ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

2018ರ ಆಗಸ್ಟ್ ತಿಂಗಳಿನಲ್ಲಿ ಹಲವಾರು ಕಾರುಗಳು ದೇಶಿಯ ಮಾರಿಕಟ್ಟೆಗೆ ಲಗ್ಗೆ ಇಟ್ಟಿದ್ದು, ಅವುಗಳಲ್ಲಿ ಒಂದಾದ ಮಾರುತಿ ಸುಜುಕಿ ಸಿಯಾಜ್ ಫೇಸ್‍‍‍ಲಿಫ್ಟ್ ಕಾರು ಆಗಸ್ಟ್ 20ರಂದು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿತು. ಈಗಾಗಲೆ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರುಗಳನ್ನು ಮಾರುತಿ ಸುಜುಕಿ ಸಿಯಾಜ್ ಕಾರು ಹಿಂದಿಕ್ಕಿದೆ.

ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

ಹಿಂದಿನ ತಲೆಮಾರಿನ ಸಿಯಾಜ್ ಕಾರಿನಂತೆಯೆ ಫೇಸ್‍ಲಿಫ್ಟ್ ಸಿಯಾಜ್ ಕಾರುಗಳು ಕೂಡಾ ಗ್ರಾಹಕರಲ್ಲಿ ಹೆಚ್ಚು ಕುತುಹಲವನ್ನು ಹುಟ್ಟುಹಾಕಿದ್ದು, 2018 ಸೆಪ್ಟೆಂಬರ್ ತಿಂಗಳಿನಲ್ಲಿ 6,246 ಕಾರುಗಳು ಮರಾಟಗೊಂಡಿದೆ. ಇನ್ನು ಸಿಯಾಜ್ ಕಾರುಗಳಿಗೆ ಪೈಪೋಟಿ ಆಗಿದ್ದ ಹ್ಯುಂಡೈ ವೆರ್ನಾ 3,501 ಯೂನಿಟ್ ಮತ್ತು 2,564 ಹೋಂಡಾ ಸಿಟಿ ಕಾರುಗಳು ಮಾರಾಟಗೊಂಡಿದೆ.

ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

ಮಾರುತಿ ಸುಜುಕಿ ಸಂಸ್ಥೆಯು ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಪ್ರೇರಿತ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳನ್ನು ಗ್ರಾಹಕರ ಆದ್ಯತೆಗೆ ತಕ್ಕಂತೆ ಒಟ್ಟು 11 ಆವೃತ್ತಿಗಳಲ್ಲಿ ಅಭಿವೃದ್ಧಿ ಮಾಡಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಕಾರು ಆವೃತ್ತಿಗೆ ರೂ.8.19 ಲಕ್ಷ ಮತ್ತು ಟಾಪ್ ಎಂಡ್ ಆವೃತ್ತಿಗೆ ರೂ.10.97 ಲಕ್ಷ ಬೆಲೆ ನಿಗದಿಗೊಳಿಸಲಾಗಿದೆ.

ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

ಹೊಸ ಸಿಯಾಜ್ ಕಾರುಗಳು ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳಲ್ಲಿ ಆಯ್ಕೆಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಸಿಗ್ಮಾ, ಡೆಲ್ಟಾ, ಡೆಲ್ಟ್ ಎಟಿ, ಜೆಟಾ, ಜೆಟಾ ಎಟಿ, ಆಲ್ಫಾ ಮತ್ತು ಆಲ್ಫಾ ಎಟಿ ಕಾರುಗಳನ್ನ ಪರಿಚಯಿಸಿದೆ. ಹೀಗಾಗಿ ವಿವಿಧ ಕಾರು ಆವೃತ್ತಿಗಳಲ್ಲಿ ವಿವಿಧ ಹಂತದ ಬೆಲೆ ಪಟ್ಟಿ ನಿಗದಿ ಮಾಡಲಾಗಿದೆ.

ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

ಹೊಸ ಸಿಯಾಜ್ ವಿನ್ಯಾಸಗಳು

ಹಳೆಯ ಸಿಯಾಜ್ ಕಾರುಗಳಿಂತಲೂ ಮಹತ್ವದ ಬದಲಾಣೆಗಳನ್ನ ಹೊಂದಿರುವ ಹೊಸ ಸಿಯಾಜ್ ಕಾರುಗಳು, ಮರು ವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಡಿಆರ್‍ಎಲ್ ಹೆಡ್‍‍ಲ್ಯಾಂಪ್ಸ್, ಸೆಂಟ್ರಲ್ ಏರ್ ಡ್ಯಾಮ್‍ ನೊಂದಿಗೆ ರಿವ್ಯಾಂಪ್ಡ್ ಫ್ರಂಟ್ ಬಂಪರ್ ಮತ್ತು ಸಿ-ಆಕಾರದ ಕ್ರೋಮ್ ಅನ್ನು ಫಾಗ್ ಲ್ಯಾಂಪ್‍‍ನಲ್ಲಿ ಅಳವಡಿಸಿರುವುದು ಕಾರಿಗೆ ಸ್ಪೋರ್ಟಿ ಲುಕ್ ನೀಡಿದೆ.

ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

ಇದಲ್ಲದೆ ಸಿಯಾಜ್ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಮಲ್ಟಿ ಸ್ಪೋಕ್ 15 ಇಂಚಿನ ಅಲಾಯ್ ಚಕ್ರಗಳು, ಕ್ರೋಮ್ ಆಧಾರಿತ ಡೋರ್ ಹ್ಯಾಂಡಲ್ಸ್ ಮತ್ತು ಒಆರ್‍‍ವಿಎಮ್ ಅನ್ನು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಪ್ರಸ್ತುತ ಮಾರಾಟಗೊಳ್ಳುತ್ತಿರುವ ಸಿಯಾಜ್ ಕಾರಿನಿಂದ ಆಧರಿಸಿದೆ. ಹಾಗೆಯೇ ಮರು ವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಕೂಡಾ ಅಳವಡಿಸಲಾಗಿದೆ.

ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

ಕಾರಿನ ಒಳಭಾಗದ ವಿನ್ಯಾಸ

ಈ ಹಿಂದಿನ ಸಿಯಾಜ್ ಕಾರುಗಳಲ್ಲಿ ಲಭ್ಯವಿದ್ದ ಬಹುತೇಕ ತಾಂತ್ರಿಕ ಅಂಶಗಳು ಹೊಸ ಕಾರಿನಲ್ಲೂ ಮುಂದುವರಿಸಲಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಕೆಲವೊಂದು ಹೊಸ ಸೌಲಭ್ಯಗಳನ್ನು ಜೋಡಣೆ ಮಾಡಲಾಗಿದೆ. ಇವುಗಳಲ್ಲಿ ಮರದ ದಿಣ್ಣೆಗಳಿಂದ ತಯಾರಿಸಲಾದ ಡ್ಯಾಶ್‌ಬೋರ್ಡ್, ಬಾಗಿಲು ಅಂಚುಗಳು ಹೊಸ ಆಕರ್ಷಣೆಯಾಗಿವೆ.

ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

ಜೊತೆಗೆ ಕಾರಿನ ಸ್ಟೀರಿಂಗ್ ವೀಲ್ಹ್, ಆಕರ್ಷಕವಾದ ಲೆದರ್ ಸೀಟುಗಳು, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ ಸಿಸ್ಟಂ, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ ಟಿಟಿಪಿ ಕಲರ್ ಎಂಐಡಿ ಮತ್ತು ಕ್ರೂಸ್ ಕಂಟ್ರೊಲರ್ ಸೌಲಭ್ಯವಿದೆ.

ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

ಎಂಜಿನ್ ಸಾಮರ್ಥ್ಯ

ಎಸ್‌ಹೆಚ್‌ವಿಎಸ್ ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಹೊಂದಿರುವ ಪೆಟ್ರೋಲ್ ಕಾರುಗಳು 1.5-ಲೀಟರ್ ಎಂಜಿನ್ ಪ್ರೇರಣೆಯೊಂದಿಗೆ 103-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಇವುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಇಲ್ಲವೇ 4-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ವರ್ಷನ್ ಆಯ್ಕೆ ಮಾಡಬಹುದು.

ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

ಹಾಗೆಯೇ ಡಿಸೇಲ್ ಕಾರುಗಳು ಸಹ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ 1.3-ಲೀಟರ್ ಎಂಜಿನ್ ಪ್ರೇರಣೆಯಿಂದ 88-ಬಿಎಚ್‌ಪಿ ಮತ್ತು 200-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಗರಿಷ್ಠ ಮಟ್ಟದ ಇಂಧನ ದಕ್ಷತೆ ಪಡೆದುಕೊಂಡಿದೆ.

ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

ಹೊಸ ಕಾರುಗಳ ಮೈಲೇಜ್

ಸಿಯಾಜ್ ಫೇಸ್‌ಲಿಫ್ಟ್ ಕಾರುಗಳ ಎಂಜಿನ್ ವಿಭಾಗದಲ್ಲಿ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸುವ ಮೂಲಕ ಇಂಧನ ದಕ್ಷತೆಯಲ್ಲಿ ಭಾರೀ ಬದಲಾವಣೆ ತರಲಾಗಿದ್ದು, ಹೊಸ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 21.56ಕಿ.ಮಿ( ಮ್ಯಾನುವಲ್ ವರ್ಷನ್), 20.28ಕಿ.ಮೀ( ಆಟೋಮ್ಯಾಟಿಕ್ ವರ್ಷನ್) ಮತ್ತು ಡೀಸೆಲ್ ಕಾರುಗಳು ಪ್ರತಿ ಲೀಟರ್‌ಗೆ 24ಕಿ.ಮೀ ಮೈಲೇಜ್ ಹಿಂದಿರುಗಿಸಲಿವೆ.

ಮಾರಾಟದಲ್ಲಿ ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್

ಸುರಕ್ಷಾ ಸೌಲಭ್ಯಗಳು

ಸಾಮಾನ್ಯ ಕಾರುಗಳಲ್ಲಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಹೊಂದಿರುವ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳು ಟಾಪ್ ಎಂಡ್ ಆವೃತ್ತಿಯಲ್ಲಿ 6 ಏರ್‌ಬ್ಯಾಗ್‌ಗಳನ್ನು ಪಡೆದುಕೊಂಡಿದೆ. ಜೊತೆಗೆ ಎಬಿಎಸ್, ಚಾಲಕನ್ನು ಎಚ್ಚರಿಸುವ ಸೀಟ್ ಬೆಲ್ಟ್ ವಾರ್ನಿಂಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಸ್ಪೀಡ್ ವಾರ್ನಿಂಗ್ ಮಾನಿಟರ್ ಇದರಲ್ಲಿದೆ. ಇದು ಗಂಟೆಗೆ 120 ಕಿ.ಮಿಗಿಂತ ಹೆಚ್ಚು ಚಾಲನೆ ಮಾಡುವಾಗ ಬಿಫ್ ಸೌಂಡ್ ಮೂಲಕ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ.

Source:autopunditz

More from DriveSpark

Article Published On: Friday, October 5, 2018, 17:03 [IST]
English summary
Maruti Ciaz BEATS Hyundai Verna & Honda City.
Read more on maruti suzuki sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+