ಬಿಡುಗಡೆಗೆ ಸಿದ್ದವಾದ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ವಿಶೇಷತೆ ಏನು?

Written By:

ದೇಶಿಯ ಮಾರುಕಟ್ಟೆಯ ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಸದ್ಯ ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬಿಡುಗಡೆಗೆ ಸಿದ್ದವಾದ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ವಿಶೇಷತೆ ಏನು?

ಸೇಕೆಂಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಯಾಗಿರುವ ಎರ್ಟಿಗಾ ಫೇಸ್‌ಲಿಫ್ಟ್ ಕಾರು ಮಾದರಿಗಳು ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಳ್ಳುವ ಮೂಲಕ ಎಂಪಿವಿ ಕಾರುಗಳ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದಲ್ಲೇ ಇದೀಗ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿವೆ.

Recommended Video - Watch Now!
[Kannada] Maruti Swift 2018 - Full Specifications, Features, Price, Mileage, Colours - DriveSpark
ಬಿಡುಗಡೆಗೆ ಸಿದ್ದವಾದ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ವಿಶೇಷತೆ ಏನು?

ಈ ಹಿಂದಿನ ಮಾದರಿಗಿಂತ ಉದ್ದಳತೆಯಲ್ಲಿ ಹೆಚ್ಚಿನ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಎರ್ಟಿಗಾ ಫೇಸ್‌ಲಿಫ್ಟ್ ಕಾರುಗಳ ಕ್ಯಾಬಿನ್ ಸ್ಪೆಸ್ ಕೂಡಾ ಮೂಲ ಮಾದರಿಗಿಂತ ಹೆಚ್ಚಿರಲಿವೆ ಎನ್ನಲಾಗಿದೆ.

ಬಿಡುಗಡೆಗೆ ಸಿದ್ದವಾದ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ವಿಶೇಷತೆ ಏನು?

ಜೊತೆಗೆ ಕಾರಿನ ವಿಂಡ್‌ಸ್ಕ್ರೀನ್ ಅಳತೆಯಲ್ಲೂ ಬದಲಾವಣೆ ತರಲಾಗಿದ್ದು, ಹೊಸ ವಿನ್ಯಾಸದ ಅಲಾಯ್ ಚಕ್ರಗಳು ಮತ್ತು ಗುರುತರ ಬಾಡಿ ವಿನ್ಯಾಸಗಳು ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿ ಕಾರಿನ ಲುಕ್ ಹೆಚ್ಚಿಸಿವೆ.

ಬಿಡುಗಡೆಗೆ ಸಿದ್ದವಾದ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ವಿಶೇಷತೆ ಏನು?

ಇನ್ನು ಕಾರಿನ ಮುಂಭಾಗದ ಡಿಸೈನ್‌ಗಳ ಬಗೆಗೆ ಹೇಳುವುದಾದರೇ, ಶಾರ್ಪ್ ಲುಕ್, ಆಕರ್ಷಕ ಗ್ರಿಲ್ ಮತ್ತು ಪರಿಷ್ಕರಿಸಿದ ಬಂಪರ್‌ಗಳನ್ನು ಪಡೆದಿದ್ದು, ತಾಂತ್ರಿಕವಾಗಿಯು ಭಾರೀ ಬದಲಾವಣೆ ಹೊಂದಿರುವ ಮಾಹಿತಿ ಲಭ್ಯವಾಗಿದೆ.

ಬಿಡುಗಡೆಗೆ ಸಿದ್ದವಾದ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ವಿಶೇಷತೆ ಏನು?

ಎಂಜಿನ್ ಸಾಮರ್ಥ್ಯ

ಸದ್ಯ ಎರ್ಟಿಗಾ ಮಾದರಿಗಳು 1.4-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿದ್ದು, ಎರ್ಟಿಗಾ ಫೇಸ್‌ಲಿಫ್ಟ್ ಮಾದರಿಗಳು ಹೊಸದಾಗಿ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಪಡೆಯಲಿವೆ.

ಬಿಡುಗಡೆಗೆ ಸಿದ್ದವಾದ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ವಿಶೇಷತೆ ಏನು?

ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಬಳಕೆ ಹಿನ್ನೆಲೆ ಇಂಧನ ದಕ್ಷತೆ ಹೆಚ್ಚಲಿದ್ದು, 7 ಸೀಟರ್ ಎಂಪಿವಿ ಮಾದರಿಗಳನ್ನು ಪ್ಯಾಸೆಂಜರ್ ಕಾರುಗಳನ್ನಾಗಿ ಬಳಕೆ ಮಾಡುವ ಗ್ರಾಹಕರಿಗೆ ಹಾಗೂ ಕುಟುಂಬ ಸದಸ್ಯರು ಒಟ್ಟಾಗಿ ಹೊರಹೊಗಲು ಇನ್ನೊಂದು ಉತ್ತಮ ಆಯ್ಕೆ ಎನ್ನಬಹುದು.

ಬಿಡುಗಡೆಗೆ ಸಿದ್ದವಾದ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ವಿಶೇಷತೆ ಏನು?

ಬೆಲೆಗಳು (ಅಂದಾಜು)

ಹೊಸ ತಂತ್ರಜ್ಞಾನ ಬಳಕೆ ಹಿನ್ನೆಲೆ ಸಾಮಾನ್ಯ ಎರ್ಟಿಗಾ ಕಾರುಗಳಿಂತ ಫೇಸ್‌ಲಿಫ್ಟ್ ಆವೃತ್ತಿಗಳು ಹೆಚ್ಚುವರಿಯಾಗಿ 1 ರಿಂದ 2 ಲಕ್ಷದವರೆಗೆ ಬೆಲೆ ಹೊಂದುವ ನೀರಿಕ್ಷೆಗಳಿವೆ.

ಬಿಡುಗಡೆಗೆ ಸಿದ್ದವಾದ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ವಿಶೇಷತೆ ಏನು?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ಎಂಪಿವಿ ಮಾರಾಟದಲ್ಲಿ ಟೊಯೊಟಾ ಕ್ರಿಸ್ಟಾ ನಂತರದ ಸ್ಥಾನದಲ್ಲಿರುವ ಎರ್ಟಿಗಾ ಕಾರುಗಳು ಇದೀಗ ಫೇಸ್‌ಲಿಫ್ಟ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಬಿಡುಗಡೆಗೆ ಸಿದ್ದವಾದ ಮಹೀಂದ್ರಾ ಹೊಸ ಎಂಪಿವಿ ಕಾರುಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿವೆ.

Read more on maruti suzuki mpv
English summary
Maruti Ertiga Facelift India Launch: Specifications, Features & Launch Details.
Story first published: Friday, March 16, 2018, 15:19 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more