ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಹೊಸ ವಾಹನಗಳನ್ನು ಖರೀದಿ ಮಾಡುವಾಗ ಎಲ್ಲವೂ ಸರಿಯಾಗಿಯೇ ಇರುತ್ತೆ. ತದನಂತರವಷ್ಟೇ ಅದರ ಅಸಲಿಯತ್ತು ಗೊತ್ತಾಗುವುದು. ಹಾಗಂತ ಎಲ್ಲಾ ಹೊಸ ವಾಹನಗಳು ದೋಷಪೂರಿತವಾಗಿರುತ್ತವೆ ಅಂತಾ ಹೇಳಲು ಸಾಧ್ಯವಿಲ್ಲ. ಆದ್ರೆ ಹೊಸ ವಾಹನಗಳನ್ನು ಖರೀದಿಸುವಾಗ ಸ್ವಲ್ಪ ಎಚ್ಚರ ತಪ್ಪಿದ್ರೂ ಮಕ್ಮಲ್ ಟೋಪಿ ಗ್ಯಾರಂಟಿ ಅನ್ನೋದಕ್ಕೆ ಈ ಪ್ರಕರಣವೇ ಸ್ಪಷ್ಟ ಉದಾಹರಣೆ ಅಂದ್ರೆ ತಪ್ಪಾಗುವುದಿಲ್ಲ.

ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಮಾರುತಿ ಸುಜುಕಿ ಸ್ವಿಫ್ಟ್ ಖರೀದಿಸಿದ್ದ ಗ್ರಾಹಕರೊಬ್ಬರು ಡೀಲರ್ಸ್ ಮಾಡಿದ ಮೋಸದ ವ್ಯಾಪಾರದಿಂದ ಕಂಗೆಟ್ಟುಹೊಗಿದ್ದಲ್ಲದೇ ತನಗಾದ ಅನ್ಯಾಯವನ್ನು ಸರಿಪಡಿಸುವಂತೆ ಕೋರ್ಟ್ ಮೆಟ್ಟಿಲೇರಿದ ಪ್ರಸಂಗ ನಡೆದಿದೆ. ಈ ವೇಳೆ ಕಾರು ಮಾಲೀಕನ ಪರ ತೀರ್ಪು ಪ್ರಕಟಿಸಿರುವ ಗ್ರಾಹಕ ನ್ಯಾಯಾಲಯವು ಮೋಸ ಮಾಡಿದ ಮಾರುತಿ ಸುಜುಕಿ ಡೀಲರ್ಸ್‌ಗೆ ಭಾರೀ ಮೊತ್ತದ ದಂಡ ವಿಧಿಸಿದೆ.

ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಘಟನೆಯ ಹಿನ್ನೆಲೆ..

ಗೋವಾದಲ್ಲಿ ವಾಸವಾಗಿರುವ ಕರ್ನಾಟಕ ಮೂಲದ ಶಿವಾನಂದ್ ಎಸ್ ಹರಪನಹಳ್ಳಿ ಎನ್ನುವವರು 2005ರಲ್ಲಿ ಪಣಜಿಯಲ್ಲಿರುವ ಮಾರುತಿ ಸುಜುಕಿ ಡೀಲರ್ಸ್ ಬಳಿ ಹಳೆಯ ತಲೆಮಾರಿನ ಸ್ವಿಫ್ಚ್ ಹ್ಯಾಚ್‌ಬ್ಯಾಕ್ ಕಾರನ್ನು ಖರೀದಿ ಮಾಡಿದ್ದರು. ಆದ್ರೆ ಕಾರು ಖರೀದಿ ಮಾಡಿದ ಒಂದೇ ವರ್ಷದಲ್ಲಿ ಕಾರು ಗುಜುರಿಗೆ ಸೇರುವ ಮಟ್ಟಕ್ಕೆ ಬಂದಿತ್ತು.

ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಕಾರು ಖರೀದಿಯ ನಂತರ ಕೇವಲ 10 ಸಾವಿರ ಕಿ.ಮೀ ಓಡಿದ್ದ ಆ ಕಾರು ಒಂದು ದಿನ ಕಾರು ಚಾಲನೆಯಲ್ಲಿರುವಾಗಲೇ ಕುಸಿದು ಬಿದ್ದಿತ್ತು. ಅರೇ, ಕಾರು ಖರೀದಿ ಮಾಡಿ ಒಂದು ವರ್ಷ ಕೂಡಾ ಆಗಿಲ್ಲಾ ಹೀಗಾದ್ರೆ ಹೇಗೆ ಅಂತಾ ಡೀಲರ್ಸ್ ಬಳಿ ದೂರು ಹೇಳಿದ್ದರು.

ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಈ ವೇಳೆ ಗ್ರಾಹಕರ ದೂರಿಗೆ ಸ್ಪಂದಿಸಿದ್ದ ಡೀಲರ್ಸ್ ಮತ್ತೊಂದು ಹೊಸ ಸ್ವಿಫ್ಟ್ ಕಾರುನ್ನು ಬದಲಿ ಮಾಡಿಕೊಟ್ಟಿದ್ದರು. ಆದ್ರೆ ಅದೃಷ್ಟವಶಾತ್ ಬದಲಿಸಿದ್ದ ಸ್ವಿಫ್ಟ್ ಕಾರು ಕೂಡಾ ಕೆಲವು ತಾಂತ್ರಿಕ ತೊಂದರೆ ಕೂಡಿದ್ದಲ್ಲದೇ ಚಾಲನೆಗೆ ಕಷ್ಟವಾಗುತ್ತಿದೆ ಅಂತಾ ಪರಿಹಾರ ಕೋರಿ ಗ್ರಾಹಕ ನ್ಯಾಯಾಲಯದ ಮೋರೆ ಹೋಗಿದ್ದರು.

ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಇದಕ್ಕೆ ನಾನಾ ಕಾರಣಗಳನ್ನು ನೀಡಿದ್ದ ಮಾರುತಿ ಸುಜುಕಿ ಡೀಲರ್ಸ್ ಅಧಿಕಾರಿಗಳು ಸರಿಯಾಗಿ ಡ್ರೈವ್ ಮಾಡದ ಹಿನ್ನೆಲೆ ಹೀಗಾಗಿದೆ ಹೊರತು ಇದರಲ್ಲಿ ನಮ್ಮದು ತಪ್ಪಿಲ್ಲಾ ಅಂತಾ ಕೈತೊಳೆದುಕೊಳ್ಳಲು ಮುಂದಾಗಿದ್ದರು.

ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಆದ್ರೆ ಇಷ್ಟಕ್ಕೆ ಬಿಡದ ಶಿವಾನಂದ್ ಅವರು ನಿರಂತರ ಕಾನೂನು ಹೋರಾಟ ಮಾಡುವ ಮೂಲಕ ಇದೀಗ ಡೀಲರ್ಸ್‌ನಿಂದ ಪರಿಹಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕಾರಿನ ಮಾರಾಟದಲ್ಲಿ ಆದ ದೋಷದ ಬಗ್ಗೆ ಕ್ಷಮೆಯಾಚಿಸಿರುವ ಮಾರುತಿ ಸುಜುಕಿ ಸಂಸ್ಥೆಯು ನೊಂದ ಗ್ರಾಹಕನಿಗೆ ಡೀಲರ್ಸ್‌ನಿಂದ ಪರಿಹಾರ ಭರಿಸುವುದಾಗಿ ನ್ಯಾಯಾಲಯಕ್ಕೆ ಹೇಳಿಕೊಂಡಿದೆ.

ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಕೇಳಿದ್ದು 2.44 ಲಕ್ಷ ಪರಿಹಾರ, ಕೊಟ್ಟಿದ್ದು 1 ಲಕ್ಷ..!

ಮೊದಲ ಕಾರನ್ನು ಬದಲಿಸಿದ ನಂತರವೂ ಎರಡನೇ ಕಾರಿನಲ್ಲೂ ಸಹ ತಾಂತ್ರಿಕ ದೋಷವಿರುವುದರಿಂದ ಬರೋಬ್ಬರಿ 2.44 ಲಕ್ಷ ಪರಿಹಾರಕ್ಕಾಗಿ ಬೇಡಿಕೆಯಿಟ್ಟಿದ್ದ ಶಿವಾನಂದ್ ಅವರು ಪರಿಹಾರದ ಜೊತೆಗೆ 10 ಸಾವಿರ ರೂಪಾಯಿ ಕೋರ್ಟ್‌ ಖರ್ಚುಗಳಿಗಾಗಿ ಮತ್ತು 30 ಸಾವಿರ ರೂಪಾಯಿ ಸಮಯ ವ್ಯರ್ಥ್ಯ ಮಾಡಿದ್ದಾಕ್ಕಾಗಿ ಪರಿಹಾರ ಕೇಳಿದ್ದರು.

ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಇದಕ್ಕೆ ವಿರೋಧಿಸಿದ್ದ ಮಾರುತಿ ಸುಜುಕಿ ಸಂಸ್ಥೆಯು ಕಾರು ಈಗಾಗಲೇ 80 ಸಾವಿರ ಕಿ.ಮಿ ಕ್ರಮಸಿದ ವಿಚಾರವನ್ನೇ ಮುಂದಿಟ್ಟುಕೊಂಡು ವಾದ ನಡೆಸಿತ್ತಲ್ಲದೇ ಶಿವಾನಂದ್ ಅವರು ಕೇಳುತ್ತಿರುವ ಪರಿಹಾರ ಮೊತ್ತ ನೀಡಲು ಸಾಧ್ಯವೇ ಇಲ್ಲ ಎಂದಿತ್ತು.

ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಕೊನೆಗೂ ವಾದ-ವಿವಾದಗಳನ್ನು ಆಲಿಸಿದ ರಾಷ್ಟ್ರೀಯ ಗ್ರಾಹಕರ ನ್ಯಾಯಾಲಯವು ಕಾರು ಈಗಾಗಲೇ 80 ಸಾವಿರ ಕಿ.ಮಿ ಕ್ರಮಿಸಿರುವ ವಿಚಾರವನ್ನು ಸಹ ಪರಿಣಿಸಿ ರೂ.1 ಲಕ್ಷ ಪರಿಹಾರ ಮಾತ್ರ ಸಾಧ್ಯ ಎಂದು ತೀರ್ಪು ನೀಡಿದ್ದಲ್ಲದೆ 45 ದಿನದ ಒಳಗಾಗಿ ಪರಿಹಾರದ ಜೊತೆಗೆ ಕೋರ್ಟ್ ಖರ್ಚುನ್ನು ಸಹ ಭರಿಸುವಂತೆ ಮಾರುತಿ ಸುಜುಕಿಗೆ ಸೂಚನೆ ನೀಡಿದೆ.

ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಇದಕ್ಕೆ ಸಮ್ಮತಿಸಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಡೀಲರ್ಸ್‌ಗೆ ರೂ. 1 ಲಕ್ಷ ಪರಿಹಾರವನ್ನು ಸ್ವಿಫ್ಟ್ ಮಾಲೀಕನಿಗೆ ನೀಡುವಂತೆ ಆದೇಶಿಸಿದ್ದು, ಸುಮಾರು 11 ವರ್ಷಗಳಿಂದ ನಡೆಯುತ್ತಿದ್ದ ಕೇಸ್‌ಗೆ ಕೊನೆಗೂ ಸುಖಾಂತ್ಯ ಹಾಡಿದೆ.

ದೋಷಪೂರಿತ ಸಿಫ್ಟ್ ಕಾರು ಮಾರಾಟ ಮಾಡಿದ್ದ ಡೀಲರ್ಸ್‌ಗೆ ರೂ. 1 ಲಕ್ಷ ದಂಡ

ಹೀಗಾಗಿ ಹೊಸ ವಾಹನಗಳನ್ನು ಖರೀದಿಸುವ ಗ್ರಾಹಕರು ಇಂತಹ ಪ್ರಕರಣ ಬಗೆಗೆ ಎಚ್ಚರ ವಹಿಸುವ ಅವಶ್ಯಕತೆಯಿದ್ದು, ನುರಿತ ಕಾರು ಚಾಲಕರ ಸಹಾಯದೊಂದಿಗೆ ಹೊಸ ಕಾರನ್ನು ಆಯ್ಕೆ ಮಾಡಿದ್ದಲ್ಲಿ ತೊಂದರೆಗಳಿಂದ ದೂರವಿರಬಹುದು.

Most Read Articles

Kannada
Read more on off beat
English summary
Maruti Suzuki Ordered To Pay Rs.1 Lakh Compensation To Swift Customer.
Story first published: Saturday, October 6, 2018, 19:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more