Just In
- 15 min ago ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- 15 min ago ಪ್ರೇರಣಾತ್ಮಕ ಕಥೆ: ಮನೆ ಕೆಲಸದಾಕೆಗೆ 'ಸೈಕಲ್' ಖರೀದಿಸಲು ಸಹಾಯ ಮಾಡಿದ ಮಾಲೀಕ.. ವಿಡಿಯೋ ವೈರಲ್
- 2 hrs ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- 3 hrs ago ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
Don't Miss!
- News ‘ದೇವೇಗೌಡ್ರು ಕೋಲಾರದಲ್ಲಿ ಕುಟುಂಬದವರಿಗೆ ಬಿಟ್ಟು ಕಾರ್ಯಕರ್ತರಿಗೆ ಟಿಕೆಟ್ ಯಾಕೆ ಕೊಟ್ರು ಗೊತ್ತಾ?’
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಕ್ಸ್ಯುವಿ700 ಕಾರನ್ನು ಪ್ರದರ್ಶಿಸಿದ ಮಹೀಂದ್ರಾ..
ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ತಮ್ಮ ಫ್ಲ್ಯಾಗ್ಶಿಪ್ ಎಕ್ಸ್ಯುವಿ700 ಎಸ್ಯುವಿ ಕಾರನ್ನು ಪರಿಚಯಿಸಲಿದ್ದು, ಇದೀಗ ಸಂಸ್ಥೆಯು ತಮ್ಮ ಆನ್ಯುವಲ್ ಜೆನೆರಲ್ ಮೀಟಿಂಗ್ನಲ್ಲಿ ವೈ400 ಎಂಬ ಹೆಸರಿನಲ್ಲಿ ಪ್ರದರ್ಶಿಸಲಾಗಿದೆ.
ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ತಮ್ಮ ಫ್ಲ್ಯಾಗ್ಶಿಪ್ ಎಕ್ಸ್ಯುವಿ700 ಎಸ್ಯುವಿ ಕಾರನ್ನು ಪರಿಚಯಿಸಲಿದ್ದು, ಇದೀಗ ಸಂಸ್ಥೆಯು ತಮ್ಮ ಆನ್ಯುವಲ್ ಜೆನೆರಲ್ ಮೀಟಿಂಗ್ನಲ್ಲಿ ವೈ400 ಎಂಬ ಹೆಸರಿನಲ್ಲಿ ಪ್ರದರ್ಶಿಸಲಾಗಿದೆ. ಎಕ್ಸ್ಯುವಿ700 ಕಾರು ಈ ವರ್ಷದ ದೀಪಾವಳಿ ಹಬ್ಬದ ನಂತರ ಬಿಡುಗಡೆಗೊಳ್ಳಲಿದ್ದು, ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲಿದೆ.
ಪಟ್ಟಿಯಲ್ಲಿ ಮಹೀಂದ್ರಾ ಎಕ್ಸ್ಯುವಿ700 ಎಸ್ಯುವಿ ಕಾರು ಎಕ್ಸ್ಯುವಿ 500 ಕಾರಿನ ಮೇಲೆ ಸ್ಥಾನವನ್ನು ಪಡೆದುಕೊಂಡಿರಲಿದ್ದು, ಮತ್ತು ಇದು ಪೂರ್ತಿಯಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಲ್ಲಿ ಸಂಸ್ಥೆಯ ಅತ್ಯಂತ ಖರೀದಾದ ಪ್ರೀಮಿಯಮ್ ಮತ್ತು ಹೈ ಎಂಡ್ ಮಾಡಲ್ ಆಗಿ ಸ್ಥಾನವನ್ನು ಪಡೆಯಲಿದೆ.
ಸಂಸ್ಥೆಯು ಎಕ್ಸ್ಯುವಿ700 ಎಸ್ಯುವಿ ಕಾರಿನ ಜೊತೆಗೆ ಇನ್ನೆರಡು ಹೊಸ ಮಾಡಲ್ ಕಾರುಗಳನ್ನು ಕೂಡಾ ಪರಿಚಯಿಸುವ ತವಕದಲ್ಲಿದೆ. ಎಸ್201 ಹೆಸರಿನಲ್ಲಿ ರೂಪಿಸಲಾದ ಕಂಪ್ಯಾಕ್ಟ್ ಎಸ್ಯುವಿ ನೂತನವಾಗಿ ಆವಿಷ್ಕರಿಸಲಾದ ಮರಾಜೊ ಎಮ್ಪಿವಿ. ಈ ಮೂರು ಮಾಡಲ್ಗಳನ್ನು ಕೂಡಾ 2018ರೊಳಗೆಯೆ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.
ಹೊಸ ಎಕ್ಸ್ಯುವಿ700 ಎಸ್ಯುವಿ ಕಾರು ತಾಂತ್ರಿಕವಾಗಿ 2.2 ಲೀಟರ್ ಕೆಪಾಸಿಟಿಯ ಟರ್ಬೋಚಾರ್ಜ್ಡ್ ಬಳಸಲಾಗಿದೆ. 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಆಟೋಮ್ಯಾತಿಕ್ ಗೇರ್ಬಾಕ್ಸ್ ಜೋಡಣೆಯಲ್ಲಿ 180ಬಿಹೆಚ್ಪಿ ಮತ್ತು 420ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ. ಅಲ್ಲದೇ ಇದರಲ್ಲಿ 4 ವ್ಹೀಲ್ ಡ್ರೈವ್ ಸಿಸ್ಟಮ್ ಅನ್ನು ಕೂಡಾ ಪರಿಚಯಿಸುವ ಅವಕಾಶಗಳಿವೆ.
ಮಹೀಂದ್ರಾ ಬಿಡುಗಡೆ ಮಾಡಿರುವ ಟೀಸರ್ ಪ್ರಕಾರ ಎಕ್ಸ್ಯುವಿ700 ಕಾರು ಮಾದರಿಯು 7 ಸೀಟರ್ ಮಾದರಿಯಾಗಿದ್ದು, ಆಫ್ ರೋಡ್ ಕೌಶಲ್ಯದೊಂದಿಗೆ ಪ್ರೋಜೆಕ್ಟರ್ ಹೆಡ್ಲ್ಯಾಂಪ್, 8 ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ, ಪ್ರಿಮಿಯಂ ಲೆದರ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.
ಇದಷ್ಟೇ ಅಲ್ಲದೇ ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್ಗೆಟ್ ಸೇರಿದಂತೆ ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದ್ದು, ಎಸ್ಯುವಿ ಕಾರು ಮಾದರಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎನ್ನಬಹುದು.
ಪ್ರಯಾಣಿಕರ ಸುರಕ್ಷತೆಗಾಗಿ ಮಹೀಂದ್ರಾ ಎಕ್ಸ್ಯುವಿ700 ಕಾರಿನಲ್ಲಿ 9 ಏರ್ಬ್ಯಾಗ್ಸ್, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್ ಮತ್ತು ಹೈ ಬೀಮ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.
7 ಸೀಟರ್ ಎಸ್ಯುವಿ ಆಕಾರಾದ ಎಕ್ಸ್ಯುವಿ700 ಮೂರು ಸಾಲಿನ ಸೀಟಿಂಗ್ ಲೇಔಟ್ ಅನ್ನು ಪಡೆದುಕೊಂಡಿರಲಿದ್ದು, ಬಿಡುಗಡೆಗೊಂಡಲ್ಲಿ ಮಾರುಕಟ್ಟೆಯಲ್ಲಿರುವ ಫೋರ್ಡ್ ಎಂಡೀವರ್, ಮಹೀಂದ್ರಾ ಎಕ್ಸ್ಯುವಿ500 ಮತ್ತು ಇಸುಜು ಎಮ್ಯು-ಎಕ್ಸ್ ಎಂಬ ಕಾರುಗಳಿಗೆ ಪೈಪೋಟಿ ನೀಡಲಿದೆ.
ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಎಕ್ಸ್ಯುವಿ700 ಕಾರುಗಳು ಬೆಲೆಯು22 ಲಕ್ಷದಿಂದ 25 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.