ಮಾರಾಟದಲ್ಲಿ ಹ್ಯುಂಡೈ ಕ್ರೆಟಾ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಉತ್ಪನ್ನಗಳ ಮಾರಾಟದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುತ್ತಿದ್ದು, ವಿಟಾರಾ ಬ್ರೆಝಾ ಮಾರಾಟದಲ್ಲಿನ ಏರಿಕೆಯು ಹೊಸ ದಾಖಲೆಗಳಿಗೆ ಕಾರಣವಾಗಿದೆ.

ಮಾರಾಟದಲ್ಲಿ ಹ್ಯುಂಡೈ ಕ್ರೆಟಾ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಂಸ್ಥೆಯು 2017ರಲ್ಲಿ ಉತ್ಪಾದಿಸಿದ ಕಾರುಗಳಿಗಿಂತಾ 2018ರ ಎಪ್ರಿಲ್ ತಿಂಗಳಿಗಿಂತಾ ಶೇಕಡ 10ರಷ್ಟು ಹೆಚ್ಚು ಉತ್ಪಾದನೆಯನ್ನು ಮಾಡಿದೆ. ಕೇವಲ ಆರು ತಿಂಗಳಿನಲ್ಲಿ ಸಂಸ್ಥೆಯು ಸುಮಾರು 94,000 ಸಾವಿರಕ್ಕು ಅಧಿಕವಾದ ಕಾರುಗಳನ್ನು ಉತ್ಪಾದಿಸಿದೆ.

ಮಾರಾಟದಲ್ಲಿ ಹ್ಯುಂಡೈ ಕ್ರೆಟಾ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಮಾರಾಟದ ಅಂಕಿ ಅಂಶಗಳ ಪ್ರಕಾರ ಮಾರುಕಟ್ಟೆಯಲ್ಲಿ ವಿಟಾರಾ ಬ್ರೆಝಾ ಕಾರಿನ ಆಟೋಮ್ಯಾಟಿಕ್ ಗೇರ್ ವೇರಿಯಂಟ್‍ಗಳಿಗೆ ಮಾತ್ರ ಸುಮಾರು ಶೇಕಡ 49ರಷ್ಟು ಬೇಡಿಕೆಯು ದೆಹಲಿಯಿಂದ ಮತ್ತು ಇನ್ನು ಶೇಕಡ 39ರಷ್ಟು ಬೇಡಿಕೆಯು ಮುಂಬೈ ನಗರದಲ್ಲಿ ಹೆಚ್ಚಿದೆ.

ಮಾರಾಟದಲ್ಲಿ ಹ್ಯುಂಡೈ ಕ್ರೆಟಾ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ವಿಟಾರಾ ಬ್ರೆಝಾ

2018ರ ಅಕ್ಟೊಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಸುಮಾರು 15,000 ಯೂನಿಟ್ ಮಾರಾಟ ಮಾಡಿದ್ದು, ಅಂಕಿ ಅಂಷಗಳ ಪ್ರಕಾರ ಹ್ಯುಂಡೈ ಸಂಸ್ಥೆಯಲ್ಲಿನ ಕ್ರೆಟಾ ಕಾರುಗಳನ್ನು ಹಿಂದಿಕ್ಕಿದೆ. ಈ ನಿಟ್ಟಿನಲ್ಲಿ ಕಾರಿನ ಖರೀದಿಯ ನಂತರ ಕಾರು ನಿಮ್ಮ ಕೈಗೆ ಬರಲು ಸುಮಾರು 4 ರಿಂದ 6 ವಾರಗಳು ಕಾಯಬೇಕಾಗಿದೆ.

ಮಾರಾಟದಲ್ಲಿ ಹ್ಯುಂಡೈ ಕ್ರೆಟಾ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಜೊತೆಗೆ ಮೊದಲ ಬಾರಿಗೆ ಬಿಡುಗಡೆಯಾದಾಗ ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿದ್ದ ವಿಟಾರಾ ಬ್ರೇಝಾ ಕಾರುಗಳು ಇದೀಗ ಎಎಂಟಿ (ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಸೌಲಭ್ಯದೊಂದಿಗೆ ಬಿಡುಗಡೆಯಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಎಎಂಟಿ ವರ್ಷನ್ ವಿಟಾರಾ ಬ್ರೇಝಾ ಕಾರುಗಳನ್ನು ಆರಂಭಿಕವಾಗಿ ರೂ.8.54 ಲಕ್ಷಕ್ಕೆ ಬಿಡುಗಡೆಗೊಳಿಸಲಾಗಿದೆ.

ಮಾರಾಟದಲ್ಲಿ ಹ್ಯುಂಡೈ ಕ್ರೆಟಾ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಎಂಜಿನ್ ಸಾಮರ್ಥ್ಯ

ಡಿಸೇಲ್ ಎಂಜಿನ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ವಿಟಾರಾ ಬ್ರೇಝಾ ಕಾರುಗಳು 1.3-ಲೀಟರ್ ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 88-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವರ್ಷನಲ್ಲಿ ಖರೀದಿಗೆ ಲಭ್ಯವಿದ್ದು, ಪ್ರತಿ ಲೀಟರ್ ಡಿಸೇಲ್‌ಗೆ 24.3 ಮೈಲೇಜ್ ನೀಡಬಲ್ಲವು.

ಮಾರಾಟದಲ್ಲಿ ಹ್ಯುಂಡೈ ಕ್ರೆಟಾ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಹೊಸ ಕಾರಿನ ವೈಶಿಷ್ಟ್ಯತೆ ಎಎಂಟಿ ಸೌಲಭ್ಯ ಹೊರತು ಪಡಿಸಿ ಮ್ಯಾನುವಲ್ ಮಾದರಿಯಲ್ಲೇ ಹೊಸ ಕಾರಿನ ವಿನ್ಯಾಸಗಳನ್ನು ಮುಂದುವರಿಸಲಾಗಿದ್ದು, ಪ್ರತಿ ಕಾರು ಆವೃತ್ತಿಯಲ್ಲೂ ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಸೇರಿದಂತೆ ಹೊಸ ಬಗೆಯ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪಡೆದಿದೆ.

ಮಾರಾಟದಲ್ಲಿ ಹ್ಯುಂಡೈ ಕ್ರೆಟಾ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಈ ಹಿಂದೆ ಲಭ್ಯವಿದ್ದ ಬಣ್ಣಗಳ ಜೊತೆ ಹೊಸದಾಗಿ ಆಟೋನಮ್ ಆರೇಂಜ್ ಮತ್ತು ಪರ್ಲ್ ಆರ್ಟಿಕ್ ಡ್ಯುಯಲ್ ಟೋನ್ ಬಣ್ಣ ಪಡೆದಿರುವ ಎಎಂಟಿ ಆವೃತ್ತಿಗಳು ಕ್ರೋಮ್ ಗ್ರೀಲ್, ಕಾರಿನ ಬೂಟ್ ಮೇಲೆ ಗಾರ್ನಿಷ್ ವಿನ್ಯಾಸ ಪಡೆದಿದ್ದು, ಎಎಂಟಿ ವರ್ಷನ್ ಟಾಪ್ ಎಂಡ್ ಮಾದರಿಯಲ್ಲಿ ಬ್ಲ್ಯಾಕ್ ಫಿನಿಷಿಂಗ್ ನ್ಯೂ ಅಲಾಯ ಚಕ್ರಗಳನ್ನು ಬಳಕೆ ಮಾಡಲಾಗಿದೆ.

ಮಾರಾಟದಲ್ಲಿ ಹ್ಯುಂಡೈ ಕ್ರೆಟಾ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಇನ್ನು ಕಾರಿನ ಇಂಟಿರಿಯರ್ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಎಎಂಟಿಯ ಎಲ್ಲಾ ಕಾರು ಆವೃತ್ತಿಗಳು ಸಹ ಬ್ಲ್ಯಾಕ್ ಥೀಮ್ ಡ್ಯಾಶ್‌ಬೋರ್ಡ್ ಸೌಲಭ್ಯ ಹೊಂದಿದ್ದು, ಇನ್ನುಳಿದಂತೆ ಮ್ಯಾನುವಲ್ ಮಾದರಿಯಲ್ಲಿ ಬಳಕೆ ಮಾಡಿರುವ ತಾಂತ್ರಿಕ ಅಂಶಗಳನ್ನೇ ಇಲ್ಲೂ ಜೋಡಿಸಲಾಗಿದೆ.

More from DriveSpark

Article Published On: Thursday, November 22, 2018, 9:52 [IST]
English summary
Maruti brezza sales cross 3.5 lakhs.
Read more on maruti suzuki suv sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+