ಬಲೆನೊ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಮಾರುತಿ ಸುಜುಕಿ
ಮಾರುತಿ ಸುಜುಕಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯೊಂದಿಗೆ ಮಾರಾಟದಲ್ಲಿ ದಾಖಲೆ ಮಾಡುತ್ತಿದ್ದು, ಇದೀಗ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಬಲೆನೊ ಕಾರುಗಳ ಸಹ ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಮಾರುತಿ ಸುಜುಕಿ ಕಾರುಗಳು ಅಂದ್ರೆನೆ ಹಾಗೆ. ಭಾರತದಲ್ಲಿ ಬಿಡುಗಡೆಯಾಗಿರುವ ಬಹುತೇಕ ಮಾರುತಿ ಸುಜುಕಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯೊಂದಿಗೆ ಮಾರಾಟದಲ್ಲಿ ದಾಖಲೆ ಮಾಡುತ್ತಿದ್ದು, ಇದೀಗ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಬಲೆನೊ ಕಾರುಗಳ ಸಹ ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಕಳೆದ 2015ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಬಲೆನೊ ಹ್ಯಾಚ್‌ಬ್ಯಾಕ್ ಕಾರುಗಳು ಮೂರು ವರ್ಷಗಳ ಅವಧಿಯಲ್ಲಿ ನೀರಿಕ್ಷೆಗೂ ಮಿರಿ ಗ್ರಾಹಕರನ್ನು ಸೆಳೆದಿದ್ದು, ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಬೆಸ್ಟ್ ಕಾರುಗಳಲ್ಲಿ 5ನೇ ಸ್ಥಾನದಲ್ಲಿದೆ ಅಂದ್ರೆ ನೀವು ನಂಬಲೇಬೇಕು.

ಮಾರುತಿ ಸುಜುಕಿ ನಿರ್ಮಾಣದ ಮೊಲದ ಪ್ರಿಯಿಮಂ ಹ್ಯಾಚ್‌ಬ್ಯಾಕ್ ಮಾದರಿಯಾದ ಬಲೆನೊ ಕಾರುಗಳು ಇದುವರೆಗೆ ಬರೋಬ್ಬರಿ 4 ಲಕ್ಷ ಕಾರುಗಳು ಮಾರಾಟವಾಗಿದ್ದು, ಅತಿ ಕಡಿಮೆ ಅವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಾರಾಟವಾದ ಕಾರು ಮಾದರಿ ಇದಾಗಿದೆ.

ಭಾರತದಲ್ಲಿ ನೆಕ್ಸಾ ಪ್ರಿಮಿಯಂ ಕಾರು ಡೀಲರ್ಸ್ ಮೂಲಕ ಮಾರಾಟಗೊಳ್ಳುತ್ತಿರುವ ಬಲೆನೊ ಕಾರುಗಳು ಬೆಸ್ಟ್ ಸೆಲ್ಲಿಂಗ್ ಹ್ಯಾಚ್‌ಬ್ಯಾಕ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತದಲ್ಲಿ ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದ ಪ್ರಮುಖ ರಾಷ್ಟ್ರಗಳಲ್ಲೂ ಬಲೆನೊ ಯಶಸ್ವಿಯಾಗಿ ಮಾರಾಟವಾಗುತ್ತಿದೆ.

ಇನ್ನೊಂದು ವಿಶೇಷ ಅಂದ್ರೆ, ಮೆಡ್ ಇನ್ ಇಂಡಿಯಾ ಬಲೆನೊ ಕಾರುಗಳು ಮೊದಲ ಬಾರಿಗೆ ಜಪಾನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮೊದಲ ಹ್ಯಾಚ್‌ಬ್ಯಾಕ್ ಮಾದರಿಯಾಗಿದ್ದು, ಪ್ರಿಯಿಮಂ ವಿನ್ಯಾಸಗಳಿಂದಾಗಿ ಯುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದೆ.

1 ತಿಂಗಳಲ್ಲಿ 20 ಸಾವಿರ ಕಾರುಗಳು ಮಾರಾಟ
ಹೌದು, ಕಳೆದ ಏಪ್ರಿಲ್ ತಿಂಗಳಿನಲ್ಲಿ ಮಾರುತಿ ಸುಜುಕಿ ಮಾರಾಟ ಮಾಡಿದ ಕಾರುಗಳ ಪೈಕಿ ಬಲೆನೊ ಕಾರುಗಳ ಸಂಖ್ಯೆಯೇ 20 ಸಾವಿರ. ಇದೇ ಕಾರಣಕ್ಕೆ ಬಿಡುಗಡೆಯಾದ ನಂತರ ಅತಿವೇಗವಾಗಿ ಮಾರಾಟವಾಗುತ್ತಿರುವ ಬಲೆನೊ ಕಾರುಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಂಜಿನ್ ಸಾಮರ್ಥ್ಯ
1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಹೊಂದಿರುವ ಬಲೆನೊ ಕಾರುಗಳು, ಪೆಟ್ರೋಲ್ ಆವೃತ್ತಿಯ ಮೂಲಕ 83-ಬಿಎಚ್‌ಪಿ, 115-ಟಾರ್ಕ್ ಮತ್ತು ಡಿಸೇಲ್ ಆವೃತ್ತಿ ಮೂಲಕ 75-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಪಡೆದಿವೆ.

ಇನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿಗ್ಮಾ, ಡೆಲ್ಟಾ, ಜೆಟ್ಟಾ ಮತ್ತು ಅಲ್ಫಾ ಎನ್ನುವ ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಬಲೆನೊ ಕಾರುಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಯ್ಕೆ ಮಾಡಬಹುದಾಗಿದೆ.

ಇದರ ಜೊತೆಗೆ ಆಕರ್ಷಕ ದರಗಳಲ್ಲಿ ಲಭ್ಯವಿರುವ ಬಲೆನೊ ಕಾರುಗಳು ಕೈಗೆಟುವಕ ಬೆಲೆಗಳಲ್ಲಿ ಇತರೆ ಕಾರುಗಳಿಂತಲೂ ಉತ್ತಮವಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.5.35 ಲಕ್ಷದಿಂದ ಟಾಪ್ ವೆರಿಯೆಂಟ್‌ಗಳು ರೂ.8.49 ಲಕ್ಷ ಬೆಲೆ ಹೊಂದಿವೆ.


Click it and Unblock the Notifications








