ ವಿನ್ಯಾಸದಲ್ಲಿನ ಬದಲಾವಣೆ ಹೊರತುಪಡಿಸಿ ಟೈಲ್ ದೀಪದ ಕ್ಲಸ್ಟರ್ ಬದಲಾಗದೆ ಈ ಹಿಂದಿನ ಮಾದರಿಯಲ್ಲೇ ಮುಂದುವರಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಹೀಗಿದೆ ನೋಡಿ..

ಜೊತೆಗೆ ಹೊಸ ಫೇಸ್‌ಲಿಫ್ಟ್ ಎಕ್ಸ್‌ಯುವಿ 500 ಕಾರಿನ ಒಳಭಾಗವು ಕೂಡಾ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಪಡೆದುಕೊಂಡಿದೆ ಎಂಬುದನ್ನು ನಾವು ಈ ಹಿಂದೆ ಬಿಡುಗಡೆಗೊಂಡಿದ್ದ ರಹಸ್ಯ ಚಿತ್ರಗಳಲ್ಲಿ ಗಮನಿಸಿದ್ದೇವೆ.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಹೀಗಿದೆ ನೋಡಿ..

ಇದರ ಪ್ರಕಾರ, ಒಳಭಾಗವು ಹೊಸ ಇನ್ಸ್ಟ್ರುಮೆಂಟ್ ಕನ್ಸೋಲ್ ಬ್ಯಾಕ್ಲೈಟ್, ಸೆಂಟರ್ ಕನ್ಸೋಲ್ ಮತ್ತು ಸ್ಟೀರಿಂಗ್ ವೀಲ್ ವಿನ್ಯಾಸಗಳಲ್ಲಿ ಕೊಂಚ ಬದಲಾವಣೆ ತರಲಾಗಿದ್ದು, ಆಪಲ್ ಕಾರ್‌ಪ್ಲೇ ಹೊಂದಾಣಿಕೆಯೊಂದಿಗೆ ಇನ್ಫೋಟೈನ್ಮೆಂಟ್ ಸಿಸ್ಟಮ್ ನವೀಕರಣಗೊಂಡಿದೆ.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಹೀಗಿದೆ ನೋಡಿ..

ಪ್ರಸ್ತುತ ಇರುವಂತಹ 2.2-ಲೀಟರ್ ಎಮ್ಹಾಕ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯೊಂದಿದೆ ಈ ಕಾರು ಬಿಡುಗಡೆಯಾಗಲಿದ್ದು, ಈ ಎಂಜಿನ್ 170 ಬಿಎಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಹೀಗಿದೆ ನೋಡಿ..

6 ಸ್ಪೀಡ್ ಮ್ಯಾನ್ಯುವಲ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಒಳಗೊಂಡಿರುವ ಸಾಧ್ಯತೆ ಇದ್ದು, ಇದರ ಹೊರತಾಗಿ ಯಾವುದೇ ರೀತಿಯ ಪ್ರಮುಖ ಹೊಸ ನವೀಕರಣವನ್ನು ಈ ಮಾದರಿ ಪಡೆಯುವುದಿಲ್ಲ ಎನ್ನಬಹುದು.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಹೀಗಿದೆ ನೋಡಿ..

ಒಟ್ಟಿನಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿ ಎಸ್‌ಯುವಿ ಕಾರು ಎನ್ನಿಸಿಕೊಂಡಿದ್ದು, ಇದೀಗ ಈ ಕಾರಿನ ಫೇಸ್‌ಲಿಫ್ಟ್ ಆವೃತಿಯನ್ನು ಮುಂದಿನ ತಿಂಗಳು ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿರುವುದು ಮಹೀಂದ್ರಾ ಪ್ರಿಯರಿಗೆ ಡಬಲ್ ಧಮಾಕಾ ಎನ್ನಬಹುದು.

Article Published On: Wednesday, March 21, 2018, 9:30 [IST]
English summary
Mahindra XUV500 Facelift Caught Undisguised; Launch Expected Soon.
Read more on mahindra suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+