ಹೊಸ ಫೀಚರ್ಸ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಎರ್ಟಿಗಾ ಲಿಮಿಟೆಡ್ ಎಡಿಷನ್
ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಸದ್ಯದಲ್ಲೇ ಎರ್ಟಿಗಾ ಲಿಮಿಟೆಡ್ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಶಿಯ ಮಾರುಕಟ್ಟೆಯ ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಸದ್ಯದಲ್ಲೇ ಎರ್ಟಿಗಾ ಲಿಮಿಟೆಡ್ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸೇಕೆಂಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಯಾಗಿರುವ ಎರ್ಟಿಗಾ ಲಿಮಿಟೆಡ್ ಎಡಿಷನ್ ಕಾರು ಮಾದರಿಗಳು ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಳ್ಳುವ ಮೂಲಕ ಎಂಪಿವಿ ಕಾರುಗಳ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದಲ್ಲೇ ಇದೀಗ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ಇದೀಗ ಹೊಸ ಕಾರಿನ ಕುರಿತಾಗಿ ಪ್ರಮೋಷನಲ್ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ.

'ಟುಗೆದರ್‌ನೆಸ್ ಇಸ್ ದ ನ್ಯೂ ಸ್ಟೈಲ್' ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಹೊಸ ಕಾರುಗಳ ವಿನ್ಯಾಸಗಳ ಕುರಿತಾದ ವಿಡಿಯೋಗಳು ಪ್ರಸಾರವಾಗುತ್ತಿದ್ದು, ಕಾರಿನ ಹೊರಭಾಗದಲ್ಲಿ ನೀಡಲಾಗಿರುವ ಹೊಸ ವಿನ್ಯಾಸಗಳನ್ನು ಹೊರತುಪಡಿಸಿ ಸದ್ಯ ಮಾರಾಟವಾಗುತ್ತಿರುವ ಕಾರು ಮಾದರಿಯಂತೆಯೇ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಇನ್ನು ಮಾರುತಿ ಸುಜುಕಿ ಸಂಸ್ಥೆಯು ಇದೇ ವರ್ಷದ ಮೂರನೇ ತ್ರೈಮಾಸಿಕ ಅವಧಿಗೆ ಎರ್ಟಿಗಾ ಫೇಸ್‌ಲಿಫ್ಟ್ ಕಾರು ಮಾದರಿಯನ್ನು ಪರಿಚಯಿಸುತ್ತಿದ್ದು, ಈ ಹಿನ್ನೆಲೆ ಓಲ್ಡ್ ವರ್ಷನ್ ಎರ್ಟಿಗಾ ಕಾರುಗಳ ಸ್ಟಾಕ್ ಕ್ಲಿಯರೆನ್ಸ್ ಮಾಡುವ ಉದ್ದೇಶದಿಂದ ಲಿಮಿಟೆಡ್ ಎಡಿಷನ್ ಮಾದರಿಯಾಗಿ ಮಾರಾಟ ಮಾಡುತ್ತಿದೆ.

ಲಿಮಿಟೆಡ್ ಕಾರುಗಳು ಹೊಸ ವಿನ್ಯಾಸದ ಅಲಾಯ್ ಚಕ್ರಗಳು ಮತ್ತು ಗುರುತರ ಬಾಡಿ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ರೂಫ್ ಸ್ಪಾಯ್ಲರ್, ಫಾಗ್ ಲ್ಯಾಂಪ್ಸ್, ಕ್ರೋಮ್ಸ್ ಸೈಡ್ ಮೌಡಲಿಂಗ್ಸ್ ಜೊತೆಗೆ ಲಿಮಿಟೆಡ್ ಎಡಿಷನ್ ಬ್ಯಾಡ್ಜ್ ಹೊಂದಿರಲಿವೆ.

ಇನ್ನು ಹೊಸ ಕಾರುಗಳ ಇಂಟಿರಿಯರ್ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಡೋರ್ ಟ್ರಿಮ್ಸ್, ಲೆದರ್ ಸೀಟ್ಸ್, ಸ್ಟ್ರೀರಿಂಗ್ಸ್ ಕವರ್, ಡ್ಯಾಶ್‌ಬೋರ್ಡ್‌ಗಳಲ್ಲಿ ಫ್ಲಕ್ಸ್ ವುಡ್ಸ್ ಬಳಕೆ ಮಾಡಿರುವುದು ಕಾರಿನ ವಿಶೇಷತೆಯನ್ನು ಹೆಚ್ಚಿಸಿದ್ದು, ಕಾರಿನ ಬೆಲೆಯಲ್ಲೂ ರಿಯಾಯ್ತಿ ದೊರೆಯಲಿದೆ.

ಲಭ್ಯವಿರುವ ಬಣ್ಣಗಳು
ಲಿಮಿಟೆಡ್ ಎರ್ಟಿಗಾ ಕಾರುಗಳು ಸಿಲ್ಕಿ ಸಿಲ್ವರ್, ಸೂಪಿರಿಯರ್ ವೈಟ್ ಮತ್ತು ಮರೂನ್ ಬಣ್ಣಗಳಲ್ಲಿ ಖರೀದಿಸಬಹುದಾಗಿದ್ದು, ಎಂಜಿನ್ ವಿಭಾಗದಲ್ಲಿ ಬದಲಾವಣೆ ಪಡೆದುಕೊಂಡಿಲ್ಲ.

ಎಂಜಿನ್ ಸಾಮರ್ಥ್ಯ
1.4-ಲೀಟರ್ ಕೆ-14 ಸೀರಿಸ್ ಪೆಟ್ರೋಲ್ ಎಂಜಿನ್ ಹೊಂದಿರುವ ಎರ್ಟಿಗಾ ಕಾರುಗಳು 1.3-ಲೀಟರ್ ಮಲ್ಟಿ ಜೆಟ್ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆ ಸಹ ಇದ್ದು, ಪೆಟ್ರೋಲ್ ಆವೃತ್ತಿಯು 94ಬಿಎಚ್‌ಪಿ, 130ಎನ್ಎಂ ಮತ್ತು ಡೀಸೆಲ್ ಆವೃತ್ತಿಯು 89ಬಿಎಚ್‌ಪಿ, 200ಟಾರ್ಕ್ ಉತ್ಪಾದಿಸಬಲ್ಲವು.

ಇವುಗಳಲ್ಲಿ ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯ ಸ್ಟ್ಯಾಂಡರ್ಡ್ ಮಾದರಿಯಾಗಿರಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಫೌರ್ ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿರುವ ಮಾದರಿಯನ್ನು ಆಯ್ಕೆ ಮಾಡಬಹುದು.

ಲಿಮಿಟೆಡ್ ಎಡಿಷನ್ ಕಾರಿನ ಬೆಲೆಗಳು
ಸದ್ಯ ಮಾರಾಟವಾಗುತ್ತಿರುವ ಸಾಮಾನ್ಯ ಎರ್ಟಿಗಾ ಕಾರುಗಳಿಂತ ಲಿಮಿಟೆಡ್ ಎಡಿಷನ್ ಕಾರುಗಳ ಬೆಲೆಯು ರೂ. 14 ಸಾವಿರ ಹೆಚ್ಚಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.7.80 ಲಕ್ಷದಿಂದ ರೂ. 9.71 ಲಕ್ಷ ಬೆಲೆ ಪಡೆದುಕೊಂಡಿವೆ.


Click it and Unblock the Notifications








