ಮಾರಾಟದಲ್ಲಿ ಹೊಸ ದಾಖಲೆ ಬರೆದ ಮಾರುತಿ ಸುಜುಕಿ ಇಕೊ
ದೇಶಿಯ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳ ಬೇಡಿಕೆಯು ಹೆಚ್ಚುತ್ತಿದ್ದ ಕಾರಣ ಮಾರುತಿ ಸುಜುಕಿ ಸಂಸ್ಥೆಯು ಮೊದಲ ಬಾರಿಗೆ 2010ರಲ್ಲಿ ತಮ್ಮ ಇಕೊ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಬಿಡುಗಡೆಗೊಂಡ 8 ವರ್ಷಗಳಲ್ಲಿ ಸುಮಾರು 5 ಲಕ್ಷಕ್ಕಿಂತ ಹೆಚ್ಚಿನ ಇಕೊ ವಾಹನಗಳು ಮಾರಾಟಗೊಂಡು ಹೊಸ ದಾಖಲೆಯನ್ನು ಬರೆದಿದೆ.

ಹೌದು, ಮಾರುಕಟ್ಟೆಯಲ್ಲಿ ಹಲವಾರು ಎಂಪಿವಿ ಕಾರುಗಳು ಬಿಡುಗಡೆಗೊಳ್ಳುತ್ತಿದ್ದರೂ ಗ್ರಾಹಕರು ಇನ್ನು 8 ವರ್ಷಗಳ ಹಿಂದೆ ಬಿಡುಗಡೆಗೊಂಡ ಇಕೊ ಎಂಪಿವಿ ಕಾರಿನ ಕಡೆಗೆ ಒಲವನ್ನು ತೋರುತ್ತಿದ್ದಾರೆ. ಏಕೆಂದರೆ ಸುಮಾರು 5 ಮತ್ತು 7 ಮಂದಿ ಕೂರಬಹುದಾದ ಈ ಕಾರು ಕುಟುಂಬದೊಂದಿಗೆ ಹೊರಸಂಚಾರಕ್ಕೆ ಹೋಗಲು ಬಹು ಸೌಕರ್ಯವಂತವಾಗಿದೆ.

ಮಾರುತಿ ಸುಜುಕಿ ಸಂಸ್ಥೆಯು ಇಕೊ ಎಂಪಿವಿ ಕಾರನ್ನು ಕೇವಲ ಸ್ವಂತ ಬಳಕೆಗೆ ಮಾತ್ರವಲ್ಲದೇ ವ್ಯವಹಾರಿಕ ಕಾರ್ಯಗಳಿಗೆ ಕೂಡಾ ಬಳಸಬಹುದಾದ ಹಾಗೆ ವಿನ್ಯಾಸ ಮಾಡಲಾಗಿದ್ದು, ಇದರಲ್ಲಿ ಹೆಚ್ಚಿನ ವಸ್ತುಗಳನ್ನು ಸರಬರಾಜು ಮಾಡಬಹುದಾಗಿದೆ.

ಈಗಲೂ ಕೂಡ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇರುವ ಈ ಕಾರು ಪ್ರತೀ ತಿಂಗಳು ಸುಮಾರು 7 ಸಾವಿರ ಕಾರುಗಳ ಬುಕ್ಕಿಂಗ್ ಪಡೆದುಕೊಳ್ಳುತ್ತಿದ್ದು, ಉತ್ತಮ ಲೆಗ್‍ರೂಂ ಮತ್ತು ಪ್ಯಾಸೆಂಜರ್‍ಗಳಿಗಾಗಿ ಆರಾಮದಾಯಕವಾದ ಹೆಡ್‍ರೂಂ ಅನ್ನು ಒದಗಿಸಲಾಗಿದೆ.

ಮಾರುತಿ ಸುಜುಕಿ ಎಂಪಿವಿ ಕಾರು ಐದು ಹಾಗು ಏಳು ಆಸಗಳುಳ್ಳ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಜೊತೆಗೆ ಅಧಿಕವಾಗಿ ಸರಕುಗಳನ್ನು ಸಾಗಿಸಲು ಮತ್ತು ಹೊರಸಂಚಾಕ್ಕೆ ಹೋಗುವ ಸಮಯದಲ್ಲಿ ಅಧಿಕವಾಗಿ ಬೇಕಾದ ಸಾಮಗ್ರಿಗಳನ್ನು ತುಂಬಿಕೊಳ್ಳಲು 540ಲೀಟರ್‍ನ ಬೂಟ್ ಸ್ಪೇಸ್ ಅನ್ನು ನೀಡಲಾಗಿದೆ.

ಮರುತಿ ಸುಜುಕಿ ಇಕೊ ಎಂಪಿವಿ ಕಾರು 3675ಎಂಎಂ ಉದ್ದ, 1475ಎಂಎಂ ಅಗಲ, 1800ಎಂಎಂ ಎತ್ತರ, 2350ಎಂಎಂ ವ್ಹೀಲ್‍ಬೇಸ್, 160ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಮತ್ತು 40 ಲೀಟರ್‍ನಷ್ಟು ಫ್ಯುಯಲ್ ಟ್ಯಾಂಕ್ ಕೆಪಾಸಿಟಿಯನ್ನು ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ
ಜನಪ್ರಿಯ ಮಾರುತಿ ಸುಜುಕಿ ಇಕೊ ಎಂಪಿವಿ ಕಾರು 1196ಸಿಸಿ 4 ಸಿಲೆಂಡರ್ ಮಲ್ಟಿ-ಪಾಯಿಂಟ್ ಇಂಜೆಕ್ಷನ್, ಪೆಟ್ರೋಲ್ ಎಂಜಿನ್ ಸಹಾಯದಿಂದ 69ಬಿಹೆಚ್‍ಪಿ ಮತ್ತು 101ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮಾರುತಿ ಸುಜುಕಿ ಇಕೊ ಎಂಪಿವಿ ಸಂಸ್ಥೆಯಿಂದ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅತ್ಯುತ್ತಮವಾದ ಕಾರಾಗಿದ್ದು, ಸ್ವಂತ ಬಳಕೆಗೆ ಮತ್ತು ವ್ಯಾಪಾರದ ಮೂಲಗಳಿಗೆ ಬಳಸಿಕೊಳ್ಳಬಹುದಾಗಿದೆ. ಇಕೊ ಎಂಪಿವಿ ಕಾರು ಪ್ರಸ್ಥುತ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 3.32 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಹಾಗಿದ್ದರೆ ಕದಿಮೆ ಬೆಲೆಯಲ್ಲಿ ಮನೆ ಮಂದಿ ಎಲ್ಲರೂ ಕೂತು ಪ್ರಯಾಣಿಸಲು ಈ ಕಾರು ಬೆಸ್ಟ್ ಅಲ್ವಾ.?


Click it and Unblock the Notifications








