ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

By Praveen Sannamani

ಮಾರುತಿ ಸುಜುಕಿ ಸಂಸ್ಥೆಯು ಭಾರತದಲ್ಲಿ ಬಿಡುಗಡೆಗೊಳಿಸಿರುವ ಬಹುತೇಕ ಕಾರುಗಳ ಭಾರೀ ಜನಪ್ರಿಯತೆಯೊಂದಿಗೆ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಸ್ಪೋರ್ಟಿ ಲುಕ್‌ನೊಂದಿಗೆ ಕಳೆದ ವರ್ಷ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಸೆಲೆರಿಯೊ ಎಕ್ಸ್ ಹ್ಯಾಚ್‌ಬ್ಯಾಕ್ ಕಾರುಗಳು ಇದೀಗ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನಕ್ಕೇರುವ ನಿಟ್ಟಿನಲ್ಲಿ ಮತ್ತಷ್ಟು ಹೊಸ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆದಿದೆ.

ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್ ಹ್ಯಾಚ್‌ಬ್ಯಾಕ್ ಕಾರುಗಳು ಸಾಮಾನ್ಯ ಸೆಲೆರಿಯೊ ಕಾರುಗಳಿಂತಲೂ ವಿಭಿನ್ನವಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.4.57 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ. ಹೀಗಾಗಿ ಎಂಟ್ರಿ ಲೆವಲ್ ಕಾರುಗಳಲ್ಲಿ ಸ್ಪೋರ್ಟಿ ಡಿಸೈನ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗಿದ್ದು, ಕಾರಿನ ಕುರಿತಾ ಮತ್ತಷ್ಟು ತಾಂತ್ರಿಕ ಮಾಹಿತಿಗಳನ್ನ ಕೆಳಗಿನ ಸ್ಲೈಡರ್‌ಗಳಲ್ಲಿ ಚರ್ಚಿಸಲಾಗಿದೆ.

ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಕಾರಿನ ವೈಶಿಷ್ಟ್ಯತೆಗಳು

ಮಧ್ಯಮ ವರ್ಗದ ಗ್ರಾಹಕರು ಹೆಚ್ಚಾಗಿ ಹ್ಯಾಚ್‌ಬ್ಯಾಕ್ ಕಾರುಗಳ ಖರೀದಿಗೆ ಹೆಚ್ಚಿನ ಒಲವು ತೊರುತ್ತಿದ್ದು, ಸೆಲೆರಿಯೊ ಎಕ್ಸ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಬಿಡುಗಡೆಯಾಗಿರುವ ಉತ್ತಮ ಮಾದರಿ ಎನ್ನಬಹುದಾದ ಹಲವು ಹೊಸ ವೈಶಿಷ್ಟ್ಯತೆಗಳನ್ನ ಪಡೆದುಕೊಂಡಿದೆ.

ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಮೇಲೆ ಹೇಳಿದಂತೆ ಸಾಮಾನ್ಯ ಸೆಲೆರಿಯೊ ಕಾರುಗಳಿಂತಲೂ ಭಿನ್ನವಾಗಿರುವ ಸೆಲೆರಿಯೊ ಎಕ್ಸ್ ಕಾರುಗಳು ಸ್ಪೋರ್ಟಿ ಲುಕ್ ಹೊಂದಿದ್ದು, ಹೆಕ್ಸಾಗೊನಲ್ ಗ್ರಿಲ್ ಪ್ರೇರಿತ ಫ್ರಂಟ್ ಬಂಪರ್, ಬ್ಲ್ಯಾಕ್ ಥೀಮ್ ವಿನ್ಯಾಸ ಹೊಂದಿದೆ.

ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಆದ್ರೆ ಸೆಲೆರಿಯೊ ಎಕ್ಸ್ ಕಾರುಗಳಲ್ಲಿ ಕ್ರೋಮ್ ವಿನ್ಯಾಸಗಳನ್ನು ಕೈಬಿಡಲಾಗಿದ್ದು, ಬ್ಲ್ಯಾಕ್ ಫೈಬರ್ ಗಾರ್ನಿಷ್, ವೀಲ್ಹ್ ಆರ್ಚ್, ಬ್ಲ್ಯಾಕ್ ಥೀಮ್ ಡೋರ್ ಹ್ಯಾಂಡಲ್, ರೂಫ್ ರೈಲ್ಸ್, 165ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಹೊಂದಿರುವುದು ಕಾರಿನ ನೋಟಕ್ಕೆ ಹೊಸ ಮೆರಗು ತಂದಿವೆ.

ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಎಂಜಿನ್ ಸಾಮರ್ಥ್ಯ

1.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಸೆಲೆರಿಯೊ ಎಕ್ಸ್ ಕಾರುಗಳು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗೆ ಲಭ್ಯವಿದ್ದು, 67-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಬ್ಲ್ಯಾಕ್ ಅಲಾಯ್ ವೀಲ್ಹ್‌ಗಳು

ಸೆಲೆರಿಯೊ ಎಕ್ಸ್ ಕಾರುಗಳು ಸ್ಪೋರ್ಟಿ ಲುಕ್ ಹೊಂದಿರುವುದಲ್ಲದೇ ಕಾರಿನ ವಿನ್ಯಾಸಕ್ಕೆ ತಕ್ಕಂತೆ 14-ಇಂಚಿನ ಬ್ಲ್ಯಾಕ್ ಶೇಡ್ ಅಲಾಯ್ ಚಕ್ರಗಳನ್ನು ಪಡೆದಿಕೊಂಡಿದ್ದು, ವಿಎಕ್ಸ್ಐ ಮತ್ತು ಜೆಡ್ಎಕ್ಸ್ಐ ಎಂಬ ಎರಡು ಪ್ರಮುಖ ವೆರಿಯೆಂಟ್‌ಗಳು ಆಯ್ಕೆಗೆ ಲಭ್ಯವಿದೆ.

ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಸುರಕ್ಷಾ ಸೌಲಭ್ಯಗಳು

ಖರೀದಿಗೆ ಲಭ್ಯವಿರುವ ವಿಎಕ್ಸ್ಐ ಮತ್ತು ಜೆಡ್ಎಕ್ಸ್ಐ ಎರಡು ಮಾದರಿಯಲ್ಲೂ ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಬಿಎಸ್ ಸೌಲಭ್ಯವನ್ನು ಆಯ್ಕೆ ರೂಪದಲ್ಲಿ ಖರೀದಿಸಬೇಕಾಗುತ್ತದೆ.

ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಕಾರಿನ ಒಳವಿನ್ಯಾಸ

ಚಾಲಕ ಸೇರಿ 4 ಜನ ಅರಾಮವಾಗಿ ಪ್ರಯಾಣಿಬಹುದಾದಷ್ಟು ಒಳವಿನ್ಯಾಸ ಹೊಂದಿರುವ ಸೆಲೆರಿಯೊ ಎಕ್ಸ್ ಕಾರುಗಳು, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್‌ರೆಸ್ಟ್, ವಿಸ್ತರಿತ ಬೂಟ್ ಸ್ಪೆಸ್, ಎಲೆಕ್ಟ್ರಿಕ್ ಅಡ್ಜೆಸ್ಟೆಬಲ್ ರಿಯರ್ ವ್ಯೂವ್ ಮಿರರ್, ಕೀ ಲೆಸ್ ಎಂಟ್ರಿ, ರಿಯರ್ ವೈಪರ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯವಿದೆ.

ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಒಟ್ಟಿನಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳ ವಿಭಾಗದಲ್ಲಿ ವಿಶೇಷ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಸೆಲೆರಿಯೊ ಎಕ್ಸ್ ಕಾರುಗಳು ಸಾಮಾನ್ಯ ಸೆಲೆರಿಯೊ ಕಾರುಗಳಿಂತಲೂ ಉತ್ತಮ ಸೌಲಭ್ಯಗಳೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ಇದು ಮಧ್ಯವರ್ಗದ ಜೊತೆ ಜೊತೆಗೆ ಯುವ ಸಮುದಾಯ ನೆಚ್ಚಿನ ಆಯ್ಕೆಯಾಗುತ್ತಿದೆ.

More from DriveSpark

Article Published On: Wednesday, August 8, 2018, 19:03 [IST]
English summary
Maruti Celerio X Top Features: Rugged Design, Black Alloy Wheels, AGS, Dual Airbags & More.
Read more on maruti suzuki hatchback
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+