ಬಿಡುಗಡೆಗೊಂಡ ಮಾರುತಿ ಸುಜುಕಿ ಬಲೆನೊ ಲಿಮಿಟೆಡ್ ಎಡಿಷನ್ ಕಾರು

ಮಾರುತಿ ಸುಜುಕಿ ಸಂಸ್ಥೆಯು ಈ ಹಬ್ಬದ ಋತುವಿನಲ್ಲಿ ತಮ್ಮ ಗ್ರಾಹಕರಿಗೆ ಹೊಸ ಕಾರನ್ನು ಖರೀದಿಸಲು ಇಚ್ಛಿಸುವವರಿಗಾಗಿ ಬಲೆನೊ ಕಾರಿನ ಲಿಮಿಟೆಡ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದೆ. ಬಲೆನೊ ಲಿಮಿಟೆಡ್ ಎಡಿಷನ್ ಕಾರು ಈ ಬಾರಿ ಹೊಸ ವೈಶಿಷ್ಟ್ಯತೆ ಮತ್ತು ಸ್ಪೋರ್ಟಿ ಬಾಡಿ ಕಿಟ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬಲೆನೊ ಲಿಮಿಟೆಡ್ ಎಡಿಷನ್ ಕಾರು

ಹೊಸ ಬಲೆನೊ ಲಿಮಿಟೆಡ್ ಎಡಿಷನ್ ಕಾರಿನ ಹೊರಭಾಗದಲ್ಲಿ ಫ್ರಂಟ್ ಸ್ಕರ್ಟಿಂಗ್, ರಿಯರ್ ಸ್ಕರ್ಟಿಂಗ್, ಸೈಡ್ ಸ್ಕರ್ಟಿಂಗ್ ಮತ್ತು ಬಾಡಿ ಸೈಡ್ ಮೌಲ್ಡಿಂಗ್ ಅನ್ನು ಒದಗಿಸಲಾಗಿದ್ದು, ಬ್ಲಾಕ್ ಪ್ಲಾಸ್ಟಿಕ್ ಮೌಲ್ಡಿಂಗ್ ನೀಡಿದ ಕಾರಣ ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್ ಸ್ಪೋರ್ಟಿ ಲುಕ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬಲೆನೊ ಲಿಮಿಟೆಡ್ ಎಡಿಷನ್ ಕಾರು

ಇನ್ನು ಬಲೆನೊ ಲಿಮಿಟೆಡ್ ಎಡಿಷನ್ ಕಾರಿನ ಒಳಭಾಗದಲ್ಲಿ ಕಾರ್ಬನ್ ಹೈಲೈಟ್‍‍ನೊಂದಿಗೆ ಬ್ಲಾಕ್ ಕ್ವಿಲ್ಟೆಡ್ ಸೀಟ್ ಕವರ್‍‍ಗಳನ್ನು ಸಜ್ಜುಗೊಳಿಸಲಾಗಿದ್ದು, ಇಲ್ಯುಮಿನೇಟೆಡ್ ಡೋರ್ ಸಿಲ್ ಗಾರ್ಡ್ ಮತ್ತು 3ಡಿ ಫ್ಲೋರ್ ಮ್ಯಾಟ್ ಅನ್ನು ಒದಗಿಸಲಾಗಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬಲೆನೊ ಲಿಮಿಟೆಡ್ ಎಡಿಷನ್ ಕಾರು

ಬಲೆನೊ ಲಿಮಿಟೆಡ್ ಎಡಿಷನ್ ಕಾರುಗಳಲ್ಲಿ ಸ್ಮಾರ್ಟ್ ಕೀ ಫೈಂಡರ್, ನೆಕ್ಸಾ ಕೀ ರಿಂಗ್, ಪ್ರೀಮಿಯಮ್ ದಿಂಬುಗಳು ಹಾಗು ಪ್ರೀಮಿಯಮ್ ಟಿಷ್ಯು ಬಾಕ್ಸ್ ಅನ್ನು ನೀಡಲಾಗಿದೆ. ಇವುಗಳನ್ನು ಹೊರತು ಪಡಿಸೆ ಬೇರಾವ ಬದಲಾವಣೆಗಳನ್ನು ಸ್ಪೇಷಲ್ ಎಡಿಷನ್ ಕಾರುಗಳಲ್ಲಿ ಕಾಣಲಾಗುವುದಿಲ್ಲ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬಲೆನೊ ಲಿಮಿಟೆಡ್ ಎಡಿಷನ್ ಕಾರು

ಬಿಡುಗಡೆಗೊಂಡ ಮಾರುತಿ ಸುಜುಕಿ ಸಂಸ್ಥೆಯು ಬಲೆನೊ ಲಿಮಿಟೆಡ್ ಎಡಿಷನ್ ಕಾರುಗಳ ಬೆಲೆಯನ್ನು ಇನ್ನು ಬಹಿರಂಗಗೊಳಿಸಲಿಲ್ಲವಾದರೂ, ಸಾಧಾರಣ ಕಾರಿನ ಬೆಲೆಗಿಂತಾ ಸುಮಾರು ರೂ30,000 ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಮೊನ್ನೆಯಷ್ಟೆ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ಸ್ವಿಫ್ಟ್ ಕಾರಿನ ಲಿಮಿಟೆಡ್ ಎಡಿಷನ್ ಅನ್ನು ಕೂಡಾ ಬಿಡುಗಡೆಗೊಳಿಸಿದ್ದಾರೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬಲೆನೊ ಲಿಮಿಟೆಡ್ ಎಡಿಷನ್ ಕಾರು

ಮಾರುತಿ ಸುಜುಕಿ ಬಲೆನೊ ಲಿಮಿಟೆಡ್ ಎಡಿಷನ್ ಕಾರುಗಳು ಪೆಟ್ರೋಲ್ ಹಾಗು ಡೀಸೆಲ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಆಧಾರಿತ ಬಲೆನೊ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82ಬಿಹೆಚ್‍‍ಪಿ ಮತ್ತು 113ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪದೆದುಕೊಂಡಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬಲೆನೊ ಲಿಮಿಟೆಡ್ ಎಡಿಷನ್ ಕಾರು

ಇನ್ನು ಡೀಸೆಲ್ ಆಧಾರಿತ ಬಲೆನೊ ಕಾರುಗಳು 1.3 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಸಹಾಯದಿಂದ 74ಬಿಹೆಚ್‍‍ಪಿ ಮತ್ತು 190ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಇನ್ನು ಡೀಸೆಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಬಲೆನೊ ಲಿಮಿಟೆಡ್ ಎಡಿಷನ್ ಕಾರು

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮಾರಟದ ಶ್ರೇಣಿಯನ್ನು ಹೆಚ್ಚಿಸಿಕೊಳ್ಳಲು ಮೊನ್ನೆಯಷ್ಟೆ ಸ್ವಿಫ್ಟ್ ಕಾರಿನ ಲಿಮಿಟೆಡ್ ಎಡಿಷನ್ ಮತ್ತು ಕೆಲವು ದಿನಗಳ ಹಿಂದೆ ಇಗ್ನಿಸ್ ಲಿಮಿಟೆಡ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಬಲೆನೊ ಲಿಮಿಟೆಡ್ ಎಡಿಷನ್ ಕಾರನ್ನು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಿದೆ.

More from DriveSpark

Article Published On: Tuesday, September 25, 2018, 13:38 [IST]
English summary
Maruti Baleno Limited Edition Launched In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+