ಮಾರುತಿ ಸುಜುಕಿ ಕಾರುಗಳಲ್ಲಿ ಇನ್ಮುಂದೆ ಲೀಡ್ ಬದಲಾಗಿ ಲೀಥಿಯಂ ಅಯಾನ್ ಬ್ಯಾಟರಿ

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಮತ್ತೊಮ್ಮೆ ವಾಹನ ಉದ್ಯಮದಲ್ಲಿ ಸಂಚಲನ ಸೃಷ್ಠಿಸಲು ಸಜ್ಜಾಗುತ್ತಿದೆ.

By Praveen Sannamani

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಮತ್ತೊಮ್ಮೆ ವಾಹನ ಉದ್ಯಮದಲ್ಲಿ ಸಂಚಲನ ಸೃಷ್ಠಿಸಲು ಸಜ್ಜಾಗುತ್ತಿದ್ದು, ಸದ್ಯದಲ್ಲೇ ತನ್ನ ಕಾರುಗಳಲ್ಲಿ ಬದಲಾವಣೆ ತರುವ ಉದ್ದೇಶದಿಂದ ಬೃಹತ್ ಯೋಜನೆಯೊಂದಕ್ಕೆ ಚಾಲನೆ ನೀಡಿದೆ.

ಮಾರುತಿ ಸುಜುಕಿ ಕಾರುಗಳಲ್ಲಿ ಇನ್ಮುಂದೆ ಲೀಡ್ ಬದಲಾಗಿ ಲೀಥಿಯಂ ಅಯಾನ್ ಬ್ಯಾಟರಿ

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದಕ್ಕೆ ಪೂರಕ ಎನ್ನುವಂತೆ ಬೃಹತ್ ಬಂಡವಾಳ ಹೂಡಿಕೆಯೊಂದಿಗೆ ಸುಜುಕಿ ಮೋಟಾರ್ ಸೈಕಲ್ ಸಂಸ್ಥೆಯು ಸಹ ತನ್ನ ಕಾರು ಮಾದರಿಗಳಲ್ಲಿ ಲೀಡ್ ಬ್ಯಾಟರಿ ಬದಲಾಗಿ ಸುಧಾರಿತ ಮಾದರಿಯ ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡುವ ಸುಳಿವು ನೀಡಿದೆ.

ಮಾರುತಿ ಸುಜುಕಿ ಕಾರುಗಳಲ್ಲಿ ಇನ್ಮುಂದೆ ಲೀಡ್ ಬದಲಾಗಿ ಲೀಥಿಯಂ ಅಯಾನ್ ಬ್ಯಾಟರಿ

ಎಲೆಕ್ಟ್ರಿಕ್ ಕಾರುಗಳನ್ನು ಹೊರತುಪಡಿಸಿ ಸಾಮಾನ್ಯ ಕಾರುಗಳಲ್ಲೇ ಸದ್ಯ ಲೀಡ್ ಬ್ಯಾಟರಿಗಳನ್ನು ಬಳಕೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೇ ಮಾರುತಿ ಸುಜುಕಿ ಸಂಸ್ಥೆಯು ಲೀಡ್ ಬ್ಯಾಟರಿಗಳನ್ನು ತೆಗದುಹಾಕಿ ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಲು ಮುಂದಾಗಿದೆ.

ಮಾರುತಿ ಸುಜುಕಿ ಕಾರುಗಳಲ್ಲಿ ಇನ್ಮುಂದೆ ಲೀಡ್ ಬದಲಾಗಿ ಲೀಥಿಯಂ ಅಯಾನ್ ಬ್ಯಾಟರಿ

ಇದರಿಂದ ಕಾರಿನ ಚಾಲನೆ ವೇಳೆ ಇಂಧನ ಕಾರ್ಯಕ್ಷಮತೆ ಗಣನೀಯವಾಗಿ ಹೆಚ್ಚಳವಾಗಲಿದ್ದು, ಕಾರಿನ ತೂಕವು ಸಹ ಕಡಿಮೆಯಾಗಲಿದೆ. ಇದರಿಂದ ಸಹಜವಾಗಿಯೇ ಇಂಧನ ದಕ್ಷತೆ ಹೆಚ್ಚತ್ತಲ್ಲದೇ ಕಾರಿನ ಬಾಳಿಕೆಯೂ ಸಹ 3 ರಿಂದ 5 ವರ್ಷಗಳ ಹೆಚ್ಚು ಬರಲಿದೆ ಎಂದು ಹೇಳಲಾಗುತ್ತಿದೆ.

ಮಾರುತಿ ಸುಜುಕಿ ಕಾರುಗಳಲ್ಲಿ ಇನ್ಮುಂದೆ ಲೀಡ್ ಬದಲಾಗಿ ಲೀಥಿಯಂ ಅಯಾನ್ ಬ್ಯಾಟರಿ

ಇದೇ ಕಾರಣಕ್ಕಾಗಿಯೇ 1,152 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್ ಬ್ಯಾಟರಿ ನಿರ್ಮಾಣ ಘಟಕದ ಸ್ಥಾಪನೆಗಾಗಿ ಕೇಂದ್ರದ ಜೊತೆ ಮಾತುಕತೆ ನಡೆಸಿರುವ ಸುಜುಕಿ ಸಂಸ್ಥೆಯ ಅಧ್ಯಕ್ಷ ಒಸಾಮು ಸುಜುಕಿ ಅವರು, ಎಲೆಕ್ಟ್ರಿಕ್ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣಕ್ಕೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮನವಿ ಮಾಡಿದ್ದಾರೆ.

ಮಾರುತಿ ಸುಜುಕಿ ಕಾರುಗಳಲ್ಲಿ ಇನ್ಮುಂದೆ ಲೀಡ್ ಬದಲಾಗಿ ಲೀಥಿಯಂ ಅಯಾನ್ ಬ್ಯಾಟರಿ

ಇದಕ್ಕೆ ಸಕರಾತ್ಮಕವಾಗಿಯೇ ಪ್ರತಿಕ್ರಿಯೆಸಿರುವ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಬ್ಯಾಟರಿ ನಿರ್ಮಾಣಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒಪ್ಪಿಗೆ ಸೂಚಿಸಿದ್ದು, ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರನ್ನು ಸೆಳೆಯುವಂತಹ ಯೋಜನೆಗಳನ್ನು ಸಿದ್ದಪಡಿಸಿ ಎಂಬ ಸಲಹೆ ನೀಡಿದೆ.

ಮಾರುತಿ ಸುಜುಕಿ ಕಾರುಗಳಲ್ಲಿ ಇನ್ಮುಂದೆ ಲೀಡ್ ಬದಲಾಗಿ ಲೀಥಿಯಂ ಅಯಾನ್ ಬ್ಯಾಟರಿ

ಹೀಗಾಗಿ ಸುಜುಕಿ ಸಂಸ್ಥೆಯು ಭಾರತೀಯ ಗ್ರಾಹಕರ ಆದ್ಯತೆ ಮೆರೆಗೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳನ್ನು ಸಿದ್ದಗೊಳಿಸುವ ಬಗ್ಗೆ ಮಾರುಕಟ್ಟೆ ಅಧ್ಯಯನ ಕೈಗೊಂಡಿದ್ದು, ಇದರ ಜೊತೆ ಜೊತೆಯಲ್ಲೇ ಪ್ರಮುಖ ಕಾರುಗಳಲ್ಲಿನ ಲೀಡ್ ಬ್ಯಾಟರಿಯನ್ನು ಲೀಥಿಯಂ ಅಯಾನ್‌ಗೆ ವರ್ಗಾವಣೆ ಮಾಡಲಿದೆ.

ಮಾರುತಿ ಸುಜುಕಿ ಕಾರುಗಳಲ್ಲಿ ಇನ್ಮುಂದೆ ಲೀಡ್ ಬದಲಾಗಿ ಲೀಥಿಯಂ ಅಯಾನ್ ಬ್ಯಾಟರಿ

ಮೂಲಗಳ ಪ್ರಕಾರ ಸ್ವಿಫ್ಟ್ ಮತ್ತು ಅದಕ್ಕೂ ಹೆಚ್ಚಿನ ಕಾರು ಮಾದರಿಗಳಾದ ಡಿಜೈರ್, ಬಲೆನೊ, ಬ್ರೇಝಾ, ಎರ್ಟಿಗಾ, ಎಸ್-ಕ್ರಾಸ್, ಸಿಯಾಜ್ ಕಾರುಗಳಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ಒದಗಿಸಲಿದ್ದು, ಕಾರಿನ ಮೈಲೇಜ್ ವಿಚಾರದಲ್ಲಿ ಅಮೂಲಾಗ್ರಹ ಬದಲಾವಣೆ ಕಂಡುಬರಲಿದೆ ಎನ್ನಬಹುದು.

ಮಾರುತಿ ಸುಜುಕಿ ಕಾರುಗಳಲ್ಲಿ ಇನ್ಮುಂದೆ ಲೀಡ್ ಬದಲಾಗಿ ಲೀಥಿಯಂ ಅಯಾನ್ ಬ್ಯಾಟರಿ

ಮಾರುತಿ ಸುಜುಕಿ ಹೊಸ ಯೋಜನೆಗೆ ಇಷ್ಟರಲ್ಲೇ ಚಾಲನೆ ದೊರೆಯಿದ್ದು, 2020ರ ಹೊತ್ತಿಗೆ ಮಾರುತಿ ನಿರ್ಮಾಣದ ಪ್ರಮುಖ ಕಾರುಗಳಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯ ಪಡೆದುಕೊಳ್ಳಲಿವೆ. ಇದರಿಂದ ಮೈಲೇಜ್ ಹೆಚ್ಚುವರಿಯಾಗುವುದಲ್ಲದೇ ಕಾರಿನ ಬೆಲೆಗಳಲ್ಲೂ ಭಾರೀ ಏರಿಕೆಯಾಗುವುದು ಅಷ್ಟೇ ಖಚಿತ.

Article Published On: Saturday, July 14, 2018, 18:26 [IST]
English summary
Maruti Suzuki To Switch To Lithium-Ion Batteries On Its Premium Models.
Read more on maruti suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+