ವರ್ಷಾಂತ್ಯಕ್ಕೆ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯಾಗುವುದು ಕನ್‌ಫರ್ಮ್‌

ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಬಿಡುಗಡೆಯಾಗಿರುತ್ತಿರುವ ಪ್ರಮುಖ ಕಾರು ಮಾದರಿಗಳಲ್ಲಿ ಸುಜುಕಿ ಸ್ಪಿಫ್ಟ್ ಸ್ಪೋರ್ಟ್ ಆವೃತ್ತಿ ಕೂಡಾ ಒಂದಾಗಿದೆ.

By Praveen Sannamani

ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಬಿಡುಗಡೆಯಾಗಿರುತ್ತಿರುವ ಪ್ರಮುಖ ಕಾರು ಮಾದರಿಗಳಲ್ಲಿ ಸುಜುಕಿ ಸ್ಪಿಫ್ಟ್ ಸ್ಪೋರ್ಟ್ ಆವೃತ್ತಿ ಕೂಡಾ ಒಂದಾಗಿದ್ದು, ಈ ಮಧ್ಯೆ ಹೊಸ ಕಾರಿನ ಕುರಿತು ದಿನಕ್ಕೊಂದು ವಿಚಾರಗಳು ಹೊರಬರುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ವರ್ಷಾಂತ್ಯಕ್ಕೆ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯಾಗುವುದು ಕನ್‌ಫರ್ಮ್‌

ಸುದ್ದಿ ಮೂಲಗಳ ಪ್ರಕಾರ ಮಾರುತಿ ಸ್ವಿಫ್ಟ್ ಆವೃತ್ತಿಯು ಕಾರ್ ರೇಸ್ ಪ್ರಿಯರಿಗಾಗಿಯೇ ವಿಶೇಷ ತಂತ್ರಜ್ಞಾನ ಬಳಕೆಯ ಸುಧಾರಿತ ಸೀಟುಗಳನ್ನು ಒದಗಿಸಲಾಗುತ್ತಿದ್ದು, ಇದು ಕಾರು ರೇಸ್‌ಗೆ ಸಾಕಷ್ಟು ಅನುಕೂಲಕರವಾಗಲಿದೆ ಎಂದು ಸುಜುಕಿ ಮೋಟಾರ್ ಸಂಸ್ಥೆ ಹೇಳಿಕೊಂಡಿದೆ. ಜೊತೆಗೆ ಇದೇ ವರ್ಷವೇ ಹೊಸ ಕಾರುಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಬಗ್ಗೆ ಸುಳಿವು ನೀಡಿದೆ.

ವರ್ಷಾಂತ್ಯಕ್ಕೆ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯಾಗುವುದು ಕನ್‌ಫರ್ಮ್‌

ಈಗಾಗಲೇ ಮುಂದುವರಿದ ಕೆಲವು ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಮಾರಾಟಗೊಳ್ಳುತ್ತಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೊಂಡ ನಂತರ ಹ್ಯುಂಡೈನ ಬಹುನೀರಿಕ್ಷಿತ ಐ30 ಆವೃತ್ತಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.

ವರ್ಷಾಂತ್ಯಕ್ಕೆ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯಾಗುವುದು ಕನ್‌ಫರ್ಮ್‌

ಇದರೊಂದಿಗೆ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳಲ್ಲೇ ವಿಶೇಷ ಎನ್ನಿಸಲಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರುಗಳು ಸ್ಪೈಡರ್ ಇಂಟಿರಿಯರ್ ಹಾಗೂ ಎಕ್ಸ್‌ಟಿರಿಯರ್‌ನೊಂದಿಗೆ ವಿಭಿನ್ನತೆಯನ್ನು ಪಡೆದುಕೊಂಡಿರುವುದು ರೇಸ್ ಪ್ರಿಯರ ಸೆಳೆಯುವಲ್ಲಿ ಸಹಕಾರಿಯಾಗಲಿದೆ.

ವರ್ಷಾಂತ್ಯಕ್ಕೆ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯಾಗುವುದು ಕನ್‌ಫರ್ಮ್‌

ಬೇಡಿಕೆ ತಕ್ಕಂತೆ ವಿವಿಧ ಬಣ್ಣಗಳಲ್ಲಿ ಸುಜುಕಿ ಸ್ಪೀಫ್ಟ್ ಸ್ಪೋರ್ಟ್ ಕೂಡಾ ಖರೀದಿಗೆ ಲಭ್ಯವಿರಲಿದ್ದು, ಡ್ಯುಯಲ್ ಏರ್‌ಬ್ಯಾಗ್ ಕಿಟ್, ಸ್ಪೆಷಲ್ ಅಲಾಯ್ ವೀಲ್ಹ್ ಮತ್ತು ಸ್ಪೋರ್ಟ್ ಸ್ಟೈನ್‌ಲೆಸ್ ಸ್ಟಿಲ್ ಪೆಡಲ್ ಅಳವಡಿಕೆ ಮಾಡಲಾಗಿದೆ.

ವರ್ಷಾಂತ್ಯಕ್ಕೆ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯಾಗುವುದು ಕನ್‌ಫರ್ಮ್‌

ಸ್ಪೋರ್ಟ್ ಆವೃತ್ತಿಯ ಚಿಹ್ನೆ ಕೂಡಾ ಹೊಸ ಕಾರಿನ ಲುಕ್‌ನ್ನು ಮತ್ತಷ್ಟು ಹೆಚ್ಚಳ ಮಾಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 1.4-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಬೂಸ್ಟರ್ ಜೆಟ್ ಕೆ14ಸಿ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರಲಿದೆ.

ವರ್ಷಾಂತ್ಯಕ್ಕೆ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯಾಗುವುದು ಕನ್‌ಫರ್ಮ್‌

ಇದರೊಂದಿಗೆ ರೇಸ್ ಪ್ರಿಯರು ನೀರಿಕ್ಷೆ ಮಾಡುವ 138-ಬಿಎಚ್‌ಪಿ ಪವರ್ ಉತ್ಪಾದನೆ ಮಾಡಲಿದ್ದು, ಕೇವಲ 8.1 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ(ಪ್ರತಿ ಗಂಟೆಗೆ) ವೇಗ ಪಡೆದುಕೊಳ್ಳುವ ಚಾಲನಾ ಕೌಶಲ್ಯ ಹೊಂದಿದೆ.

ವರ್ಷಾಂತ್ಯಕ್ಕೆ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯಾಗುವುದು ಕನ್‌ಫರ್ಮ್‌

ಆದ್ರೆ ಕೆಲವು ವರದಿಗಳ ಪ್ರಕಾರ ಹೊಸ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗಾಗಿ 1.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಬೂಸ್ಟರ್ ಜೆಟ್‌ನೊಂದಿಗೆ ಅಭಿವೃದ್ಧಿಗೊಳಿಸಲಾಗುತ್ತಿದೆ ಎನ್ನಲಾಗಿದೆ.

ವರ್ಷಾಂತ್ಯಕ್ಕೆ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯಾಗುವುದು ಕನ್‌ಫರ್ಮ್‌

ಕಾರಿನ ಉದ್ದಳತೆ

ಸುಜುಕಿ ಸ್ಪಿಫ್ಟ್ ಸ್ಪೋರ್ಟ್ ಕಾರುಗಳು 3,890ಎಂಎಂ ಉದ್ದ, 1,735ಎಂಎಂ ಅಗಲ, 1,495ಎಂಎಂ ಎತ್ತರ ಹೊಂದಿದ್ದು, 120ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಹೊಸ ಕಾರುಗಳು 970 ಕೆ.ಜೆ ತೂಕ ಪಡೆದುಕೊಂಡಿವೆ.

ವರ್ಷಾಂತ್ಯಕ್ಕೆ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯಾಗುವುದು ಕನ್‌ಫರ್ಮ್‌

ಕಾರಿನ ಬೆಲೆಗಳು(ಅಂದಾಜು)

ಸಾಮಾನ್ಯ ಮಾದರಿಯ ಸ್ವಿಫ್ಟ್ ಕಾರುಗಳ ಬೆಲೆಯು ಸದ್ಯ ಮಾರುಕಟ್ಟೆಯಲ್ಲಿ ರೂ. 5.99 ಲಕ್ಷದಿಂದ ರೂ.8.29 ಲಕ್ಷಕ್ಕೆ ಲಭ್ಯವಿದ್ದು, ಸ್ಪೋರ್ಟ್ ವರ್ಷನ್ ಕಾರುಗಳ ಬೆಲೆಯು ಸಾಮಾನ್ಯ ಸ್ಪಿಫ್ಟ್ ಕಾರುಗಳಿಂತ ಹೆಚ್ಚುವರಿಯಾಗಿ 1.50 ಲಕ್ಷದಿಂದ 2 ಲಕ್ಷ ಹೆಚ್ಚಳವಾಗಿರಬಹುದು ಎಂದು ಅಂದಾಜಿಸಲಾಗಿದೆ.

ವರ್ಷಾಂತ್ಯಕ್ಕೆ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯಾಗುವುದು ಕನ್‌ಫರ್ಮ್‌

ಇನ್ನು ಸ್ಪಿಫ್ಟ್ ಆವೃತ್ತಿ ವೈಶಿಷ್ಟ್ಯತೆಗಳು ಸದ್ಯ ಮಾರುಕಟ್ಟೆಯಲ್ಲಿರುವ ಬಲೆನೊ ಆರ್‌ಎಸ್, ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಮತ್ತು ಫಿಯೆಟ್ ಅಬಾರ್ತ್ ಕಾರಿನಲ್ಲಿಯೂ ಸಹ ಲಭ್ಯವಿದ್ದು, ಇವುಗಳಿಂತ ಹೇಗೆ ಭಿನ್ನತೆ ಹೊಂದಲಿದೆ ಎಂಬುವುದು ಬಿಡುಗಡೆಯ ನಂತರವಷ್ಟೇ ತಿಳಿಯಲಿದೆ.

More from DriveSpark

Article Published On: Saturday, May 26, 2018, 13:21 [IST]
English summary
Maruti Suzuki Swift Sport: Expected Launch Date In India, Prices, Specifications, Features & More.
Read more on maruti suzuki swift
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+