ವರ್ಷದ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ700 ಕಾರಿನ ವಿಶೇಷತೆ ಏನು.?
ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ತಮ್ಮ ಫ್ಲ್ಯಾಗ್‍ಶಿಪ್ ಎಕ್ಸ್‌ಯುವಿ700 ಎಸ್‍ಯುವಿ ಕಾರನ್ನು ಪರಿಚಯಿಸಲಿದ್ದು, ಮಹೀಂದ್ರಾ ಸಂಸ್ಥೆಯು ಈ ವರ್ಷ ಬಿಡುಗಡೆಗೊಳಿಸಲಿರುವ ಬಹು ನಿರೀಕ್ಷಿತ ಕಾರುಗಳಲ್ಲಿ ಇದು ಕೂಡಾ ಒಂದು. ಐಷಾರಾಮಿ ಸೌಲತ್ತುಗಳನ
ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ತಮ್ಮ ಫ್ಲ್ಯಾಗ್‍ಶಿಪ್ ಎಕ್ಸ್‌ಯುವಿ700 ಎಸ್‍ಯುವಿ ಕಾರನ್ನು ಪರಿಚಯಿಸಲಿದ್ದು, ಮಹೀಂದ್ರಾ ಸಂಸ್ಥೆಯು ಈ ವರ್ಷ ಬಿಡುಗಡೆಗೊಳಿಸಲಿರುವ ಬಹು ನಿರೀಕ್ಷಿತ ಕಾರುಗಳಲ್ಲಿ ಇದು ಕೂಡಾ ಒಂದು. ಐಷಾರಾಮಿ ಸೌಲತ್ತುಗಳನ್ನು ಒಳಗೊಂಡ ಈ ಎಸ್‍ಯುವಿ ಕಾರು ಇದೇ ವರ್ಷದ ಕೊನೆಯಲ್ಲಿ ಬಿಡೆಗಡೆಗೊಳ್ಳಲಿದೆ ಎನ್ನಲಾಗಿದೆ.

ಮಹೀಂದ್ರಾ ಸಂಸ್ಥೆಯು ಈ ವರ್ಷದ ತಮ್ಮ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಕಾರನ್ನು ಪ್ರದರ್ಶಿಸಲಾಗಿದ್ದು, ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಈಗಾಗಲೆ ಹಲವಾರು ಬಾರಿ ಈ ಕಾರು ಸ್ಪಾಟ್ ಟೆಸ್ಟಿಂಗ್‍ನ ವೇಳೆ ಕಾಣಿಸಿಕೊಂಡಿದ್ದು, ಈ ಬಾರಿ ಕಾರಿನ ಒಳವಿನ್ಯಾಸದ ಮಾಹಿತಿಯು ಬಹಿರಂಗಗೊಂಡಿದೆ.

ಪಟ್ಟಿಯಲ್ಲಿ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿ ಕಾರು ಎಕ್ಸ್‌ಯುವಿ 500 ಕಾರಿನ ಮೇಲೆ ಸ್ಥಾನವನ್ನು ಪಡೆದುಕೊಂಡಿರಲಿದ್ದು, ಮತ್ತು ಇದು ಪೂರ್ತಿಯಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಲ್ಲಿ ಸಂಸ್ಥೆಯ ಅತ್ಯಂತ ಖರೀದಾದ ಪ್ರೀಮಿಯಮ್ ಮತ್ತು ಹೈ ಎಂಡ್ ಮಾಡಲ್ ಆಗಿ ಸ್ಥಾನವನ್ನು ಪಡೆಯಲಿದೆ.

ಹೊಸ ಎಕ್ಸ್‌ಯುವಿ700 ಎಸ್‍ಯುವಿ ಕಾರು ತಾಂತ್ರಿಕವಾಗಿ 2.2 ಲೀಟರ್ ಕೆಪಾಸಿಟಿಯ ಟರ್ಬೋಚಾರ್ಜ್ಡ್ ಬಳಸಲಾಗಿದೆ. ಮರ್ಸಿಡೀಸ್ ಬೆಂಝ್‍ನಿಂದ ಪಡೆದ 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಆಟೋಮ್ಯಾತಿಕ್ ಗೇರ್‍ಬಾಕ್ಸ್ ಜೋಡಣೆಯಲ್ಲಿ 180ಬಿಹೆಚ್‍ಪಿ ಮತ್ತು 420ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ. ಅಲ್ಲದೇ ಇದರಲ್ಲಿ 4 ವ್ಹೀಲ್ ಡ್ರೈವ್ ಸಿಸ್ಟಮ್ ಅನ್ನು ಕೂಡಾ ಪರಿಚಯಿಸುವ ಅವಕಾಶಗಳಿವೆ.

ಬಿಡುಗಡೆಗೊಳ್ಳಲಿರುವ ಮಹೀಂದ್ರಾ ಎಕ್ಸ್‌ಯುವಿ700 ಕಾರುಗಳು ಟೊಯೊಟಾ ಫಾರ್ಚ್ಯೂನರ್ ಕಾರಿಗಿಂತಲೂ ವಿಶಾಲವಾಗಿದ್ದು, 4850ಎಂಎಂ ಉದ್ದ, 1920ಎಂಎಂ ಅಗಲ, 1800ಎಂಎಂ ಎತ್ತರ ಮತ್ತು 2865ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ.

ಮಹೀಂದ್ರಾ ಬಿಡುಗಡೆ ಮಾಡಿರುವ ಟೀಸರ್ ಪ್ರಕಾರ ಎಕ್ಸ್‌ಯುವಿ700 ಕಾರು ಮಾದರಿಯು 7 ಸೀಟರ್ ಮಾದರಿಯಾಗಿದ್ದು, ಆಫ್ ರೋಡ್ ಕೌಶಲ್ಯದೊಂದಿಗೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪ್ರಿಮಿಯಂ ಲೆದರ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಇದಷ್ಟೇ ಅಲ್ಲದೇ ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್ ಸೇರಿದಂತೆ ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದ್ದು, ಎಸ್‌ಯುವಿ ಕಾರು ಮಾದರಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎನ್ನಬಹುದು.

ಪ್ರಯಾಣಿಕರ ಸುರಕ್ಷತೆಗಾಗಿ ಮಹೀಂದ್ರಾ ಎಕ್ಸ್‌ಯುವಿ700 ಕಾರಿನಲ್ಲಿ 9 ಏರ್‍ಬ್ಯಾಗ್ಸ್, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್ ಮತ್ತು ಹೈ ಬೀಮ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.

7 ಸೀಟರ್ ಎಸ್‍ಯುವಿ ಆಕಾರಾದ ಎಕ್ಸ್‌ಯುವಿ700 ಮೂರು ಸಾಲಿನ ಸೀಟಿಂಗ್ ಲೇಔಟ್ ಅನ್ನು ಪಡೆದುಕೊಂಡಿರಲಿದ್ದು, ಬಿಡುಗಡೆಗೊಂಡಲ್ಲಿ ಮಾರುಕಟ್ಟೆಯಲ್ಲಿರುವ ಫೋರ್ಡ್ ಎಂಡೀವರ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಇಸುಜು ಎಮ್‍ಯು-ಎಕ್ಸ್ ಎಂಬ ಕಾರುಗಳಿಗೆ ಪೈಪೋಟಿ ನೀಡಲಿದೆ.

ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಎಕ್ಸ್‌ಯುವಿ700 ಕಾರುಗಳು ಬೆಲೆಯು22 ಲಕ್ಷದಿಂದ 25 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications








