ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಈಗಾಗಲೆ ಮಾರುಕಟ್ಟೆಯಲ್ಲಿ ತಮ್ಮ ವಾಹನಗಳಿಂದ ಜನಪ್ರಿಯತೆಯನ್ನು ಪಡೆದಿದ್ದು, ತಮ್ಮ ಸಂಸ್ಥೆಯ ಕಾರಾದ ಸ್ವಿಫ್ಟ್ ಈ ವರ್ಷದ 'ಕಾರ್ ಆಫ್ ದಿ ಇಯರ್' ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಹೊಸ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಬಗ್ಗೆ ಹೊಸ ಪ್ಲಾನ್ ಅನ್ನು ಮಾಡಿಕೊಂಡಿದೆ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಅದು ಮಾರುತಿ ಸುಜುಕಿ ಸಂಸ್ಥೆಯು ತಮ್ಮ ವ್ಯಾಗನಾರ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು 2020ರಲ್ಲಿ ಬಿಡುಗಡೆಗೊಳಿಸಲಿದ್ದು, ವಿದ್ಯುತ್ ವಾಹನಗಳು ತೆರಿಗೆ ವಿನಾಯತಿಗಳ ಕೊರತೆಯಿಂದಾಗಿ ಹೊಸ ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರು ಪ್ರೀಮಿಯಂ ಆಗಿ ಪರಿಚಯಿಸಲಿದ್ದು ಮತ್ತು ವಿದ್ಯುತ್ ವಾಹನಗಳಿಗೆ ವಿದ್ಯುತ್ ಬ್ಯಾಟರಿಗಳಲ್ಲಿ ಸರ್ಕಾರವು ಜಿಎಸ್‍ಟಿ ದರಗಳನ್ನು ಕಡಿಮೆ ಮಾಡಿದ್ದರೂ ಸಹ ನಿರೀಕ್ಷಿತ ಬೆಲೆಯು 10 ಲಕ್ಷ ರೂಗೆ ಮಾರಟ ಮಾಡುವ ಸಾಧ್ಯತೆಗಳಿವೆ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಈಗಾಗಲೆ ಮಾರುಕಟ್ಟೆಯಲ್ಲಿ ಬೆಲೆಯೊಂದಿಗೆ ಬಲೆನೊ ಮತ್ತು ಹ್ಯುಂಡೈ ಐ20 ಮತ್ತು ಮುಂತಾದ ವಾಹನಗಳು ದೊರೆಯುತ್ತಿದ್ದು, ಶ್ರೇಣಿಯಲ್ಲಿರುವ ಬೆಲೆಯೊಂದಿಗೆ ಮಾರುತಿ ಕಂಪನಿಯು ಒಂದು ದೊಡ್ಡ ಮಾರಾಟದ ಸಂಖ್ಯೆಯನ್ನು ನಿರೀಕ್ಷಿಸುತ್ತಿಲ್ಲ ಎನ್ನಲಾಗಿದ್ದು, ವಿಶೇಷವಾಗಿ ಖಾಸಗಿ ವಿಭಾಗದಲ್ಲಿ ಮತ್ತು ಫ್ಲೀಟ್ ಭಾಗಗಳಲ್ಲಿ ಬ್ಯಾಂಕಿಂಗ್ ಮತ್ತು ಹಂಚಿಕೆ ಚಲನಶೀಲತೆ ನಿರ್ವಾಹಕರು ಖರೀದಿಸಲು ಸೂಕ್ತವಲ್ಲ ಎಂದು ಕೂಡ ಹೇಳಲಾಗುತ್ತಿದೆ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

"ನಾವು 2020 ರಲ್ಲಿ ಪ್ರಸ್ತುತ ಹೊಂದಿರುವ ವಿದ್ಯುತ್ ಕಾರ್ ಸಣ್ಣ ಕಾರು. ಮತ್ತು ಮಾಲಿಕ ಬಳಕೆಗೆ ಆ ಸಣ್ಣ ಕಾರು ಯಾವುದೇ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ಅಸಂಭವವಾಗಿದೆ ಏಕೆಂದರೆ ಸಬ್ಸಿಡಿಯೊಂದಿಗೆ ವೆಚ್ಚದ ಅಂಶವು ಒಂದು ಕಾರಣವಾಗಿದ್ದು, ಫ್ಲೀಟ್ ಗ್ರಾಹಕರು ಕೂಡಾ ಇದನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಚಲನಶೀಲತೆಯನ್ನು ಹಂಚಿಕೊಳ್ಳುತ್ತದೆ. ಎಂದು ಮಾರುತಿ ಸುಜುಕಿ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಎನ್.ಡಿ.ಟಿ.ವಿಯೊಂದಿಗೆ ಮಾತನಾಡಿದ ಮಾತನಾಡಿದ ಮಾರುತಿ ಸುಜುಕಿ ಲಿಮಿಟೆಡ್‍ನ ಚೇರ್‍‍‍‍ಮ್ಯಾನ್ ಆದ ಆರ್.ಸಿ. ಬರ್ಗವರು ಹೇಳಿಕೊಂಡಿದ್ದಾರೆ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಇನ್ನು ಮಾರುತಿ ಸುಜುಕಿ ಸಂಸ್ಥೆಯು ಬಿಡುಗಡೆಗೊಳಿಸಲಿರುವ ತಮ್ಮ ಮೊದಲ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ ಮಾರುತಿ ಸುಜುಕಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು 2020ರ ವೇಳೆಗೆ ಬಿಡುಗಡೆಗೊಳಿಸುವುದರ ಬಗ್ಗೆ ಈಗಾಗಲೇ ಸುಳಿವು ನೀಡಿದೆ. ಹೀಗಾಗಿ ಈ ಹಿಂದೆಯೆ ವ್ಯಾಗನ್ ಆರ್ ಕಾರಿನ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿರುವ ಮಾರುತಿ ಸುಜುಕಿ ಸಂಸ್ಥೆಯು ಹರಿಯಾಣದ ಬಳಿ ಹೊಸ ಕಾರಿನ ಕಾರ್ಯಕ್ಷಮತೆ ಕುರಿತಂತೆ ಹಲವು ಸುತ್ತಿನ ಪರೀಕ್ಷೆ ಕೈಗೊಂಡಿದ್ದು, ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡು ಎಲ್ಲರ ಗಮನಸೆಳೆಯುತ್ತಿದೆ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಕೆಲವು ಸುದ್ದಿ ಮೂಲಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಇ-ವರ್ಷನ್ ವ್ಯಾಗನ್ ಆರ್ ಕಾರನ್ನು ಟೊಯೊಟಾ ಜೊತೆ ಕೈ ಜೋಡಿಸಿ ಉತ್ಪಾದನೆ ಮಾಡುತ್ತಿದೆ ಎನ್ನಲಾಗಿದ್ದು, ಈ ಕಾರಿನ ಬೆಲೆಯು ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಸ್ಪರ್ಧಾತ್ಮಕವಾಗಿ ಇರಲಿದೆ ಎನ್ನಲಾಗಿದೆ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ವ್ಯಾಗನ್ ಆರ್ ಇವಿ ಕಾರುಗಳು 2020ರ ಏಪ್ರಿಲ್‌ನಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿರುವ ಮಾರುತಿ ಸುಜುಕಿ ಸಂಸ್ಥೆಯು, ಹೊಸ ಎಲೆಕ್ಟ್ರಿಕ್ ಕಾರನ್ನು ದೆಹಲಿ ಬಳಿ ಇರುವ ಗುರುಗ್ರಾಮ್ ಕಾರು ಉತ್ಪಾದನಾ ಘಟಕದಲ್ಲೇ ತಯಾರಿಸುತ್ತಿದೆ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಜೊತೆಗೆ ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ ಆರ್ ಕಾರು ಮಾರುತಿ ಸುಜುಕಿ ಮತ್ತು ಟೊಯೊಟಾ ಪಾಲುದಾರಿಕೆಯಲ್ಲಿ ತಯಾರಾಗಲಿರುವ ಮೊದಲ ಎಲೆಕ್ಟ್ರಿಕ್ ಕಾರು ಇದಾಗಿದ್ದು, ಟೊಯೊಟಾ ಈಗಾಗಲೇ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರಿಗಾಗಿ ಅಲ್ಟ್ರಾ ಹೈ ಎಫಿಶಿಯೆನ್ಸಿ ಪವರ್‌ಟ್ರೈನ್ ಬ್ಯಾಟರಿಯನ್ನು ತಯಾರಿಸುವುದಾಗಿ ಹೇಳಿಕೊಂಡಿದೆ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಇದಲ್ಲದೇ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮುಂದಿನ ತಲೆಮಾರಿನ ವ್ಯಾಗನ್‍ಆರ್ ಕಾರನ್ನು ಇದೇ ವರ್ಷಾಂತ್ಯಕ್ಕೆ ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಈ ಹಿನ್ನೆಲೆ ಹೊಸ ಕಾರಿನ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರನ್ನು ಸಹ ನಿರ್ಮಾಣ ಮಾಡುವ ಯೋಜನೆಯಿದೆ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ದೇಶಿಯವಾಗಿ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆ ಮಾಡುವ ಸಂಬಂಧ ಬರೋಬ್ಬರಿ ರೂ.700 ಕೋಟಿ ವೆಚ್ಚದಲ್ಲಿ ಗುಜರಾತ್‌ನಲ್ಲಿ ಬ್ಯಾಟರಿ ಉತ್ಪಾದನಾ ಘಟಕ ತೆರೆಯಲು ಈಗಾಗಲೇ ಕೇಂದ್ರದಿಂದ ಅನುಮತಿ ಪಡೆದಿದ್ದು, ಎಲೆಕ್ಟ್ರಿಕ್ ಕಾರುಗಳ ಬೆಲೆ ತಗ್ಗಿಸಲು ಇದು ಮಹತ್ವದ ಯೋಜನೆ ಎನ್ನಬಹುದು.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಕಾರಣ, ಬೆಲೆಯಲ್ಲಿ ದುಬಾರಿ ಎನ್ನಿಸುವ ಲೀಥಿಯಂ ಅಲಾಯ್ ಬ್ಯಾಟರಿಗಳನ್ನು ಸದ್ಯಕ್ಕೆ ವಿದೇಶಿ ಮಾರುಕಟ್ಟೆಗಳಾದ ಚೀನಾ, ತೈವಾನ್ ಮತ್ತು ಥೈಲ್ಯಾಂಡ್‌ನಿಂದಲೇ ಶೇ.100ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದ್ದು, ದೇಶದಲ್ಲಿ ಯಾವುದೇ ಕಾರು ಉತ್ಪಾದನಾ ಸಂಸ್ಥೆಯು ಸ್ವಂತ ಬ್ಯಾಟರಿ ಉತ್ಪಾದನಾ ಸೌಲಭ್ಯವನ್ನು ಹೊಂದಿಲ್ಲ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಇದರಿಂದಾಗಿ ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯ ಕಾರುಗಳಿಂತಲೂ ಎರಡು ಮೂರು ಪಟ್ಟು ಹೆಚ್ಚು ದುಬಾರಿ ದರಗಳಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾರಣದಿಂದಲೇ ಬಹುತೇಕ ಕಾರು ಖರೀದಿದಾರರು ಎಲೆಕ್ಟ್ರಿಕ್ ಕಾರುಗಳ ಖರೀದಿಸುವ ಆಸಕ್ತಿ ಇದ್ದರೂ ದುಬಾರಿ ಬೆಲೆಯಿಂದಾಗಿ ಹಿಂದೆ ಸರಿಯುತ್ತಿದ್ದಾರೆ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಇದನ್ನು ಗಂಭೀರವಾಗಿ ಪರಿಣಿಸಿರುವ ಸುಜುಕಿ ಸಂಸ್ಥೆಯು ಭಾರತದಲ್ಲಿ ಸ್ಥಳೀಯವಾಗಿ ಲೀಥಿಯಂ ಬ್ಯಾಟರಿ ಉತ್ಪಾದನೆ ಮಾಡಿ ತನ್ನದೇ ಕಾರುಗಳಿಗೆ ಅಷ್ಟೇ ಅಲ್ಲದೇ ಇತರೆ ಸಂಸ್ಥೆಗಳಿಗೂ ಬ್ಯಾಟರಿ ಪೂರೈಕೆ ಮಾಡುವ ಯೋಜನೆ ರೂಪಿಸಿದ್ದು, 2020ರ ವೇಳೆಗೆ ದೇಶದಲ್ಲಿ ಮಾರಾಟವಾಗುವ ಕಾರುಗಳ ಪ್ರಮಾಣದಲ್ಲಿ ಹೊಸ ಬದಲಾಣೆ ತರುವುದೇ ಇದರ ಮೂಲಉದ್ದೇಶವಾಗಿದೆ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಒಟ್ಟಿನಲ್ಲಿ ಬೃಹತ್ ಯೋಜನೆಯೊಂದಿಗೆ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೆ ಕೈ ಹಾಕಿರುವ ಮಾರುತಿ ಸುಜುಕಿ ಸಂಸ್ಥೆಯು ಸಾಮಾನ್ಯ ಕಾರುಗಳ ಮಾರಾಟದಲ್ಲಿ ಯಶಸ್ಸು ಸಾಧಿಸಿರುವಂತೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಅಧಿಪತ್ಯ ಹೊಂದುವ ತವಕದಲ್ಲಿದ್ದು, ಕೈಗೆಟುಕುವ ಬೆಲೆಗಳಲ್ಲಿ ಉತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬ್ಯಾಟರಿ ಬಳಕೆ ಮಾಡಿದ್ದಲ್ಲಿ ಹೊಸ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮತ್ತಷ್ಟು ಜನಪ್ರಿಯತೆಯನ್ನು ಗಳಿಸಲು ಮಾರುತಿ ಸುಜುಕಿ ಸಂಸ್ಥೆಯಿಂದ ಹೊಸ ಪ್ಲಾನ್..!

ಇನ್ನು ಮಾರುತಿ ಸುಜುಕಿ ವ್ಯಾಗನ್‍ ಆರ್ ಕಾರು 1999ರಲ್ಲಿ ಬಿಡುಗಡೆಗೊಂಡಿದ್ದು, ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಯ ಈ ಕಾರು ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳು ಮಾರಾಟಗೊಂಡಿವೆ. ಈ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದ್ದು, ಎಲೆಕ್ಟ್ರಿಕ್ ವರ್ಷನ್ ಬರುವುದಕ್ಕೂ ಮುನ್ನ ಸಾಮಾನ್ಯ ಮಾದರಿಯ ನ್ಯೂ ಜನರೇಷನ್ ವ್ಯಾಗನ್ ಆರ್ ಕಾರು ಮುಂದಿನ ವರ್ಷ ಜನವರಿ ಆರಂಭದಲ್ಲಿ ಬಿಡುಗಡೆಯಾಗುತ್ತಿದೆ.

More from DriveSpark

Article Published On: Friday, December 21, 2018, 17:59 [IST]
English summary
Maruti Suzuki Will Target Fleet, Shared Mobility Buyers With Its Upcoming Electric Car. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+