ಮಾರಾಟದಲ್ಲಿ ಮತ್ತೆ ದಾಖಲೆ ನಿರ್ಮಿಸಿದ ಮಾರುತಿ ಸುಜುಕಿ ಡಿಜೈರ್ ಕಾರು..
ದೇಶಿಯಾ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು 2016ರಲ್ಲಿ ತಮ್ಮ ಡಿಜೈರ್ ಕಂಪ್ಯಾಕ್ಟ್ ಸಿಡಾನ್ ಕಾರನ್ನು ಬಿಡುಗಡೆಗೊಳಿಸಿತ್ತು.
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು 2016ರಲ್ಲಿ ತಮ್ಮ ಡಿಜೈರ್ ಕಂಪ್ಯಾಕ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಏಪ್ರಿಲ್ 2018 ರ ಅವಧಿಯಲ್ಲಿ 25,935 ಯೂನಿಟ್ ಕಾರುಗಳನ್ನು ಮಾರಾಟಗೊಳಿಸಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದೆ.

ಮಾರುತಿ ಸುಜುಕಿ ಸಂಸ್ಥೆಯು ಡಿಜೈರ್ ಮಾತ್ರವಲ್ಲದೆ 2018ರ ಏಪ್ರಿಲ್ ಅವಧಿಯಲ್ಲಿ22,776 ಯೂನಿಟ್ ಸ್ವಿಫ್ಟ್ ಕಾರುಗಳು ಮತ್ತು 21,223 ಯೂನಿಟ್ ಆಲ್ಟೋ ಕಾರುಗಳನ್ನು ಮಾರಾಟಮಾಡಿವೆ. 2016ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡಿಜೈರ್ ಕಾರುಗಳು ಬಿಡುಗಡೆಗೊಂಡಾಗಿನೊಂದಲೂ ಹೆಚ್ಚು ಮಾರಾಟವಾಗುತ್ತಿವೆ.

ಡಿಜೈರ್ ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಹಾರ್ಟೆಕ್ಟ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಎಂಜಿನ್ ಮತ್ತು ಗೇರ್‍ಬಾಕ್ಸ್ ಅನ್ನು ಸ್ವಿಫ್ಟ್ ಕಾರಿನಂದ ಪದೆದುಕೊಂಡಿದೆ. 2018ರ ಏಪ್ರಿಲ್‍ನಲ್ಲಿ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳು ಸೇರಿ ಬರೊಬ್ಬರಿ 50,000 ಯೂನಿಟ್ ರಷ್ಟು ಮಾರಾಟಗೊಂಡಿವೆ.

ಡಿಜೈರ್ ಕಾರುಗಳು ಸ್ವಂತ ಬಳಕೆಗೆ ಮಾತ್ರವಲ್ಲದೆ ಕ್ಯಾಬ್ ಆಪರೇಟರ್‍ಗಳು ಕೂಡಾ ಹೆಚ್ಚು ಬಳಸುವ ಕಾರಾಗಿದ್ದು, ಓಲಾ ಮತ್ತು ಊಬರ್ ಕ್ಯಾಬ್ ಸರ್ವಿಸ್‍ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕೆಲ ದಿನಗಳ ನಂತರ ಎರಡನೆಯ ತಲೆಮಾರಿನ ಡಿಜೈರ್ ಟೂರ್ ಕಾರನ್ನು ಬಿಡುಗಡೆಗೊಳಿಸಿ ಕೇವಲ ಕ್ಯಾಬ್ ಚಾಲಕರಿಗೆ ಸಹಾಯವಾಗುವಂತೆ ತಯಾರು ಮಾಡಲಾಗಿದೆ.

ಇದಲ್ಲದೆ ಸಂಸ್ಥೆಯು ಮೂರನೆಯ ತಲೆಮಾರಿನ ಡಿಜೈರ್ ಕಾರುಗಳನ್ನು ಕೂಡ ಬಿಡುಗಡೆಗೊಳಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿದೆ. ಮೂರನೆಯ ತಲೆಮಾರಿನ ಡಿಜೈರ್ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 5.56 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಮೂರನೆಯ ತಲೆಮಾರಿನ ಡಿಸೈರ್ ಕಾರುಗಳು 1.2 ಲೀಟರ್ ಕೇ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82 ಬಿಹೆಚ್‍ಪಿ ಮತ್ತು 113ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಡೀಸೆಲ್ ಮಾದರಿಯ ಡಿಜೈರ್ ಕಾರುಗಳು 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಎಂಜಿನ್ ಸಹಾಯದಿಂದ 74ಬಿಹೆಚ್‍ಪಿ ಮತ್ತು 190ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಮಾದರಿಗಳಂತೆಯೆ 5 ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‍ಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡಿಜೈರ್ ಕಾರಿನ ಎಲ್ಲಾ ವೇರಿಯಂಟ್‍ಗಳಲ್ಲಿಯು ಟ್ವಿನ್ ಏರ್‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಅಳವಡಿಸಲಾಗಿದ್ದು, ಟಾಪ್ ಎಂಡ್ ವೇರಿಯಂಟ್ ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಸ್ಮಾರ್ಟ್ ಫೋನ್ ಕನೆಕ್ಟಿವಿಯನ್ನು ಹೊಂದಿರುವ ಸ್ಮಾರ್ಟ್‍ಪ್ಲೇ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದುಕೊಂಡಿರಲಿದೆ.


Click it and Unblock the Notifications








