ಬಿಡುಗಡೆಗೆ ಸಜ್ಜಾದ ವಿಟಾರಾ ಹೊಸ ಎಸ್‌ಯುವಿ ಹೇಗಿರಲಿದೆ ಗೊತ್ತಾ?

ಮಾರುತಿ ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದ್ದು, ಸದ್ಯ ಮಾರುಕಟ್ಟೆಲ್ಲಿರುವ ಮಧ್ಯಮ ಗಾತ್ರದ ಪ್ರಮುಖ ಎಸ್‌ಯುವಿಗಳಿಗೆ ಹೊಚ್ಚ ಹೊಸ ವಿಟಾರಾ ಕಾರುಗಳು ತೀವ್ರ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾದ ವಿಟಾರಾ ಹೊಸ ಎಸ್‌ಯುವಿ ಹೇಗಿರಲಿದೆ ಗೊತ್ತಾ?

ವಿಟಾರಾ ಬ್ರೆಝಾ ಕಾರುಗಳಿಂತಲೂ ವಿಭಿನ್ನವಾಗಿರುವ ವಿಟಾರಾ ಕಾರುಗಳು ಎಸ್ ಕ್ರಾಸ್‌ ಕಾರುಗಳಿಂತಲೂ ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿದ್ದು, 2019ರ ಎರಡನೇ ತ್ರೈಮಾಸಿಕ ಅವಧಿಗೆ ಹೊಸ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಕಾರಿನ ಉತ್ಪಾದನಾ ಕಾರ್ಯಯೋಜನೆ ಭರದಿಂದ ಸಾಗಿದ್ದು, ಹಂಗೇರಿಯಲ್ಲಿರುವ ಸುಜುಕಿ ಸಂಸ್ಥೆಯ ಉತ್ಪಾದನಾ ಘಟಕದಲ್ಲಿ ಹೊಸ ವಿಟಾರಾ ಕಾರುಗಳು ಫೈನಲ್ ಟಚ್ ಪಡೆದುಕೊಳ್ಳುತ್ತಿವೆ.

ಬಿಡುಗಡೆಗೆ ಸಜ್ಜಾದ ವಿಟಾರಾ ಹೊಸ ಎಸ್‌ಯುವಿ ಹೇಗಿರಲಿದೆ ಗೊತ್ತಾ?

ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದಿನ ವಿಟಾರಾ ಗ್ರ್ಯಾಂಡ್ ಮಾರಾಟದಲ್ಲಿ ಆದ ಹಿನ್ನಡೆಯನ್ನು ಹೊಸ ಕಾರಿನ ಮೂಲಕ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಹ್ಯುಂಡೈ ಕ್ರೇಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ಕಾರುಗಳಿಗೆ ಈ ಕಾರು ತೀವ್ರ ಪೈಪೋಟಿ ನೀಡಲಿದೆ.

ಬಿಡುಗಡೆಗೆ ಸಜ್ಜಾದ ವಿಟಾರಾ ಹೊಸ ಎಸ್‌ಯುವಿ ಹೇಗಿರಲಿದೆ ಗೊತ್ತಾ?

ಮಿಡ್ ರೇಂಜ್ ಎಸ್‍ಯುವಿ ಕಾರು ಮಾದರಿ ಇದಾಗಿದ್ದು, 2019ರ ವೇಳೆಗೆ ಬಿಡುಗಡೆಗೊಳಿಸಲು ನಿರ್ಧರಿಸುವ ಮಾರುತಿ ಸುಜುಕಿಯ ಹೊಸ ಎಸ್‍ಯುವಿ ಕಾರು ಅನ್ನು ಈಗಾಗಲೇ ದೇಶದ ವಿವಿಧ ಕಡೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕೂಡಾ ನಡೆಸಲಾಗಿದೆ.

ಬಿಡುಗಡೆಗೆ ಸಜ್ಜಾದ ವಿಟಾರಾ ಹೊಸ ಎಸ್‌ಯುವಿ ಹೇಗಿರಲಿದೆ ಗೊತ್ತಾ?

ಸುಜುಕಿ ವಿಟಾರಾ ಈಗಾಗಲೆೇ ಯೂರೋಪ್‍ನ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ದೊರೆಯುತ್ತಿದೆ. ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಕಾರಿನ ಬೆಲೆಯನ್ನು ರೂ. 12 ಲಕ್ಷ ದಿಂದ ರೂ. 16 ಲಕ್ಷದೊಳಗೆ ನಿರ್ಧರಿಸಲಿದ್ದಾರೆ.

ಬಿಡುಗಡೆಗೆ ಸಜ್ಜಾದ ವಿಟಾರಾ ಹೊಸ ಎಸ್‌ಯುವಿ ಹೇಗಿರಲಿದೆ ಗೊತ್ತಾ?

ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ವಿಟಾರಾ ಕಾರಿನ ಪೆಟ್ರೋಲ್ ಆವೃತ್ತಿಯು 1.0-ಲೀಟರ್ ಮತ್ತು 1.4 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 140-ಬಿಹೆಚ್‍ಪಿ ಮತ್ತು 230-ಎನ್ಎಂ ಟಾರ್ಕ್ಅನ್ನು ಉತ್ಪಾದಿಸುತ್ತೆ.

ಬಿಡುಗಡೆಗೆ ಸಜ್ಜಾದ ವಿಟಾರಾ ಹೊಸ ಎಸ್‌ಯುವಿ ಹೇಗಿರಲಿದೆ ಗೊತ್ತಾ?

ಆದ್ರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರುಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದುವ ಸಾಧ್ಯತೆಗಳಿದ್ದು, ಹೊಸ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜಾದ ವಿಟಾರಾ ಹೊಸ ಎಸ್‌ಯುವಿ ಹೇಗಿರಲಿದೆ ಗೊತ್ತಾ?

ಹಾಗೆಯೇ ವಿಟಾರಾ ಕಾರಿನ ಡೀಸೆಲ್ ಆವೃತ್ತಿಯು ಎಸ್ ಕ್ರಾಸ್ ಕಾರಿನ ಮಾದರಿಯಲ್ಲಿ 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, 118-ಬಿಹೆಚ್‍ಪಿ ಮತ್ತು 320-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಗೆ ಜೋಡಣೆ ಇರಲಿದೆ.

ಬಿಡುಗಡೆಗೆ ಸಜ್ಜಾದ ವಿಟಾರಾ ಹೊಸ ಎಸ್‌ಯುವಿ ಹೇಗಿರಲಿದೆ ಗೊತ್ತಾ?

ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾರುತಿ ವಿಟಾರಾ ಕಾರುಗಳು ಫ್ರಂಟ್ ವೀಲ್ ಡ್ರೈವ್ ಎಸ್‍ಯುವಿ ರೂಪದಲ್ಲಿ ಬರಬಹುದು ಎಂದು ಅಂದಾಜಿಸಲಾಗಿದ್ದು, ಗ್ಲೋಬಲ್ ಮಾರುಕಟ್ಟೆಯಲ್ಲಿನ ವಿಟಾರಾಗಳು ಆಲ್ ವೀಲ್ ಡ್ರೈವ್ ರೂಪದಲ್ಲಿ ದೊರೆಯುತ್ತಿದೆ.

ಬಿಡುಗಡೆಗೆ ಸಜ್ಜಾದ ವಿಟಾರಾ ಹೊಸ ಎಸ್‌ಯುವಿ ಹೇಗಿರಲಿದೆ ಗೊತ್ತಾ?

ಇದಲ್ಲದೇ ಹೊಸ ರೂಪದ ವಿಟಾರಾ ಕಾರುಗಳು ಎಸ್‌ಯುವಿ ಕಾರುಗಳಲ್ಲೇ ವಿಶೇಷ ಗುಣಲಕ್ಷಣಗಳನ್ನು ಹೊಂದಿದ್ದು, 5 ಸೀಟರ್ ವಿನ್ಯಾಸದೊಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು 4 ಏರ್‍‍ಬ್ಯಾಗ್ ಗಳನ್ನು ಬಳಸಲಾಗಿದೆ.

ಬಿಡುಗಡೆಗೆ ಸಜ್ಜಾದ ವಿಟಾರಾ ಹೊಸ ಎಸ್‌ಯುವಿ ಹೇಗಿರಲಿದೆ ಗೊತ್ತಾ?

ಇದರಿಂದಾಗಿ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಬಹುದೆಂದು ನೀರಿಕ್ಷೆ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರಿಮಿಯಂ ಕಾರು ಮಾರಾಟ ವಿಭಾಗದಲ್ಲಿನ ಕೊರತೆಯನ್ನು ನಿಗಿಸಲು ಈ ಕಾರನ್ನು ನಿರ್ಮಾಣಗೊಳಿಸುತ್ತಿದ್ದು, ಕ್ರೇಟಾ, ಎಕ್ಸ್‌ಯುವಿ 500 ಮತ್ತು ಮುಂಬರುವ ಟಾಟಾ ಹ್ಯಾರಿಯರ್, ನಿಸ್ಸಾನ್ ಕಿಕ್ಸ್ ಕಾರುಗಳಿಗೂ ಇದು ಪೈಪೋಟಿ ನೀಡಲಿದೆ.

More from DriveSpark

Article Published On: Monday, October 1, 2018, 17:09 [IST]
English summary
More Maruti Suzuki Vitara India-Launch Details Out — Production Starts In Hungary.
Read more on maruti suzuki suv new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+