ಮಾರುತಿ ಬಲೆನೊ ದೇಶದಲ್ಲಿಯೆ ಹೆಚ್ಚು ಮಾರಾಟಗೊಳ್ಳುತ್ತಿರುವ ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಕಾರು..
ದೇಶಿಯ ವಾಹನ ತಯಾರಕ ಸಂಸ್ಥಯಾದ ಮಾರುತಿ 2015ರಲ್ಲಿ ತಮ್ಮ ಬಲೆನೊ ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಕಾರುಗಳ ಸರಣಿಯಲ್ಲಿ ಹೆಚ್ಚು ಮಾರಾಟಗೊಳ್ಳುತ್ತಿರುವ ಕಾರು ಎಂಬ ಖ್ಯಾತಿಗೆ ಪಾತ್ರವಾಗಿದೆ.
ದೇಶಿಯ ವಾಹನ ತಯಾರಕ ಸಂಸ್ಥಯಾದ ಮಾರುತಿ 2015ರಲ್ಲಿ ತಮ್ಮ ಬಲೆನೊ ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಕಾರುಗಳ ಸರಣಿಯಲ್ಲಿ ಹೆಚ್ಚು ಮಾರಾಟಗೊಳ್ಳುತ್ತಿರುವ ಕಾರು ಎಂಬ ಖ್ಯಾತಿಗೆ ಪಾತ್ರವಾಗಿದೆ. ಬಿಡುಗಡೆಗೊಂಡಾಗಿನೊಂದಲೂ ಈ ವರೆಗು ಮಾರುತಿ ಬಲೆನೊ ಕಾರುಗಳು ಸುಮಾರು 4 ಲಕ್ಷ ಯೂನಿಟ್‍ಗಿಂತ ಹೆಚ್ಚು ಮಾರಾಟಗೊಂಡಿದೆ.

ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಸರಣಿಯಲ್ಲಿ ಮಾರುತಿ ಬಲೆನೊ ಕಾರುಗಳು ಪ್ರತೀ ತಿಂಗಳಿಗೆ 18,000 ಸಾವಿರ ಕಾರುಗಳನ್ನು ಮಾರಾಟಗೊಳಿಸುತ್ತಾ ಮೊದಲನೆಯ ಸ್ಥಾನವನ್ನು ಪಡೆದಿದ್ದು ಇನ್ನು ಎರಡನೆಯ ಸ್ಥಾನದಲ್ಲಿ ಎಲೈಟ್ ಐ20 ಕಾರು ಪ್ರತೀ ತಿಂಗಳಿಗೆ 9,000 ಕಾರುಗಳನ್ನು ಮಾರಾಟ ಮಾಡುತ್ತಿದೆ.

ಮಾರುತಿ ಬಲೆನೊ ಭಾರತದ ಬ್ರ್ಯಾಂಡ್‍ನ ಮೊದಲ ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಕಾರಾಗಿದ್ದು, ಮಾರುತಿ ನೆಕ್ಸಾ ಪ್ರೀಮಿಯಮ್ ರೀಟೇಲ್ ಸರಪಳಿಯ ಮೂಲದ ಮಾರಾಟಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಾರುತಿ ಬಲೆನೊ ಕಾರುಗಳು ಏಕೆ ಇಷ್ಟು ಜನಪ್ರೀಯತೆಯನ್ನು ಪಡೆದಿದೆ ಎಂಬುದರ ಬಗ್ಗೆ ಕೆಳಗಿನ ಸ್ಲೈಡರ್‍ನಲ್ಲಿ ತಿಳಿಯಿರಿ..

ಮಾರುತಿ ಬ್ರ್ಯಾಂಡ್ ವಾಲ್ಯೂ
ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸಂಸ್ಥೆಯು ಹೆಚ್ಚು ಜನಪ್ರೀಯತೆಯನ್ನು ಪಡೆದಿದ್ದು, ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಾಚೀನ ವಾಹನ ತಯಾರಕ ಬ್ರ್ಯಾಂಡ್‍ಗಳಲ್ಲಿ ಒಂದಾಗಿದೆ ಮತ್ತು ಶೇಕಡ 50 ರಷ್ಟು ಮಾರ್ಕೆಟ್ ಶೇರ್ ಅನ್ನು ಪಡೆದುಕೊಂಡಿದೆ.

ವೈಶಿಷ್ಟ್ಯತೆಗಳು
ಮಾರುತಿ ಬಲೆನೊ ಕಾರುಗಳಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟ್ ಮಾಡಬಹುದಾದ ಟಚ್‍ಸ್ಕ್ರೀನ್ ಇನ್ಫೀಟೈನ್ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ಸ್ಟ್ರಾರ್ಟ್/ಸ್ಟಾಪ್ ಬಟನ್, ನ್ಯಾವಿಗೇಶನ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ರಿಯರ್ ಕ್ಯಾಮೆರಾ, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ ವೈಶಿಷ್ಟ್ಯತೆಗಳನ್ನು ಪಡೆದಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಇಬಿಡಿಯೊಂದಿಗೆ ಎಬಿಎಸ್ ಮತ್ತು ಡ್ಯುಯಲ್ ಏರ್‍ಬ್ಯಾಗ್ ಅನ್ನು ಕಾರಿನ ಎಲ್ಲಾ ವೇರಿಯಂಟ್‍ಗಳಲ್ಲಿ ಅಳವಡಿಸಲಾಗಿದೆ.

ಕಸ್ಟಮೈಸ್ ಮಾಡಬಹುದು
ಮಾರುತಿ ಅಧೀಕೃತವಾಗಿ ವಿವಿಧ ಡೆಕಲ್‍ಗಳು ಮತ್ತು ರೇಸಿಂಗ್ ಪಟ್ಟಿಗಳನ್ನು ಒಳಗೊಂಡಂತೆ ಹಲವಾರು ಕಸ್ಟಮೈಸ್ ಆಯ್ಕೆಗಳನ್ನು ನೀಡುತ್ತಿದ್ದು, ಕಾರಿನ ಬಾಡಿ ಕಿಟ್ ಕೂಡ ಅಧಿಕೃತವಾಗಿ ಗ್ರಾಹಕರು ಖರೀದಿಸಬಹುದಾಗಿದೆ.

ಮಾರುತಿ ನೆಟ್‍ವರ್ಕ್
ಮಾರುತಿ ಸುಜುಕಿ ಸಂಸ್ಥೆಯು ದೇಶದಲ್ಲೆ ಅಧಿಕವಾಗಿ ಸರ್ವೀಸ್ ಸ್ಟೇಷನ್‍ಗಳನ್ನು ಪಡೆದಿದ್ದು, ಕಡಿಮೆ ಬೆಲೆಯಲ್ಲಿ ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಕಾರುಗಳ ಸರ್ವೀಸಿಂಗ್ ಅನ್ನು ಮಾಡಿಕೊಡುವುದರಿಂದಾಗಿ ಗ್ರಾಹಕರು ಇದನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಎಂಜಿನ್ ಸಾಮರ್ಥ್ಯ
ಮಾರುತಿ ಬಲೆನೊ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಮಾದರಿಯ ಕಾರುಗಳು 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 84.3 ಬಿಹೆಚ್‍ಪಿ ಮತ್ತು 115 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಡೀಸೆಲ್ ಮಾದರಿಯ ಕಾರುಗಳು 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಸಹಾಯದಿಂದ 75ಬಿಹೆಚ್‍ಪಿ ಮತ್ತು 190ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಪೆಟ್ರೋಲ್ ಮಾದರಿಯ ಬಲೆನೊ ಕಾರುಗಳು ಪ್ರತೀ ಲೀಟರ್‍ಗೆ 21.4 ಕಿಲೋಮೀಟರ್ ಮೈಲೇಜ್ ಮತ್ತು ಡೀಸೆಲ್ ಮಾದರಿಯ ಕಾರುಗಳು ಪ್ರತೀ ಲೀಟರ್‍ಗೆ 27.3 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತವೆ.
Source : Cartoq


Click it and Unblock the Notifications








