ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಹಲವು ವಿಶೇಷ ತಾಂತ್ರಿಕ ಅಂಶಗಳೊಂದಿಗೆ ಐಷಾರಾಮಿ ಎಸ್‌ಯುವಿ ಪ್ರಿಯರನ್ನು ಸೆಳೆಯುತ್ತಿರುವ ರೇಂಜ್ ರೋವರ್ ಕಾರುಗಳು ಸಾಕಷ್ಟು ಜನಪ್ರಿಯತೆ ಸಾಧಿಸುತ್ತಿವೆ.

By Praveen Sannamani

ಹಲವು ವಿಶೇಷ ತಾಂತ್ರಿಕ ಅಂಶಗಳೊಂದಿಗೆ ಐಷಾರಾಮಿ ಎಸ್‌ಯುವಿ ಪ್ರಿಯರನ್ನು ಸೆಳೆಯುತ್ತಿರುವ ರೇಂಜ್ ರೋವರ್ ಕಾರುಗಳು ಸಾಕಷ್ಟು ಜನಪ್ರಿಯತೆ ಸಾಧಿಸುತ್ತಿದ್ದು, ಬಾಲಿವುಡ್‌ನ ಬಹುತೇಕ ನಟ ನಟಿಯರು ರೇಂಜ್ ರೋವರ್ ಎಸ್‌ಯುವಿಗಳು ಖರೀದಿಸಿದ್ದಾರೆ ಎನ್ನವುದೇ ಮತ್ತೊಂದು ವಿಶೇಷ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಜಾಗ್ವಾರ್, ಲ್ಯಾಂಡ್ ರೋವರ್ ಮತ್ತು ರೇಂಜ್ ರೋವರ್ ಬ್ರಾಂಡ್ ಒಂದೇ ಆಗಿದ್ದರೂ ಸಹ ರೇಂಜ್ ರೋವರ್ ಎಸ್‌ಯುವಿಗಳಿಗೆ ವಿಶೇಷ ಬೇಡಿಕೆಯಿದ್ದು, ಲಗ್ಷುರಿ ಜೊತೆ ಜೊತೆಗೆ ಪರ್ಫಾಮೆನ್ಸ್ ವಿಚಾರದಲ್ಲೂ ಅತ್ಯುತ್ತಮ ಮಾದರಿಯಾಗಿರುವ ಈ ಕಾರುಗಳು ಸೆಲೆಬ್ರಿಟಿಗಳ ಹಾಟ್ ಫೆವರಿಟ್ ಎಂದೇ ಜನಪ್ರಿಯವಾಗಿವೆ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಸದ್ಯ ಬಾಲಿವುಡ್‌ನಲ್ಲಿ ಬಹುತೇಕ ನಟ-ನಟಿಯರ ಬಳಿ ರೇಂಜ್ ರೋವರ್ ಕಾರುಗಳ ಕಲೆಕ್ಷನ್ ಇದ್ದು, ಇವುಗಳಲ್ಲಿ ಹೆಚ್ಚಾಗಿ ಸ್ಪೋರ್ಟ್ ವೆರಿಯೆಂಟ್‌ಗಳಿರುವುದೇ ಹೆಚ್ಚು. ಇದಕ್ಕೆ ಕಾರಣ ಐಷಾರಾಮಿ ವೈಶಿಷ್ಟ್ಯತೆಗಳೊಂದಿಗೆ ಉತ್ತಮ ಮಾದರಿಯ ಪರ್ಫಾಮೆನ್ಸ್ ಎಂಜಿನ್‌ಗಳ ಅಳವಡಿಕೆ ಹೊಂದಿವೆ ಎನ್ನಬಹುದು. ಹಾಗಾದ್ರೆ ಯಾವ ಸೆಲೆಬ್ರಿಟಿ ಬಳಿ ಯಾವ ಕಾರುಗಳಿವೆ? ಇಲ್ಲಿ ನೋಡಿ ಕಾರುಗಳ ಪಟ್ಟಿ..

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಬಾಬಿ ಡಿಯೋಲ್

ಕಳೆದ ಕೆಲ ವರ್ಷಗಳಿಂದ ಬಾಲಿವುಡ್ ಅಂಗಳದಿಂದ ದೂರವೇ ಉಳಿದಿದ್ದ ನಟ ಬಾಬಿ ಡಿಯೋಲ್ ಸದ್ಯ ನಟ ಸಲ್ಮಾನ್ ಖಾನ್ ನಟನೆಯ ರೇಸ್ 3ನಲ್ಲಿ ಅಭಿನಯಿಸುವ ಮೂಲಕ ಸಿನಿರಂಗದಲ್ಲಿ ಮತ್ತೆ ತಮ್ಮ ಖಾತೆ ತೆರಿದಿದ್ದು, ಇದೇ ವೇಳೆ ತಮ್ಮ ನೆಚ್ಚಿನ ರೇಂಜ್ ರೋವರ್ ಸ್ಪೋಟ್ ಕಾರು ಖರೀದಿಸುವ ಮೂಲಕ ಬಿ ಟೌನ್‌ನಲ್ಲಿ ಭಾರೀ ಸುದ್ಧಿಯಾಗಿದ್ದಾರೆ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ನಟ ಬಾಬಿ ಡಿಯೋಲ್ ಖರೀದಿಸಿರುವ ರೇಂಜ್ ರೋವರ್ ಸ್ಪೋರ್ಟ್ ಕಾರಿನ ಕುರಿತಾಗಿ ಹೇಳುವುದಾದರೇ, ದೆಹಲಿ ಎಕ್ಸ್‌ಶೋರಂ ಪ್ರಕಾರ 1.20 ಕೋಟಿ ಬೆಲೆ ಹೊಂದಿರುವ ಈ ಹೊಸ ಕಾರು ಐಷಾರಾಮಿ ಜೊತೆ ಜೊತೆಗೆ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ ಎನ್ನಬಹುದು.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಅಲಿಯಾ ಭಟ್

ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದಿಂದ ಚಲನಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತನ್ನ ನಟೆನಯಿಂದ ಮಾತ್ರವಲ್ಲದೆ, ತನ್ನ ಕಂಠದಿಂದಲೂ ಸಹ ಹೆಚ್ಚು ಜನಪ್ರಿಯತೆಯನ್ನು ಪಡೆದ ನಟಿ ಆಲಿಯಾ ಭಟ್ ಹಲವಾರು ಐಷರಾಮಿ ಸೆಡಾನ್ ಹಾಗು ಎಸ್‍‍ಯುವಿ ಕಾರುಗಳನ್ನು ತಮ್ಮದಾಗಿಸಿಕೊಂಡಿದ್ದರೆ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಆಲಿಯಾ ಭಟ್‍ ಕೆಲ ದಿನಗಳ ಹಿಂದಷ್ಟೆ ರೇಂಜ್ ರೋವರ್ ಇವೋಕ್ ಕಾರನ್ನು ಖರೀದಿಸಿದ್ದು, ಹಲವಾರು ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾದೆ. ರೇಂಜ್ ರೋವರ್ ಇವೋಕ್ ಎಕ್ಸ್ ಶೋರಂ ಪ್ರಕಾರ ರೂ 1.6 ಕೋಟಿಗೆ ಮಾರಾಟಗೊಳ್ಳುತ್ತಿದ್ದು, ಇದು ಆಲಿಯಾ ಭಟ್‍‍ರವರ ಕಾರ್ ಕಲೆಕ್ಷನ್‍‍ನಲ್ಲಿನ ದುಬಾರಿ ಕಾರಾಗಿದೆ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ರಣಬೀರ್ ಕಪೂರ್

ಸಂಜು ಮೂಲಕ ಬಿ ಟೌನ್‌ನಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿರುವ ರಣಬೀರ್ ಕಪೂರ್ ಬಳಿ ರೇಂಜ್ ರೋವರ್ ಟಾಪ್ ಎಂಡ್ ವೆರಿಯೆಂಟ್ ವೊಗ್ ಎಸ್‌ಯುವಿ ಇದೆ. ಈ ಕಾರು 4.4ಲೀಟರ್ ಎಸ್ ಡಿವಿ8 ಎಂಜಿನ್ ನಿಂದ ಶಕ್ತಿಯನ್ನು ಹೊಂದುತ್ತದೆ, ಇದರಿಂದ 335ಬಿಹೆಚ್ ಪಿ-740 ಟಾರ್ಕನ್ನು ಉತ್ಪಾದಿಸುತ್ತದೆ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಶಾರುಖ್ ಖಾನ್

ನಟ ಶಾರುಖ್ ಖಾನ್ ಬಳಿಯೂ ಐಷಾರಾಮಿ ಕಾರುಗಳಿಗೇನೂ ಕೊರತೆಯಿಲ್ಲ. ನಟ ಶಾರುಖ್ ಖಾನ್ ಬಳಿ ಕೂಡಾ ದುಬಾರಿ ಕಾರುಗಳನ್ನು ಹೊಂದಿದ್ದು, ಅವುಗಳಲ್ಲಿ ರೇಂಜ್ ರೋವರ್ ವೋಗ್, ಬಿಎಂಡಬ್ಲ್ಯು 6 ಹಾಗೂ 7 ಸಿರೀಸ್ ಕಾರುಗಳು ಅವರ ಫೇವರಿಟ್.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ರೇಂಜ್ ರೋವರ್ ಸ್ಪೋರ್ಟ್ ಕಾರುಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದು, ರೇಂಜ್ ರೋವರ್ ನಲ್ಲಿ ಎರಡನೇ ಅತಿದೊಡ್ಡ SUV ಇದಾಗಿದೆ. 3.0 V6 ಡೀಸೆಲ್ ಎಂಜಿನ್, 300 bhp 8-ಸ್ಪೀಡ್ ಗೇರ್ ಬಾಕ್ಸ್ ಈ ಕಾರಿನ ವಿಶೇಷತೆ. ರೇಂಜ್ ರೋವರ್ ಕಾರಿನ ಆರಂಭಿಕ ಬೆಲೆಯೇ 90 ಲಕ್ಷ ರೂಪಾಯಿ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಮಲೈಕಾ ಅರೋರಾ

ಚೈಯ್ಯ ಚೈಯ್ಯ... ಕಾಲ್ ಧಮಾಲ್... ಮುನ್ನಿ ಬದ್ನಾಮ್... ಸೇರಿದಂತೆ ಅನೇಕ ಸೂಪರ್ ಹಿಟ್ ಡ್ಯಾನ್ಸ್ ನಂಬರ್ ಗಳಲ್ಲಿ ಸೊಂಟ ಬಳುಕಿಸಿ ಸೈ ಎನಿಸಿಕೊಂಡಿರುವ ಬಾಲಿವುಡ್ ನ ಗ್ಲಾಮರಸ್ ನಟಿ ಮಲೈಕಾ ಅರೋರ ಬಳಿಯೂ ಲಗ್ಷರಿ ಕಾರುಗಳ ಕಲೆಕ್ಷನ್ ಇದೆ. ಇವುಗಳಲ್ಲಿ ಬ್ಯೂ ಬಣ್ಣದ ರೇಂಜ್ ರೋವರ್ ಅವರ ಇಷ್ಟದ ಕಾರುಗಳಲ್ಲಿ ಒಂದಾಗಿದೆ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಜಾಕ್ವೆಲಿನ್ ಫರ್ನಾಂಡಿಸ್

ಫಿಟ್ ಆ್ಯಂಡ್ ಹಾಟ್ ಆಗಿರುವ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಕೂಡಾ ಐಷಾರಾಮಿ ಕಾರುಗಳ ಕಲೆಕ್ಷನ್ ಹೊಂದಿದ್ದಾರೆ. ಜಾಕ್ವೆಲಿನ್ ಬಳಿಯೂ ಸಹ ರೇಂಜ್ ರೋವರ್ ವೋಗ್ ಕಾರು ಮಾದರಿ ಇದ್ದು, ಇವುಗಳು ಎಕ್ಸ್‌ಶೋರಂ ಪ್ರಕಾರ ರೂ.1.87 ಕೋಟಿ ಬೆಲೆ ಹೊಂದಿವೆ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಕರೀನಾ ಕಪೂರ್‌

ಬಾಲಿವುಡ್‌ ತಾರೆ ಕರೀನಾ ಕಪೂರ್‌ ಬಳಿಯೂ ಹಲವು ಐಷಾರಾಮಿ ಕಾರುಗಳಿದ್ದು, ಅವುಗಳಲ್ಲಿ ರೇಂಜ್ ರೋವರ್ ವೋಗ್ ಕೂಡಾ ಒಂದು. ಇವುಗಳಲ್ಲದೇ ಹಲವು ಟಾಪ್ ಎಂಡ್ ಕಾರುಗಳನ್ನು ಹೊಂದಿರುವ ಈ ನಟಿ ಬಳಿ ಲೆಕ್ಸಸ್ ಎಲ್ಎಕ್ಸ್ 470 ಸಹ ಇದೆ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಅನುಷ್ಕಾ ಶರ್ಮಾ

ತಮ್ಮ ನಟನಾ ಶೈಲಿ ಮೂಲಕವೇ ಬಿ ಟೌನ್ ತನ್ನದೇ ಆದ ಜನಪ್ರಿಯತೆ ಪಡೆದಿರುವ ಅನುಷ್ಕಾ ಶರ್ಮಾ ಕೂಡಾ ದುಬಾರಿ ಬೆಲೆಯ ರೇಂಜ್ ರೋವರ್ ಆಟೋಬಯೋಗ್ರಾಫಿ ಕಾರನ್ನು ಖರೀದಿಸಿ ಸುದ್ದಿ ಮಾಡಿದ್ದರು. ಈ ಕಾರು ಅನುಷ್ಕಾ ಶರ್ಮಾ ಅವರ ನೆಚ್ಚಿನ ಕಾರಾಗಿದ್ದು, ಇದು ವಿರಾಟ್ ಕೊಹ್ಲಿರವರ ರೇಂಜ್ ರೋವರ್ ವೋಗ್ ಕಾರನ್ನೇ ಹೋಲುತ್ತದೆ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಅಜಯ್ ದೇವಗನ್

ಬಾಲಿವುಡ್ ಟಾಪ್ ಮೊಸ್ಟ್ ನಟರಲ್ಲಿ ಒಬ್ಬರಾಗಿರುವ ಅಜಯ್ ದೇವಗನ್ ಬಳಿ ಸಹ 1.87 ಕೋಟಿ ಮೌಲ್ಯದ ರೇಂಜ್ ರೋವರ್ ವೋಗ್ ಕಾರು ಮಾದರಿ ಇದೆ. ಜೊತೆಗೆ ಲ್ಯಾಂಡ್ ಕ್ರೂಸರ್ ಪ್ರಾಡೊ ಸೇರಿದಂತೆ ಆಡಿ, ಬಿಎಂಡಬ್ಲು ಕಾರುಗಳು ಸಹ ಇವರ ಬಳಿ ಇವೆ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ತುಷಾರ್ ಕಪೂರ್

ವೈವಾಹಿಕ ಜೀವನಕ್ಕೆ ಕಾಲಿಡದೇ ಅಪ್ಪನಾಗಿರುವ ತುಷಾರ್ ಕಪೂರ್ ಬಳಿಯು ಹಲವು ಲಗ್ಷುರಿ ಕಾರುಗಳ ಕಲೆಕ್ಷನ್ ಇದ್ದು, ಇವರ ಬಳಿಯು ದುಬಾರಿ ಬೆಲೆಯ ರೇಂಜ್ ರೋವರ್ ವೋಗ್ ಎಡಿಷನ್ ಇದೆ.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ಬಿಗ್ ಬಿ ಅಮಿತಾಬ್

ಬಾಲವುಡ್​​ ಬಿಗ್​​ ಬಿ ಅಮಿತಾಬ್​ ಬಚ್ಚನ್​​​​ಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಅವರನ್ನ ಕಂಡ್ರೆ ಬಾಲಿವುಡ್​ ಮಂದಿಗಷ್ಟೇ ಅಲ್ಲ ಎಲ್ಲರಿಗೂ ಪ್ರೀತಿ, ಅಭಿಮಾನವಿದೆ. ಆದ್ರೆ ಬಿಗ್ ಬಿ ಕೂಡಾ ರೇಂಜ್ ರೋವರ್ ಅಭಿಮಾನಿ ಅಂದ್ರೆ ನೀವು ನಂಬಲೇಬೇಕು.

ಬಾಲಿವುಡ್ ನಟರ ಹಾಟ್ ಫೆವರಿಟ್ ಎಸ್‌ಯುವಿ ರೇಂಜ್ ರೋವರ್ ಸ್ಪೆಷಲ್ ಏನು?

ನಟ ಅಮಿತಾಬ್ ಬಚ್ಚನ್ ಬಳಿ ಈಗಾಲಲೇ ಹಲವಾರು ಹೈ ಎಂಡ್ ಕಾರುಗಳ ದಂಡೆ ಇದ್ದರೂ ರೇಂಜ್ ರೋವರ್ ದುಬಾರಿ ಬೆಲೆಯ ಆಟೋಬಯೋಗ್ರಾಫಿ ಎಡಿಷನ್ ಇವರ ಬಳಿಯಿದೆ. ಇದರ ಆನ್ ರೋಡ್ ಬೆಲೆಗಳು 4.75 ಕೋಟಿ ಬೆಲೆ ಹೊಂದಿದ್ದು, 5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 503-ಬಿಎಚ್‌ಪಿ ಉತ್ಪಾದಿಸುತ್ತದೆ.

More from DriveSpark

Article Published On: Saturday, June 30, 2018, 19:10 [IST]
English summary
10 Bollywood actors & their swanky Range Rover SUVs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+