ಭಾರತದಲ್ಲಿ 20 ಮಿಲಿಯನ್ ಕಾರುಗಳನ್ನು ಉತ್ಪಾದನೆ ಮಾಡಿದ ಮಾರುತಿ ಸುಜುಕಿ

ಭಾರತದಲ್ಲಿ 20 ಮಿಲಿಯನ್ ಕಾರುಗಳನ್ನು ಉತ್ಪಾದನೆ ಮಾಡಿದ ಮಾರುತಿ ಸುಜುಕಿ

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಕಾರುಗಳ ಉತ್ಪಾದನೆಯಲ್ಲಿ ಹೊಸ ದಾಖಲೆ ಸೃಷ್ಠಿಸಿದೆ. ಕಳೆದ 34 ವರ್ಷಗಳ ಹಿಂದೆ ಕಾರು ಉತ್ಪಾದನೆ ಆರಂಭಿಸಿದ್ದ ಮಾರುತಿ ಸುಜುಕಿ ಸಂಸ್ಥೆಯು ಇದುವರೆಗೆ ಬರೋಬ್ಬರಿ 2 ಕೋಟಿ ಕಾರುಗಳನ್ನು ಉತ್ಪಾದನೆ ಮಾಡುವ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ವಿನೂತನ ಮೈಲಿಗಲ್ಲು ಸಾಧಿಸಿದೆ.

ಭಾರತದಲ್ಲಿ 20 ಮಿಲಿಯನ್ ಕಾರುಗಳನ್ನು ಉತ್ಪಾದನೆ ಮಾಡಿದ ಮಾರುತಿ ಸುಜುಕಿ

1983 ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಮಾರುತಿ ಮತ್ತು ಸುಜುಕಿ ಸಂಸ್ಥೆಗಳು, ಹೊಸ ಕಾರುಗಳ ಉತ್ಪಾದನೆಗಾಗಿ ಕೈಜೋಡಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿನ ಗ್ರಾಹಕರನ್ನು ಆಕರ್ಷಣೆ ಮಾಡಿದಲ್ಲದೇ ಹತ್ತಾರು ಬಗೆಯ ಕಾರು ಮಾದರಿಗಳನ್ನು ಪರಿಚಯಿಸಿದಲ್ಲದೇ ಹಲವು ವರ್ಷಗಳಿಂದ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಏಕೈಕ ಆಟೋ ಉತ್ಪಾದನಾ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಭಾರತದಲ್ಲಿ 20 ಮಿಲಿಯನ್ ಕಾರುಗಳನ್ನು ಉತ್ಪಾದನೆ ಮಾಡಿದ ಮಾರುತಿ ಸುಜುಕಿ

ಸದ್ಯ ಗುಜರಾತ್‌ನಲ್ಲಿ ಸನಂದ್ ಕಾರು ಉತ್ಪಾದನಾ ಘಟಕದಲ್ಲಿ ಹೊಸ ಮೈಲಿಗಲ್ಲಿಗೆ ಸಾಕ್ಷಿಯಾದ ಸಿಫ್ಟ್ ಹ್ಯಾಚ್‌ಬ್ಯಾಕ್ ಕಾರನ್ನು ವಿಶೇಷವಾಗಿ ಅಭಿವೃದ್ಧಿ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು, ಬ್ರೈಟ್ ರೆಡ್ ಬಣ್ಣದ ವಿನ್ಯಾಸದಲ್ಲಿ ಹೊಸ ಕಾರನ್ನು ವಿನ್ಯಾಸ ಮಾಡಿ ಪ್ರದರ್ಶನಕ್ಕಿಟ್ಟಿದೆ.

ಭಾರತದಲ್ಲಿ 20 ಮಿಲಿಯನ್ ಕಾರುಗಳನ್ನು ಉತ್ಪಾದನೆ ಮಾಡಿದ ಮಾರುತಿ ಸುಜುಕಿ

ಜಪಾನ್ ನಂತರ ಎರಡನೇ ಅತಿದೊಡ್ಡ ಆಟೋ ಉತ್ಪಾದನಾ ವಲಯವಾಗಿರುವ ಭಾರತದಲ್ಲಿ ಮಾರುತಿ ಸುಜುಕಿ ಸಂಸ್ಥೆಯು 2 ಕೋಟಿ ಕಾರುಗಳ ಕಾರುಗಳ ಉತ್ಪಾದನೆಗಾಗಿ ಬರೋಬ್ಬರಿ 34 ವರ್ಷ ಮತ್ತು 5 ತಿಂಗಳ ಕಾಲಾವಧಿ ತೆಗೆದುಕೊಂಡಿದ್ದು, ಅದೇ ಸಂಖ್ಯೆಯ ಕಾರುಗಳ ಉತ್ಪಾದನೆಗಾಗಿ ಜಪಾನ್‌ನಲ್ಲಿ 45 ವರ್ಷಗಳ ಕಾಲಾವಧಿಯನ್ನು ತೆಗೆದುಕೊಂಡಿತ್ತು.

ಭಾರತದಲ್ಲಿ 20 ಮಿಲಿಯನ್ ಕಾರುಗಳನ್ನು ಉತ್ಪಾದನೆ ಮಾಡಿದ ಮಾರುತಿ ಸುಜುಕಿ

ಇನ್ನು ಭಾರತದಲ್ಲಿ ಉತ್ಪಾದನೆಯಾದ 2 ಕೋಟಿ ಮಾರುತಿ ಸುಜುಕಿ ಕಾರುಗಳಲ್ಲಿ ಬರೋಬ್ಬರಿ 3.71 ಮಿಲಿಯನ್ ಆಲ್ಟೋ ಕಾರುಗಳಿದ್ದು, ಎರಡನೇ ಸ್ಥಾನದಲ್ಲಿ ಮಾರುತಿ 800( 2.91 ಮಿಲಿಯನ್) ಹಾಗೂ ಮೂರನೇ ಸ್ಥಾನದಲ್ಲಿರುವ ವ್ಯಾಗನ್ ಆರ್ 2.61 ಮಿಲಿಯನ್ ಕಾರುಗಳು ಭಾರತದಲ್ಲಿ ಮಾರಾಟವಾಗಿವೆ.

ಭಾರತದಲ್ಲಿ 20 ಮಿಲಿಯನ್ ಕಾರುಗಳನ್ನು ಉತ್ಪಾದನೆ ಮಾಡಿದ ಮಾರುತಿ ಸುಜುಕಿ

1983ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಮಾರುತಿ ಸಂಸ್ಥೆಯೊಂದಿಗೆ ಕಾರು ಉತ್ಪಾದನೆ ಆರಂಭಿಸಿದ್ದ ಸುಜುಕಿ ಮೋಟಾರ್ಸ್ ಸಂಸ್ಥೆಯು ಮಾರುತಿ ಉದ್ಯೋಗ್ ಕಾರು ಉತ್ಪಾದನಾ ಘಟಕದಲ್ಲಿ ಅತಿ ಕಡಿಮೆ ಬೆಲೆಯ ಮಾರುತಿ 800 ಕಾರುಗಳ ಉತ್ಪಾದನೆ ಮಾಡುವ ಮೂಲಕ ದೇಶದಲ್ಲಿ ಭಾರೀ ಜನಪ್ರಿಯತೆ ಗಳಿಸಿತು.

ಭಾರತದಲ್ಲಿ 20 ಮಿಲಿಯನ್ ಕಾರುಗಳನ್ನು ಉತ್ಪಾದನೆ ಮಾಡಿದ ಮಾರುತಿ ಸುಜುಕಿ

ತದನಂತರ ಆಲ್ಟೋ ಕಾರುಗಳ ಸರಣಿಯಲ್ಲೂ ಹೊಸ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಸಂಸ್ಥೆಯು ಕಾಲಘಟ್ಟದಲ್ಲಿ ವ್ಯಾಗನ್ ಆರ್, ಸ್ವಿಫ್ಟ್, ಡಿಜೈರ್ ಕಾರುಗಳ ಮಾರಾಟದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ್ದು ಬಹುತೇಕ ವಾಹನ ಪ್ರಿಯರಿಗೆ ತಿಳಿದ ವಿಚಾರ.

ಭಾರತದಲ್ಲಿ 20 ಮಿಲಿಯನ್ ಕಾರುಗಳನ್ನು ಉತ್ಪಾದನೆ ಮಾಡಿದ ಮಾರುತಿ ಸುಜುಕಿ

ಇದಲ್ಲದೇ ಮೊದಮೊದಲು ಮಾರುತಿ ಉದ್ಯೋಗ್ ಕಾರು ಉತ್ಪಾದನಾ ಘಟಕದಲ್ಲಿಯೇ ಹೊಸ ಕಾರುಗಳನ್ನು ಅಭಿವೃದ್ಧಿ ಮಾಡುತ್ತಿದ್ದ ಮಾರುತಿ ಸುಜುಕಿ ಸಂಸ್ಥೆಗಳು ನಂತರದ ದಿನಗಳಲ್ಲಿ ಗುರುಗ್ರಾಮ್‌‌ನ ಮನೆಸಾರ್ ಮತ್ತು ಗುಜರಾತ್ ಸನಂದ್ ಕಾರು ಉತ್ಪಾದನಾ ಘಟಕಗಳನ್ನು ತೆರೆಯುವ ಮೂಲಕ ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಎಂದು ಜನಪ್ರಿಯತೆ ಗಳಿಸಿದವು.

ಭಾರತದಲ್ಲಿ 20 ಮಿಲಿಯನ್ ಕಾರುಗಳನ್ನು ಉತ್ಪಾದನೆ ಮಾಡಿದ ಮಾರುತಿ ಸುಜುಕಿ

ಒಟ್ಟಿನಲ್ಲಿ ಕೈಗೆಟುವ ಬೆಲೆಗಳಲ್ಲಿ ವಿವಿಧ ಮಾದರಿಯ ಕಾರುಗಳನ್ನು ಉತ್ಪಾದಿಸುವ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆದಿರುವ ಮಾರುತಿ ಸುಜುಕಿ ಸಂಸ್ಥೆಯು ಸದ್ಯ ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಬರೋಬ್ಬರಿ 6 ಕಾರು ಮಾದರಿಗಳನ್ನ ತನ್ನದಾಸಿಕೊಂಡಿದೆ ಎಂದರೇ ನೀವು ನಂಬಲೇಬೇಕು.

ಭಾರತದಲ್ಲಿ 20 ಮಿಲಿಯನ್ ಕಾರುಗಳನ್ನು ಉತ್ಪಾದನೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ನಿರ್ಮಾಣದ ಒಟ್ಟು 16 ಕಾರು ಮಾದರಿಗಳು ಸದ್ಯ ಭಾರತದಲ್ಲಿ ಖರೀದಿಗೆ ಲಭ್ಯವಿದ್ದು, ಸ್ವಿಫ್ಟ್ ಡಿಜೈರ್, ಆಲ್ಟೋ, ವ್ಯಾಗನ್ ಆರ್, ಸ್ವಿಫ್ಟ್ ಹ್ಯಾಚ್‌ಬ್ಯಾಕ್, ಬಲೆನೊ, ವಿಟಾರಾ ಬ್ರೇಝಾ, ಸಿಯಾಜ್, ಎರ್ಟಿಗಾ, ಸೆಲೆರಿಯೊ ಕಾರುಗಳು ಟಾಪ್ ಲಿಸ್ಟ್‌ನಲ್ಲಿ ಸ್ಥಾನ ಪಡೆದಿವೆ.

Most Read Articles

Kannada
English summary
Maruti Suzuki Crosses 20 Million Production Milestone In India.
Story first published: Monday, June 4, 2018, 14:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X